ಅ-ಪರಿಚಿತ!

ಅ-ಪರಿಚಿತ!

ನಾಲ್ಕು ದಿನಗಳಿಂದ ಮಳೆ ನಿಂತಿದೆ. ಮಂಗಳೂರಿನಲ್ಲಿ ಮಳೆ ನಿಂತಿದೆ ಅಂದರೆ ಬಿಸಿಲು ಹೆಚ್ಚಿದೆ ಎಂಬ ಅರ್ಥವೂ ಇದೆ!

ಮಳೆ ಬರುತ್ತಿರುವಾಗಲೆಲ್ಲಾ ಹೊರಗೆ ಕಾಲಿಡುವುದಕ್ಕೇ ಬೇಸರವಾಗುತ್ತಿತ್ತು. ಈಗ ಮಳೆ ಬಾರದೆ ಹೊರಗೆ ಹೋಗುವುದಕ್ಕೆ ಮನಸ್ಸಾಗುತ್ತಿಲ್ಲ. ನಿರಂತರವಾಗಿರಬಹುದು ಎಂಬ ಭ್ರಮೆಯನ್ನು ಹುಟ್ಟಿಸುತ್ತಲೇ ಆಗಮಿಸುವ ರಜೆ ಕೂಡಾ ಮಳೆಯಂತೆಯೇ ಮಾಯವಾಗಿಬಿಟ್ಟಿದೆ. ಮತ್ತೆ ಅದೇ ಬಸ್ಸು, ಹಂಪನಕಟ್ಟೆ. ಅಲ್ಲಿಂದ ಮಲ್ಲಿಕಟ್ಟೆ. ಅದೇ ಸಿಸ್ಟರ್‌ಗಳು.

ಬೇಡಾ ಅಂದರೂ ಕೆಲವು ತುಂಟ ಐಡಿಯಾಗಳು ಬರುತ್ತಲೇ ಇರುತ್ತವೆ. ಮೊನ್ನೆ ಹೀಗೇ ಆಯಿತು. ಜ್ಯೋತಿ ಸ್ಟಾಪ್‌ನಲ್ಲಿ ಆತ ಪೇಪರ್‌ ಬ್ಯಾಗ್‌ ಹಿಡಿದುಕೊಂಡು ಬಸ್‌ ಹತ್ತಿದಾಗಲೇ ಇದು `ಅತ್ರಿ'ಯಿಂದ ಹೊರ ಬಂದ ಪ್ರಾಣಿ ಅಂತ ಅರ್ಥವಾಗಿಬಿಟ್ಟಿತು. ಹೆಸರೇ ಇಲ್ಲದ ನನ್ನಣ್ಣನ ಫ್ರೆಂಡ್‌ಗಳಲ್ಲಿ ಯಾರೋ ಒಬ್ಬನನ್ನು ಹೋಲುತ್ತಿದ್ದ ಈ ಪ್ರಾಣಿಯನ್ನು ನೋಡುತ್ತಿದ್ದರೆ ಎಂಥವರಿಗೂ ಕೀಟಲೆ ಬುದ್ಧಿ ಜಾಗೃತವಾಗುತ್ತಿತ್ತು.

ನನ್ನ ಕೀಟಲೆ ಬುದ್ಧಿಯನ್ನು ಎಷ್ಟು ಅದುಮಿಟ್ಟರೂ ಅದು ಕೇಳಿಯೇ ಬಿಟ್ಟಿತು. `ಅತ್ರಿಗೆ ಹೋಗಿದ್ದಿರಾ?'.

ಜಾರುತ್ತಿದ್ದ ಕನ್ನಡಕ ಮೇಲೇರಿಸಿಕೊಂಡು ಅದು `ಹೌ...ಹೌದು' ಎಂದಿತು.

ಆ ಕ್ಷಣ ಅಯ್ಯೋ ಪಾಪ ಎನಿಸಿತಾದರೂ ಮತ್ತೊಂದು ಪ್ರಶ್ನೆ ಬಿಸಾಡಿದೆ. `ಜಯಂತಿ ಸಿಕ್ಕಿದ್ದಳಾ?'

`ಇಲ್ಲ. ಇ..ಲ್ಲ'

`ನನ್ನ ಗುರುತು ಸಿಕ್ಕಿತಾ?'

`?!?!...'

ಅಷ್ಟೊತ್ತಿಗೆ ಆಗ್ನೆಸ್‌ ಸ್ಟಾಪ್‌ ಬಂದಿತ್ತು. ನಾನು ಇಳಿದುಬಿಟ್ಟೆ.
ಜತೆಗಿದ್ದ ಅಮ್ಮಿ ಮಾತ್ರ ಬೈಯ್ಯುತ್ತಲೇ ಇದ್ದಳು: `ನಿಕ್ಕ್‌ ಒರ ಏರಾಂಡಲಾ ಸರೀ ಕಲ್ಪಾವೆರ್‌'

-ಯಾಮಿ
Rating
No votes yet

Comments