ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಕಾವ್ಯಗಳ ಗೆಜ್ಜೆನಾದ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )

ಕನ್ನಡಮ್ಮನ ಕನಕ ವರ್ಷದ ಕಾಣಿಕೆ

ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು

ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ

ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ

ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ

ಆ ಪರ್ವತಾರೋಹಿಗಳ ಸಾಹಸಕ್ಕೆ ಸಮನಾದ ಕನ್ನಡ ಕಾವ್ಯ ಶಿಖರಾರೋಹಿಗಳಂತಿರುವ ಸಾಹಸಿಗರೀರ್ವರು ಸಂಗ್ರಹಿಸಿರುವ

ಕನ್ನಡ ಕಾವ್ಯಗಳ ಗೆಜ್ಜೆನಾದ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀ ಪ್ರೊ.ಎ.ವಿ.ಸೂರ್ಯನಾರಾಯಣಸ್ಡಾಮಿ ಮತ್ತು ಶ್ರೀ ಎಚ್.ಎಸ್. ಗೋವಿಂದಗೌಡ
ಪ್ರಕಾಶಕರು
ಹವ್ಯಾಳು ಪ್ರಕಾಶನ
ಪುಸ್ತಕದ ಬೆಲೆ
೨೦೦

ಕನ್ನಡಮ್ಮನ ಕನಕ ವರ್ಷದ ಕಾಣಿಕೆ

ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು

ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ

ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ

ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ

ಆ ಪರ್ವತಾರೋಹಿಗಳ ಸಾಹಸಕ್ಕೆ ಸಮನಾದ ಕನ್ನಡ ಕಾವ್ಯ ಶಿಖರಾರೋಹಿಗಳಂತಿರುವ ಸಾಹಸಿಗರೀರ್ವರು ಸಂಗ್ರಹಿಸಿರುವ

ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ

ಈವರೆಗೆ ನಾನು ಓದಿ ಮೆಚ್ಚಿಕೊಂಡು ಮತ್ತೆ ಮತ್ತೆ ಓದಬಯಸುವ ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿನ ಸುಖಕ್ಕೆ ನಿಮಗೆ ಶಿಫಾರಸು ಮಾದುತ್ತಿದ್ದೇನೆ .ನೀವೂ ಓದಿ ನೋಡಿ.

ಬಿ.ಜಿ.ಎಲ್ ಸ್ವಾಮಿಯವರ
ಕಾಲೇಜುರಂಗ ,
ಕಾಲೇಜುತರಂಗ ,
ಪ್ರಾಧ್ಯಾಪಕನ ಪೀಠದಲ್ಲಿ ,
ತಮಿಳು ತಲೆಗಳ ನಡುವೆ ,
ಹಸಿರು ಹೊನ್ನು

'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ

ಸ್ವಲ್ಪ ದಿನಗಳಿಂದ ಬ್ಲಾಗನ್ನು ಬರೆಯಲಾಗಲಿಲ್ಲ ; ಅದಕ್ಕೆ ಒಂದು ಕಾರಣ ಎಂದರೆ 'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ ಮಾಡುತ್ತಿದ್ದೆ .

ಅಫ್ಜಲ್‌ಗೆ ಗಲ್ಲು ಶಿಕ್ಷೆ ಬೇಡ

ಹೌದು.

ಸಂಸತ್ ಭವನದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕುಖ್ಯಾತ ಕಾಶ್ಮೀರಿ ಉಗ್ರಗಾಮಿ ಅಫ್ಜಲ್ ಗುರೂ‌ಗೆ "ಗೌರವಯುತ" ಗಲ್ಲು ಶಿಕ್ಷೆ ಬೇಡ; ಆದರೆ ಆತನನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು!

ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ

ಕಾರ್ಯಕ್ರಮದ ವಿವರಗಳು:

ದಿನಾಂಕ: ೧೫-೧೦-೨೦೦೬.
ಸಮಯ: ಬೆಳಿಗ್ಗೆ ೧೦.೩೦.
ಸ್ಥಳ: ಸಮರಸ ಭವನ,
ಕರ್ನಾಟಕ ಸಂಘ,ಮೊಘಲ್ ಲೇನ್,

ರಷ್ಯ ಪ್ರವಾಸಕಥನ ಭಾಗ ೭: ಇ೦ದ್ರಿಯಾ೦ಗಗಳ ಅನುಪಸ್ಥಿತಿ ಬೆದರಿಸುವುದು 'ಅದನ್ನೇ'!

ಮರುದಿನ ಅವರ ಎ೦.ಜಿ.ರಸ್ತೆಯಲ್ಲಿ ನಡೆದಾಡುವಾಗ ಒ೦ದು ದೃಶ್ಯ ನೋಡಿದೆ. ಅದನ್ನು ಅಥವ ಅವನನ್ನು ನೋಡಿ ನನ್ನರೆಡೂ ಕೈಕಾಲುಗಳೂ ನಡುಗತೊಡಗಿದವು. ಅಲ್ಲೊಬ್ಬ ಸಧೃಡ ಭಿಕ್ಷುಕ. ಆತ ಸಧೃಡನೆ೦ಬ ಕಾರಣಕ್ಕೆ ನಾನು ನಡುಗಲಿಲ್ಲ. ಆತನ ಬಾಯಲ್ಲೊ೦ದು ಅ೦ಟಿಸಿದ ಸಿಗರೇಟು. ಅ೦ಟಿಸಲಾಗಿದ್ದ ಬೆ೦ಕಿ, ಗೋ೦ದಲ್ಲ. ಮಿಲಿಟರಿ ಸಮವಸ್ತ್ರಧಾರಿ. ಆತನಿಗೆ ಶಿರವಿತ್ತು, ಎದೆಯ ಭಾಗವಿತ್ತು. ಅಷ್ಟೇ. ಭಿಕ್ಷೆ ಬೇಡಲು ಮು೦ದೆ ಚಾಚಬೇಕಾದ ಭಾಗಗಳೇ ಇರಲಿಲ್ಲ. ಮೊಣಕೈವರೆಗೂ ಎರಡೂ ಕೈಗಳು, ಮೊಣಕಾಲಿನವರೆಗೂ ಎರಡೂ ಕಾಲ್ಗಳೂ ಇರಲಿಲ್ಲ! ಅಥವ ಭೂತಕಾಲದಲ್ಲಿ ಮಾತ್ರ ಇದ್ದವೆ೦ದು ಕಾಣುತ್ತದೆ. ಕ್ಷಮಿಸಿ, ಭೂತಕಾಲದಲ್ಲಿದ್ದಿರಬಹುದಾದದ್ದು ಈಗ ಕಾಣಿಸುತ್ತಿಲ್ಲ.ಇಲ್ಲದ ಕೈಕಾಲ್ಗಳನ್ನು ನೋಡಿ ಇದ್ದ ನನ್ನ ಕೈಕಾಲ್ಗಳು ನಡುಗತೊಡಗಿದವು. ಮನಸ್ಸಿಗೆ ಗಾಭರಿಯಾದರೆ ಕೈಕಾಲ್ಗಳೇಕೆ ನಡುಗಬೇಕು? ಆತನೇ ಪುಣ್ಯವ೦ತೆ--ನಡುಗಲು ಆತನಿಗೆ ಕೈಕಾಲ್ಗಳೇ ಇಲ್ಲ! ವ್ಹೀಲ್ ಚೇರಿನ ಮೇಲೆ ಆತ ಕುಳಿತಿದ್ದ. ನನಗಿದ್ದುದ್ದು ಒ೦ದೆರೆಡೇ ಪ್ರಶ್ನೆಗಳು. ಆತ ಚೇರಿನ ಮೇಲೆ ಕುಳಿತದ್ದು ಹೇಗೆ? ಸಿಗರೇಟು ಅ೦ಟಿಸಿಕೊ೦ಡದ್ದು ಹೇಗೆ? ಸೇದುವುದು ಹೇಗೆ? ಎಲ್ಲಕ್ಕಿ೦ತಲೂ ಮಿಗಿಲಾದ ಪ್ರಶ್ನೆ--ಆತನ ಮಿಲಿಟರಿ ದೇಹ ಹಾಗೂ ಸಮವಸ್ತ್ರದ ಅರ್ಥವೇನು?!

ರಷ್ಯ ಪ್ರವಾಸಕಥನ ಭಾಗ ೬: ಟೀ ಕೊಟ್ಟ ಟೀ-ನೇಜಳಿಗೆ ಟಿಪ್ಸೆ೦ಬ ಬಿಸ್ಕತ್ತು!

ಕ್ಲೋನೋ ಕ್ಲೋನೇ ಕ್ಲೋನು:

ಇಬ್ಬರು ಒ೦ದೇ ತರಹ ಇರುವುದು ಬೇರೆ, ಪರಸ್ಪರ ಹೋಲುವುದು ಬೇರೆ. "ಮಾರ್ಥರ೦ತೆಯೇ ಇರುವವರನ್ನು ಇನ್ನೂ ಐದು ಜನರನ್ನು ಬೇರೆ ಹುಡುಕಬೇಕೀಗ" ಎ೦ದುಕೊ೦ಡೆ. ಏಕೆ೦ದರೆ ಒಬ್ಬರ೦ತೆ ಒಟ್ಟು ಏಳು ಜನ ಈ ಜಗತ್ತಿನಲ್ಲಿರುತ್ತಾರ೦ತೆ. "ಅವರ೦ತೆಯೇ ಇರುವ ಉಳಿದವರು ಮಾ(ರ್ಥಾ)ರ್ಸ್‍ ಗ್ರಹದಲ್ಲಿ ಸಿಗುತ್ತಾರೆಯೆ?" ಎ೦ದು ಕೇಳಿ ಬಯ್ಸಿಕೊ೦ಡಿದ್ದೆ ಯಾರೋ ಒಬ್ಬರ ಹತ್ತಿರ. ಬಯ್ದವರು ಯಾರೆ೦ಬುದನ್ನು ಬೇಕೆ೦ದೇ ಮರೆತಿದ್ದೇನೆ. ಯಾರೇ ಇರಲಿ, ಅವರ೦ತಿರುವವರೆಲ್ಲ ಎಕ್ಕುಟ್ಟಿಹೋಗಲಿ--ಎ೦ದು ಆಗ, ಅವರತ್ರ ಬಯ್ಸಿಕೊ೦ಡ ಹೊಸತರಲ್ಲಿ, ಶಾಪಹಾಕಿದ್ದೇನೆ ಕೂಡ. ಆ ಶಾಪ ಫಲಿಸದಿರಲಿ!