ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ಇತ್ತೀಚಿನ ನನ್ನ ಪ್ರವಾಸಗಳಿಂದ ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ನಮಗೆ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಿದೆ. ಆದರೆ ಅದರಿಂದ ಪರಿಸರ ಹಾಗು ಅಣೆಕಟ್ಟಿನ ಆಯಕಟ್ಟು ಪ್ರದೇಶದ ಜನರ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಬಹುಶಃ ನಮಗೆ ಅಷ್ಟು ಅರಿವಿಲ್ಲವೇನು ಅಂತನ್ನಿಸುತ್ತದೆ. ಈ ಜಲಾಶಯಗಳ ಹಿಂಭಾಗದಲ್ಲಿ ಕಾಡಿದ್ದರೆ ಅಲ್ಲಿರುವ ಹಸಿರು ನೀರಿನಿಂದ ಆವೃತವಾಗಿ ಬದುಕಲು ಆಗದೆ, ಸಾಯಲು ಆಗದೆ ನರಳುತ್ತಿದೆಯೇನೊ ಅಂತನ್ನಿಸುತ್ತದೆ(ನೀವು ಈ ಚಿತ್ರ ನೋಡಿದರೆ ಗೊತ್ತಾಗುತ್ತದೆ). ಕಾಡು ಪ್ರಾಣಿಗಳ ಜೀವನಕ್ಕೆ ಇದರಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತದೆ. ಒಟ್ಟಿನಲ್ಲಿ ಪರಿಸರದಲ್ಲಿ ಅಸಮತೋಲನವುಂಟಾಗುತ್ತದೆ.

ಇದರಿಂದಾಗುವ ದೀರ್ಘಾವಧಿ ಪರಿಣಾಮಗಳ ಸ್ವರೂಪ ಏನೆಂದು ನನಗೆ ಗೊತ್ತಿಲ್ಲದಿದ್ದರೂ ಅದು ಒಟ್ಟಿನಲ್ಲಿ ಒಳ್ಳೆಯದಲ್ಲ ಎಂದು ಮಾತ್ರ ಹೇಳಬಲ್ಲೆ. ಇನ್ನು ಅಲ್ಲಿನ ಕೆಲವು ಹಳ್ಳಿಗಳು ಮುಳುಗುತ್ತವೆ. ಇನ್ನು ಕೆಲವು ಅತಂತ್ರ ಸ್ಥಿತಿ ತಲುಪಿ, ಹೊರ ಜಗತ್ತಿನ ಎಲ್ಲ ಸಂಪರ್ಕಗಳನ್ನು ಕಡಿದು ಕೊಳ್ಳಬೇಕಾಗುತ್ತದೆ. ಯಾರು ಆ ಹಳ್ಳಿಗಳ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಗೋಜಿಗೆ ಹೋಗುವುದಿಲ್ಲ. ( ಉದಾ: ದೇವಕಾರ(ಕದ್ರಾ ಹಿನ್ನೀರಿನಲ್ಲಿರುವ ಹಳ್ಳಿ), ಲಿಂಗನಮಕ್ಕಿ ಜಲಾಶಯದ ಹತ್ತಿರ ಇರುವ ಹಳ್ಳಿಗಳು...ಇಲ್ಲಿನ ಜನರು ಪಕ್ಕದಲ್ಲೆ ಉತ್ಪಾದನೆಯಾದರೂ ಇನ್ನು ವಿದ್ಯುತ್ ಮುಖ ನೋಡಿಲ್ಲ)

ನಮ್ಮ ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ಒಳ್ಳೆ ಸ್ಥಿತಿಯಲ್ಲಿ ನೀಡುವುದು ನಮ್ಮ ಜವಾಬ್ದಾರಿಯಲ್ಲವೆ ? ಪ್ರಗತಿಗೆ ವಿದ್ಯುತ್ ಬೇಕು ..ಆದರೆ ಪ್ರಗತಿಯ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ ಬೇಡ ಅಲ್ಲವೆ? ನಾವು ಪರಿಸರಕ್ಕೆ ಹಾನಿ ಮಾಡದೆ ವಿದ್ಯ್ಯುತ್ ಉತ್ಪಾದಿಸಲು ಹಲವು ತಂತ್ರಙ್ನಾನಗಳಿವೆ (ಸೌರ,ಗಾಳಿ) ಆದರೂ ಅದನ್ನು ನಾವು ಕಾರ್ಯಗತ ಮಾಡುವುದರಲ್ಲಿ ಹಿಂದೆ ಇದ್ದೇವೆ..ಅಲ್ಲವೆ?

Rating
No votes yet

Comments