ಕನ್ನಡಸಾಹಿತ್ಯ.ಕಾಂ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ - ಪೂರ್ವ‌ಭಾವಿ ಸಿದ್ಧತಾ ಸಭೆ

ಕನ್ನಡಸಾಹಿತ್ಯ.ಕಾಂ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ - ಪೂರ್ವ‌ಭಾವಿ ಸಿದ್ಧತಾ ಸಭೆ

ಗೆಳೆಯರೆ,

"ಮಾಹಿತಿ ತಂತ್ರಜ್ಞಾನದ ಸಂದರ್ಭ‌ದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸುವ ಪ್ರಸ್ತಾವನೆಯೊಂದಿಗೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದವರು ಕಳೆದ ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿ, ಅಲ್ಲಿ, ಈ ಪ್ರಸ್ತಾವನೆಯನ್ನು ಚರ್ಚೆ‌ಗೆತ್ತಿಕೊಂಡು, ಸಭೆಯು ಸರ್ವಾ‌ನುಮತದಿಂದ ವಿಚಾರಸಂಕಿರಣವನ್ನು ನಡೆಸಲು ತೀರ್ಮಾನಿಸಿತು. ಇದರ ತಾರ್ಕಿಕ ಬೆಳವಣಿಗೆಯಾಗಿ, ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಹಲವಾರು ಸ್ವಯಂಪ್ರೇರಿತ ಸದಸ್ಯರು ವಹಿಸಿಕೊಂಡಿದ್ದು, ವಿಚಾರಸಂಕಿರಣದ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

ನಂತರದ ಬೆಳವಣಿಗೆಯಲ್ಲಿ, ಬೆಂಗಳೂರಿನ 'ಕ್ರೈಸ್ಟ್ ಕಾಲೇಜ್ ಆಫ್ ಲಾ', ಇವರು ಈ ವಿಚಾರಸಂಕಿರಣದ ಸಹ-ಪ್ರಾಯೋಜಕರಾಗಿರಲು ಮುಂದೆ ಬಂದಿದ್ದು, ಎರಡು ದಿನಗಳ ಈ ವಿಚಾರಸಂಕಿರಣಕ್ಕೆ ತಮ್ಮ ಕಾಲೇಜಿನ ಆಡಿಟೋರಿಯಂ ಅನ್ನು, ಹಾಗೂ ದೃಶ್ಯ, ಶ್ರವಣ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿರುತ್ತಾರೆ.

ಇದೀಗ ವಿವಿಧ ಸಮಿತಿಗಳಲ್ಲಿ ಆಗಿರುವ ಕಾರ್ಯ‌ಗಳ ಅವಲೋಕನ ಮಾಡುವ ಹಾಗೂ ಮುಂದಿನ ಕೆಲಸಗಳನ್ನು ಯೋಜಿಸುವ ಉದ್ದೇಶದಿಂದ, ಈ ವಿಚಾರಸಂಕಿರಣದ ಆಯೋಜಿಸುವಿಕೆಯಲ್ಲಿ ತೊಡಗಿಸಿಕೊಂಡಿರುವವರ ಹಾಗೂ ತೊಡಗಿಸಿಕೊಳ್ಳಲು ಇಚ್ಛಿಸುವವರ, ಹಾಗೂ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ ನಡೆಸಲಾಗುತ್ತಿದೆ. ಸಭೆಯ ವಿವರಗಳು ಕೆಳಕಂಡಂತಿವೆ.

ಸಮಯ: ಸಂಜೆ 5.30 ಕ್ಕೆ
ದಿನಾಂಕ: 23.12.2006 ಶನಿವಾರದಂದು
ಸ್ಥಳ: ಕ್ರೈಸ್ಟ್ ಕಾಲೇಜು ಆವರಣ,
ಬೆಂಗಳೂರು ಡೈರಿ ಎದುರು, ಹೊಸೂರು ರಸ್ತೆ,
ಬೆಂಗಳೂರು - 29

ಈ ವಿಚಾರಸಂಕಿರಣವು ನಿಂತನೀರಾಗಿರುವ ಚಿಂತನಾ ಕ್ಷೇತ್ರವನ್ನು, ಹಾಗೂ ತಾಂತ್ರಿಕ ಕ್ಷೇತ್ರವನ್ನು ಪರಸ್ಪರ ಮುಖಾಮುಖಿಯಾಗಿಸಿ, ಆ ಮೂಲಕ ತಂತ್ರಜ್ಞಾನವನ್ನು ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಜನೋಪಯೋಗಿಯಾಗಿಸುವ ನಿಟ್ಟಿನಲ್ಲಿ ಅಗತ್ಯವಾದ ಹೊಸ ಆಲೋಚನೆ, ಚಿಂತನೆಗಳಿಗೆ ದಿಕ್ಸೂಚಿಯಾಗಲಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ದೇಶದಲ್ಲಿ ಹೊಸ ಆರ್ಥಿ‌ಕ ಉತ್ಕ್ರಾಂತಿಗೆ ಕಾರಣವಾದ, ಬೆಂಗಳೂರು, ಕರ್ನಾ‌ಟಕ ಹಾಗೂ ಕನ್ನಡಿಗರು ಇಂತಹ ವಿಶಿಷ್ಟ ಪ್ರಯೋಗಮಾಡಹೊರಟಿರುವುದು, ಕನ್ನಡಿಗರೆಂಬ ನಮ್ಮ ಅಭಿಮಾನಕ್ಕೆ ಮತ್ತೊಂದು ಗರಿ.

ಈ ಪ್ರಯೋಗದಲ್ಲಿ ಭಾಗಿಯಾಗಲು, ಆಸಕ್ತರಾದ, ಇಂತಹ ಕಾರ್ಯ‌ವೊಂದರಲ್ಲಿ ಭಾಗವಹಿಸಿ, ನಮ್ಮ ಸಮಾಜಕ್ಕೆ ಹೆಚ್ಚು ಹತ್ತಿರವಾಗುವ, ಮುಕ್ತ ಮನಸ್ಸಿನ ಎಲ್ಲರಿಗೂ ತೆರೆದ ಬಾಗಿಲಿನ ಸ್ವಾಗತ..

ಕ್ರೈಸ್ಟ್ ಕಾಲೇಜಿನ ಆವರಣದಲ್ಲಿ ಭೇಟಿಯಾಗೋಣ..

ಶೇಖರ್ ಪೂರ್ಣ‌
ksctanda@gmail.com

ಮೊಬೈಲ್: 9321430015
ಮನೆ: ೦೮೦ ೨೬೪೮೪೬೧೭

ಗಮನಿಸಿ: ಈ ಸಭೆಯಲ್ಲಿ ವಿವಿಧ ಭೌಗೋಳಿಕ ನೆಲೆಗಳಲ್ಲಿರುವ ಕನ್ನಡಸಾಹಿತ್ಯ.ಕಾಂ ಬೆಂಬಲಿಗರಿಗೂ ಹಾಗೂ ಆಸಕ್ತರಿಗೂ ಭಾಗವಹಿಸುವ ಅವಕಾಶ ಮಾಡಿಕೊಡುವ ಪ್ರಯತ್ನವಾಗಿ, ಅಂತರ್ಜಾಲದ ಮೂಲಕ ನೇರ ಪ್ರಸಾರ ಮಾಡಲಾಗುವುದು. ಹೆಚ್ಚಿನ ವಿವರಗಳಿಗೆ, ksctanda@gmail.com ಗೆ ಪತ್ರ ಬರೆಯಬೇಕಾಗಿ ಎಲ್ಲರಲ್ಲೂ ವಿನಮ್ರ ಮನವಿ.