'ಟೈಮ್ಸ್ ಆಫ್ ಇಂಡಿಯ' ಆಯೋಜಿಸಿರುವ, 'ಕಾಲ ಘೋಡ ಆರ್ಟ್ಸ್ ಫೆಸ್ಟಿವಲ್,' ಮುಂಬೈ ನ ಕಾಲಘೋಡ ಪ್ರದೇಶದಲ್ಲೇ !

'ಟೈಮ್ಸ್ ಆಫ್ ಇಂಡಿಯ' ಆಯೋಜಿಸಿರುವ, 'ಕಾಲ ಘೋಡ ಆರ್ಟ್ಸ್ ಫೆಸ್ಟಿವಲ್,' ಮುಂಬೈ ನ ಕಾಲಘೋಡ ಪ್ರದೇಶದಲ್ಲೇ !

'ಕಾಲ ಘೋಡ ಆರ್ಟ್ಸ್ ಫೆಸ್ಟಿವಲ್' ೧೯೯೯, ರಿಂದ ಪ್ರತಿವರ್ಷವೂ ನಡೆದುಕೊಂಡು ಬರುತ್ತಲಿದೆ. ಇಲ್ಲಿ ಸಂಗೀತ, ನೃತ್ಯ, ಭಾಷಣ, ಸ್ಪರ್ಧೆಗಳು, ವಸ್ತುಪ್ರದರ್ಶನಗಳು, ಬೆಳಿಗ್ಯೆ ೯ ರಿಂದ ರಾತ್ರಿ ೮-೩೦ ರವರೆಗೆ, ಮತ್ತು ಆಮೇಲೂ ಇರುತ್ತವೆ. ಪ್ರವೇಶ ಉಚಿತ. ಬನ್ನಿ ಆನಂದಿಸಿ. ನೀವೂ ಸ್ಪರ್ಧಗಳಲ್ಲಿ ಭಾಗವಹಿಸಬಹುದು.

ಮುಂಬೈ ನ ಕೋಟೆ ಪ್ರದೇಶದಲ್ಲಿ, ಜಹಂಗೀರ್ ಆರ್ಟ್ಸ್ ಗ್ಯಾಲರಿಬಳಿ, ಇರುವ ಕಾಲಾಘೋಡ-'ಅರ್ಧಚಂದ್ರಾಕಾರ'ದ ಜಾಗ ಬಹಳ ಮಹತ್ವಪೂರ್ಣವಾದದ್ದು. ಇದು ಉತ್ತರಕ್ಕೆ ಬಾಂಬೆ ವಿಶ್ವವಿದ್ಯಾಲಯ, ಪಸ್ಚಿಮದಲ್ಲಿ ಓವಲ್ ಮೈದಾನ, ಪೂರ್ವದಲ್ಲಿ ಲಯನ್ ಗೇಟ್, ದಕ್ಷಿಣದಲ್ಲಿ ಶ್ಯಾಮ ಪ್ರಸಾದ ಮುಖರ್ಜಿ ರಸ್ತೆ, ಹತ್ತಿರ ಇದೆ. ಇದರ ಮಧ್ಯೆ ಇರುವ 'ಕಾಲಾಘೋಡ' ಅನ್ನುವಜಾಗಕ್ಕೆ ಹೆಸರು ಬರಲು ಕಾರಣ, ಕಪ್ಪು ಕುದುರೆಯಮೇಲೆ ಸವಾರಿಮಾಡುತ್ತಿರುವ ಇಂಗ್ಲೆಂಡಿನ ಚಕ್ರವರ್ತಿ, ೭ ನೆಯ ಎಡ್ವರ್ಡ್ ನ ಕಂಚಿನ ಪ್ರತಿಮೆ. ಇದನ್ನು ಅಲ್ಲಿನ ಪ್ರದೇಶದ ಜನ 'ಕಪ್ಪು ಕುದುರೆ,' ಎಂದೆ ಬಹಳ ವರ್ಷಗಳ ಕಾಲ, ಹೇಳುತ್ತಾ ಬಂದಿದ್ದಾರೆ. ಕಾಲಾನುಕ್ರಮದಲ್ಲಿ ಆ ಕಪ್ಪು ಕಂಚಿನ ಪ್ರತಿಮೆ, 'ಕಾಲಾಘೋಡ'ವನ್ನು ಭೈಕಲ್ಲದ 'ರಾಣಿ ಬಾಗ್ ಉದ್ಯಾನವನ' ಕ್ಕೆ ವರ್ಗಾಂತರಿಸಲಾಯಿತು. ಈ ಸ್ಥಳವು ದೊಡ್ಡದೊಡ್ದ ಮ್ಯೂಸಿಯಂಗಳು, ರೆಸ್ಟೊರಂಟ್ ಗಳು, ಬಾಟಿಕ್ಸ್ ಗೃಹಗಳು, ಹೆರಿಟೇಜ್ ಕಟ್ಟಡಗಳಿಂದ ಕೂಡಿದ್ದು, ಮುಂಬೈ ನ ಕಲೆ ಮತ್ತು ಸಂಸ್ಕೃತಿಯ ಸಂಗಮ ಸ್ಥಳವಾಗಿರುವುದರಿಂದ, ಪ್ರತಿವರ್ಷವೂ ಇಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದಂತೆ, ಈ ವರ್ಷವೂ ಫೆಬ್ರವರಿ ೩ ರಿಂದ ೧೧ ರ ವರೆಗೆ 'ಕಾಲಘೋಡ ಹಬ್ಬ'ವನ್ನು, ಹಮ್ಮಿಕೊಳ್ಳಲಾಗಿದೆ.