ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದ - ಫೆಬ್ರವರಿ ತಿಂಗಳ ಅಂಕಿ ಅಂಶಗಳು

ಸಂಪದ ಪ್ರಾರಂಭವಾಗಿ ಆರು ತಿಂಗಳ ಮೇಲಾದವು. ನಾವುಗಳು ಕೆಲವರು ಅಂದುಕೊಂಡಷ್ಟು ಶೀಘ್ರವಾಗಿ ಈ‌ ಸಮುದಾಯ ಬೆಳೆಯದಿದ್ದರೂ, ಇತ್ತೀಚಿನ ಅಂಕಿ ಅಂಶಗಳನ್ನ ನೋಡಿದರೆ ಸಂಪೂರ್ಣ ಕನ್ನಡದಲ್ಲಿರುವ ತಾಣಗಳಿಗೆ ಇಷ್ಟೊಂದು ಜನ ಬಂದು ಹೋಗುತ್ತಿರುವರು, ಪುಟಗಳನ್ನ ತಿರುವಿಹಾಕುತ್ತಿರುವರು ಎಂಬ ನಂಬಿಕೆಯಾಗುವುದು ಕಡಿಮೆ. ಹಾಗೆ ನೋಡಿದರೆ ಸಂಪದಕ್ಕೆ ಬರುವ ಟ್ರಾಫಿಕ್ [:http://hpnadig.net/|ನನ್ನ ಸ್ವಂತದ ತಾಣದ] ಟ್ರಾಫಿಕ್ನಷ್ಟೂ‌ ಇಲ್ಲ, ಆಂಗ್ಲ ಸಮುದಾಯಗಳನ್ನೋ ಇನ್ಯಾವುದಾದರೂ ಬೇರೆ ಭಾಷೆಯ ಸಮುದಾಯಕ್ಕೋ ಹೋಲಿಸಿದರೆ ಶೇಕಡಾ ೧ ರಷ್ಟೂ ಟ್ರಾಫಿಕ್ ‌ಇಲ್ಲ, ಆದರೂ ಸಂಪೂರ್ಣ ಕನ್ನಡದಲ್ಲಿರುವ ಕಮರ್ಶಿಯಲ್ ಅಲ್ಲದ ತಾಣವೊಂದಕ್ಕೆ ಇಷ್ಟೊಂದು ಪ್ರೋತ್ಸಾಹ, ಆಸಕ್ತಿ ದೊರೆತಿರುವುದು ಮಹತ್ವದ ಸಂಗತಿ. ಕೆಳಗಿರುವುದು ಫೆಬ್ರವರಿ ತಿಂಗಳ stats. ನಂಬಲು ಸಾಧ್ಯವಾಗುತ್ತದೆಯೋ, 'ಛೆ, ಇಷ್ಟೇನಾ' ಅನ್ನಿಸುತ್ತದೋ ನೋಡಿ.

ದ್ವಿರುಕ್ತಿ ದ್ವಿರುಕ್ತಿ - ೩ : ಚಾತಕ

[ ನನ್ನ ಸೈಟಿನಿಂದ ಬರಹವನ್ನು ಆಗಾಗ ತೆಗೆದು ಸಂಪದಕ್ಕೆ ಹಾಕುವ (ದುರ್)ಅಭ್ಯಾಸ ಬೆಳೆದುಬಿಟ್ಟಿದೆ. ಇದೂ ಸೇರಿ ಮೂರನೆಯ ಬಾರಿ ಹಾಗೆ ಹಾಕುತ್ತಿರುವುದು. ಅಂತಲೆ, ಇದು ದ್ವಿರುಕ್ತಿ; ಮುಂದೂ ಮಾಡಬಹುದಾದ್ದರಿಂದ ಇದು ಒಂದು ಮಾಲಿಕೆ; ಸದ್ಯದ್ದು ಮೂರನೆಯದು ]

ಕಾತರಿಸಿ ಕಾಯುವವರನ್ನು ಚಾತಕನಿಗೆ ಹೋಲಿಸುವುದು ಕವಿಸಮಯ. ಚಾತಕ ಪಕ್ಷಿಯು ನೆಲದ ಮೇಲೆ ಬಿದ್ದ ನೀರನ್ನು ಕುಡಿಯುವುದಿಲ್ಲವಂತೆ. ಮಳೆಯ ಹನಿ ನೇರವಾಗಿ ಗಂಟಲೊಳಗೆ ಇಳಿದರೆ ನೀರುಂಟು, ಇಲ್ಲವಾದರಿಲ್ಲ. ಅಂತಲೆ, ಚಾತಕವು ಮಳೆಯ ಮೋಡವನ್ನು ಕಾಯುತ್ತ, ಮೋಡ ಕಂಡೊಡನೆಯೆ ದೀನಸ್ವರದಲ್ಲಿ ಹಾಡುವುದಂತೆ. ಹಾಗೊಂದು ಚಾತಕನಿಗೆ ಭರ್ತೃಹರಿಯ ಕೆಳೆತನದ ಕಿವಿಮಾತು ಇದು:

रॆ रॆ चातक सावधानमनसा मित्र क्शणं श्रूयतां ।
अंभॊदाः बहवॊ वसंति गगने सर्वॆऽपि नैकादृशाः ।
कॆचिद्वृष्टिभिरार्द्रयंति वसुधां गर्जंति कॆचिद्वृथा ।
यं यं पश्यसि तस्य तस्य पुरतः मा ब्रूहि दीनं वचः ॥

ಎಲೆಲೆ ಗೆಳೆಯ ಚಾತಕನೆ, ಕೆಳೆಯ ನುಡಿಯ ಕೇಳು
ಬಾನಿನಲ್ಲಿ ತೇಲುವವು ಮೋಡಗಳು ಹಲವು
ಹನಿಸಿ ನೀರು ನೆಲವ ತೊಯ್ಸಿ ಸಾರುವವು ಕೆಲವು
ಧ್ವನಿಸಿ ಸುಳ್ಳೆ ಹುಸಿಯ ಆಶೆ ತೋರುವವು ಕೆಲವು
ನಿನ್ನ ದೈನ್ಯ ಎಲ್ಲರಲ್ಲಿ ಫಲಿತಕ್ಕೆ ಬಾರದು

[ ಕವಿ अंभॊदाः ಎಂದಿರುವುದನ್ನು ಗಮನಿಸಿರಿ: ಸುಳ್ಳೆ ಗುಡುಗಿದ ಮೋಡದಲ್ಲಿ ನೀರಿಲ್ಲವೆಂದಲ್ಲ, ಕೊಡುವ ಮನಸ್ಸಿಲ್ಲ ಅಷ್ಟೆ ]

ಆರ್ಟ್ ಆಫ್ ಲಿವಿಂಗ್ ಒಂದು ನೋಟ

'ಜೀವನ ಕಲೆ',ಹೌದು ಎಲ್ಲವನ್ನೂ ಅರ್ಥೈಸಿಕೊಂಡರೆ ಸುಂದರ. ಕಲೆ ಎಂಬುದು ಹುಟ್ಟಿದ್ದೇ ಕಲಾಕಾರರಿಂದ.ನಾವೆಲ್ಲರೂ ನಮ್ಮ ಬದುಕಿನ ಕಲಾಕಾರರೆ.ಗುರುಮುಖೇನ ಕಲಿತರೆ ವಿದ್ಯೆ ಎನ್ನುವಂತೆ,ವಿದ್ಯೆಯನ್ನು ಜನಸಮೋಹಕ್ಕೆ ಗುರುವಾಗಿ ಬೋಧಿಸ ಹೊರಟವರಲ್ಲಿ ಪ್ರಮುಖರು ಶ್ರೀ ರವಿಶಂಕರ್ ಗುರೂಜಿ.

ಗಂಡನ ಕಾರಣದಿಂದ ಹೆಂಡತಿ How ದಪ್ಪ?

ಮೊನ್ನೆ ಒಂದು ಸುದ್ದಿ ಓದಿದೆ. ಹೆಣ್ಣುಮಕ್ಕಳು ತಮ್ಮ ಗಂಡ ಅಥವಾ ಪ್ರೇಮಿಯ ಪ್ರೀತಿಯ ಕಾರಣದಿಂದಲೇ ದಪ್ಪ ಆಗುತ್ತಾರಂತೆ. ಹಾಗಂತ ಇಂಗ್ಲೆಂಡಿನ ಸಂಶೋಧನಾ ವರದಿಯೊಂದು ಹೇಳಿದೆಯಂತೆ.

ಮಿತ್ರ

ನೀನು ದುರುಗುಟ್ಟಿ ನೋಡುತ್ತಿರುವುದನ್ನು ಅನಿತಾ ತೋರಿಸಿದಾಗಲೂ, ನಿನ್ನ ನಾಚಿಕೆಯಿಲ್ಲದ ನೆಟ್ಟ ನೋಟ ಹಾಗೆಯೇ ಇತ್ತು. ಇಷ್ಟು ಸುಂದರವಾಗಿರುವ ನಿನ್ನನ್ನು ತಾನಾಗಿದ್ದರೆ ಹೋಗಿ ಖಂಡಿತ ಮಾತನಾಡಿಸಿಬರುತ್ತಿದ್ದೆ ಎಂದು ಗೇಲಿಮಾಡಿದಳು.ನೀನು ಹಾಗೆ ದುರುಗುಟ್ಟಿ ನೋಡುತ್ತಿದ್ದರೂ ನನ್ನ ಬಳಿ ಬರಲು ಭಯವೇ ? ಛೇ ನಾಚಿಕೆ ಇರಬಹುದು ಎಂಬ ಕಾರಣ ಬರಿ ಪೊಳ್ಳು. ಅದೇನಾದರೂ ಇದ್ದಿದ್ದರೆ, ನಮ್ಮ ನೋಟಗಳೆರಡು ಕೂಡಿದಾಗ , ಕಂಡೂ ಕಾಣದವನಂತೆ ದೃಷ್ಟಿ ಬೇರೆಡೆಗೆ ಸರಿಸುತ್ತಿದ್ದೆ. ಆದರೂ ನಿನ್ನ ಕಂಡಾಕ್ಷಣ ನಿನ್ನ ಕಣ್ಣಿನ ಮುಗ್ಧತೆ,ರೂಪ ನನ್ನನ್ನು ಸೆಳೆಯದೇ ಇರಲಿಲ್ಲ. ಅದರೂ ಇಲ್ಲದ ತೊಂದರೆಯನ್ನು ಗಂಟಿಕ್ಕಿಕ್ಕೊಳ್ಳಬಾರದು ಎಂದು ಮನಸ್ಸಿನಲ್ಲೇ ನಿರ್ಧರಿಸಿ ಮನೆಯೆಡೆಗೆ ನಡೆದೆ. ಎಷ್ಟಾದರೂ ನೀನು ಅಪರಿಚಿತನಲ್ಲವೆ ?. ಮನೆಗೆ ಹೋಗುವಾಗ ಸಿಕ್ಕುವ ಜಾರುಬಂಡೆಯಂತಿರುವ ರಸ್ತೆಯಲ್ಲಿ ನಡೆದು ಬರುವಾಗ ಯಾರೋ ನನ್ನನ್ನು ಹಿಂಬಾಲಿಸುವಂತೆನ್ನಿಸಿ ಹಿಂದುರುಗಿ ನೋಡಿದಾಗ ಮತ್ತೆ ನಿನ್ನ ದರ್ಶನವಾಯಿತು. “ ಥೂ ! ನಾನು ನೋಡಿದ್ದೇ ತಪ್ಪಾಯಿತು. ಅನಗತ್ಯ ತಲೆನೋವು ಎದುರಾಯಿತಲ್ಲಾ” ಎಂದು ಒಮ್ಮೆ ನನ್ನನ್ನೇ ಬೈದುಕೊಂಡೆ. ಅಲ್ಲೇ ಬಳಿ ಬಂದು ಚೆನ್ನಾಗಿ ಬೈದು, ಬೇಕಾದರೆ ಅಲ್ಲೇ ತಿರುಗಾಡುತ್ತಿರುವ ಬೆರಳೆಣಿಕೆಯ ಜನರನ್ನು ಸೇರಿಸಿ ಜಗಳ ಪ್ರಾರಂಭಿಸಬಹುದೆಂದು ಯೋಚಿಸಿದೆ.ಅದರೆ ಧೈರ್ಯಬರಲಿಲ್ಲ. ಜಗಳದಲ್ಲಿ ನೀನು ಕೋಪಗೊಂಡು ಗಾಯಗೊಳಿಸಿದರೆ, ಒಬ್ಬಳೇ ಆಸ್ಪತ್ರೆಗೆ ತಿರುಗಬೇಕಾಗುತ್ತದೆ ಎಂದೆನ್ನಿಸಿ ಹಾಗೆಯೇ ಮುಂದೆ ನಡೆದೆ. ರಸ್ತೆ ಕೊನೆಯವರೆಗೂ ಹಿಂದಿರುಗಿ ನೋಡದೆ ನಡೆದು, ಅರಳಿ ಮರದ ಜೋಡಿ ರಸ್ತೆ ಸಿಕ್ಕಾಗ ಸ್ವಲ್ಪ ಧೈರ್ಯ ಬಂತು. ಈ ಜನನಿಬಿಡ ರಸ್ತೆಯಲ್ಲಿ ಹಿಂಬಾಲಿಸುವ ಧೈರ್ಯ ಯಾರಿಗಿದೆ ? ಎಂದೆನ್ನುತ್ತಾ ಮತ್ತೆ ತಿರುಗಿ ನೋಡಿದಾಗ ನಿನ್ನನ್ನು ಕಂಡು ಅಶ್ಚರ್ಯವಾಯಿತು. ನಿನ್ನ ತಾಳ್ಮೆಯನ್ನು ಮೆಚ್ಚಲೇಬೇಕು, ಇಷ್ಟು ದೂರ ಹಿಂಬಾಲಿಸುವುದು ಕಷ್ಟವೇ ಸರಿ. ಹಿಂಬಾಲಿಕೆಯಲ್ಲೂ ಸೌಜನ್ಯವೇ ? ಹಿಂಬಾಲಿಸುತ್ತಿರುವಂತೆ ಕಾಣದಿರಲು ದೂರ ಕಾಯ್ದುಕೊಳ್ಳುತ್ತಿರುವುದು. ಜೊಲ್ಲು ಸುರಿಸಿಕೊಂಡು ಬೀದಿ ತಿರುಗುವ ನಿಮ್ಮಂಥವರಿಗೆ ಸೌಜನ್ಯಗಳ ಗಂಧವಿದೆಯೇ ?

ಪಾನಿಪಟ್

“ಹೆದರಿಕೊಳ್ಳಬೇಡಿ, ನಾನು ನಿಮಗೆ ಯಾವ ರೀತಿಯಲ್ಲೂ ತೊಂದರೆ ಕೊಡೊದಿಲ್ಲ”

( ಅಲ್ಲಿದ್ದವರು ಸುತ್ತಮುತ್ತ ತಿರುಗಿ, ಎಲ್ಲ ನೋಟಗಳು ಎಲ್ಲ ದಿಕ್ಕುಗಳನ್ನು ಸುತ್ತಿಬಂದು ಕೊನೆಗೆ ಒಂದೇ ಕಡೆ ಕೇಂದ್ರೀಕೃತವಾದವು. ಮತ್ತೆ ಅದೇ ವಿನಯಪೂರ್ಣ ಧ್ವನಿ ಮಾತನಾಡಿತು)