ಇ-ಲೋಕ-೮ (೨/೨/೨೦೦೭)
ಬಲ್ಬ್ ಬಳಕೆಗೆ ನಿಷೇಧ!
ಥಾಮಸೆ ಆಲ್ವಾ ಎಡಿಸನ್ ಸಂಶೋಧಿಸಿದ ಬುರುಡೆ ಬಲ್ಬ್‌ನ ಒಂದು ತೊಂದರೆ ಅಂದರೆ,ಇದರಲ್ಲಿ ಟಂಗ್‌ಸ್ಟನ್ ತಂತಿ ಸುರುಳಿಯಲ್ಲಿ ಹರಿಯುವ ವಿದ್ಯುತ್ ಉಂಟು ಮಾಡುವ ಶಾಖದಿಂದ ಸುರುಳಿ ಕಾದು,ಅದು ಬೀರುವ ಪ್ರಕಾಶದ ಮೂಲಕ ಬೆಳಕು ದೊರೆಯುತ್ತದೆ. ಹೆಚ್ಚಿನ ವಿದ್ಯುತ್ ಶಕ್ತಿ ಶಾಖದ ರೂಪದಲ್ಲಿ ನಷ್ಟವಾಗುತ್ತದೆ.ಹಿಂದೆ ಅವನ್ನು ಬಳಸುವುದು ಅನಿವಾರ್ಯವಾಗಿತ್ತು.ಈಗಲಾದರೋ ಅಂತಹ ಬಲ್ಬ್‌ಗಳು ಬಳಸುವ ವಿದ್ಯುಚ್ಛಕ್ತಿಯ ಮೂರನೇ ಮೂರನೇ ಒಂದಕ್ಕಿಂತಲೂ ಕಡಿಮೆ ವಿದ್ಯುಚ್ಛಕ್ತಿ ಬಳಸುವ ಕಾಂಪಾಕ್ಟ್ ಫ್ಲೊರೆಸೆಂಟ್ ಲ್ಯಾಂಪ್(ಸಿ.ಎಫ್.ಎಲ್)ಗಳು ಲಭ್ಯ.ಇವುಗಳು ಬುರುಡೆ ಬಲ್ಬ್‌ಗಳಿಗೆ ಹೋಲಿಸಿದರೆ ಅಧಿಕ ದುಬಾರಿ ಎನ್ನುವುದೇನೋ ನಿಜ. ಆದರೆ ಇವುಗಳ ಬಾಳಿಕೆ ಹೆಚ್ಚು. ಹಾಗಾಗಿ ಅವುಗಳು ಕೆಟ್ಟು ಹೋಗುವ ಮೊದಲು ಅವುಗಳಿಗಾಗಿ ಖರ್ಚು ಮಾಡಿದ ಹಣಕ್ಕಿಂತ ಹೆಚ್ಚು ವಿದ್ಯುತ್ ಉಳಿತಾಯವಾಗಿರುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಬುರುಡೆ ಬಲ್ಬ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೆ ಬರುವುದರಲ್ಲಿದೆ. ಬಳಕೆದಾರರಿಗೆ ಈ ಬಗ್ಗೆ ಶಿಕ್ಷಣ ನೀಡುವುದೇ ಅಲ್ಲದೆ, ಉಚಿತ ಸಿ.ಎಫ್.ಎಲ್. ದೀಪಗಳನ್ನು ಮೊದಲಿಗೆ ನೀಡಿ, ಮತ್ತೆ ಖರೀದಿ ಮೇಲೆ ರಿಯಾಯಿತಿ ಕೊಡುವ ಯೋಜನೆ ಅಲ್ಲಿನ ಆಡಳಿತದ್ದು.
- Read more about ಇ-ಲೋಕ-೮ (೨/೨/೨೦೦೭)
- 5 comments
- Log in or register to post comments