ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Is politics withering?


The recent issue of Desha Kaala, a kannada literary magazine, there is a debate on Politics. Shive Vishwanathan, GPD, G.S. Sadananda, et al have contributed to this debate. beginning with the concept note, all opine that there is some kind of degeneration in Politics today. They see this basically in the context of globalization and the decreasing authority of the nation-state, the power of the media in producing reality effect, rarefying of agendas in public action etc. Very fine articles.

ಇದೇನಾ ಪತ್ರಿಕೋದ್ಯಮ? -2

ಜಾಗತೀಕರಣದ ಪ್ರಭಾವ (ಮುಂದುವರಿದ ಭಾಗ) ಜಾಗತೀಕರಣದ ಪ್ರಭಾವ ಮಾಧ್ಯಮದ ಮೇಲೂ ಗಾಢವಾಗಿದೆ. ಪರದೇಶಗಳ ಪತ್ರಿಕೆ/ಟಿವಿ ಚಾನೆಲ್‌ಗಳೇ ನಮ್ಮ ದೇಶದ ಪತ್ರಿಕೆ/ಟಿವಿ ಚಾನೆಲ್‌ಗಳಿಗೆ ಮಾದರಿ.

O L Nagabhushanaswami and Yeats

ವರ್ಷ: ೧೯೮೮. ಊರು: ಮೈಸೂರು. ಸ್ಥಳ: ಸರಸ್ವತಿಪುರಮ. ಮನೆ: ರಾಮಸ್ವಾಮಿಯವರ ಮನೆಯ ಹೊರ ಕೊಠಡಿ. ಪಾತ್ರಗಳು: ನಾನು, ಶಿವು, ರಾಮು ಹಾಗೂ ಓ. ಎಲ್. ನಾಗಭೂಷಣಸ್ವಾಮಿ. ಹಿನ್ನೆಲೆ: ಯೇಟ್ಸ್ ನ Prayer for my daughterನ ಚರ್ಚೆ. ಈ ಪ್ರಖ್ಯಾತ ಪದ್ಯ ಆಗ ನಮಗೆ ಬಿ.ಎ. ಪಠ್ಯದಲ್ಲಿತ್ತು. ರಾಮು ಮನೆಗೆ ಬಂದಿದ್ದ OLN ಅದು ಹೇಗೋ ಆ ಪದ್ಯವನ್ನು ನಮಗೆ ಕಲಿಸಲು ತೊಡಗಿದ್ದರು. ಅವರಾಗ ಶಿವಮೊಗ್ಗದಲ್ಲಿದ್ದರು ಅಂತ ನನ್ನ ನೆನಪು. ಅವರು ರಾಮುರ ಮಿತ್ರರು. ನಾವು ರಾಮುರ ಬಳಿ ಹೋಗಲು ಕಾರಣ ನಮ್ಮಲ್ಲಿ ಹುಟ್ಟಿದ್ದ ಸಾಹಿತ್ಯದಾಸಕ್ತಿ. ಶಿವು ಅದು ಹೇಗೋ ರಾಮುರ ಕಂಡು ಹಿಡಿದಿದ್ದ. ಅವರು ನಾನು ಈ ವರೆಗೆ ಕಂಡ ಸಜ್ಜನರಲ್ಲಿ ಮೇಲಿನವರು. ಸಚ್ಚಾ ದಿಲ್ ವಾಲಾ. ಶಿವು ಹೀಗೆ ಸಾಹಿತಿಗಳನ್ನು ಹುಡುಕುವಲ್ಲಿ ಚೆನ್ನಾಗಿದ್ದ. (ಈಗ ಎಲ್ಲಿದ್ದೀಯೋ ಮಾರಾಯನೇ)

ಮೊಬೈಲ್ ಮೌನಿಗಳು

2

ಫಿನ್ಲೆಂಡ್ ಬಗ್ಗೆ ಒಂದು ಜೋಕ್ ಇದೆ. ಫಿನ್ಲೆಂಡ್ ಜನರನ್ನು 'ಫಿನ್ನಿಶ್' ಎಂದು ಕರೆಯಲಾಗಿರುವುದರಿಂದ ಇದು ಫಿನ್ನಿಶ್ ಜೋಕ್ ಕೂಡ. ಇದನ್ನು ಏಕೆ ಹೇಳುತ್ತಿದ್ದೇನೆಂದು ಈ ಜೋಕ್ ಫಿನಿಶ್ ಆದ

ನಂತರ ಹೆಲ್ಸಿಂಕಿ ಒಂದು ನೋಟತಿಳಿಸುವೆ. ಈ ಜೋಕ್‌ನ ವಿಶೇಷವೇನೆಂದರೆ ಇದರಲ್ಲಿ ಶೇಕಡ ಐವತ್ತರಷ್ಟು ಭಾಗದ ಕ್ರೆಡಿಟ್ ನನಗೆ ಸಲ್ಲುತ್ತದೆ.

ಫಿನ್ಲೆಂಡ್ ನಲ್ಲಿ ಒಬ್ಬ ವ್ಯಕ್ತಿ ಪರಿಚಿತನಾಗಿ ನಂತರ ಆ 'ವ್ಯಕ್ತಿ' ಹೋಗಿ 'ಸ್ನೇಹಿತ'ನಾದ. (ಈ ಜೋಕ್ ಓದುವ ಮುನ್ನ ಅಥವ ಓದುವಾಗ ಇಂಗ್ಲೀಷ್ ಭಾಷೆಯಲ್ಲಿ ಫ್ರೆಂಡ್ ಎಂದರೆ ಗಂಡೂ ಆಗಿರಬಹುದೆಂಬ ನಿಮ್ಮ ನೆನಪಿನಲ್ಲಿರಲಿ) ಒಂದು ಸಂಜೆ ಬೇಸರವಾಗುತ್ತಿದ್ದುದ್ದರಿಂದ ಆ ಫ್ರೆಂಡನ್ನು ಭೇಟಿ ಮಾಡಬೇಕೆನಿಸಿತು. ಫೋನಾಯಿಸಿದೆ. "ಲೆಟ್ಸ್ ಹ್ಯಾವ್ ಅ ಡ್ರಿಂಕ್" "ಓಕೆ", ಎಲ್ಲಿ ಎಷ್ಟೊತ್ತಿಗೆ ಎಂದೆಲ್ಲ ಕೇಳಿ "ಭಾರತೀಯ ನೀನು. ಹೇಳಿದ ಸಮಯಕ್ಕೆ ಸರಿಯಾಗಿ ಬರತಕ್ಕದ್ದು" ಎಂದೆಚ್ಚರಿಸಿತ್ತು ಆ ಫ್ರೆಂಡ್. ಶುದ್ಧ ಭಾರತೀಯನಾದುದರಿಂದ ತಡವಾಗಿ ಹೋದೆ. ದಂಡ ರೂಪದಲ್ಲಿ ಬಿಯರ್ ಕೊಡಿಸಿದೆ ಆ ಫ್ರೆಂಡ್‌ಗೆ. ಒಂದನೆಯ ಬಿಯರ್ ಹೊರತುಪಡಿಸಿ ಮಿಕ್ಕ ನಾಲ್ಕು ಬಿಯರನ್ನು ಆ ಫ್ರೆಂಡ್ ತನ್ನ ಖರ್ಚಿನಲ್ಲೇ ಕುಡಿದು ಮುಗಿಸಿತು. ನಲ್ವತ್ತು ನಿಮಿಷವಾಯಿತು, ಒಂದೂ ಮಾತಿಲ್ಲದೆ.

ಬಾಯಿ ನವೆ ತಡೆಯಲಾರದೆ ಕೇಳಿಯೇ ಬಿಟ್ಟೆ, "ಏನಾದರೂ ಮಾತನಾಡುವ?"
"ಏನು! ಮಾತನಾಡುವುದೆ? ಕುಡಿಯಲಿಕ್ಕಲ್ಲವ ನೀನು ನನ್ನನ್ನು ಕರೆದದ್ದು!!"

ಒಂದು ವಾರದ ನಂತರ ಆ ಫ್ರೆಂಡ್ ಫೋನಾಯಿಸ್ತು. "ಬೇಜಾರು ಮಡಿಕೊಳ್ಳಬೇಡ, ಈ ಸಲ ನನ್ನ ಟ್ರೀಟ್. ಈ ಸಲ ಕುಡಿದು ಮಾತನಾಡುವ". ಅದೇ ಆರ್ಡರಿನಲ್ಲೇ ಆಗಲೆಂದು ಸುಮ್ಮನೆ ಕುಡಿದು

ಕುಳಿತಿದ್ದೆವು. ಮತ್ತೆ ನಲ್ವತ್ತು ನಿಮಿಷ ಸಂದಿತು. ಕಳೆದ ವಾರ ನಾನು ಬಳಸಿದ್ದ ಒಂದೇ ಒಂದು ವಾಕ್ಯವನ್ನು ಮತ್ತೆ ಬಳಸಿದ್ದೆ. "ಏನಾದರೂ ಮಾತನಾಡುವ!" ಅಳು, ನಗು ಮತ್ತು ನವರಸವನ್ನೆಲ್ಲ ಅರೆದು

ಕುಡಿದಂತಹ ಶಾಂತ ಮುಖಭಾವದಲ್ಲೀ ಆ ಫ್ರೆಂಡ್ "ಓಕೆ ಮಾತನಾಡುವ" ಎಂದು ಜೇಬಿಗೆ ಕೈ ಹಾಕಿ, ಹೊರತೆಗೆದು, ಸರಿಯಾಗಿ ಮುವತ್ತೈದು ನಿಮಿಷ ಮಾತನಾಡಿತು, ನೋಕಿಯ ಮೊಬೈಲ್ ನಲ್ಲಿ-ಯಾರೋ ಸ್ನೇಹಿತರೊಂದಿಗೆ!!

ನಾನೇ ಪಾತ್ರವಾಗಿದ್ದ ಜೋಕ್ ಇದು. ಭಾರತಕ್ಕೆ ಬಾವುಟವಿರುವಂತೆ ಫಿನ್ನಿಶ್ ಜನರಿಗೆ ಈ ಜೋಕ್ ಎಲ್ಲ ರೀತಿಯಲ್ಲೂ ಅವರ ರಾಷ್ಟ್ರೀಯ ಲಾಂಛನವಾಗುವ ಯೋಗ್ಯತೆ ಇದೆ. ಅಲ್ಲಿನ ಜನ ಟೈಟಾದ ನಂತರವೇ ನಿಜವಾಗಿ ಕುಡಿಯಲು ಶುರುಮಾಡುತ್ತಾರೆ. 'ಲ್ಯಾಪಿನ್ ಕುಲ್ತ' ಎಂಬ, ಜಾಸ್ತಿ ಕಿಕ್ ಹೊಡಿಯದ ಬಿಯರ್ ನಮ್ಮ ಯು.ಬಿ ಬಿಯರ್‌ನಂತೆ. ಅರ್ಧ ಗಂಟೆ ಕಾಲ, ಪೂರ ಬಾರ್ ಖಾಲಿ ಇದ್ದು, ಒಂದೇ ಟೇಬಲ್ಲಿನಲ್ಲಿ ನೀವಿಬ್ಬರೇ ಇರುವ ಸಂದರ್ಭದಲ್ಲಿ ಎರಡನೆಯವರು ಫಿನ್ನಿಶ್ ಆದರೆ, ನೀವು ಅಸ್ತಿತ್ವದಲ್ಲೇ ಇಲ್ಲವೆಂಬಂತೆ ಮೌನವಾಗಿರುವ ಜನ ಅವರು. ಮತ್ತು ನಿಮ್ಮ ಫಿನ್ನಿಶ್ ಫ್ರೆಂಡ್‌ಗಳು ತಮ್ಮ ಮೊದಲ ಡ್ರಿಂಕ್‌ಅನ್ನು ತಾವೇ ಕೊಂಡುಕೊಳ್ಳುತ್ತಾರೆ. ಅದರ ನಂತರ, ಕಡೆಯ ಡ್ರಿಂಕ್ ತನಕ ನೀವು ಫಿನ್ನಿಶ್ ಪ್ರಜೆ ಅಲ್ಲದಿದ್ದರೆ ತಮ್ಮ ಡ್ರಿಂಕ್ ಜೊತೆ ನಿಮ್ಮ ಡ್ರಿಂಕ್‌ ಅನ್ನೂ ಕೊಂಡುಕೊಡುತ್ತಾರೆ. ಹೆಂಗಸರಾದರೆ ತಾವು ಕುಡಿದ ನಂತರವೂ, ಅಥವ ತಾವು ಕುಡಿದು ನಿಲ್ಲಿಸಿದ ನಂತರವೂ ನಿಮಗೆ ಕುಡಿಯಲು ಕಾಸು ತಾವೇ ಕೊಡುತ್ತಾರೆ. ಅವರಿಗೇನು ಗೊತ್ತು ಒಂದು ರೂಪಾಯಿ ಬೆಲೆ. ಹೇಗೆ ಗೊತ್ತಾಗಬೇಕು ಹೇಳಿ, ಅವರು ಬಳಸುವುದು ರುಪಾಯಿಗಳನ್ನಲ್ಲವಲ್ಲ. ೨೦೦೨ರವರೆಗೂ ಫ್ರಾಂಕ್ಸ್ (ಏಳು ರುಪಾಯಿಗೊಂದು ಫ್ರಾಂಕ್) ಆ ನಂತರ ಯೂರೋ (೬೫

ರೂಪಾಯಿ) ಬಳಸುತ್ತಿದ್ದಾರೆ ಫಿನ್ನಿಶ್ ಜನ.

ವಿಪರೀತ ಕುಡಿಯುವುದು, ಮೌನ ಮುರಿಯಲು ಬರದಿರುವುದು, ವರ್ಷದ ಎಂಟೊಂಬತ್ತು ತಿಂಗಳ ಕಾಲ ದಿನಕ್ಕೆ ಮೂರು ಗಂಟೆಕಾಲವೂ ಸೂರ್ಯನ ದರ್ಶನ ಮಾಡದಿರುವುದು, ಈ ಮೂರೂ

ಕಾರಣಗಳಿಂದಲೂ ಮಾನಸಿಕವಾಗಿ ಕುಸಿಯುವುದು, ಮತ್ತು ಈ ನಾಲ್ಕು ಕಾರಣಗಳಿಂದಾಗಿ ಇಡೀ ಯುರೋಪಿನಲ್ಲೇ ಅತ್ಯಂತ ಹೆಚ್ಚಿನ ಆತ್ಮಹತ್ಯೆ ಮಾಡಿಕೊಳ್ಳುವ ಮಂದಿ ಫಿನ್ನಿಶ್ ಜನ!

ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುವರಿಗೆ ಎಲ್ಲೋ ಒಂದಿಷ್ಟು ಬದುಕುವ ಆಸೆ ಉಳಿದಿರುವುದು ಸಹಜವಷ್ಟೇ. ಆತ್ಮಹತ್ಯೆ ಯತ್ನವನ್ನು ಪೂರೈಸಿ ಸಫಲವಾಗಿ ಬದುಕಿಬಂದವರನ್ನು ಕೇಳಿ ನೋಡಿ. ಹಾಗೆ ದಾಟಿ ಬರುವ ಮಜವನ್ನು ಒಂದಷ್ಟು ವಿವರಿಸುವವರು ಯಾರಾದರೂ ಸಿಕ್ಕಾರೆಯೇ ಎಂದು ಈ ಜನ ಯಾವಾಗಲೂ ಜನರನ್ನು ಹುಡುಕುತ್ತಿರುತ್ತಾರೆ. ಭಾರತದಲ್ಲೇ ಹುಟ್ಟಿ ಬೆಳೆದವರಿಗೆ ಜನರಿಲ್ಲದ ಫಿನ್ಲೆಂಡನ್ನು

ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.

ಕರ್ನಾಟಕದ ಪಶ್ಚಿಮದ ಘಾಟಿಗೆ ಹೋಗಿರುತ್ತೀರಿ ಎಂದಿಟ್ಟುಕೊಳ್ಳಿ. ಮೈಲಿಗೋ ಹತ್ತು ಮೈಲಿಗೋ ಸಿಗುವ ಮನೆ, ಪ್ರಯಾಣಿಸುತ್ತಿರುವ ವಾಹನದ ಸೌಕರ್ಯ, ಮತ್ತೆ ಜನನಿಬಿಢ ಊರಿಗೆ ಹಿಂದಿರುಗುತ್ತೇವೆಂಬ ನಂಬಿಕೆಯಿಂದಾಗಿ ಆ ಘಟ್ಟಗಳು ಸೊಗಸಾಗಿ ಕಾಣುತ್ತವೆ. ಅಂತಹ ಒಂದು ಪ್ರಯಾಣದಿಂದ ಹಿಂದಿರುಗುವಾಗ ನಿಮ್ಮ ಜನನಿಬಿಡ ಊರು ಎಂದಿಗೂ ಸಿಗದೆ, ಆ

ಘಟ್ಟವೇ ಚಿರಕಾಲ ಪುನರಾವರ್ತನೆಯಾಗುತ್ತಿದೆ ಎಂದಿಟ್ಟುಕೊಳ್ಳಿ. ಬೇಗ ಈ ಕನಸಿನಿಂದ ಎದ್ದರೆ ಸಾಕಪ್ಪ ಎಂದು ನೀವು ಬೇಡಿಕೊಳ್ಳತೊಡಗುತ್ತೀರ. ನೀವು ಸಿನೆಮ ನಟರಾದರೆ ನಾಟಕೀಯವಾಗಿ

ಕೈಯನ್ನೂ ಇನ್ನೊಂದರಿಂದ ಚಿವುಟಿಕೊಳ್ಳುತ್ತೀರಿ. ಮನೆ, ಜನ, ಮನೆಮಟಗಳಿಂದ ತುಂಬಿರುವ ಜನನಿಭಿಡ ಊರಿನ ಸೊಬಗೇ ಬೇರೆ. ಟ್ರಾಫಿಕ್ ಜಾಸ್ತಿಯಾದಷ್ಟೂ ವೇಗದ ಅಪಘಾತದ ಭಯ ಮಾಯವಾಗುವುದಿಲ್ಲವೆ ಹಾಗೆ.

Sangita Madurya

ಸಂಗೀತದ ಮಾಧುರ್ಯ

ಸಂಗೀತ ಕೇಳಲು ಎಲ್ಲರಿಗೂ ಆಸಕ್ತಿ. ಜಾನಪದ, ಶಾಸ್ತ್ರೀಯ ಸಂಗೀತ, ಭಾವಗೀತೆ, ಸಿನಿಮಾ ಸಂಗೀತ ಹೀಗೆ ಹಲವು ಸಂಗೀತ ಕೇಳಲು ಜನರು ಇಷ್ಟ ಪಡುತ್ತಾರೆ. ಈಗಿನ ಕಾಲದ ಯುವಕರು ಧ್ಯಾನ ಮಾಡುವ ವೇಳೆಯಲ್ಲಿ ಶಾಸ್ತ್ರೀಯ ಸಂಗೀತ ಕೇಳುತ್ತಾರೆ. ಪಂ ಹರಿಪ್ರಸಾದ್ ಚೌರಾಸಿಯಾ, ಪಂ. ಭೀಮಸೇನ ಜೋಶಿ, ಪಂ. ರವಿಶಂಕರ್ ಹಾಗು ಪಂ. ಜಸ್ ರಾಜ್ ಅವರ ಧ್ವನಿ ಮುದ್ರಕೆಗಳನ್ನು ಹೆಚ್ಚಾಗಿ ಕೇಳ ಬಯಸುತ್ತಾರೆ. ಇತ್ತೀಚೆಗೆ ನಾನು ಕೇಳಿ ಆನಂದಿಸಿದ ಧ್ವನಿ ಮುದ್ರಿಕೆ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳು ಬಯಸುತ್ತೇನೆ. ಈ ಧ್ವನಿ ಮುದ್ರಿಕೆಯ ಹೆಸರು ಅಂತರಯಾಮಿ ಸುಪ್ರಸಿಧ್ದವಾದ ಭಾಂಸುರಿ (ಕೊಳಲು) ವಾದಕ ಪಂ. ಪ್ರವಿಣ್ ಘೋಡ್‌ಕಿಂಡಿ ಅವರು ರಾಗ್ ಭೂಪ್ (ಕರ್ನಾಟಕ ಸಂಗೀತ ಪದ್ದತಿಯಲ್ಲಿ ಇದನ್ನು ರಾಗ ಮೋಹನವೆಂದು ಕರೆಯುತ್ತೇವೆ). ಈ ಧ್ವನಿ ಮುದ್ರಿಕೆಯ ವಿಷೇಶ ಏನಂದ್ರೆ ಒಂದು ಗಂಟೆಯ ಕಾಲ ಬರಿ ಆಲಾಪ್ ಮಾಡಿದ್ದಾರೆ. ತಬಲದ ಸಾತೇ ಇಲ್ಲ.ನಿಧಾನ ಗತಿಯಲ್ಲಿ ಭೂಪ್ ರಾಗವನ್ನು ಎಳೆ ಎಳೆಯಾಗೆ ಚಿತ್ರಿಸಿದ್ದಾರೆ. ಈ ಧ್ವನಿ ಮುದ್ರಿಕೆ ಕೇಳುತ್ತಾ ಧನ್ಯ ಮಗ್ನರಾಗಿ ಕುಳಿತರೆ ಯಾರು ಬೇಕಾದರು ಈ ಪ್ರಪಂಚವನ್ನು ಮರೆಯ ಬಹದು. ನಿತ್ಯವು ಇದ್ದನ್ನು ಕೇಳುತ್ತಾ ಧ್ಯಾನ ಮಾಡಿದರು ಮತ್ತೆ ಮತ್ತೆ ಕೇಳ ಬೇಕೆಂಬ ಹಂಬಲ ಹೆಚ್ಚುತ್ತದೆ. ಮನಸ್ಸಿಗೆ ಉಲ್ಲಾಸ, ಹಾಗು ದೇಹದ ಶ್ರಮವನ್ನು ಮರೆಯಬಹುದು. ಕೆಲಸ ಮಾಡುವಾಗ ಈ ಮುದ್ರಿಕೆ ಕೇಳುತ್ತಾ ಕೆಲಸ ಮಾಡಿದರೆ ಕೆಲಸದ ಶ್ರಮ ಗೊತ್ತಾಗುವುದಿಲ್ಲ, ಹಾಗು ಸಮಯ ಕಳೆಯುವುದು ಗೊತ್ತಾಗುವುದಿಲ್ಲ.

ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು ( ಉ.ಕ.ಕ-೫)

ಈ ಕಡೆಯ ಬ್ರಾಹ್ಮಣರು ಮರಾಠೀ ಪತ್ರಿಕೆಗಳನ್ನೇ ಓದುತ್ತಿದ್ದರೆಂದು ಹೇಳಿದೆಯಷ್ಟೆ . ಪ್ರಾಯಶ: ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು. ಅವರು ನಡೆಸುತ್ತಿದ್ದ ಪ್ರತಿಯೊಂದು ಮಠವೂ ಒಂದು ಕನ್ನಡ ಶಾಲೆಯೇ ಆಗಿತ್ತು . ೧೮೮೦ ರವರೆಗೆ ಪ್ರತಿಯೊಂದು ಹಳ್ಳಿಯಲ್ಲಿಯೂ ವೀರಶೈವರದೊಂದು ಶಾಲೆಯು ಕಣ್ಣಿಗೆ ಬೀಳುತ್ತಿತ್ತು.

ಪ್ಲಾನೆಟ್ ಕನ್ನಡದಲ್ಲಿ ಬದಲಾವಣೆಗಳು

ಬರುವ ಭಾನುವಾರದಿಂದ ಪ್ರಾರಂಭಿಸಿ [:http://planet.sampada.net|ಪ್ಲಾನೆಟ್ ಕನ್ನಡದಲ್ಲಿ] ಅನಾಮಿಕರು ಬರೆಯುವ ಬ್ಲಾಗುಗಳನ್ನು ತೆಗೆದುಹಾಕಲಾಗುವುದು.

ಒಹ್, ಜುಲೈ, ಜುಲೈ - ನಿನ್ನ ಪ್ರತಾಪ ಹೀಗೇಕೆ ?!

'ಅಯ್ಯೊ ಮತ್ತೆ ಬಂತೆ, ಜುಲೈ, ಮೆರೆಸಿತೆ, ದುರ್ದಶೆಯ ತಾಂಡವ ನೃತ್ಯವ' ! ಇಂದು ೨೬, ನೆಯ ಜುಲೈ, ೨೦೦೬, ಒಂದು ವರ್ಷದ ನಂತರದ ಅನುಭವದ ಮಧ್ಯೆಯೂ ಸ್ವಲ್ಪ ಅಧೀರತೆಯನ್ನು ತರುತ್ತೆ ! ೨೦೦೫ ರಂದು, ಇದೇ ದಿನದ ದಾರುಣ 'ವ್ಯಥೆಯ ಕಥೆ', ಕೆಟ್ಟ 'ಕರಾಳ ರಾತ್ರಿ'ಯ ಕಹಿ ನೆನೆಪಿನ ಅನುಭವ ಗಳನ್ನು ಅನುಭವಿಸಿದವರೆಗೆ ಮಾತ್ರ ಗೊತ್ತು ! 'ದೈವ ಬಗೆದದ್ದೇ ಇದನ್ನ' ಎಂದಾಗ ನಾವು ಹೇಳುವದಾದರೂ ಯಾರಿಗೆ ? ನಮ್ಮ ಕೈಲೇನಿದೆ ? ನಮ್ಮವರೇ ಆದ ಮನುಕುಲದ ದಿಗ್ಗಜರೇ ಹೀಗೆ ಮಾಡಿದ್ದಾರೆ.