ಇಸ್ವ ಕಪ್ನಾಗೆ ಬಾರ್ತದ್ ಐಕಳು ಎಂದಾದ್ರು ಒದಾರ !
ನಾನು ನೀನು ಜಿವಿತ್ದಾಗೆ ಕಂಡೆವೆನಪ ಏಳು ?
ಎಂಟಣ್ಣ ನೀನು ಹೇಳೋದು ದಿಟ ಅನ್ನಿಸ್ತಿದೆ. ಈ ಜಿವಿತ್ದಲ್ಲಿ ನಾನು ನೀನು ಇದನ್ನ ಖಂಡಿತ ನೋಡಲ್ಲ. ಆದ್ರೆ ಯಾರಿಗ್ಗೊತ್ತು , ಒಂದು ಹೊಸ ಗಾಳಿ- ಚಂಡ ಮಾರುತ -ಬೀಸಿ, ಎಲ್ಲ ಅನಿಷ್ಟ ಗಳು ನಿರ್ಣಾಮವಾಗಿ ಹೋಗಿ ಹೊಸ ಅಧ್ಯಾಯ ತೆರಿಬೊದು. ಅಲ್ಲಿ ಎಲ್ಲ ಭಾರತೀಯರೆ, ನಮ್ಮೂರ್ ಹುಡ್ಗ್ರೆಲ್ಲ ಸ್ಟೇಡಿಯಂ ತುಂಬಾ ಇರ್ತಾರೆ. 'ವಿಶ್ವಕಪ್' ನಲ್ಲಿ ನಮ್ಮ ಯುವಖಿಲಾಡಿಗಳು ಒಂದು, ಎರ್ಡು, ಮೂರು,ನಾಕು ಗೊಲ್ ಹೊಡಿತಾನೆ ಇದಾರೆ. ಜಗತ್ತೆಲ್ಲಾ ನಮ್ಕಡೆಗೆನೆ ನೋಡ್ತಾ ಇದೆ. ಆಮೇಲೆ............"ಎಂಕ್ಟೇಸಪ್ಪ ಕಣ್ಬಿಟ್ ನೋಡಪ್ಪ. ಕನಸ್ಕಾಣೋದ್ ಬಿಟ್ರೆ ಇನ್ನೇನಾದ್ರು ಐತಾ". "ಕಾಯ್ಕಾ ಮಾಡೊದನ್ ಕಲ್ತ್ಗೊಬೇಕು ಮೊದ್ಲು";ಮಕ್ಳಿಗೆಲ್ಲ ಇದನ್ ಮೊದ್ಲು ಎಲ್ಕೊಡಾನ. ನಾನ್ ಒರಟೆ, ಕೆಲ್ಸ ಐತೆ ಕಣಪ್ಪೊ..ಬತ್ತಿನಿ.......
ಇಂದಿನ ವಿಶ್ವಕಪ್ಪಿನಲ್ಲಿ ಸೆಣಸುವ ಪಡೆಗಳು: (ಗುರುವಾರ, ಜುನ್,೧೫, ೨೦೦೬)
ಇಕ್ವೆಡಾರ್ ವಿರುದ್ಧ ಕೊಸ್ಟರಿಕ -'ಎ ಗ್ರುಪ್'- ಸಾ. ೬-೩೦
ಇಂಗ್ಲೆಂಡ್ ವಿರುದ್ಧ ಟಿ ಮತ್ತು ಟಿ - 'ಬಿ ಗ್ರುಪ್'ರಾ. ೯-೩೦
ಸ್ವಿಡನ್ ವಿರುದ್ಧ ಪರಗ್ವೆ - 'ಬಿ ಗ್ರುಪ್'-ಮ್.ರಾ. ೧೨-೩೦
ಟ್ಯುನಿಷಿಯ, ಸೌದಿ ಅರೆಬಿಯ ವಿರುದ್ಧ ತನ್ನ 'ಎಚ್' ಗ್ರುಪ್ ನ ಆಟದಲ್ಲಿ (೨-೨) ಗೋಲ್ ಗಳಿಂದ 'ಡ್ರಾ 'ಮಾಡಿಕೊಂಡಿದೆ. ೨೦೦೨ ರಲ್ಲಿ ನಡೆದ ವಿಶ್ವ ಕಪ್ಪಿನಲ್ಲಿ ಸೌದಿಅರೆಬಿಯ ಜರ್ಮನಿ ವಿರುದ್ಧ ಆಟ ಆಡಿ, ಹೀನಾಯವಾಗಿ (೮-೦) ಗೋಲುಗಳಿಂದ ಸೊತಿತ್ತು ! ಈ ಕಹಿ ಅನುಭವದಿಂದ ಸೌದಿ ಮೊದಲು ಬಹಳ ದಿಗಿಲಿನಿಂದಲಿ ಆಡಿತು. ಟ್ಯುನಿಷಿಯ ೨೩ ನೆ ನಿಮಿಷದಲ್ಲೆ ಮೊದಲ ಗೊಲ್ ಮಾಡಿತು. ಮಧ್ಯಾಂತರದ ನಂತರ ೫೭ ನೆ ನಿಮಿಷದಲ್ಲಿ ಯಾಸರ್ ಆಲ್ ಖ್ಯುತಾನ್ ಗೋಲಿನಿಂದ ಸಮವಾಯಿತು.೮೪ ನೆ ನಿಮಿಷದಲ್ಲಿ ಬದಲಿ ಆಟಗಾರ ಸಾಮಿ ಅಲ್ ಝೆಬರ್ ಒಂದು ಗೋಲ್ ಮಾಡಿದರು.ಇವರು ೩ ವಿಶ್ವ ಕಪ್ಪಿನಲ್ಲಿ ಸೌದಿ ಪರವಾಗಿ ಆಡಿದ್ದಾರೆ. ಸ್ಕೊರ್ ೨-೧ ನಿಂದ ಮುಂದುವರೆಯಿತು.೯೨ ನೆ ನಿಮಿಷದಲ್ಲಿ ರಾಧಿ ಜೈದಿ ಹೊಡೆದ ಗೊಲ್ ನಿಂದ ಪ್ಪಂದ್ಯ ಸರಿಸಮವಾಗಿ 'ಡ್ರಾ'ನಿಂದ ಅಂತ್ಯ ಗೊಂಡಿದೆ.
ಎಚ್'ಗ್ರುಪಿನ ಇನ್ನೊಂದು ಪಂದ್ಯ ಜರ್ಮನಿಯ ಲಿಪ್ ಝಿಗ್ ನಲ್ಲಿ ಸ್ಪೈನ್ ವಿರುದ್ಧ ಉಕ್ರೆನ್ ಆಡಿ (೪-
೦) ಗೊಲಿನ ಅಂತರದಿಂದ ಸ್ಪೈನ್ ಭರ್ಜರಿ ಜಯ ಗಳಿಸಿ ಶುಭಾರಂಭ ಮಾಡಿದೆ.
೧೨ ನೆ ನಿಷದಲ್ಲಿ ಸ್ಪೈನ್ ತನ್ನ ಮೊದಲ ಗೂಲ್ ಹೊಡೆದಾಗ ಉಕ್ರೆನ್ ನ ಗೊಲಿ, ಒಲೆಕ್ಸಾಂಡರ್ ಶೊನ್ ಕೊ ವಿಸ್ಕಿ ತಡೆದರು. ೧೩ ನೆ ನಿಮಿಷದಲ್ಲಿ ಅಲೋನ್ಸ್ , ತಂಡದ ಮೊದಲ ಗೋಲ್ ದಾಖಲಿಸಿದರು.ಕ್ಯಾನಿ ಫರ್ನಾಡೆಸ್ ಮೂಲೆಯಿಂದ ಹೊಡೆದ ಚೆಂಡನ್ನು ಕ್ಯಾಬಿ ಅಲೋನ್ಸ್ ಆಕರ್ಶಕವಾಗಿ ಮುನ್ನಡಿಸಿ ಉಕ್ರೇನಿನ ರಕ್ಷಣಾ ಆಟಗಾರನ ಗುರಿ ತಪ್ಪಿಸಿ ಗೋಲ್ ಬಾರಿಸಿದರು. ೧೭ ನೆ ನಿಮಿಷದಲ್ಲಿ ಡೇವಿಡ್ ವಿಲ್ಲ, ಒದ್ದ ಚಿಂಡು ೨-೦ ನಿಂದ ಸ್ಪೈನ್ ಮುನ್ನಡೆ ಪಡೆಯಿತು.ವಿರಾಮದ ವೇಳೆಗೆ ಸ್ಕೊರ್ ೨-೦ ಮುನ್ನಡೆ ಇತ್ತು.
ದ್ವಿತಿಯಾರ್ಧದ ಆಟ ಆರಂಭವಾಗಿ ೩ ನಿಮಿಷಗಳ ನಂತರ ಸ್ಪೆನ್ ಆಟಗಾರ ಡೇವಿಡ್ ವಿಲ್ಲ ತನ್ನ ಎರಡ್ನೆಯಗೊಲ್ ಚಚ್ಚಿದನು.ಸ್ಪೈನ್ ಮುನ್ನಡೆದು ೩-೦ ಆಯಿತು.ಮತ್ತೆ ೮೧ ನೆ ನಿಮಿಶದಲ್ಲಿ ಟೋರೆಸ್ ಒಂದು ಗೋಲು ಹೊಡೆದರು. ಉಕ್ರೆನ್ ಆಟಗಾರರು ಗೊಲ್ ಮಾಡಲು ೨ ಬಾರಿ ಪ್ರಯತ್ನಿಸಿ ವಿಫಲಗೊಂಡು ಕ್ರೀಡಾಂಗಣದಿಂದ ನಿರ್ಗಮಿಸಿದರು.ಹಾಲಿ ಇದುವರೆಗೆ ನಡೆದ ಕ್ರೀಡೆ ಗಳಲ್ಲಿ ಅತ್ಯಂತ ಹೆಚ್ಚು ಗೋಲ್ ಬಾರಿಸಿದ ಶ್ರೇಯಸ್ಸು (೪ ಗೋಲ್ ಗಳು) ಈಗ ಸ್ಪೈನಿಗೆ ಬಂದಿದೆ !
ಮಧ್ಯ ರಾತ್ರಿಯಲ್ಲಿ ನಡೆದ 'ಎ' ಗ್ರುಪಿನ ಆಟದಲ್ಲಿ ಡೋರ್ಟ್ಮಂಡ್ ನಲ್ಲಿ ನಡೆದ ಜರ್ಮನಿ ವಿರುದ್ಧ ಪೋಲೆಂಡಿನ ಮ್ಯಾಚಿನಲ್ಲಿ, ಪ.ಜರ್ಮನಿ (೧-೦) ಗೊಲ್ ನಿಂದ ಜಯಭೇರಿ ಹೊಡೆದಿದೆ. ಬದಲಿಯಾಗಿ ಆಟವಾಡಲು ಕ್ರೀಡಾಂಗಣಕ್ಕೆ ಬಂದ, ಆಲಿವರ್ ನೆಯುವಿಲ್ಲೆ ಯವರ ಮಿಂಚಿನಗೋಲ್ ನಿಂದ ಜರ್ಮನಿ ಮುನ್ನಡೆ ಪಡೆಯಿತು. ಇದು ಜರ್ಮನಿಗೆ ೩ ಅಂಕಗಳನ್ನು ತಂದು ಕೊಟ್ಟಿದೆ. ಅವರ ಗೋಲ್ ನಿಂದ ಜರ್ಮನಿಯ ಜನತೆ ಸಂತೋಷದಿಂದ ನರ್ತಿಸಿದರು. ೬೫,೦೦೦ ಪ್ರೆಕ್ಷಕರಿಂದ ಗುಯ್ಗುಟ್ಟುತ್ತಿದ್ದ ಕ್ರೀಡಾಂಗಣದಲ್ಲಿನ ಹರ್ಷೋದ್ಗಾರ , ಮುಗಿಲನ್ನು ಮುಟ್ಟಿತ್ತು ! ಜರ್ಮನಿ ಮತ್ತು ಪೋಲೆಂಡು ಅನೇಕಬಾರಿ (೧೪ ಸಲ) ಸೆಣೆಸುವ ಪರಿಸ್ಥಿತಿ, ೮೫ ವರ್ಷಗಳ ದೀರ್ಘ ಇತಿಹಾಸ ದಲ್ಲಿದ್ದರು, ಒಂದು ಬಾರಿಯಾದರೂ ಪೋಲೆಂಡ್ ಜಯ ಗಳಿಸಿರಲಿಲ್ಲ. ಪೋಲೆಂಡಿನ ಗೋಲಿ, ಆರ್ಟರ್ ಬೋರುಕ್, ೨ ಬಾರಿ ಗೊಲ್ ಹೊಡೆಯಲು ಪ್ರಯತ್ನಿಸಿದ ಲಹಂ ಮತ್ತು ನೆಯುವಿಲ್ಲೆ ಯನ್ನು ತಡೆದರು.