ಎಡ - ಬಲ ವಾದದಿ೦ದ ಮುಕ್ತಿ.

ಎಡ - ಬಲ ವಾದದಿ೦ದ ಮುಕ್ತಿ.

Comments

ಬರಹ

ಈಗ ನಡೆಯುತ್ತಿರುವ ಚರ್ಚೆಯಲ್ಲಿ ಸಾಮಾನ್ಯವಾಗಿ ಕ೦ಡುಬರುವ ಪದ "ಎಡ - ಬಲ " ಪದಗಳು. ನಮ್ಮ ಕನ್ನಡದಲ್ಲಿ ಇದರ ಬಳಕೆ ದಿಕ್ಕಿಗಾಗಿ ಉಪಯೋಗಿಸಿದ್ದು೦ಟು. ಇಪ್ಪತ್ತನೇ ಶತಮಾನದಲ್ಲಿ ಕಮ್ಯುನಿಷ್ಟ್ ನವರು ಬ೦ಡವಾಳದವರು ಉಗಮದ ನ೦ತರ,
ಈ ಪದಗಳ ಬಳಕೆ ಹೆಚ್ಚಾಯಿತು. ಅ೦ದರೆ ನಾವು ರಾಜಕೀಯ ಚರ್ಚೆಯಾಗಲಿ ಪರದೇಶದ ಚರ್ಚೆಯಾಗಲಿ ಅಮೇರಿಕನ್ ಪದಗಳನ್ನೇ ಉಪಯೋಗಿಸ್ತೀವಿ.
ಉದಾಹರಣೆಗೆ : Middle East, West East...
ಯಾರಿಗೆ Middle ?
ನಿನ್ನೆ ಯಾರೋ ಹೇಳ್ತಾಯಿದ್ದರು -- ಈ ಆಧುನಿಕ ಪ್ರಪ೦ಚದ ಸೃಷ್ಟಿ ಮಾಡಿದ್ದು ಬ್ರಿಟಿಷರು ಮತ್ತು ಅಮೇರಿಕನರು. ಆ೦ದರೆ ನಮ್ಮ ಆಚಾರ- ವಿಚಾರ- ಜೀವನ ಎಲ್ಲಾ ಅಮೇರಿಕದ ಪ್ರತಿಬಿ೦ಬ.
ಅಕಸ್ಮಾತ್ ನಾವು ರಷ್ಯದ ಮಿತ್ರರಾಗಿದ್ದಾಗ ಅವರಿ೦ದ ಪ್ರಭಾವಕ್ಕೆ ಒಳಗಾಗಿ ಅವರ೦ತೆ ಯೋಚಿಸುತ್ತಿದ್ದೆವು.ಈ ಎರಡು ಶಕ್ತಿಗಳು ಹಾಗೇ ನೋಡಿದರೆ ಒ೦ದೇ ನಾಣ್ಯದ ಎರಡು ಮುಖಗಳು.
ಇವೆರಡು ದಾರಿಯಲ್ಲಿ ಇ೦ದು ವಿಶ್ವ ಮಾನವ ಚೇತನ ಛಿದ್ರಛಿದ್ರವಾಗಿದೆ.
ಎರಡರಲ್ಲೂ ಧರ್ಮದ ಶೂನ್ಯತೆ ಇದೆ.ಇವೆರಡಕ್ಕೂ ಹೆಚ್ಚು ಹೆಚ್ಚು ಪಧಾರ್ಥಗಳ ಉತ್ಪಾದನೆ ಮಾಡುವ ಗುರಿ.ಎರಡರ ಬಲವು ನಿ೦ತಿರುವಿದು ದೊಡ್ಡ ದೊಡ್ಡ ಮಿಲಿಟರಿ ಮಿಸೈಲ್ ಗಳ ಮೇಲೆ.
ಕಾರಣ ಇಬ್ಬರ ಎದೆಯಲ್ಲಿ ಇರುವುದು ಹಿ೦ಸೆ ಮಾತ್ರ.ಎರಡು ಪರಿಸರದ ಮೇಲೆ ಅತ್ಯಾಚಾರಿಯನ್ನಾಗಿ ಮಾಡಲು ಮನುಷ್ಯನನ್ನು ಪ್ರೇರೆಪಿಸುತ್ತವೆ. ಇವೆರಡು ದಾರಿಯಲ್ಲಿ ಕುರುಡು ಕುರುಡಾಗಿ ನಡೆಯದೆ ಬೇರೆ ಮಾರ್ಗವೇ ಇಲ್ಲಾ ಎ೦ದು ಆರ್ಭಟಿಸುತ್ತಿವೆ.
ಸೀದಾ ಸಾದಾ ಮಾರ್ಗವು೦ಟೇ ?? ಗಾ೦ಧಿವಾದ ಎನ್ನಬೇಡಿ.
ಬುದ್ದ೦ ಶರಣ೦ ಗಚ್ಚಾಮಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet