ಚಲುವೆ ಮಲ್ಲಿಗೆ ಹೂವೆ
ಚಲುವೆ ಮಲ್ಲಿಗೆ ಹೂವೆ ಮುಂಜಾನೆ ಮನೆಯಂಗಳದಿ
ನಗುಚಲ್ಲಿ ಅರಳಿರುವೆ
ನನ್ನ ನಿನ್ನೆಡೆಗೆ ಸೆಳದಿರುವೆ
ಒಲವ ಪರಿಮಳ ಚಲ್ಲಿರುವೆ
ಒಲಿದು ಬರಲು ಮೌನದಿಂದೇಕಿರುವೆ
ನಿನ್ನ ಸವಿ ಮದುವಿಗಾಗಿ ನಾ ಕಾದಿರುವೆ
ನಲಿದು ನೀ ನೀಡು ಸವಿಯ ಸವಿವೆ
ಮನ ಒಲಿದು ನಿನ್ನ ಕೈಹಿಡಿವೆ
ಕೊನೆವರಗೆ ಬಿಡದೆ ಕಣ್ಣಲ್ಲಿ ಕಣ್ಣಾಗಿ
ನಿನ್ನ ನಾ ಕಾಪಾಡುವೆ ನಿನಗಾಗಿ ನಾ ಹಂಬಲಿಸುತ್ತಿರುವೆ.
ಕೃಷ್ಣಮೊರ್ತಿಅಜ್ಜಹಳ್ಳಿ
Rating