ನೀವೂ ಕನ್ನಡ ಶಬ್ದಕೋಶ ಓದಿ
ಹಿಂದೆ ಕನ್ನಡ ಶಬ್ದಕೋಶ ಕುರಿತು ಇಲ್ಲಿ ಬರೆದಿದ್ದೆ .
ನಾನು ಓದುತ್ತ ಇದ್ದದ್ದು ಗುರುನಾಥ ಜೋಶಿ ಎಂಬವರ ಕನ್ನಡ-ಕನ್ನಡ ಶಬ್ದಕೋಶ. ಕವಲಿ ಯವರದು ಸ್ವಲ್ಪ ಅಡ್ವಾನ್ಸಡ್ ಇರುವದರಿಂದ ಇದನ್ನು ಓದಿದ ಮೇಲೆ ಓದುವೆ. ನಾನು ಕಂಡುಕೊಂಡ ಶಬ್ದಗಳು , ಹೊಸ ಶಬ್ದಗಳು ,ಸಂಬಂಧಿತ ಶಬ್ದಗಳು , ಬಳಕೆಯಲ್ಲಿರುವ ಸಂಸ್ಕೃತ ಶಬ್ದಗಳಿಗೆ ಕನ್ನಡದ ಶಬ್ದಗಳು ಇತ್ಯಾದಿ ಇತ್ಯಾದಿ ಸ್ವಲ್ಪ ನೋಡೋಣ ಬನ್ನಿ.
ಅಡಿ - ಅಡಿಗಲ್ಲು - ಅಡಿಗಾಣು (ತಳಕಾಣು) - ಅಡಿಮುಟ್ಟ (ತಳದವರೆಗೆ)- ಅಡಿಮೆ (ದಾಸ್ಯ - ಅಡಿಯ (ಆಳು) -ಅಡಿಯಿಡು - ಅಡು(ಬೇಯಿಸು) -ಅಡುಗೆ- ಅಡುಕೂಳು (ಬೇಯಿಸಿದ ಅನ್ನ) -ಅಡುಗೂಲಜ್ಜಿ (ಇತರರಿಗೆ ಅಡಿಗೆ ಮಾಡಿ ಹಾಕುವವಳು) - ಅಡುಬಾಣಲೆ (ಅಡುಗೆಯ ಬಾಣಲೆ)
ಅಡ್ಡ - ಅಡ್ಡಗಟ್ಟು , ಅಡ್ಡಕಟ್ಟೆ -ಅಡ್ಡಕಥೆ (ಪ್ರಾಸಂಗಿಕ/ಉಪ ಕಥೆ) - ಅಡ್ಡ ಕಸುಬು (ನಡತೆ ತಪ್ಪಿ ಮಾಡುವ ಉದ್ಯೋಗ) - ಅಡ್ಡನಗೆ (ಬಿಗಿ ಹಿಡಿದ ಅರ್ಧ ನಗೆ) ಅಡ್ಡನಾಮ ( ಸ್ಮಾರ್ತರ ನಾಮ , ಮನೆತನದ ಹೆಸರು) - ಅಡ್ಡನಾಲಿಗೆ - ಅಡ್ಡನುಡಿ( ವಿರ್ಓಧದ ನುಡಿ) ಅಡ್ಡಪಂಕ್ತಿ- ಅಡ್ಡಪಲ್ಲಕ್ಕಿ - ಅಡ್ಡಮಳೆ ( ಕಾಲದಲ್ಲಿನ ಮಳೆ)- ಅಡ್ಡವಾರ ( ಸಂತೆಯಿಲ್ಲದ ಸಾಮಾನ್ಯ ದಿನ)- ಅಡ್ಡಾಗು(ಒರಗು) - ಅಡ್ಡಾಡು -ಅಡ್ಡಿ
ಅತೋನಾತು - ಬಹಳ
ಅತಿ - ಬಹಳ
ಅದುರು -( ನಡುಗು ,ಕಂಪಿಸು)
ಅದೃಷ್ಯ -ಕಾಣದ
ಅಧ- ಕೆಳಗೆ
ಅಧರ - ತುಟಿ , ಕೆಳದುಟಿ
ಅಧಿಕ (ಹೆಚ್ಚು , ಬಹಳ)- +ಮಾಸ +ಪ್ರಸಂಗ +ಸಂವತ್ಸರ +ವರ್ಷ ಇತ್ಯಾದಿ
ನೀವೂ ಏಕೆ ಒಂದು ಶಬ್ದಕೋಶ ಖರೀದಿಸಿ ಓದಲಾರಂಭಿಸಬಾರದು? ಪುರುಸೊತ್ತಾದಾಗ ಒಂದಿಷ್ಟು ಓದುತ್ತ ಇರಿ . ನಾನು ಗಮನಿಸಿದ ಹಾಗೆ
೧. ಹೆಚ್ಚು ಶಬ್ದಗಳು ಸಂಸ್ಕೃತದ್ದೇ- ಒಂದು ಕಾಲದ ಸಾಹಿತ್ಯದಲ್ಲಿ ಸಂಸ್ಕೃತ ಬಹಳಷ್ಟು ಸೇರಿಕೊಂಡದ್ದರಿಂದ ಇವನ್ನು ಸಾಹಿತ್ಯಾಭ್ಯಾಸಿಗಳಿಗೆ ಅನುಕೂಲವಾಗಲೆಂದು ಸೇರಿಸಿದ್ದಿರಬಹುದು.
೨. ನಾವು ಅರ್ಥ ಗೊತ್ತಿಲ್ಲದೇ ಬಳಸುವ ಶಬ್ದಗಳಿಗೆ ಅರ್ಥ ಗೊತ್ತಾಗುವದು .
೩. ನಾವು ಮರೆಯುತ್ತಿರುವ ಅನೇಕ ಕನ್ನಡ ಶಬ್ದಗಳು ನೆನಪಾಗುವವು.
೪. ಸಂಗನಗೌದರು ಹಿಂದೆ ಒತ್ತಕ್ಕರ ಸಂಬಂದಿಸಿದಂತೆ ಹೇಳಿದ ವಿಚಾರ ನಿಜ ಎಂದೂ ಮತ್ತು 'ವ'ದಿಂದ ಆರಂಭವಾಗುವ ಶಬ್ದಗಳು ನಮ್ಮಲ್ಲಿಲ್ಲ ಎಂಬುವದು ಖಚಿತವಾಗುವದು.
೫. ಹೊಸ ಶಬ್ದ ರಚನೆಗೆ ವಿಚಾರಗಳು ಲಭಿಸುವವು.
Comments
ಉ: ನೀವೂ ಕನ್ನಡ ಶಬ್ದಕೋಶ ಓದಿ