ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದ ಸ್ಥಿತಿಗತಿ (ಹಾಸ್ಯ ಲೇಖನ)

ಮಂಜುನಾಥ್ ವಿ modmani @ gmail.com ೨೦೦೨ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೧ 'ಋ" ಅಕ್ಷರವು ಬಳಕೆಯಲ್ಲಿಲ್ಲದ ಕಾರಣ ಹಾಗೂ ಭಾಷೆಯನ್ನು ಸರಳಗೊಳಿಸುವ ಅಂಗವಾಗಿ "ಋ" ಅಕ್ಷರವನ್ನು ಕೈಬಿಡಲಾಗಿದೆ. ಮತ್ತು "ಋ" ಅಕ್ಷರದ ಬದಲಾಗಿ "ರು" ಅಕ್ಷರವನ್ನು ಬಳಸಬಹುದೆಂದು ಈ ಮೂಲಕ ಸರ್ಕಾರವು ಆದೇಶ ಹೊರಡಿಸಿದೆ. ಉದಾಹರಣೆ : ಋಷಿ - ರುಷಿ ಕೃಷ್ಣ - ಕ್ರಿಷ್ಣ ಋತು - ರುತು ಋಜುತ್ವ - ರುಜುತ್ವ ೨೦೦೭ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ. ೨ "ಋ" ಅಕ್ಷರವನ್ನು ಕನ್ನದ ಭಾಷೆಯಿಂದ ಕೈಬಿಡುವುದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತವಾದ ಸರ್ಕಾರ ಕನ್ನಡವನ್ನು ಮತ್ತಷ್ಟು ಸರಳಗೊಳಿಸುವ ದಿಕ್ಕಿನತ್ತ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನಿಡುತ್ತಿದೆ.

ಮರಳ ಮುನಿಯ

ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।

7.22 ಲೋಕಲ್

(ಇದು ನಾನು ದಿನವೂ ಬೆಳಗ್ಗೆ ಹಿಡಿಯುವ ೭.೨೨ರ ಚರ್ಚ್ ಗೇಟ್ ಗೆ ಹೋಗುವ ಲೋಕಲ್ ಟ್ರೈನ್ - ನನ್ನ ಅನುಭವ) ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ ಅದರ ಅನುಭವ ನಿಮಗೇನು ಗೊತ್ತು ಬಿಡಿ ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು

ತೃಣಮಾತ್ರನ ಕನಸು

ತೃಣಮಾತ್ರನ ಕನಸು ಎಲ್ಲ ಕರೆವರೆನ್ನ ತೃಣಮಾತ್ರ ನೋಡುತಿಹೆನು ಯಾವಾಗಲೂ ಕನಸು ಮಾತ್ರ ಕಂಡೆ ಕನಸಲಿ ಎಂಥ ದಿವ್ಯ ದರ್ಶನ ಎಂದೂ ಮಂಕಾಗಿರದ ಕನ್ನಡ ಮಾತೆಯನ್ನ ವಿಶ್ವದೆಲ್ಲೆಡೆ ಕನ್ನಡವೇ ಮನೆ ಮಾತು ಜಾತಿ ಧರ್ಮ ಕುಲವೆಲ್ಲವೂ ಕನ್ನಡಮಯವಾಗಿತ್ತು ಚಿನ್ನ ಬೆಳ್ಳಿ ವಜ್ರ ವೈಢೂರ್ಯಗಳ ಬೀದಿ ವ್ಯಾಪಾರ ಎಂದೆಂದೂ ಎಲ್ಲೆಡೆ ಹಬ್ಬದ ಸಡಗರ ನಿಸರ್ಗದತ್ತ ಸೌಂದರ್ಯ ನೋಡಿದೆಡೆಯೆಲ್ಲಾ

ವೇದಾಂತ ಸಾರಗಳು

ಎನ್ ಬಾಲಸುಬ್ರಹ್ಮಣ್ಯ ಅವರು ಬರೆದಿರೋ 'ವೇದಾಂತ ಸಾರಗಳು' ಎನ್ನುವ ಪುಸ್ತಕದಿಂದ ಆಯ್ದ ಭಾಗಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ ೧೬ನೇ ಶತಮಾನದ ಸದಾನಂದರು ವೇದಂತದ ಸಾರಗಳ ಬಗ್ಗೆ ಬರೆಯುತ್ತಾ ಮಾನವನು ಮಾಡಬೇಕಾದ ಕರ್ಮಗಳ ಬಗ್ಗೆ ಹೀಗೆ ತಿಳಿಸಿದ್ದಾರೆ. ಮಾನವರು ಮಾಡಬೇಕಾದ ಕರ್ಮಗಳನ್ನು ವಿಹಿತ (ಮಾಡಬೇಕಾದದ್ದು) ಮತ್ತು ನಿಷಿದ್ಧ (ಮಾಡಬಾರದ್ದು) ಎಂದು ವಿಭಾಗಿಸಬಹುದು.

ಮಾರವಾಡಿ ಸಂಸಾರ = ಒಂದು ಪ್ರವಾಸ ಕಥನ

ಹೀಗೊಂದು ಮಾರವಾಡಿ ಸಂಸಾರ - ಲಲಿತ ಪ್ರಬಂಧ ಇತ್ತೀಚೆಗೆ ನಾನು ಬೆಂಗಳೂರಿನಿಂದ ಮುಂಬಯಿಗೆ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಉದ್ಯಾನ್ ಎಕ್ಸ್~ಪ್ರೆಸ್~ನಲ್ಲಿ ತುಂಬಾ ಜನ ಗುಜರಾತಿನ ಪ್ರಾಂತ್ಯಕ್ಕೆ ಹೋಗುವವರು ಇರುತ್ತಾರೆ. ಬೆಂಗಳೂರಿನಿಂದ ಮುಂಬಯಿಗೆ ಬಂದು ನಂತರ ಗುಜರಾತಿನ ಕಡೆಗೆ ಹೋಗುತ್ತಾರೆ - ಏಕೆಂದರೆ ಬೆಂಗಳೂರಿನಿಂದ ವಾರಕ್ಕೆ ಎರಡು ದಿನಗಳು ಮಾತ್ರ ನೇರ ಗಾಡಿ ಇರೋದು ಮತ್ತು ಅದರಲ್ಲಿ ಟಿಕೇಟು ಸಿಗೋದು ತುಂಬಾ ಕಷ್ಟ ಅಂತೆ.

ಮಂಕುತಿಮ್ಮ ೪

ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? । ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।। ಅನ್ಯಾಯದುನ್ಮತ್ತ ಕೋಲಾಹಲದ ಲೋಕ । ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।