ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿಟ್ಟೆ

 ಮರಾಠಿ ಹಾಗೂ ಇಂಗ್ಲೀಷಲ್ಲಿ ಬರೆಯುತ್ತಿದ್ದ ಅರುಣ್ ಕೊಲ್ಹಾಟ್ಕರ್ ಶಬ್ದಪ್ರಯೋಗದಲ್ಲಿ ಎಷ್ಟು ಜಿಪುಣರೋ ಅಷ್ಟೇ ಜಾಣರು. ಅವರ ಹಲವು ಕವನಗಳು ಮಿನಿಮಲಿಸ್ಟ ಶೈಲಿಯಲ್ಲಿವೆ. ಸಣ್ಣಪುಟ್ಟ ವಸ್ತು ವಿಷಯವಾಗಿ ಬಂದು ಅವರ ಕವನಗಳಲ್ಲಿ ಶಬ್ದಗುಣವಾಗಿ ಕಾಣುತ್ತವೆ. ಇಲ್ಲಿ ಅವರ 'ದ ಬಟರ್ ಫ್ಲೈ' ಎಂಬ ಕವನವನ್ನು ಅನುವಾದಿಸಿದ್ದೇನೆ.

ನಾವು ಕಳೆದುಕೊಂಡಿರುವ ಸೂಕ್ಷ್ಮಗಳು

ಜನವರಿ ಬಂತೆಂದರೆ ಯಾರು ಯಾರೋ ಡೈರಿ ತಂದು ಕೊಡುತ್ತಿದ್ದರು. ಅದರಲ್ಲಿ ಜಾಸ್ತಿ ಪುಟಗಳು, ಒಂದು ದಿನಕ್ಕೆ ಒಂದು ಪುಟ ಇರುವಂಥವು ಆಯ್ದು ಒಂದೋ ಎರಡೋ ನಾನು ಇಟ್ಟುಕೊಂಡು ಉಳಿದಿದ್ದನ್ನ ಯಾರು ಕೇಳಿದರೆ ಅವರಿಗೆ ಕೊಟ್ಟು ಬಿಡುತ್ತಿದ್ದೆ. ಸಾಮಾನ್ಯವಾಗಿ ನಾನು ಉಳಿಸಿಕೊಂಡವು ಕವಿತೆ ಬರೆಯಲು ಅಥವಾ ಮನಸ್ಸಿಗೆ ಹಿಂಸೆ ತಂದ ಘಟನೆಗಳನ್ನು ಕುರಿತು ಟಿಪ್ಪಣಿ ಬರೆಯಲು ಬಳಕೆಗೆ ಬರುತ್ತಿದ್ದವು. ಥಟ್ಟನೆ ಹೊಳೆದ ಒಂದೆರಡು ಸಾಲುಗಳು ಅಲ್ಲಿ ದಾಖಲಾಗುತ್ತಿದ್ದವು. ಕವಿತೆಯಾಗುವ ಭಾಗ್ಯವಿದ್ದವು ಆಗುತ್ತಿದ್ದವು. ಕೆಲವು ಸಲ ಕವಿತೆಗೆ ವಸ್ತುವಲ್ಲ ಇದು, ಪ್ರಬಂಧಕ್ಕೆ ಸಮ ಅನ್ನಿಸಿದರೆ ಅದು ಅಲ್ಲೇ ಪ್ರಬಂಧವಾಗಿ ಬೆಳೆಯುತ್ತಿತ್ತು; ಅಥವ ಕಥೆಯಾದರೆ ಕಥೆಯಾಗಿ.

ಅರುಣ ಕೊಲ್ಹಾಟ್ಕರರ ಕವನ

 ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಕವಿಗಳಲ್ಲಿ ನನಗೆ ಮೆಚ್ಚುಗೆಯಾಗುವ ಕವಿಗಳಲ್ಲಿ ಅರುಣ್ ಕೊಲ್ಹಾಟ್ಕರ್ ಒಬ್ಬರು. ಅವರ ಕವನಗಳಲ್ಲಿ ಸಮಕಾಲೀನ ಪ್ರಜ್ನೆ ಪರಂಪರೆಯೊಂದಿಗೆ ಮುಖಾಮುಖಿಯಾಗಿ ಅದನ್ನು ತೀವ್ರ ಪರೀಕ್ಷೆಗೆ ಒಡ್ಡುತ್ತಲೇ ಆಧುನಿಕ ಮನಸ್ಸನ್ನೂ ಕೂಡ ಪರೀಕ್ಷಿಸುವ ಹಾಗೂ ಕಾವ್ಯ ಮುಖೇನ ಅಂದನ್ನು ಇಂದಲ್ಲಿ ಒಂದಾಗಿಸಿಕೊಳ್ಳುತ್ತದೆ. ಹರಿತವಾದ ಕೊಂಚವೂ ಕೊಬ್ಬಿರದ ಸಪೂರ ದೇಹದ ಕವನಗಳನ್ನು ಬರೆದಿದ್ದಾರೆ. ಅವರ ಜೆಜುರಿ ಎಂಬ ಕವನಗುಚ್ಛವು ಬಹಳ ಹೊಗಳಿಕೆಯನ್ನೂ, ತೆಗಳಿಕೆಯನ್ನೂ ಗಳಿಸಿತು. ತೆಗಳುವವರು ಆ ಪದ್ಯದಲ್ಲಿ ನಗರವಾಸಿಯೊಬ್ಬ ಜೆಜುರಿ ಎಂಬ ಬಹುಜನರಿಗೆ ಪೂಜ್ಯವಾದ ಜಾಗಕ್ಕೆ ಹೋಗಿ ಭಕ್ತರನ್ನು, ಅವರ ಭಕ್ತಿಯನ್ನು ಅವಮಾನ ಮಾಡುತ್ತಿರುವುದನ್ನು ಕಂಡಿದ್ದಾರೆ. ಹಾಗೆ ನೋಡಿದರೆ, ಈ ಕವನದಲ್ಲಿ ಹೆಚ್ಚು ವ್ಯಂಗ್ಯಕ್ಕೆ ಒಳಗಾಗುವವ ಆಧುನಿಕನೇ. ಅದಕ್ಕೆ ಉದಾಹರಣೆಯಾಗಿ  ಓಲ್ಡ ವುಮನ್ ಎಂಬ ಕವನ ನೋಡಬಹುದು. ಇದರಲ್ಲಿ ಮುದುಕಿಯೊಬ್ಬಳು ಒಂದು ಮಂದಿರವನ್ನು ತೋರಿಸುತ್ತೇನೆ, ಎಂಟಾಣೆ ಕೊಡು ಎಂದು ನಿರೂಪಕನ ಬೆನ್ನು ಬೀಳುತ್ತಾಳೆ. ಆ ನಿರೂಪಕ ಅವಳನ್ನು ನಿಷ್ಠುರವಾಗಿ ಕಾಣುತ್ತಾನೆ. ಅಷ್ಟರಲ್ಲಿ ಅವಳು ಹೇಳುವ ಒಂದು ಮಾತು ಅವನನ್ನು ನಾಚಿಕೆಗೀಡು ಮಾಡುತ್ತದೆ.
ಈ ಕವನದಲ್ಲಿನ ಜಾಣ್ಮೆ ಮಹತ್ತರವಾದ್ದು. (ನನ್ನ ಅನುವಾದ ಅದನ್ನು ಚೆನ್ನಾಗಿ ಮೂಡಿಸಿಲ್ಲ, ಮನ್ನಿಸಿ). ಖಚಿತ ರೂಪಕಗಳೊಂದಿಗೆ ಚಿಕ್ಕ ಚೊಕ್ಕ ಮೂರು ಸಾಲುಗಳ ಸ್ಟಾನ್ಜಾಗಳಲ್ಲಿ ಇದನ್ನು ಬರೆಯಲಾಗಿದೆ. ಇಲ್ಲಿ 'ತಾನು' ವನ್ನು ನೀನು ಎಂದು ದೂರಗೊಳಿಸಿ ನೋಡಲಾಗಿದೆ. ಆ 'ನೀನು'ವಿನ ಸುಳ್ಳು ಹೆಚ್ಚುಗಾರಿಕೆ ಅಂತ್ಯದಲ್ಲಿ ಚೂರುಚೂರಾಗುವ ಚಿತ್ರ ಸೊಗಸಾಗಿದೆ. ನನ್ನ ಉದ್ಧಟ ಅನುವಾದ:

ಚೌತಿಯ ಶುಭಾಶಯಗಳು

ಚೌತಿ ಹತ್ತಿರಾಗುತ್ತಿದೆ. ಶಾಪಿಂಗ್ ಮಾಲ್‌ಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ, ಕೊನೆಗೆ ಫೂಟ್‌ಪಾತ್‌ನ ಮೇಲೂ ಸಾಲಾಗಿ ಇರಿಸಿರುವ ಗಣೇಶನ ಮೂರುತಿಗಳು! ದಾರಿಯ ಮೇಲೆ ಹೋಗುವ ಬರುವ ಮಂದಿಯೆಲ್ಲಾ ನೋಡಿಯೇ ನೋಡುತ್ತಾರೆ ಇವನ್ನು. ದೊಡ್ಡ ದೊಡ್ಡ ಮೂರ್ತಿಗಳು ಹಿಂದಿನ ಸಾಲಿನಲ್ಲಿ; ಸಣ್ಣವು ಮುಂದೆ. ಸಡನ್ನಾಗಿ ನೋಡಿದರೆ, ಶಾಲೆಯಲ್ಲಿ ಪಾಠ ಕೇಳಲು ಕುಳಿತ ಮಕ್ಕಳಂತೆ ಭಾಸವಾಗುತ್ತದೆ. ಅಥವಾ ಗ್ರೂಪ್ ಫೋಟೋ ತೆಗೆಯಲು ಕೂರಿಸಿದಂತೆ.

ಆತ್ಮ, ಪಾಪಿ ನೆಲದ ಕೇಂದ್ರ

ಆತ್ಮ, ಪಾಪಿ ನೆಲದ ಕೇಂದ್ರ
          ****

ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆ
ಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ 
ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆ
ಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ?  
ಯಾಕಿಷ್ಟು ಧಾರಾಳ ಕಾಸು ಇಷ್ಟು ತುಸುಗಾಲಕ್ಕೆ
ಪಡೆದ ಈ ಮಂಕು ಮಹಲಿಗಾಗಿ ಹೀಗೆ ವ್ಯಯಿಸುವುದು?
ಹುಳುಗಳೇ ನಾಳೆ ವಾರಸುದಾರರು ನಿನ್ನೀ ವೈಭವಕ್ಕೆ
ತಿನ್ನವೇನು ಅದನು? ಹೀಗೇ ತಾನೆ ದೇಹ ಕೊನೆಯಗುವುದು?
ಕಾರಣ ಆತ್ಮವೇ, ಬಾಳು, ಹೇರಿ ಎಲ್ಲ ನಷ್ಟ ಆಳಿನ ಮೇಲೆ
ಸವೆಯುತ್ತ ಆತ ನಿನ್ನ ಗೋದಾಮನ್ನು ಕೊಬ್ಬಿಸುವ
ಕೊಳ್ಳು ದೈವಿಕ ಮುದ್ದತು, ಮಾರಿ ಗಂಟೆಗಟ್ಟಳೆ ಕೊಳೆ
ಪೋಷಿಸು ಅಂತರಂಗವ, ಇನ್ನಿರದಂತೆ ಹೊರ ವೈಭವ;
ಮಾನವರ ಸೇವಿಸುವ ಆ ಸಾವನ್ನೇ ಸೇವಿಸುವಂತೆ
ಸಾವು ಬಂದರೆ ಒಮ್ಮೆ ಮತ್ತೆ ಸಾವೆಂದೂ ಬರದಂತೆ

ಸಹಮನಸ್ಕರ ಮದುವೆಗೆ ತಡೆಯ ತರಲಾರೆ

ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ
------ ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬)

ಮನ್ನಿಸಿ, ನಿನ್ನೆ ಪ್ರಾಸವಿಲ್ಲದೇ ಅನುವಾದಿಸಿದ್ದೆ. ಅದನ್ನು ಬದಲಿಸಿ ಪ್ರಾಸ ಸೇರಿಸುವ ಪ್ರಯಾಸ ಇಲ್ಲಿ ಮಾಡಿದ್ದೇನೆ.

ಸಪ್ತಗಿರಿ ಸಂಪದ (ಪುರಾಣ ಕಥಾನಕ)

"ಸಪ್ತಗಿರಿ ಸಂದ"-  ಶ್ರೀವೆಂಕಟೇಶ ಪುರಾಣ ಕಥೆ. ತಿರುಪತಿ ತಿರುಮಲೇಶ ಸಂಪತ್ತಿನ ಸ್ವಾಮಿ, ಬಡ್ಡಿ ಕಾಸಿನವನೆಂದೇ ಭಾವಿಸುವುದಲ್ಲ.  ಅವನು ಸಾತ್ವಿಕ ಸಂಪನ್ನ.   ಇಡೀ ಜಗತ್ತಿಗೆ ಸಾತ್ವಿಕ ಶಕ್ತಿ-ಸಂದೇಶ ಸಾರಲೆಂದೇ ಭೂಮಿಗಿಳಿದು ಬಂದ ಭಗವಂತನವನು ಎಂಬ ಸತ್ಯ ತಿಳಿದವರೂ ಕಡಿಮೆಯೆ .  ಭಕ್ತಿ ಭಾವದಿಂದ ಅವನಿಗೆ ಹರಕೆ ಕಾಣಿಕಗಳನ್ನೊಪ್ಪಿಸಿದರೆ ಸಾಕು, ತಮ್ಮ ಇಷ್ಟಾರ್ಥಗಳು ಸಿದ್ಧಿಸುವುವೆಂದು  ನಂಬಿರುವ ಸಮುದಾಯ ಬಹಳ ದೊಡ್ಡದು. ಸಾಮಾನ್ಯವಾಗಿ  ರಾಮಾಯಣ ,ಮಹಾ  ಭಾರತ  ಈ  ಎರಡು ಮಹಾ ಪುರಾಣ ಕಥೆಗಳು ಎಲ್ಲಕಾಲಕ್ಕೂ  ಸಮಕಾಲೀನ ಜೀವನ  ಮೌಲ್ಯಗಳನ್ನು ಒದಗಿಸುತ್ತವೆ  ಎಂಬ ಭಾವನೆಯೆ ಪ್ರಚಲಿತದಲ್ಲಿದೆ..   ಇವುಗಳನ್ನು ಹೊರತು ಪಡಿಸಿ ಬೇರೆ  ಯಾವುದಾದರೂ  ಪುರಾಣ ಕಥೆ   ನಮ್ಮ ಬದುಕಿಗೆ ಮೌಲಿಕ ವೆನಿಸೀತೇ.... ಸಾರ್ವಕಾಲಿಕ ಜೀವನ ಮೌಲ್ಯಗಳನ್ನು ತೆರೆದಿಡಬಲ್ಲದೇ ಎಂಬ ಶೋಧನೆಯಲ್ಲಿ  ನಾನಿದ್ದಾಗ  ಮೂಡಿ ಬಂದ  ಕೃತಿ  “ಸಪ್ತಗಿರಿ  ಸಂಪದ”.
1997ರಲ್ಲಿ  ಪ್ರಕಟವಾಗಿ  ಸಾಕಷ್ಟು  ಜನ ಮನ್ನಣೆ ಗಳಿಸಿದ  ಈ ಕೃತಿ  ನನ್ನ ಬದುಕು-ಬರಹದಲ್ಲಿ  ನನಗೆ ಆತ್ಮಸಂತೋಷವನ್ನು ತಂದು ಕೊಟ್ಟಂಥ  ಪೌರಾಣಿಕ ಕೃತಿ.

ಸಪ್ತಗಿರಿ ಸಂಪದ(ಪೌರಾಣಿಕ ಕಥಾನಕ) ಸಂಚಿಕೆ-3

ದೇವರು ಎಲ್ಲಿದ್ದಾನೆ? ಇಲ್ಲ ಅವನು ಇದ್ದಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ ಎಂದು ಹೇಳುತ್ತೇವೆ. ಅಂಥವರು ಈಗಾಗಲೇ ಹೇಳಿದಂತೆ ಈ ಜಗತ್ತಿನ ತ್ರಿಗುಣಾತ್ಮಕ ತತ್ವವನ್ನು ಮನಗಾಣಬೇಕಾಗುತ್ತದೆ. ಈಗ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಪರಪಮ ಪಾಪಿಗಳೂ ಹೆಚ್ಚುತ್ತಲೇ ಇದ್ದಾರಷ್ಟೇ... ಕೇವಲ ಕಾಲುಭಾಗ ಮಾತ್ರವೆ ಆದರೂ ಸಾತ್ವಿಕ ಶಕ್ತಿ ಯಾವಾಗಲೂ ಬೆಂಕಿ ಮುಚ್ಚಿದ ಕೆಂಡದಂತೆಯೆ ಇರುತ್ತದೆಯಲ್ಲ... ಅದು ಸಿಡಿದೆದ್ದ ಸಂದರ್ಭಗಳಲ್ಲೆಲ್ಲ ಪಾಪಿಗಳ ದಮನವಾಗುತ್ತಲೆ ಇರುತ್ತದೆಯಾದರೂ ನಾವು ಅವರ ಸಂಖ್ಯೆ ಹೆಚ್ಚುತ್ತಲೆ ಇರುವುದು ಇನ್ನೂ ನಡೆದೇ ತೀರುವುದರಿಂದ, ಎಷ್ಟೇ ದುಷ್ಟ ನಿಗ್ರಹವಾದರೂ ಕೂಡ ನಮಗೆ ತೃಪ್ತಿ ಇಲ್ಲವಾಗಿರುತ್ತದೆ
ದೇವರಿಲ್ಲ ಎಂದು ಸುಲಭವಾಗಿ ಹೇಳಿಬಿಡುವ ವ್ಯಕ್ತಿ ತಾನು ಸ್ವತಃ ದೇವರೇ ಆಗಿರಬೇಕಷ್ಟೇ. ಆತನ ಅಪರಾಧಗಳಿಗೆ ಕ್ಷಮೆ ಎಂಬುದೇ ಇಲ್ಲವಲ್ಲ... ! ಹಾಗೆಯೆ, ದೇವರಿದ್ದಾನೆಂದು ಪರಮ ಭಕ್ತಿಯಿಂದ ಮಾಡಬಾರದ ಪಾತಕಗಳನ್ನೂ ಮಾಡುವ ವ್ಯಕ್ತಿ ಕೂಡ ಕ್ಷಮಾರ್ಹನಲ್ಲ; ಅವನಿಗೆ ಆ ದೇವರೇ ಅವನ ಜೀವಿತದಲ್ಲಿ ನಾವೇ ಕಾಣುವಂತೆ ಶಿಕ್ಷೆ ವಿಧಿಸದಿರಲಾರ. ಶಿಶುಪಾಲ ನೂರೊಂದು ತಪ್ಪು ಮಾಡುವವರೆಗೆ ಶ್ರೀ ಕೃಷ್ಣ ಕಾದು ಕುಳಿತವನಂತೆ ನಾವು ಅಂಥ ಪಾತಕಿಗಳ ಪಾಪದ ಕೊಡ ತುಂಬುವ ತನಕವೂ ಕಾಯುವುದು ಅನಿವಾರ್ಯ.....
ದೇವರು, ಮನುಷ್ಯನಿಗೆ ದೈವತ್ವದಲ್ಲಿ ನಂಬಿಕೆ ಎಂದರೆ- ಸತ್ಯ ಧರ್ಮ, ಪ್ರಾಮಾಣಿಕತೆ, ಇತರರಿಗೆ ಉಪದ್ರವ ಕೊಡದೇನೆ, ದ್ವೇಷಾಸೂಯೆಗಳಿಗೆ ಮನ ತೆರದೇನೆ, ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಲೇ ಬದುಕನ್ನು ನಿಭಾಯಿಸುವುದು. ಯಾವಾಗಲೂ, ಸಭ್ಯರಿಗೆ, ಜ್ಞಾನಿಗಳಿಗೇ ಈ ಜಗತ್ತಿನಲ್ಲಿ ತೊಂದರೆಗಳು ಅಧಿಕ. ಅದು ವಿಧಿ ನಿಯಮವೇ ಸರಿ. ಅದನ್ನು ಮೀರಿ ಅಡ್ಡ ದಾರಿ ಹಿಡಿಯುವುದೆಂದರೆ ಅಪಗತಿ ತಂದು ಕೊಂಡಂತೆಯೆ ಸರಿ. ಅಷ್ಟೇಕೆ , ಮಾನವೀಯ ಪ್ರಜ್ಞೆಯೊಂದಿದ್ದರೆ, ಸಾಲದು ದೈವ ಶ್ರದ್ಧೆ ಇರಲೇಬೇಕು. ನೀವೇ ಯೋಚಿಸಿ; ಅದಿಲ್ಲದಿದ್ದರೆ, ಈ ಜಗತ್ತು ತನ್ನ ವ್ಯಾಪಾರ ವ್ಯವಹಾರದಲ್ಲಿಯೂ ನಂಬಿಕೆಯುಳ್ಳವರಿಲ್ಲದೇನೆ ಸ್ತಗಿತಗೊಳ್ಳುವುದಿಲ್ಲವೇ? ವ್ಯವಹಾರದಲ್ಲಿ ಎಷ್ಟೇ ಲೆಕ್ಕಪತ್ರಗಳು, ದಾಖಲೆಗಳಿರಲಿ ನಂಬಿಕೆಯ ಮೇಲೇ ಕೊಟ್ಯಂತರ ರೂ.ಗಳ ವಹಿವಾಟು ನಡೆಯುತ್ತಲೇ ಇರುವುದನ್ನು ಕಾಣುತ್ತಲೇ ಇದ್ದೇವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ಬೃಹತ್ ಬಂಡವಾಳ ಶಾಹಿಗಳೂ ಇಂದಿಗೂ ದೇವರನ್ನು ನಂಬದೇನೆ ತಮ್ಮ ಹಣ ಹೂಡಿಕೆ ಮಾಡದಿರುವವರು ವಿರಳವೇ ಸರಿ. ಕೋಟಿಗಟ್ಟಲೆ ಚೆಲ್ಲುವ ಚಿತ್ರೋದ್ಯಮಿಗಳಂತೂ, ದೇವರು ಹಾಗೂ ತಮ್ಮ ಭವಿಷ್ಯದಲ್ಲಿ ನಂಬಿಕೆ ಎಂದಿಗೂ ಬಿಡಲಾರರಲ್ಲ...!
*********

ಸಪ್ತಗಿರಿ ಸಂಪದ(ಪುರಾಣ ಕಥಾನಕ) ಸಂಚಿಕೆ-3

ಮಡಿ ಭಾಷೆ, ಮಡಿ ಭಾಷೆ

ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು!
ಮಡಿ ಎಂದರೆ ಶುದ್ಧ ಅಂತಲೂ ಹೌದು, ಮಡಿ ಅಂದರೆ ಸಾಯಿ ಅಂತಲೂ ಹೌದು. ಯಾವುದೇ ಭಾಷೆ ತುಂಬ ಮಡಿಯಾದರೆ ಸತ್ತೇ ಹೋಗುತ್ತದೆ. ಸಂಸ್ಕೃತ. ಲ್ಯಾಟಿನ್, ಗ್ರೀಕ್ ಇತ್ಯಾದಿಗಳೆಲ್ಲ ತುಂಬ ಮಡಿವಂತ ಭಾಷೆಗಳಾದವು, ಆಯಾ ಭಾಷಾ ಪಂಡಿತರಿಂದ. ಹಾಗೆ ಅವರು ಮಡಿ ಮಾಡಿ ಮಾಡಿ ಇವತ್ತು ಅವು ಅಷ್ಟೇನೂ ಮಡಿಯಲ್ಲದ ಭಾಷೆಗಳಲ್ಲಿ ಮಾತ್ರ ಪದಗಳಾಗಿ ಉಳಿದುಕೊಂಡಿವೆ.

ಇಂಗ್ಲಿಷು ಇದೆಯಲ್ಲ, ಅದರಲ್ಲಿ ಶೇ ೯೦ ಬೇರೆ ಭಾಷೆಯ ಪದಗಳೇ ಇವೆ. ಟವಲ್, ಟೊಮೆಟೊ, ಕ್ವೆಶ್ಚನ್, ಲ್ಯಾಂಗ್ವೆಜ್, ವಕಾಬುಲರಿ ಇಂಥ ನಾವು ಇಂಗ್ಲಿಷ್ ಅಂದುಕೊಂಡ ಪದಗಳು ಎಲ್ಲೆಲ್ಲಿಂದಲೋ ಬಂದು ಇಂಗ್ಲಿಷಿನಲ್ಲಿ ಮನೆ ಮಾಡಿಕೊಂಡಿವೆ. ಇತ್ತೀಚಿನ ಆಕ್ಸ್-ಫರ್ಡ್ ಡಿಕ್ಷನರಿಯಲ್ಲಿ ಭಾರತೀಯ ಮೂಲದ ಸುಮಾರು ಎಂಟು ಸಾವಿರದಷ್ಟು ಪದಗಳ ಪಟ್ಟಿ ಕಾಣುತ್ತದೆ. ಆಕ್ಸ್ ಅಂದರೆ ಗೋವುಗಳು, ಫರ್ಡ್ ಅಂದರೆ ತೀರ್ಥ. ತೀರ್ಥ ಅಂದರೆ ನದಿ ದಾಟುವ ಜಾಗ. ಅದಕ್ಕೇ ಆ ಊರಿನ ಹೆಸರನ್ನು ಗೋತೀರ್ಥ ಎಂದು ಬದಲಾಯಿಸಿದ್ದೂ ಇದೆ. ಇದು ಕಡ್ಡಿಪುಡಿ ಕರಿಬಸಯ್ಯ ಅನ್ನುವ ಹೆಸರನ್ನು ಕಾಷ್ಠಚೂರ್ಣಕಾಳವೃಷಭಾರ್ಯ ಕಾಷ್ಠ (ಕಡ್ಡಿ) ಚೂರ್ಣ (ಪುಡಿ) ಕಾಳ (ಕರಿ) ವೃಷಭ (ಬಸವ) ಆರ್ಯ (ಅಯ್ಯ) ಅಂತ ಬದಲಾಯಿಸಿದ ಹಾಗೆ. ಸಿಗ್ನಲ್ ಅನ್ನುವುದನ್ನು ಧೂಮ್ರಚಾಲಿತ ಬಹುಚಕ್ರಶಕಟ ಗಮನಾಗಮನಸೂಚೀ ಲೋಹಪಟ್ಟಿಕಾ ಅಂದಹಾಗೆ. ಮಡಿ ಅತಿಯಾದರೆ ಹೀಗಾದೀತು. ಸಂಸ್ಕೃತವು ದೇಸೀಭಾಷೆಗಳಿಂದ ಪದಗಳನ್ನು ತೆಗೆದುಕೊಂಡೇ ಇಲ್ಲ ಎಂದಲ್ಲ, ತೀರ ಕಡಮೆ. ಸಾವಿರಕ್ಕೆ ಒಂದು ಹತ್ತು ಇದ್ದಾವು.

ಇಂಗ್ಲಿಷಿನ ಗತಿ ಇನ್ನೊಂದು ಥರದ್ದು. ಅದು ಹೊಟ್ಟೆಬಾಕನಂತೆ ಎಲ್ಲ ಪದಗಳನ್ನೂ ಗಿಡಿದುಕೊಂಡು ಎಗ್ಗಿಲ್ಲದೆ ಸಿಗ್ಗಿಲ್ಲದೆ ಜಗತ್ತಿನ ಮುಖ್ಯಭಾಷೆ ಆಯಿತು. ಅಷ್ಟಾದರೂ ಜಗತ್ತಿನಲ್ಲಿ ಅತಿ ಹೆಚ್ಚು ಜನ ಬಳಸುವ ಭಾಷೆಗಳ ಪೈಕಿ ಇಂಗ್ಲಿಷಿಗೆ ಎಂಟನೆಯ ಸ್ಥಾನವಂತೆ.