ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಾಬ್ಲೊ ಪಿಕಾಸೊ

ಯಶಸ್ಸೆನ್ನುವುದು ಅತ್ಯಂತ ಅಪಾಯಕಾರಿ. ಒಮ್ಮೆ ಯಶಸ್ವಿಯಾದೆವೆಂದರೆ ನಮ್ಮನ್ನು ನಾವೇ ನಕಲು ಮಾಡಲು ಆರಂಭಿಸುತ್ತೇವೆ. ನಮ್ಮನ್ನು ನಾವೇ ನಕಲು ಮಾಡುವುದು ಇತರರನ್ನು ನಕಲು ಮಾಡುವುದಕ್ಕಿಂತ ಹೆಚ್ಚು ಆತಂಕಕಾರೀ ಪ್ರಕ್ರಿಯೆ. ಏಕೆಂದರೆ ಅದು ನಮ್ಮ ಭವಿಷ್ಯದ ಬೆಳವಣಿಗೆಯನ್ನು ಸಂಪೂರ್ಣ ಸ್ಥಗಿತಗೊಳಿಸುತ್ತದೆ.

ಕೆಲವು ಚುಟುಕಗಳು

೧) ಮದುವೆಯ ಬಗ್ಗೆ ಒಂದು ವ್ಯಂಗ್ಯಾತ್ಮಕ ನಿಲುವು

  ಮದುವೆಗೆ ಮುಂಚೆ ಅವನೆಂದ ಅವಳಿಗೆ
  "ನೀ ಎನ್ನ ಅಂತರಂಗದ ಚಿಲುಮೆ"
  ಮದುವೆಯ ನಂತರ ಅಂದುಕೊಂಡ
  "ಯಾಕಾಯಿತು ನನ್ನೆದೆ ಉರಿಯುವ ಕುಲುಮೆ?!"

ಮುಂಗಾರು ಮಳೆ

ನಾನು ಇತ್ತೀಚೆಗೆ ನೋಡಿದ ಚಿತ್ರಗಳಲ್ಲಿ ತುಂಬಾ ಹಿಡಿಸಿದ ಚಿತ್ರ ಮುಂಗಾರು ಮಳೆ. ಒಂದು ಸಣ್ಣ ಪ್ರೀತಿಯ ಎಳೆಯನ್ನು ಹಿಡಿದು ಎಂಥ ಸೊಗಸಾದ ದೃಶ್ಯಕಾವ್ಯವನ್ನು ಸೃಷ್ಟಿಸಿದ್ದಾರೆ ನಮ್ಮ ಯೋಗರಾಜಭಟ್ಟರು.

ಕರ್ನಾಟಕದಲ್ಲೇ ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು?

ಆತ್ಮೀಯ ಸಂಪದಿಗರೇ,

ನಿನ್ನೆ ತಾನೇ ಒಂದು ಆಘಾತಕಾರೀ ಸುದ್ದಿ ಓದಿದೆ. ನಮ್ಮ ಕನ್ನಡನಾಡಿನಲ್ಲಿ ಸಂಕ್ರಾಂತಿ ಒಂದು ಪ್ರಮುಖ ಹಬ್ಬ. ಅದಕ್ಕೆ ನಮ್ಮ ನೆಲದ ಸೊಗಡು ಮತ್ತು ಇತಿಹಾಸ ಎರಡೂ ಇವೆ. ಇಂತಹ ಸಂಕ್ರಾಂತಿಗೆ, ನಮ್ಮ ರಾಜಧಾನಿ ಬೆಂಗಳೂರಿನಲ್ಲೇ, ನಮ್ಮದೇ ನೆಲದ ಕಂಪನಿಯೊಂದು, ರಜೆ ಘೋಷಿಸಿಲ್ಲವಂತೆ. ಪೂರ್ತಿ ಸುದ್ದಿ ಓದಿ ನೋಡಿ: ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು! ಅದಕ್ಕೆ ಬದಲಾಗಿ ಓಣಂ ಹಬ್ಬಕ್ಕೆ ರಜೆಯಂತೆ.

"ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ

ಇತ್ತೀಚಿಗೆ "ದಟ್ಸ್‌ಕನ್ನಡ"ದಲ್ಲಿ ನನ್ನ ನೆಚ್ಚಿನ ಅಂಕಣಕಾರರಲ್ಲಿ ಒಬ್ಬರಾದ "ಜಾನಕಿ"ಯವರ ಹಳೆಯ ಅಂಕಣಗಳನ್ನು ಓದುತ್ತಿದ್ದೆ. "ಹಾಯ್ ಬೆಂಗಳೂರ್"ನಲ್ಲಿ ಪ್ರಕಟವಾದ ಅವರ ಅಂಕಣಗಳಲ್ಲಿ ಆಯ್ದ ಕೆಲವನ್ನು "ದಟ್ಸ್‌ಕನ್ನಡ"ದಲ್ಲಿ "ತೆರೆದ್ ಬಾಗಿಲು" ಅನ್ನುವ ಹೆಸರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಒಂದು ಅಂಕಣ "ಓದುವ ಸುಖ, ಬರೆಯುವ ಸುಖ ಮತ್ತು ಆತ್ಮೀಯರೊಂದಿಗಿನ ಹರಟೆಯ ಸುಖದ" ಬಗ್ಗೆ ಇದೆ. ಅದರಲ್ಲಿ ಬರೆದಿರುವ ವಿಚಾರ ನನಗೆ ಇವತ್ತಿಗೆ ಎಷ್ಟು ಪ್ರಸ್ತುತ ಅನ್ನಿಸಿತು ಅಂದರೆ, ನಿಮ್ಮೊಂದಿಗೂ ಹಂಚಿಕೊಳ್ಳುವಷ್ಟು!

ಇ-ಲೋಕ-೪

ಕುಡುಕ ಚಾಲಕನೊಲ್ಲದ ಟೊಯೋಟಾ ಕಾರು
ಕುಡಿದು ಬಂದು ಕಾರು ಚಲಾಯಿಸಲು ಯತ್ನಿಸಿದರೆ ಚಾಲೂ ಆಗಲು ನಿರಾಕರಿಸುವ ಕಾರು ಬಂದರೆ ಕುಡಿದು ಚಲಾಯಿಸಿ ವಾಹನ ಅಪಘಾತವಾಗುವುದನ್ನು ಸುಲಭವಾಗಿ ನಿಯಂತ್ರಿಸಬಹುದು ತಾನೇ? ಕಾರು ತಯಾರಿಕೆಯಲ್ಲಿ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಟೊಯೊಟಾ ಕಂಪೆನಿಯು ಇಂತಹ ಕಾರು ತಯಾರಿಸಿದೆ. ಈ ಕಾರಿನ ಸ್ಟಿಯರಿಂಗ್ ವೀಲಿನಲ್ಲಿ ಬೆವರಿನಲ್ಲಿ ಬೆರೆತಿರುವ ಮದ್ಯದ ವಾಸನೆ ಪತ್ತೆ ಹಚ್ಚುವ ಸಂವೇದಕಗಳಿವೆ. ಕುಡಿದ ಚಾಲಕ ಕಾರು ಚಲಾಯಿಸಿದರೆ, ಕಾರಿನ ಸಂವೇದಕಗಳು ಕಾರಿನ ಇಂಜಿನನ್ನು ಸ್ಥಗಿತಗೊಳಿಸಲು ಸೂಚನೆ ನೀಡುವ ಕಾರಣ, ಕಾರು ಚಾಲೂ ಆಗುವುದೇ ಇಲ್ಲ.
ಅಷ್ಟು ಮಾತ್ರವಲ್ಲದೆ ಕುಡಿಯದೆ ಎರ್‍ರಾಬಿರ್‍ರಿ ಕಾರು ಚಲಾಯಿಸಿದರೂ ಕಾರಿನ ಇಂಜಿನ್ ಸ್ಥಗಿತವಾಗುವ ವ್ಯವಸ್ಥೆ ಇದರಲ್ಲಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಲಾರಂಭಿಸಿದರೆ, ಕಾರು ಮುಂದೆ ಹೋಗಲು ನಿರಾಕರಿಸುತ್ತದೆ. ಕಣ್ಣಿನ ಪಾಪೆಗಳನ್ನು ಕ್ಯಾಮೆರಾದ ಮೂಲಕ ಗಮನಿಸಿ, ಚಾಲಕ ಕಾರುಗಳನ್ನು ರಸ್ತೆ ಮೇಲೆ ನೆಡಲು ವಿಫಲನಾದರೂ ಕಾರು ಸ್ಥಗಿತವಾಗುವ ಆಧುನಿಕ ವ್ಯವಸ್ಥೆ ಈ ಕಾರಿನಲ್ಲಿರುವುದರಿಂದ ಟೊಯೊಟಾದ ಈ ಕಾರು ಅಪಘಾತಕ್ಕೊಳಗಾಗುವುದು ಬಹು ಕಠಿನ.