ಮಂಗನೊಡೆಯ ಮಂಗಪ್ಪ ನಾಡಸಾಕಿ ? ( ಉ. ಕ.ಕ)

ಮಂಗನೊಡೆಯ ಮಂಗಪ್ಪ ನಾಡಸಾಕಿ ? ( ಉ. ಕ.ಕ)

ಶುದ್ಧ ಕನ್ನಡ ವಿಭಾಗವಾದ ಧಾರವಾಡದಲ್ಲಿಯ ಕನ್ನಡ ಶಾಲಾ ನೇಮಕಗಳ ಪ್ರಕಟಣೆಗಳೂ ೧೮೬೬ರ ಸುಮಾರಿಗೆ ಮರಾಠಿಯಲ್ಲಿಯೇ ಹೊರಡುತ್ತಿದ್ದವು. ಉದಾಹರಣೆಗೆ : धारवाड जिल्ह्यातील सर्व स्कूल मास्तरांस दहाहून जासती मुलें दर एक वर्गात ......
ಅಷ್ಟೇ ಅಲ್ಲ ಬುಕ್ ಡಿಫೋಕ್ಕೆ ಬಂದ ಕನ್ನಡ ಪುಸ್ತಕಗಳ ಜಾಹೀರಾತೂ ಸಹ ಮರಾಠೀಯಲ್ಲಿಯೇ ಇರುತ್ತಿತ್ತು .
ಖಾಲೀ ಲಿಹಿಲೇಲೀಂ ಕಾನಡೀ ಬುಕೇಂ ಬೆಳಗಾಂವ ಬ್ರ್ಯಾಂಚ ಬುಕ್ ಡಿಪೋಂತ ನವೀನ ಆಲೀ ಆಹೇತ ತೀ ..
ಪುಸ್ತಕಾಂಚೆ ನಾವೇಂ
ವೀರಭದ್ರಯ್ಯಾ ಪಂಡೀತ ಕ್ರುತ ಪಹಿಲೇಂ ಪುಸ್ತ್ಯಕ .. ಇಂಗ್ಲಂಡಚಾ ವೃತ್ತಾಂತ ....ಇತ್ಯಾದಿ

ಉತ್ತರ ಕರ್ನಾಟಕದ ಈ ಮರಾಠೀ ಪ್ರಾಬಲ್ಯವನ್ನು ಕಡಿಮೆ ಮಾಡಿ ಕನ್ನಡಕ್ಕೆ ಯುಕ್ತ ಸ್ಥಾನವು ದೊರೆಯಬೇಕೆಂದು ಅನೇಕ ಸಂಘಸಂಸ್ಥೆಗಳು , ಕವಿಗಳು , ಲೇಖಕರು ಪ್ರಯತ್ನಿಸಿದರು . "ಅರಸನನ್ನು ನೋಡಿ ಪುರುಷನನ್ನು ಮರೆತ " ಕನ್ನಡ ಜನತೆಯನ್ನು ಎಚ್ಚರಿಸಲು ಪ್ರಯತ್ನಪಟ್ಟರು.

ಇವುಗಳಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಮಾಡಿದ ಸೇವೆಯನ್ನು ಕೃತಜ್ಣತೆಯಿಂದ ನೆನೆಯಬೇಕು. ಇದರ ಸ್ಥಾಪನೆಯಲ್ಲಿ ಶ್ರೀ ರಾಮಚಂದ್ರ ಹಣಮಂತ ದೇಶಪಾಂಡೆಯವರ ಪರಿಶ್ರಮ ತುಂಬಾ ಶ್ಲಾಘನೀಯವಾಗಿದೆ. ಇವರು ಈ ಭಾಗದಲ್ಲಿ ಮೊದಲನೆಯ ಎಂ.ಎ. ಪದವೀಧರರಾದ್ದರಿಂದ ಎಂ.ಎ. ದೇಶಪಾಂಡೆ ಎಂದೇ ಕರೆಯಲ್ಪಡುತ್ತಿದ್ದರು. ಇವರು ತಮ್ಮ ಹೆಸರನ್ನು ಸಹ ರಾಮಚಂದ್ರ ಹಣಮಂತ ದೇಶಪಾಂಡೆ ಎಂದು ಹೇಳಿದರೆ ಅದರಲ್ಲಿ ಸಂಸ್ಕೃತದ ಅಂಶವಿರುವದರಿಂದ ಮಂಗನೊಡೆಯ ಮಂಗಪ್ಪ ನಾಡಸಾಕಿ ಎಂದು ಹೇಳುತ್ತಿದ್ದರೆಂದೂ ಆನೆಯನ್ನು ಮುಂಬಾಲದ ದೊಡ್ಡೆಮ್ಮೆ ಎಂದೂ ಕರೆಯುತ್ತಿದ್ದರೆಂದೂ ಹೇಳುತ್ತಾರೆ . ಇದರಲ್ಲಿ ಸತ್ಯಾಂಶಕ್ಕಿಂತ ವಿನೋದವೇ ಹೆಚ್ಚಿರಬಹುದಾದರೂ ಈ ಘಟನೆ ಶ್ರೀ ದೇಶಪಾಂಡೆಯವರ ಕನ್ನಡ ಅಭಿಮಾನದ ದ್ಯೋತಕವಾಗಿದೆ . ಇದಕ್ಕಾಗಿ ಅವರು ತುಂಬಾ ಕೈಯನೂ ಸುಟ್ಟುಕೊಂಡರು.

.... ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕರ್ತರ ಕಳಕಳಿ ಎಷ್ಟಿತ್ತೆಂದರೆ ಮೊದಲಿನ ಹತ್ತು ವರುಷಗಳ ಕಾಲಾವಧಿಯಲ್ಲಿ ಕೇವಲ ಒಂದೇ ಸಲ ಕೋರಂ ಇಲ್ಲದ್ದಕ್ಕೆ ಸಭೆ ಮುಂದು ಹಾಕಲ್ಪಟ್ಟಿದೆ.

Rating
No votes yet