ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
ಸಂಪದ ಓದುತ್ತಾ ಕುಳಿತಿದ್ದವನನ್ನು ನೋಡಿದ ನನ್ನಾಕಿ "ಎಲಾ ಇವರ! ಎಷ್ಟು ಹೊತ್ತಿಂದ ಲ್ಯಾಪ್‌ಟಾಪ್ ಮುಂದೆ ಕೂತು ನನ್ನನ್ನೂ ಮರೆತಿದ್ದಾರಲ್ಲ" ಅಂತ ಯೋಚಿಸಿ, ಸುಮ್ಮನಿರಲಾರದೆ, "ಇವತ್ತು ಏನು ಅಡುಗೆ ಮಾಡಲಿ?" ಅಂತ ಕೇಳಬೇಕೆ?! ಇತ್ತೀಚಿಗೆ ಸಂಪದದಲ್ಲಿ ನಡೆಯುತ್ತಿರುವ "ಕನ್ನಡದ ಏತ್ವಗಳು, ಕಾಗುಣಿತ ಕಲಿತದ್ದು" ಇತ್ಯಾದಿ ಚರ್ಚೆಗಳ ಬಗ್ಗೆಯೇ ಏನೋ ಯೋಚಿಸಿ ಟೈಪಿಸುತ್ತಾ ಕುಳಿತವನು, ಅದೆಲ್ಲಿಂದ ಹೊಳೆಯಿತೋ ನನಗೇ ಗೊತ್ತಿಲ್ಲ, "ಕೊಟ್ಟೆ ಮಾಡು" ಅಂದೆ. ಒಂದು ಕ್ಷಣ ತಬ್ಬಿಬ್ಬಾದ ನನ್ನಾಕಿ "ಅಯ್ಯೋ ರಾಮ; ಅದೇನದು ಕೊಟ್ಟೆ? ನಾನು ಕೇಳಿದ್ದು ಅಡುಗೆಯ ಬಗ್ಗೆ. ಹೋಗೀ ಹೋಗೀ ನಿಮ್ಮನ್ನು ಕೇಳಿದ್ನಲ್ಲಾ..." ಅಂತಂದಳು.
- Read more about ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
- 2 comments
- Log in or register to post comments