ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಬೇಕೆ ಬೇಡವೆ?
ಸುಮಾರು ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಕರ್ನಾಟಕದ ಹಳ್ಳಿಗಳಂತಿದ್ದ ಊರೂರೂಗಳಲ್ಲೂ ಇಂಗ್ಲೀಷ್ ಮೀಡಿಯಂ ಸ್ಕೂಲುಗಳು ಅಣಬೆಗಳಂತೆ ಹುಟ್ಟಿಕೊಂಡವು. ಇನ್ನೂ ಮೊಲೆ ಚೀಪುತ್ತಿದ್ದ ಕಂದಮ್ಮಗಳನ್ನೂ ಎಲ್‌ಕೆಜಿ ಎಂಬ ಮಾಯಕದ ಬೇಬಿಸಿಟ್ಟರ್‌ಗಳಿಗೆ ಅವುಗಳ ಪುಟ್ಟ ಹೂವಿನಂಥ ಪಾದಗಳಿಗೆ ಶೂಸುಗಳನ್ನು ಬಿಗಿದು, ಕೊರಳಿಗೆ ಟೈ ಜೋತು ಬಿಟ್ಟು ಗರಿಗರಿಯಾದ ಯೂನಿಫಾರಂ ತೊಡಿಸಿ ಮನೆ ಬಾಗಿಲಿಗೇ ಬರುವ ಬಸ್ಸುಗಳಲ್ಲಿ ತುಂಬಿ ಕಳಿಸುವ, ಕಳಿಸಿ ಅನನ್ಯ ಧನ್ಯತಾ ಭಾವದಿಂದ ಎದೆಯುಬ್ಬಿಸಿ ಹಿಗ್ಗುವ ತಂದೆ ತಾಯಿಗಳು, ಅಲ್ಲಲ್ಲ, ಡ್ಯಾಡೀ ಮಮ್ಮಿಗಳು ರಸ್ತೆಯಂಚಿನಲ್ಲಿ ಕಂಡುಬರತೊಡಗಿದ್ದರು. ಮುಂದೆ ಇವರೆಲ್ಲ ತಮ್ಮ ಮಕ್ಕಳ ಹೋಂ ವರ್ಕು, ಟ್ಯೂಷನ್ನು, ಎಪ್ಲಸ್ಸು ಬಿಮೈನಸ್ಸು ರ್‍ಯಾಂಕಿಂಗ್‌ಗಳಲ್ಲಿ ಕಳೆದು ಹೋದ ಬಗೆಯೇ ಒಂದು ಕನಸಿನಂತಿದೆ! ಕ್ರಮೇಣ ಸರಿಯಾದ ಸವಲತ್ತು, ಪರಿಕರಗಳು, ಪೀಠೋಪಕರಣಗಳು, ಉಪಾಧ್ಯಾಯರುಗಳಿಲ್ಲದೆ ದೊಡ್ಡಿಯಂತಾಗಿದ್ದ ಸರಕಾರೀ ಶಾಲೆಗಳಿಗೆ ಹಾಜರಾತಿಯೇ ಇಲ್ಲದ ಸ್ಥಿತಿ ಬಂತು. ಅಲ್ಲಿಂದೀಚೆಗೆ ನಮ್ಮ ಸರಕಾರಗಳು ಈ ಶಾಲೆಗಳ ಆಕರ್ಷಣೆ ಹೆಚ್ಚಿಸಲು ತರಹೇವಾರೀ ರಂಗಿನಾಟಗಳನ್ನು ಆಡುತ್ತ ಬಂದಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ. ಅಂಥವುಗಳ ಸಾಲಿಗೇ ಸೇರಿದ ಹೊಸ ಯೋಜನೆ, ಒಂದನೆಯ ತರಗತಿಯಿಂದಲೇ ಇಂಗ್ಲೀಷ್!
- Read more about ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಬೇಕೆ ಬೇಡವೆ?
- Log in or register to post comments