ಕೆರೆಬಿಯನ್ ನ ಅತಿಚಿಕ್ಕದೇಶಗಳಾದ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಇಂಗ್ಲೆಂಡ್ ನ ತಲೆ ತಿಂದವು !
"ಫಿಫಾ ವಿಶ್ವಕಪ್ಪಿನಲ್ಲಿ" ನೆನ್ನೆ ನಡೆದ ಮ್ಯಾಚ್ ಗಳ ವಿವರಗಳು:
೧. 'ಬಿ' ಗ್ರುಪ್ ನಲ್ಲಿ ಫ್ರಾಂಕೆನ್ ಸ್ಟೆಡಿಯಮ್ ನ್ಯುರೆಮ್ಬರ್ಗ್ ನಲ್ಲಿ ನಡೆದ ಇಂಗ್ಲೆಂಡ್ ವಿರುಧ್ಹ ಟ್ರಿನಿಡಾಡ್ ಟೊಬ್ಯಾಗೊ ಮ್ಯಾಚಿನಲ್ಲಿ ಇಂಗ್ಲೆಂಡ್ (೨-೦) ಗೋಲಿನಿಂದ ಜಯಗಳಿಸಿ ಮುಂದೆ ಹೆಜ್ಜೆ ಹಾಕಿದೆ.ಗೋಲ್ ಹೊಡೆಯುವ ಸುವರ್ಣಾವಕಾಶಳನ್ನು ಉಪಯೋಗ ಪಟ್ಟುಕೊಳ್ಳಲಾಗದೆ ಬೇಸತ್ತ ಇಂಗ್ಲೆಂಡ್, ೮೦ ನಿಮಿಷಗಳಕಾಲ ಹೀಗೆಯೆ ಒದ್ದಾಡಿ ೮೩ ನೆ ನಿಮಿಷದಲ್ಲಿ ದಿನದ ಪ್ರಥಮ ಗೋಲ್ ಹೊಡೆಯುವಲ್ಲಿ ಸಮರ್ಥರಾದರು.ಕಪ್ತಾನ್ ಬೆಕ್ ಹೆಮ್ (೬') ಒದ್ದ ಚೆಂಡನ್ನು ತಲೆಕೊಟ್ಟು ನೂಕಿ ಪಿಟರ್ ಕ್ರೋಚ್ (೬'.೬")ಗೊಲ್ ಮಾಡಿದರು. ಅವರ ಸಹಪಾಠಿ ಸ್ಟಿವೆನ್ ಗೆರಾರ್ಡ್ (೬'.೨")೯೧ ನೆ ನಿಮಿಷದಲ್ಲಿ ಇನ್ನೊಂದು ಗೋಲ್ ಬಾರಿಸಿದರು.ಟೀಮಿನ ಅತಿ ಕಿರಿಯ ಆಟಗಾರ(೨೧ ವರ್ಷ), ಸ್ಟ್ರೈಕರ್ ವೆಯಿನ್ ರೂನಿ ೫೮ ನೆ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದು ಹೊಸ ಹುರುಪನ್ನು ಕೊಟ್ಟರು.
೨. 'ಬಿ' ಗ್ರುಪ್ ನ ಎರಡನೆ ಯ ಪಂದ್ಯ ಬರ್ಲಿನ್ ನ ಒಲಂಪಿಕ್ ಸ್ಟೇಡಿಯಮ್ ನಲ್ಲಿ ನಡೆದ ಸ್ವಿಡನ್ ವಿರುಧ್ದ ಪರಗ್ವೆ ನಡೆದು ಸ್ವಿಡನ್ ( ೧-೦) ಗೊಲಿನ ವಿಜಯದಿಂದ ಮುನ್ನಡೆದಿದೆ.
೮೯ ನೆ ನಿಮಿಷದಲ್ಲಿ ಬದಲಿ ಆಟಗಾರ ಸ್ಟ್ರೈಕರ್ ಮಾರ್ಕಸ್ ಅಲ್ಲಬೆಕ್ (೫'.೧೧")ಒದ್ದ ಚೆಂಡನ್ನು ಮಿಡ್ ಫಿಲ್ಡರ್ ಫ್ರೆಡರಿಕ್ ಲ್ಯುಂಗ್ ಬರ್ಗ್ (೫'.೯") ಹೆಡ್ ಮಾಡಿ ಗೊಲಿಗೆ ಕಳಿಸಿದರು.ಬರ್ಲಿನ್ ನ ೫೦ ಸಾವಿರ ಫುಟ್ಬಾಲ್ ಪ್ರೆಮಿಗಳು ಹಳದಿ ನೀಲಿ ಬಣ್ಣದ ಉಡುಪಿನಿಂದ ಅಲಂಕೃತರಾಗಿ ಜಯಘೋಷಗಳಿಂದ ಕ್ರೀಡಾಂಗಣದಲ್ಲಿ ಅವರ ಧ್ವನಿಯೇ ಕೇಳಿಸುತ್ತಿತ್ತು.ಹೋದವಾರ ನಡೆದ ಪ್ರಾರಂಭದ ಮ್ಯಾಚಿನಲ್ಲಿ ಡ್ರಾ ಮಾಡಿ ಕೊಂಡಿದ್ದರು.ಈಗ ಮುಂದಿನ ರೌಂಡಿಗೆ ಹೋಗಲು ಅರ್ಹತೆ ಪಡೆದು ಕೊಂಡಿದ್ದಾರೆ.
೩. 'ಎ' ಗ್ರುಪ್ ನಲ್ಲಿ ನಡೆದ ದಿನದ ಕೊನೆಯ ಮ್ಯಾಚಿನಲ್ಲಿ, ಹ್ಯಾಂಬರ್ಗ್ ನಲ್ಲಿ ಆಡಿದ, ಇಕ್ವೆಡಾರ್ ವಿರುಧ್ದ ಕೋಸ್ಟರಿಕ ತಂಡದ ಸ್ಪರ್ಧೆ ಯಲ್ಲಿ ಇಕ್ವೆಡಾರ್ ೨ ನೆಬಾರಿ (೩-೦) ಜಯಭೇರಿಗಳಿಸಿ ಮನ್ನುಗ್ಗಿದೆ.
೮ನೆ ನಿಮಿಷದಲ್ಲಿ ಕಾರ್ಲೋಸ್ ಟೆನೊರಿಯ (೬'); ಅವರನ್ನು ಎಲ್ಲರು 'ಸ್ಪೈಡರ್ ಮ್ಯಾನ್' ಎಂದು ಸಂಭೋದಿಸುತ್ತಾರೆ ! ೫೪ ನೆ ನಿಮಿಷದಲ್ಲಿ ಅಗಸ್ಟಿನ್ ಡೆಲ್ ಗ್ಯಾಡೊ (೬'.೨") ತಲಾ ಒಂದು ಗೋಲ್ ತಾಗಿಸಿದರು.೯೨ ನೆ ನಿಮಿಷದಲ್ಲಿ ಇವಾನ್ ಕಾವಿಯಡೆಸ್ (೬') ಮತ್ತೊಂದು ಗೋಲ್ ಬಾರಿಸಿ ಇಕ್ವೆಡಾರ್ ಧ್ರುಡವಾಗಲು ಸಹಾಯಮಾಡಿದರು.
ಈಗಿನ ಪಂದ್ಯಗಳ ಫಲಿತಾಂಷಗಳ ಆಧಾರದ ಮೇಲೆ, ಪೊಲೆಂಡ್ ಹಾಗೂ ಕೊಸ್ಟರಿಕ ತಂಡಗಳು ಸ್ಪರ್ಧೆಯಿಂದ ಹೊರಗುಳಿಯುತ್ತವೆ.
ಇಂದು ಶುಕ್ರವಾರ, ಜೂನ್ ೧೬, ೨೦೦೬ ರಂದು 'ಫಿಫಾಕಪ್ಪಿ'ನಲ್ಲಿ ಕಾದುವ ಟೀಮ್ ಗಳು :
ಸಾ.೬-೩೦ - ಅರ್ಜೆಂಟೈನ ವಿರುಧ್ದ ಸರ್ಬಿಯ ಮತ್ತು ಮಾಂಟೆನೆಗ್ರೊ 'ಸಿ' ಗ್ರುಪ್
ರಾ.೯-೩೦ - ನೆದರ್ ಲ್ಯಾಂಡ್ಸ್ ವಿರುಧ್ದ ಐವರಿ ಕೋಸ್ಟ್ 'ಸಿ' ಗ್ರುಪ್
ಮ.ರಾ.೧೨-೩೦ - ಮೆಕ್ಸಿಕೊ ವಿರುಧ್ದ ಆಂಗೋಲ 'ಡಿ' ಗ್ರುಪ್