ಅಚ್ಚಾದಳು ಎದೆಯಲಿ ಪದವಾಗಿ...

ಅಚ್ಚಾದಳು ಎದೆಯಲಿ ಪದವಾಗಿ...

ಸುಮಾರು ಎರಡು ತಿಂಗಳಿಂದ "ಕಲ್ಲರಳಿ ಹೂವಾಗಿ" ಚಿತ್ರದ ಹಾಡುಗಳನ್ನು ಆಗಾಗ ಕೇಳುತ್ತಿದ್ದೇನೆ. ಕೇಳುವಾಗಲೆಲ್ಲ ಅದೇನೋ ಒಂದು ರೀತಿಯ ಪುಳಕ, ಸಂತಸ ಉಂಟಾಗುತ್ತದೆ. ಆಶ್ಚರ್ಯ ಅಂದರೆ ಈ ಸಂತೋಷ ಚಿತ್ರದ ಸಂಗೀತದಿಂದ ದಕ್ಕಿದ್ದಲ್ಲ; ಬದಲಾಗಿ ಅದರ ಹಾಡುಗಳ ಸಾಹಿತ್ಯದಿಂದ! ಸಂಗೀತವನ್ನು ಬದಿಗಿಟ್ಟು, ಹಾಡುಗಳನ್ನು ಹಾಗೇ ಸುಮ್ಮನೆ "ಓದೋಣ" ಅನ್ನಿಸುತ್ತದೆ. ಸುಂದರವಾದ ಸಾಲುಗಳನ್ನಿತ್ತ ಹಂಸಲೇಖಾರವರಿಗೆ ಧನ್ಯವಾದಗಳ ಒಂದು "ಬೊಕ್ಕೆ". ನನಗೆ ಬಹಳ ಇಷ್ಟವಾದ ಕೆಲವು ಸಾಲುಗಳನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೀನಿ. ನೀವೂ ಸವಿಯುತ್ತೀರಾ ಎಂದುಕೊಂಡಿದ್ದೇನೆ.

ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು...     (ಹಾಡು: ಹಣತೆಯ ಅಡಿಯಲ್ಲೆ...)

ಬಾರಪ್ಪ ಓ ಬೆಳ್ಳಿ ದೀಪ,
ತೋರಪ್ಪ ನಿನ್ನ್ ತಂಪಿನ ರೂಪ,
ತಣಿಸಪ್ಪ ನಮ್ಮ್ ಧರಣಿ ತಾಪ,
ಓಡು ಬಾ, ಓಡು ಬಾರೋ, ತಿಂಗಳ ಮಾವ...   (ಹಾಡು: ಬಾರಪ್ಪ ಓ ತಿಂಗಳ ಮಾವ...)

ಕಲ್ಲರಳಿ ಹೂವಾಗಿ, ಹೂವರಳಿ ಹೆಣ್ಣಾಗಿ...
ಝುಮ್ಮೆಂದಳು ಎದೆಯಲಿ ಪದವಾಗಿ...
ಅಚ್ಚಾದಳು ಎದೆಯಲಿ ಪದವಾಗಿ...             (ಹಾಡು: ಕಲ್ಲರಳಿ ಹೂವಾಗಿ...)

ಈ ಮೇಲಿನ ಸಾಲುಗಳು ಎಷ್ಟು ಸರಳ, ಸಹಜ ಮತ್ತು ಲಯಬದ್ಧವಾಗಿ ಇವೆ ಅಲ್ಲವೇ?

Rating
No votes yet