ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಂಕುತಿಮ್ಮನ ಕಗ್ಗ

ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು । ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।। ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು । ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

ಕೊತ್ತಂಬರಿಬೀಜ ಚಟ್ನಿಪುಡಿ

ಕೊತ್ತಂಬರಿ ಬೀಜವನ್ನು ಸುವಾಸನೆ ಬರುವವರೆಗೂ ಹುರಿದುಕೊಳ್ಳುವುದು. ಕೊಬ್ಬರಿತುರಿಯನ್ನೂ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಕರಿಬೇವು ಎಲೆ ಗರಿಗರಿಯಾಗಿ ಹುರಿಯಬೇಕು. ನಾಲ್ಕು ಚಮ್ಮಚ ಎಣ್ಣೆ ಕಾಯಿಸಿ ಸಾಸಿವೆ ಸಿಡಿದ ನಂತರ ಹಿಂಗು ಹಾಕಿ ಅದರಲ್ಲಿ ಒಣಮೆಣಸಿನಕಾಯಿ ಹುರಿದು ತೆಗೆಯಬೇಕು. ಕೊತ್ತಂಬರಿ ಬೀಜದ ಜೊತೆಗೆ ಕರಿಬೇವು, ಕೊಬ್ಬರಿ, ಹುಣಸೇಹಣ್ಣಿನ ಪುಡಿ, ಉಪ್ಪು ಹಾಗೂ ಒಂದು ಸಣ್ಣ ತುಂಡು ಬೆಲ್ಲ ಮತ್ತು ಕರಿದು ತೆಗೆದ ಒಣಮೆಣಸಿನಕಾಯಿ ಸೇರಿಸಿ ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳುವುದು. ಬಾಂಡಲೆಯಲ್ಲಿರುವ ಒಗ್ಗರಣೆ ಎಣ್ಣೆಯಲ್ಲಿ ಇವನ್ನು ಕಲಸಿ ಡಬ್ಬಿಗೆ ತುಂಬಿಡಿ. ಸೂ: ಅಸಿಡಿಟಿ ಇರುವವರಿಗೆ ಊಟಕ್ಕೆ ಮೊದಲು ಮೊದಲನೆಯ ತುತ್ತಿಗೆ ಇದನ್ನು ತುಪ್ಪದ ಜೊತೆ ಬಳಸಿದರೆ ತುಂಬ ಒಳ್ಳೆಯದು.

ಸಾಂಪ್ರದಾಯಿಕ ಅಡುಗೆ

ಗೋದಿ ಹಲ್ವಾ

ಗೋದಿಯನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಿರಬೇಕು. ಬೆಳಿಗ್ಗೆ ಅದನ್ನು ಬಸಿದು ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಅದರ ಹಾಲು ತೆಗೆದುಕೊಳ್ಳುವುದು. ಆ ಹಾಲಿನ ಜೊತೆಗೆ ಒಂದು ತೆಂಗಿನ ಕಾಯಿ ಹೋಳಿನ ಹಾಲನ್ನು ತೆಗೆದು ಬೆರೆಸಬೇಕು. ಅದರ ಜೊತೆಗೆ ೧/೨ ಲೇಟರ್ ಹಾಲು ಬೆರೆಸುವುದು. ಬೆಲ್ಲವನ್ನು ಕರಗಿಸಿ ಫಿಲ್ಟರ್ ಮಾಡಿ, ಯಾಲಕ್ಕಿ ಪುಡಿ ಸೇರಿಸಿ ಅದಕ್ಕೆ ಬೆರೆಸುವುದು. ಒಲೆಯ ಮೇಲೆ ಇಟ್ಟು ಕೈಯಾಡುತ್ತಿರಬೇಕು.

ಕೋಡುಬಳೆ

ಅಕ್ಕಿಹಿಟ್ಟನ್ನು ಬಾಂಡಲೆಯಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಹುರ್ಗಡ್ಲೆ ಪುಡಿ ಮಾಡಿಕೊಂಡು ಒಂದು ಸೇರಿಗೆ ಒಂದು ಪಾವು ಹುರ್ಗಡ್ಲೆ ಪುಡಿ ಬೆರೆಸಬೇಕು. ಒಂದು ಕಪ್ಪು ಎಣ್ಣೆ ಬಾಂಡಲೆಯಲ್ಲಿಟ್ಟು ಒಂದು ಚಮಚ ಸಾಸಿವೆ ಹಾಕಿ, ಸಿಡಿದ ಮೇಲೆ ಇಂಗು ಹಾಕಿ ಒಣ ಮೆಣಸಿನಕಾಯಿ ಹುರಿದು ತೆಗೆಯಬೇಕು. ಇದರ ಜೊತೆ ಕೊಬ್ಬರಿ ಅಥವಾ ತೆಂಗಿನಕಾಯಿ ತುರಿಯನ್ನು (ಕಾಯಿ ಹಾಕುವಾಗ ಸ್ವಲ್ಪ ಬಿಸಿ ಮಾಡಿಕೊಂಡರೆ ಒಳಿತು) ಸೇರಿಸಿ ಪುಡಿ ಮಾಡಿಕೊಳ್ಳಬೇಕು.

ಮಂಕುತಿಮ್ಮನ ಕಗ್ಗ

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು । ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।। ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ । ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

ಮಂಕುತಿಮ್ಮನ ಕಗ್ಗ

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ । ಅಭಾಸವನು ಸತ್ಯವೆಂದು ಬೆಮಿಸುವುದುಮ್ ।। ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ । ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

ಗೋರಿಗಳಿಗೆ ವಿಡಿಯೊ!

ಹೈ ಟೆಕ್ ಕಂಪೆನಿಯೊಂದು ಹೈಟೆಕ್ ಗೋರಿಗಳನ್ನು ಹೊರತಂದಿದೆಯಂತೆ. [:http://www.local6.c…|ಲೋಕಲ್ ಸಿಕ್ಸ್ ವರದಿಯ ಪ್ರಕಾರ] ಗೋರಿಗೊಂದು ಫ್ಲಾಟ್ ಸ್ಕ್ರೀನ್ ಮಾನಿಟರ್ ಅಳವಡಿಸಿ ಅದರಲ್ಲಿ ತೀರಿಹೋದವರ ಬಗ್ಗೆ ಜ್ಞಾಪಕಾರ್ಥವಾಗಿ ವಿಡಿಯೋ ಇರಿಸುವ ಸೌಲಭ್ಯವಿರುವುದಂತೆ!

ಕಾಲಕೋಶ (ಕಾಲ್ಸೆಂಟರ್ (ತರ್ಲೆ) ಪದಕೋಶ)

ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ. ಕಾಲನೇಮಿ: ಕಾಲ್ಸೆಂಟರ್ನಲ್ಲಿ ಬಂದ ಕರೆಗಳನ್ನು ಬೇರೆಬೇರೆ ಉದ್ಯೋಗಿಗಳಿಗೆ ಹಂಚುವಾತ. ಕಾಲಪುರುಷ: ಕಾಲ್ಸೆಂಟರ್ನಲ್ಲಿ ಕೆಲಸ ಮಾಡುವ ಗಂಡಸು. ಕಾಲೇಜು: ಕಾಲ್ಸೆಂಟರ್ನಲ್ಲಿ ಕೆಲಸ ಮಾಡಲು ಸರಿಯಾದ ಪ್ರಾಯ (age). ಕಾಲಮಾನ: ಕಂಪೆನಿಯ ಮಾನ ಉಳಿಯುವಂತೆ ಬಂದ ಕರೆಯನ್ನು ಉತ್ತರಿಸುವ ಚಾಕಚಕ್ಯತೆ.

೧೯ ಆಗಸ್ಟ್ ೨೦೦೫

ನಿನ್ನೆಯ ದಿನ ವರಮಹಾಲಕ್ಷಿ ವ್ರತ, ರಕ್ಷಾ ಬಂಧನ ಮತ್ತು ಯಜುರುಪಾಕರ್ಮ. ಮುಂಬೈನಲ್ಲಿ ರಕ್ಷಾ ಬಂಧನಕ್ಕಾಗಿ ಇಂದು ಶನಿವಾರ ರಜೆ ಘೋಷಿಸಿದ್ದಾರೆ. ಆದರೇ ರಜೆ ಇರಲಿ ಇಲ್ಲದಿರಲಿ ಮುಂಬೈವಾಸಿಗಳು ಹಬ್ಬವನ್ನಂತೂ ಆಚರಿಸಿಯೇ ಆಚರಿಸುತ್ತಾರೆ. ಶುಕ್ರವಾರ ರಕ್ಷಾಬಂಧನವಾದ್ದರಿಂದ ಅಂದು ರಜೆ ಇಲ್ಲದಿದ್ದರೂ ಹೆಚ್ಚಿನ ಜನರು ಕಛೇರಿ ಕಾರ್ಯಾಲಯಗಳಿಗೆ ರಜೆ ಹಾಕಿದ್ದರು. ಬೆಳಗ್ಗೆ ಕೆಲಸಕ್ಕೆಂದು ಹೊರಟಾಗ ಲೋಕಲ್ ಟ್ರಿನ್ ನಲ್ಲಿ ಸಾಮಾನ್ಯದ ಜನಜಂಗುಳಿ ಇರಲೇ ಇಲ್ಲ. ಎಲ್ಲೆಲ್ಲೂ ಸ್ಮಶಾನದ ವಾತಾವರಣ. ಇದೇನಪ್ಪ ನಾನು ಗೊತ್ತಿಲ್ಲದೇ ರಜೆಯ ದಿನ ಬ್ಯಾಂಕಿಗೆ ಹೋಗುತ್ತಿದ್ದೇನಾ ಅಂತ ಸ್ವಲ್ಪ ಯೋಚಿಸುವಂತಾಯ್ತು. ಸ್ನೇಹಿತರುಗಳನ್ನು ಕಂಡ ಮೇಲೆ ಆ ಸಂಶಯ ನಿವಾರಣೆ ಆಯ್ತು. ಗಂಡಸರು ತಮ್ಮ ತಮ್ಮ ಅಕ್ಕ ತಂಗಿಯರ ಮನೆಗೆ ರಾಖಿಯನ್ನು ಕಟ್ಟಿಸಿಕೊಳ್ಳಲು ಹೋಗುವರು. ಹೋಗುವಾಗ ತಮ್ಮ ಸಂಸಾರ ಸಮೇತರಾಗಿ ಹೋಗುವರು. ಆದ್ದರಿಂದ ಬೆಳಗ್ಗೆ ಅಷ್ಟು ಬೇಗ ಜನಜಂಗುಳಿ ಇರಲಿಲ್ಲ. ಈ ವಿಷಯ ನನಗೆ ಸಂಜೆ ಮನೆಗೆ ಮರುಳುವ ಸಮಯದಲ್ಲಿ ಅರಿವಾಯಿತು. ಸಂಜೆ ಬರುವಾಗ ಎಲ್ಲೆಲ್ಲಿ ನೋಡಿದರೂ ಮಕ್ಕಳ ಅರಚಾಟ ಕಿರುಚಾಟ. ಪುಟ್ಟ ಪುಟ್ಟ ಮಕ್ಕಳ ದಂಡೇ ಎಲ್ಲೆಲ್ಲಿಯೂ ಕಾಣುತ್ತಿತ್ತು. ಲೋಕಲ್ ಒಳಗೆ ಮಕ್ಕಳೊಡನೆ ತಂದೆ ತಾಯಿಗಳು ಬಂದರೆ ಇದ್ದ ಪ್ರಯಾಣಿಕರೆಲ್ಲಾ ಎದ್ದು ನಿಲ್ಲಬೇಕಾಯ್ತು. ಪಾಪ ಮಕ್ಕಳನ್ನು ಎತ್ತಿಕೊಂಡ ತಾಯಿಯನ್ನು ನಿಲ್ಲಲು ಬಿಡುವುದೇ - ಕೂತುಕೊಳ್ಳಲು ಜಾಗ ಕೊಡಬೇಕು. ಲೋಕಲ್ ಚರ್ಚ್ ಗೇಟ್ ನಿಂದ ದಾದರಿಗೆ ಬರುವುದರೊಳಗೆ ಮುಂದೆ ಬರುವ ಮಗು ತಾಯಂದಿರುಗಳಿಗೆ ಕೂತುಕೊಳ್ಳಲಲ್ಲ, ನಿಲ್ಲಲೇ ಸ್ಥಳವಿಲ್ಲ. ಆದರೂ ಇಲ್ಲಿಯ ಜನರು ಸ್ವಲ್ಪ ಬೇಜಾರಿಲ್ಲದೇ, ಇರುಸು ಮುರುಸುಗಳಿಲ್ಲದೇ ಅವರುಗಳಿಗೆ ಹೇಗೋ ಜಾಗ ಮಾಡಿಕೊಡುವರು. ಅವರುಗಳೂ ಅಷ್ಟೇ, ಹೆಂಗಸರ ಕಂಪಾರ್ಟ್ ಮೆಂಟ್ ಬಿಟ್ಟು ಗಂಡಸರ ಕಂಪಾರ್ಟ್ ಮೆಂಟಿಗೇ ಬರುವರು. ಇದಕ್ಕೆ ಕಾರಣವೇನೆಂದರೆ, ಮೊದಲನೆಯದಾಗಿ, ಗಂಡಸರು ತಮ್ಮೊಂದಿಗಿರುವುದು, ಎರಡನೆಯದಾಗಿ, ಇದು ಸುರಕ್ಷಿತ ಸ್ಥಳ. (ಹೆಂಗಸರ ಡಬ್ಬಿಯಲ್ಲೇ ಕಳ್ಳತನಗಳು ಜಾಸ್ತಿ ಆಗುವುದು). ಮತ್ತು ಮೂರನೆಯದಾಗಿ ಹೆಚ್ಚಿನದಾಗಿ ಮಾನವಂತಿಕೆ ತೋರುವುದು ಇಲ್ಲಿಯೇ.