ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚರಿತ್ರೆ ಬಗ್ಗೆ ಇನ್ನೊಂದು ಅಭಿಪ್ರಾಯ

ಮನುಷ್ಯನ ಬುದ್ಧಿ ಅನ್ವೇಷಿಸಿರುವ ಅತ್ಯಂತ ಅಪಾಯಕಾರಿಯಾದ ಉತ್ಪಾದನೆ-ಚರಿತ್ರೆ. ಚರಿತ್ರೆಯ ಗುಣಗಳು ಸುವಿದಿತ. ಕನಸುಗಳಿಗೆ ಜನ್ಮ ನೀಡುತ್ತದೆ, ಜನರಿಗೆ ಅಮಲೇರುವಂತೆ ಮಾಡುತ್ತದೆ, ಸುಳ್ಳು ನೆನಪುಗಳನ್ನು ಹುಟ್ಟಿಹಾಕುತ್ತದೆ, ಜನರ ಪ್ರತಿಕ್ರಿಯೆಗಳು ಉತ್ಪ್ರೇಕ್ಷಿತವಾಗುವಂತೆ ಮಾಡುತ್ತದೆ, ಹಳೆಯ ಗಾಯಗಳನ್ನು ಕೆದಕುತ್ತದೆ, ಜನತೆಯ ನಿದ್ರೆ ಕಡಿಸುತ್ತದೆ, ತಮ್ಮ ನಾಡಿನ ಹಿರಿಮೆ ಮತ್ತು ವೈಭವಗಳ ಬಗ್ಗೆ ವ್ಯಾಮೋಹ ಭರಿತ ಭ್ರಮೆಗಳನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ, ಅಥವಾ ತಾವು ಪೀಡನೆಗೆ ಒಳಗಾದ ಜನಾಂಗ ಎಂದು ಕೊರಗುವಂತೆ ಮಾಡುತ್ತದೆ, ರಾಷ್ಟ್ರಗಳ ಮನಸ್ಸನ್ನು ಕಹಿಮಾಡಿ, ಉದ್ಧಟತನವನ್ನು ತುಂಬಿ, ಬಡಾಯಿಕೊಚ್ಚಿಕೊಳ್ಳುವಂತೆ ಮಾಡುತ್ತದೆ...

ಕನ್ನಡ ನಿಘಂಟು

ಇಂಟರ್ನೆಟ್ ನಲ್ಲಿ ಕನ್ನಡ ಬರಯುವಾಗ ಕೆಲವೊಮ್ಮೆ ಕ್ಲಿಷ್ಟ ಪದಗಳು ಕೈ ಕೊಡುವುದುಂಟು. ಅಂದರೆ, ಹೇಳಲು ಬಯಸಿದ್ದಕ್ಕೆ ಇಂಗ್ಲಿಷ್ ಪದವೇನೋ ನಾಲಗೆಯ ತುದಿಯಲ್ಲೇ ಇರುತ್ತದೆ.. ಆದರೆ, ಸಮಾನಾಂತರ ಕನ್ನಡ ಪದ ಸಿಗುವುದಿಲ್ಲ. ಈ ರೀತಿ ಇಂಗ್ಲಿಷ್ ನಲ್ಲಿ ಆದಾಗ dictionary.com ಗೆ ಅಥವಾ ಗೂಗಲ್ ನಲ್ಲಿ define:difficultword ಎಂಬ ಫಾರ್ಮುಲಾಗೆ ಮೊರೆ ಹೋಗುತ್ತೇವೆ. ಕನ್ನಡಕ್ಕೆ ಈ ರೀತಿಯಾದ ready reference ಇದೆಯೇ?

ಜೆಕೆ ಹೇಳಿದ್ದು: ಪ್ರೀತಿಯೊಂದು ಕರ್ತವ್ಯವಲ್ಲ

ಪ್ರೀತಿ ಇರುವಲ್ಲಿ ಯಾವ ಕರ್ತವ್ಯವೂ ಇರುವುದಿಲ್ಲ. ನಿಮ್ಮ ಹೆಂಡತಿಯ ಬಗ್ಗೆ ನಿಮ್ಮಲ್ಲಿ ಪ್ರೀತಿ ಇದ್ದರೆ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನಿಮ್ಮ ಆಸ್ತಿ, ನಿಮ್ಮ ಸಮಸ್ಯೆ, ನಿಮ್ಮ ಕಳವಳ, ನಿಮ್ಮ ಸಂತೋಷ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನೀವು ಆಳುವ ಯಜಮಾನ, ಆಕೆ ಆಳಿಸಿಕೊಳ್ಳುವ ಸೇವಕಿಯಾಗಿರುವುದಿಲ್ಲ. ನೀವು ಗಂಡಸು, ಆಕೆ ನಿಮ್ಮ ವಂಶೋದ್ಧಾರಕನನ್ನು ಹೆರುವ ಹೆಣ್ಣು ಯಂತ್ರ ಆಗಿರುವುದಿಲ್ಲ. ನಿಮ್ಮ ಸಂತೋಷಕ್ಕೆ ಆಕೆಯನ್ನು ಬಳಸಿಕೊಂಡು ಆಮೇಲೆ ಬೇಡವೆಂದು ಆಕೆಯನ್ನು ಬಿಸಾಡುವುದಿಲ್ಲ. ಪ್ರೀತಿ ಇದ್ದಾಗ ಕರ್ತವ್ಯವೆಂಬ ಶಬ್ದವಿರುವುದಿಲ್ಲ. ಹೃದಯದಲ್ಲಿ ಪ್ರೀತಿ ಇಲ್ಲದಿರುವಾತ ಮಾತ್ರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುತ್ತಾನೆ. ಈ ದೇಶದಲ್ಲಿ ಹಕ್ಕು ಮತ್ತು ಕರ್ತವ್ಯಗಳು ಪ್ರೀತಿಯ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಬೆಚ್ಚನೆಯ ಪ್ರೀತಿಗಿಂತ ಕಾನೂನು, ನಿಯಮಾವಳಿಗಳಿಗೆ ಪ್ರಾಮುಖ್ಯ ಸಂದಿದೆ. ಪ್ರೀತಿ ಇದ್ದಾಗ ಎಲ್ಲ ಸಮಸ್ಯೆಗಳೂ ಸರಳವಾಗುತ್ತವೆ. ಪ್ರೀತಿ ಇಲ್ಲದಿರುವಾಗ ಎಲ್ಲ ಸಮಸ್ಯೆಗಳೂ ಜಟಿಲವಾಗುತ್ತವೆ. ಹೆಂಡತಿ ಮತ್ತು ಮಕ್ಕಳ ಬಗ್ಗೆ ಪ್ರೀತಿ ಇರುವಾತ ಹಕ್ಕು ಮತ್ತು ಕರ್ತವ್ಯಗಳ ದಾಟಿಯಲ್ಲಿ ಯೋಚಿಸುವುದಿಲ್ಲ. ದಯವಿಟ್ಟು ನಿಮ್ಮ ನಿಮ್ಮ ಮನಸ್ಸುಗಳನ್ನು ಪರಿಶೀಲಿಸಿಕೊಳ್ಳಿ. ನನಗೆ ಗೊತ್ತು, ಹೀಗೆಂದಾಗ ನೀವು ನಕ್ಕುಬಿಡುತ್ತೀರಿ. ನಮ್ಮಲ್ಲಿ ಆಲೋಚನೆಯ ಸಾಮಾರಥ್ಯವಿಲ್ಲದಿದ್ದಾಗ ಯಾವುದೇ ವಿಷಯದ ಬಗ್ಗೆ ನಕ್ಕು, ಆಮೇಲೆ ಅದನ್ನು ಬದಿಗೆ ಸರಿಸಿಬಿಡುತ್ತೇವೆ. ನಿಮ್ಮ ಹೆಂಡತಿಯರಿಗೆ ನೀವು ಪ್ರಾಮುಖ್ಯ ನೀಡಿಲ್ಲವಾದ್ದರಿಂದಲೇ ಆಕೆ ನಿಮ್ಮ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದಿಲ್ಲ. ನಿಮ್ಮ ಬದುಕಿನ ಎಲ್ಲ ಸಂಗತಿಗಳ ಅರ್ಧ ಭಾಗ ತನ್ನದೆಂದುಕೊಳ್ಳುವುದಿಲ್ಲ. ಹೆಂಡತಿಗೆ ಯಾವ ಪ್ರಾಮುಖ್ಯವೂ ಇಲ್ಲ. ಅವಳನ್ನು ಸುಮ್ಮನೆ ಇಟ್ಟುಕೊಂಡಿದ್ದು, ನಿಮ್ಮ ಲೈಂಗಿಕ ಅಗತ್ಯಕ್ಕೆ ಅನುಸಾರವಾಗಿ ಆಕೆಯನ್ನು ಬಳಸಿಕೊಳ್ಳಬಹುದು ಎಂದುಕೊಂಡಿದ್ದೀರಿ. ಆದ್ದರಿಂದಲೇ ಹಕ್ಕು ಮತ್ತು ಕರ್ತವ್ಯ ಎಂಬ ಶಬ್ದಗಳನ್ನು ರೂಪಿಸಿಕೊಂಡಿದ್ದೀರಿ. ಹೆಣ್ಣು ವಿರೋಧಿಸಿದಾಗ, ದಂಗೆಯೆದ್ದಾಗ, ಈ ಶಬ್ದಗಳನ್ನು ಅವಳೆದುರು ಬೀಸಿ ಒಗೆದು ಸುಮ್ಮನಿರಿಸಲು ಪ್ರಯತ್ನಿಸುತ್ತೀರಿ. ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುವ ಸಮಾಜ ಸ್ಥಗಿತಗೊಂಡ, ಕೊಳೆತ ಸಮಾಜ. ನಿಮ್ಮ ಹೃದಯ, ನಿಮ್ಮ ಮನಸ್ಸನ್ನು ಪರಿಶೀಲಿಸಿಕೊಂಡರೆ ಅಲ್ಲಿ ಪ್ರೀತಿ ಇಲ್ಲ ಎಂದು ನಿಮಗೇ ತಿಳಿಯುತ್ತದೆ.

ಕುಣಿತ ಗೊತ್ತಿಲ್ಲದವರು ರಂಗಸ್ಥಳ ಓರೆ ಎಂದರಂತೆ

ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು [http://www.prajavani.net/nov232005/35373200501123.php|ಮುಂದಿಟ್ಟರು]. ಅದಕ್ಕೆ ಪ್ರತಿಕ್ರಿಯೆಯಾಗಿ [http://www.prajavani.net/dec142005/37588200501214.php|ಚ. ಹ. ರಘುನಾಥ] ಅವರು ಸದ್ಯಕ್ಕೆ ಅನುವಾದದ ತಂತ್ರಾಂಶ ತುಂಬ ದೂರದ ಕನಸು. ಅತೀ ಅಗತ್ಯವಾಗಿ ಆಗಬೇಕಾದ ಇತರೆ ಕೆಲಸಗಳೇ ಬಾಕಿ ಇವೆ ಎಂದು ಬರೆದರು. ಈ ವಿಷಯವನ್ನು ನಾನೂ ಒಪ್ಪುತ್ತೇನೆ. ರಘುನಾಥ ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ಕನ್ನಡದಲ್ಲಿ ಇನ್ನೂ ಹಲವಾರು ರೀತಿಯ ಕೀಲಿಮಣೆಗಳು ಚಾಲ್ತಿಯಲ್ಲಿರುವುದನ್ನು ಪ್ರಸ್ತಾಪಿಸಿದರು. ಹಾಗೆಯೇ ಹಲವರು ಇಂಗ್ಲಿಶ್ ಲಿಪಿಯಲ್ಲಿ ಕನ್ನಡವನ್ನು ಬರೆದು (ಟೈಪಿಸಿ) ಇಮೈಲ್ ಮಾಡುವುದನ್ನು ಪ್ರಸ್ತಾಪಿಸಿದರು. ಅವರ ಪ್ರಕಾರ ಕನ್ನಡದಲ್ಲಿ ಬೆರಳಚ್ಚು ಮಾಡುವುದನ್ನು ಕಲಿಯುವುದು ಒಂದು ಹೆಚ್ಚಿನ ಕೆಲಸ. ನಾನು ಕೇಳುತ್ತೇನೆ -"ನೀವು ಹುಟ್ಟುವಾಗ ಇಂಗ್ಲಿಶ್ ಕೀಲಿಮಣೆಯನ್ನು ಕಲಿತುಕೊಂಡೇ ಹುಟ್ಟಿ ಬಂದಿರೇ? ಇಂಗ್ಲಿಶ್ ಕೀಲಿಮಣೆ ಕಲಿಯುವುದು ನಿಮಗೆ ಕಷ್ಟವಾಗಲಿಲ್ಲ. ಅದು ಒಂದು ಹೆಚ್ಚಿನ ಕೆಲಸವಾಗಲಿಲ್ಲ. ಕನ್ನಡದ ಕೀಲಿಮಣೆ ಕಲಿಯುವುದು ಮಾತ್ರ ಯಾಕೆ ಹೆಚ್ಚಿನ ತೊಂದರೆಯ ಕೆಲಸ ಎಂದೆನಿಸುತ್ತದೆ?". ರಘುನಾಥ ಅವರ ಮಾತುಗಳಿಗೆ ನನ್ನ ವಿಶೇಷವಾದ ಅಡ್ಡಿಯೇನಿಲ್ಲ.

ದತ್ತ ಸ್ತೋತ್ರ

ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ | ಶ್ರೀದತ್ತಾಸ್ಮಾನ್‍ಪಾಹಿ ದೇವಾದಿದೇವ ||
ಭಾವಗ್ರಾಹ್ಯ ಕ್ಲೇಷಹಾರಿನ್‍ಸುಕೀರ್ತೆ | ಘೋರಾತ್‍ಕಷ್ಟಾದ್‍ಉದ್ಧರಾಸ್ಮಾನ್‍ನಮಸ್ತೆ || ೧ ||

ದಿನಚರಿ - ೨೩/೧೨/೨೦೦೫

ಒಂದರ ಹಿಂದೆ ಒಂದರಂತೆ ಕಂಪ್ಯೂಟರಿನಲ್ಲಿ ಏನೋ ಕೆಲಸ ಹಚ್ಚಿಕೊಂಡು ಬೆಳಿಗ್ಗೆಯಿಂದ ಸಮಯಹೋದದ್ದೇ ತಿಳಿಯಲಿಲ್ಲ. ಸ್ವಲ್ಪ ಪೆಂಡಿಂಗ್ ಕೆಲಸಗಳು ಮುಗಿದವು, ಆದರೆ ಓದಿದ್ದು ಮಾತ್ರ ಸೊನ್ನೆ.

ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ

ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಅಲ್ಲಿನ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ. ಜೀವಶಾಸ್ತ್ರ ಅವರ ಅಧ್ಯಯನ ವಿಷಯ. ಒಟ್ಟು ಹದಿಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೇ ಆನಂದಕಂದ ಗ್ರಂಥಮಾಲೆಯನ್ನು ನಡೆಸುತ್ತಿದ್ದಾರೆ. ಸಂವಾದ ಎಂಬ ಸಾಹಿತ್ಯ ಪತ್ರಿಕೆಯನ್ನು ಕಳೆದ ಎರಡು ದಶಕಗಳಿಂದ ಸಂಪಾದಿಸುತ್ತಿದ್ದಾರೆ. ಹಳ್ಳಿಯ ಆ ಶಾಲೆಯ ಮಕ್ಕಳಿಗಾಗಿ ಕಳೆದ ಮೂರು ವರ್ಷಗಳಿಂದ ರಂಗತರಬೇತಿ ಶಿಬಿರ ನಡೆಸುತ್ತಿದ್ದಾರೆ. ಈ ವರ್ಷದ ನಾಟಕೋತ್ಸವನ್ನು ನೋಡಿ ನನಗೆ ಬಹಳ ಸಂತೋಷ ಮತ್ತು ಹೆಮ್ಮೆ ಅನ್ನಿಸಿತು. ಸಾಹಿತ್ಯದಲ್ಲಿ ಒಳ್ಳೆಯ ಕೆಲಸಮಾಡಲು, ನಮ್ಮ ಜನರ ಬದುಕನ್ನು ಒಂದಿಷ್ಟು ಉತ್ತಮಗೊಳಿಸಲು ಅಪಾರ ಹಣ, ನಗರದ ಮಾಧ್ಯಮಗಳ ಪ್ರಚಾರ ಇವೆಲ್ಲಕ್ಕಿಂತ ನಮ್ಮ ಸುತ್ತಲಿನವರ ಬಗ್ಗೆ ಕಳಕಳಿ, ಮಾಡುವ ಕೆಲಸದಲ್ಲಿ ನಿಷ್ಠೆ ಮುಖ್ಯ ಅನಿಸಿತು. ಪಾಟೀಲರಿಗೆ ಬಂದ ಪ್ರಶಸ್ತಿ ಸಜ್ಜನರೊಬ್ಬರಿಗೆ ದೊರೆತದ್ದು ಇನ್ನೂ ಅಚ್ಚರಿ ಸಂತೋಷಗಳನ್ನು ಮೂಡಿಸಿತು.

ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ

ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ. ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಕಷ್ಟದ ಕೆಲಸ. ಈ ಕೆಲಸ ಏಕಾಂತದಲ್ಲಿ, ಲೋಕದಿಂದ ದೂರವಾಗಿದ್ದು ಒಂಟಿತನದಲ್ಲಿ ಸಾಧಿಸಬಹುದಾದ ಕೆಲಸವಲ್ಲ. ನಮ್ಮನ್ನು ನಾವು ತಿಳಿಯುವುದು ಮುಖ್ಯ. ಆದರೆ ಅದಕ್ಕಾಗಿ ನಾವು ಸಂಬಂಧಗಳನ್ನೆಲ್ಲ ಕಡಿದುಕೊಳ್ಳಬೇಕಾಗಿಲ್ಲ. ಒಂಟಿಯಾಗಿದ್ದು, ಏಕಾಂತದಲ್ಲಿದ್ದು ಅಥವಾ ಮನಶ್ಶಾಸ್ತ್ರಜ್ಞರನ್ನು ಕಂಡು, ಆಚಾರ್ಯರ ದರ್ಶನ ಪಡೆದು, ಅಥವಾ ಪುಸ್ತಕಗಳನ್ನು ಓದಿ ನಮ್ಮನ್ನು ನಾವು ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವೆಂಬುದು ತಪ್ಪು ಕಲ್ಪನೆ. ನಮ್ಮ ಬಗ್ಗೆ ನಾವು ಪಡೆಯುವ ಅರಿವು ಒಮ್ಮೆ ಸಾಧಿಸಿ ಮುಗಿಸಿಬಿಡಬಹುದಾದ ಗುರಿಯಲ್ಲ. ಅದೊಂದು ನಿರಂತರವಾದ ಕಾರ್ಯ. ನಮ್ಮನ್ನು ನಾವು ತಿಳಿಯಬೇಕಾದರೆ ಕ್ರಿಯೆಗಳಲ್ಲಿ ನಮ್ಮನ್ನು ನೋಡಿಕೊಳ್ಳಬೇಕು. ನಮ್ಮ ಕ್ರಿಯೆಗಳೆಂದರೆ ಸಂಬಂಧಗಳು. ಗಂಡನೊಡನೆ, ಹೆಂಡತಿಯೊಡನೆ, ಸೋದರನೊಡನೆ, ಸಮಾಜದೊಡನೆ, ಮನುಷ್ಯರೊಡನೆ ನಿಮ್ಮ ಸಂಬಂಧ ಹೇಗಿದೆ ಎಂದು ನೋಡಿಕೊಳ್ಳಿ. ನೀವು ಹೇಗೆ ಪ್ರತಿಕ್ರಿಯೆ ತೋರುತ್ತೀರಿ ಎಂಬುದನ್ನು ಗಮನಿಸಿ. ಆದೆ ಹೀಗೆ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ಮನಸ್ಸು ಬಹಳ ಎಚ್ಚರವಾಗಿರಬೇಕು. ನಮ್ಮಲ್ಲಿ ತೀಕ್ಷ್ಣವಾದ ಗ್ರಹಿಕೆ ಇರಬೇಕು.