ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು ?

ಹಾಸ್ಯ ಸಾಹಿತಿ ಶ್ರೀಯುತ ಅ.ರಾ.ಸೇ. ಅವರ ಲೇಖನಗಳೆಂದರೆ ನನಗೆ ಪಂಚ ಪ್ರಾಣ. ಸುಮಾರು ೨೫ ವರ್ಷಗಳಿಂದ ಅವರ ಲೇಖನಗಳನ್ನು ಗಮನಿಸುತ್ತಿದ್ದೇನೆ. ಪ್ರಜಾವಾಣಿ/ಉದಯವಾಣಿ ದೀಪಾವಳಿ ಮತ್ತು ಸುಧಾ ಉಗಾದಿ ವಿಶೇಷಾಂಕ ಕೈಗೆ ಬಂದ ಕೂಡಲೇ ಪರಿವಿಡಿಯಲ್ಲಿ ಅವರ ಹೆಸರು ಹುಡುಕಿ ಆ ಪೇಜಿಗೆ ಹೋಗುತ್ತಿದ್ದೆ . ( ಈ ತರಹ ಇನ್ನೊಂದು ನಾನು ಹುಡುಕುತ್ತಿದ್ದ ಹೆಸರು ಶ್ರೀ ಕೇ. ಫ. ಅವರದು . ಅವರ ಲೇಖನಗಳು ಬಿಡಿ ಬಿಡಿಯಾಗಿ ಆಗಾಗ ಸುಧಾ , ತುಷಾರಗಳಲ್ಲಿ ನೋಡಿದ್ದುಂಟು . ಅವೆಲ್ಲವನ್ನು ಕತ್ತರಿಸಿಟ್ಟುಕೊಂಡಿದ್ದೇನೆ. ಈಗ ನಿಮಗೆ ಪ್ರಿಸಂ ಅಥವಾ ಅಂಕಿತ ಪ್ರಕಾಶನದವರು ( ಅಥವಾ ಅಪರಂಜಿ?) ಪ್ರಕಟಿಸುತ್ತಿರುವ ಹಾಸ್ಯಸಾಹಿತ್ಯದಲ್ಲಿ ಸಿಗಬಹುದು . ಅವರದು ಒಂದು ಧಾರಾವಾಹಿ ಹಾಸ್ಯ ಕಾದಂಬರಿ ತುಷಾರದಲ್ಲಿ ಸೊಗದಿರುಳು-ನಲ್ವಗಲು ಎಂಬ ಹೆಸರಿನಲ್ಲಿ ಬಂದಿತ್ತು . ನಾನು ಕತ್ತರಿಸಿಟ್ಟುಕೊಳ್ಳಲಿಲ್ಲ. 'ನಗೆಮುಗಿಲು' ಎಂಬ ಕವಿತೆಗಳ ಸಂಕಲನದ ಹೊರತಾಗಿ ಬೇರೆ ಪುಸ್ತಕ ಬಂದದ್ದು ನನಗೆ ಗೊತ್ತಿಲ್ಲ . ( ಯಾರಿಗಾದರೂ ಗೊತ್ತಿದ್ದರೆ ತಿಳಿಸಿ) .

ಜಯಂತ ಕಾಯ್ಕಿಣಿಯವರ 'ಸೇವಂತಿ ಪ್ರಸಂಗ ' ನಾಟಕ ಮತ್ತು ಒಂದು ಹಾಡು

ಹೋದ ವಾರ ನಾನು ಧಾರವಾಡಕ್ಕೆ ಹೋದಾಗ ಇನ್ನೊಂದು ಕಂತು ಪುಸ್ತಕ ಖರೀದಿ ಮಾಡಿದೆ . ಹಿಂದೆ ಬಿ.ಜಿ.ಎಲ್. ಸ್ವಾಮಿಯವರ ಹಸಿರು ಹೊನ್ನು ಓದಿದ್ದೆ ; ಬಹಳ ಚೆನ್ನಾಗಿದೆ; ನನ್ನ ಸಂಗ್ರಹದಲ್ಲಿ ಇರಲಿ ಎನ್ನಿಸಿ ತಗೊಂಡೆ. ಜತೆಗೆ ಜಯಂತ ಕಾಯ್ಕಿಣಿಯವರ ಎರಡು ನಾಟಕಗಳು- ಜತೆಗಿರುವನು ಚಂದಿರ ಮತ್ತು ಸೇವಂತಿ ಪ್ರಸಂಗ . ಎರಡೂ ಚೆನ್ನಾಗಿವೆ. ಇದರಲ್ಲಿ ಸೇವಂತಿ ಪ್ರಸಂಗ ಬರ್ನಾರ್ಡ್ ಶಾ ನ ಪಿಗ್ಮೇಲಿಯನ್ ಆಧಾರಿತ - ಹೂ ಹುಡುಗಿ ಎಂಬ ಹೆಸರಿನಲ್ಲಿ ಚಂದನ/ಡಿ.ಡಿ.೧ ರಲ್ಲಿ ಆಗಾಗ ಬರುತ್ತಿತ್ತು . ಆಕಾಶವಾಣಿಯಲ್ಲಿ ರಾಷ್ಟ್ರೀಯ ನಾಟಕವಾಗಿಯೂ ಬಂದಿತ್ತು. ಜೋಪಡಿಯ ಹುಡುಗಿಯೊಬ್ಬಳನ್ನು ಒಬ್ಬ ಭಾಷಾಶಾಸ್ತ್ರಿ ತನ್ನ ಗೆಳೆಯ ಸಮಾಜಶಾಸ್ತ್ರಜ್ಞನ ಜತೆ ಸೇರಿ ಸುಧಾರಿಸಿ ಸೌಂದರ್ಯರಾಣಿ ಸ್ಪರ್ಧೆಯಲ್ಲಿ ಗೆಲ್ಲುವಂತೆ ಮಾಡುವದು ಕಥೆಯ ಹಂದರ .ನಾಟಕ ಚುರುಕಾಗಿದ್ದು , ಲವಲವಿಕೆಯ ಸಂಭಾಷಣೆಗಳಿವೆ. ಒಳ್ಳೊಳ್ಳೆ ಹಾಡುಗಳು ಇದರಲ್ಲಿದ್ದು , ನೆನಪಿನಲ್ಲಿ ಉಳಿದಿದ್ದವು .

ಎತ್ತಿನ ಭುಜಕ್ಕೆ ಚಾರಣ(11/12-06-2005)

ಚಾರಣಕ್ಕೆ ನಿರಂತರವಾಗಿ ಹೊಸ ಹೊಸ ಜಾಗಗಳನ್ನು ಹುಡುಕುವ ನಮಗೆ ಈ ಬಾರಿಯ ಚಾರಣಕ್ಕೆ ವಿವಿಧ ಸ್ಥಳಗಳ ಬಗ್ಗೆ ಚರ್ಚಿಸುತ್ತಿರುವಾಗ ಕಳೆದ ವರುಷ (೨೦೦೪) ಎಪ್ರಿಲ್ ತಿಂಗಳಿನಲ್ಲಿ ಪ್ರಜಾವಾಣಿಯ ಕರ್ಣಾಟಕ ದರ್ಶನದಲ್ಲಿ ಬಂದ ಲೇಖನದ ಬಗ್ಗೆ ನೆನಪಾತು. ಆ ಲೇಖನದಲ್ಲಿ ಶ್ರೀ ದಿನೇಶ್ ಹೊಳ್ಳ ಅವರು ತಮ್ಮ ಎತ್ತಿನಭುಜ ಚಾರಣದ ಅನುಭವಗಳನ್ನು ವಿವರಿಸಿದ್ದರು.

ಆಯ್ದ ಸಂಸ್ಕೃತ ಸುಭಾಷಿತಗಳು (೨೮-೩೦)

೨೮.
ಯಾರ ಮುಖವು ಪ್ರಸನ್ನವಾಗಿದ್ದು , ಯಾರ ಮಾತುಗಳು ಅಮೃತಸಮಾನವೋ , ಪರೋಪಕಾರವೇ ಯಾರ ಕೆಲಸವು ಆಗಿರುವದು ಅವರನ್ನು ಯಾರು ತಾನೇ ಗೌರವಿಸುವದಿಲ್ಲ ?

ನೀವೂ ಒಬ್ಬ ಕವಿಯಾಗಿರಿ!

ಮೊನ್ನೆ ಬೆಸ್ಟ್ ಆಫ್ ನಾ.ಕಸ್ತೂರಿ ( ಅವರ 'ಅನರ್ಥಕೋಶ' ಸುಪ್ರಸಿದ್ಧವಾದದ್ದು -ಸಂಗ್ರಾಹ್ಯ ಪುಸ್ತಕ- ಅದರ ಬಗ್ಗೆ ಇನ್ನೊಂದು ದಿನ ಸಂಪದದಲ್ಲಿ ಬರೆಯುವೆ) ಎಂಬ ಪುಸ್ತಕ ಕೊಂಡುಕೊಂಡೆ. ಅದರಲ್ಲಿ ನೀವೂ ಒಬ್ಬ ಕವಿಯಾಗಿರಿ ಎಂಬ ಹಾಸ್ಯ ಲೇಖನ ಇದೆ. ಸಂಕ್ಷಿಪ್ತದಲ್ಲಿ ಹೇಳಬೇಕೆಂದರೆ ಹೇಗೆ ಕವಿತೆ/ಕಾವ್ಯ ಬರೆಯಬೇಕು ಎಂಬುದರ ಬಗ್ಗೆ ಇದೆ .

ನಮಸ್ಕಾರ

ಸಂಪದದ ಮಿತ್ರರಿಗೆ ನಮಸ್ಕಾರ.
ನಾನೊಬ್ಬ Mac OS X ಬಳಕೆದಾರ.. ಹಾಗಾಗಿ Macನಲ್ಲಿ ಯೂನಿಕೋಡ್ ಫಾಂಟ್ ಮತ್ತು ಕೀಬೋಡ್೯ ಲೇಔಟ್ ಒದಗಿಸಿದ ಶ್ರೀ ನಿಕೊಲಸ್ ಶಾಂಕ್ಸ್ ಮತ್ತು ಶ್ರೀ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು.