ಝೆನ್‌ನ ಮಹಾನ್ ಗುರು ಚುಆಂಗ್ ತ್ಸು ಗೆ ಒಮ್ಮೆ ಕನಸು ಬಿತ್ತು. ಕನಸಿನಲ್ಲಿ ಅವನೊಂದು ಚಿಟ್ಟೆಯಾಗಿಬಿಟ್ಟಿದ್ದ. ಅತ್ತಿತ್ತ ಹಾರಾಡುತ್ತಿದ್ದ. ಕನಸು ಇದ್ದಷ್ಟು ಹೊತ್ತೂ ಅವನಿಗೆ ತಾನು ಚುಆಂಗ್ ಎಂಬುದು ಗೊತ್ತೇ ಇರಲಿಲ್ಲ.
ಮೊಬೈಲ್ ಫಿಲಾಸಫಿ ಭಾಗ ೧
1. ನಾವು ಯಾರ ಸಂಪರ್ಕ ಇಟ್ಟುಕೊಳ್ಳಲು ಬಯಸುತ್ತೇವೋ ಅವರು ನಮಗೆ ಬೇಕಾದಗ ನಮ್ಮೊಡನೆ ಇರುವುದಿಲ್ಲ. ಅವರಿಗೆ ಕಾಲ್ ಮಾಡುತ್ತೇವೆ ಅಥವ ಅವರು ನಮ್ಮ ಮೊಬೈಲ್‌ಗೆ ಕಾಲ್ ಮಾಡುತ್ತಾರೆ.
ಪತಂಜಲಿಯ ಯೋಗ ಭಾಗ ೭
ಏಳನೆಯ ಲೇಖನ
ಪತಂಜಲಿಯ ಯೋಗದ ಬಹು ಮುಖ್ಯ ಅಂಶವೆಂದರೆ ಆಚರಣೆ. ಇದರಲ್ಲಿ ಓದಿಗೆ ಅಥವಾ ತಿಳಿಸಿದ ಜ್ಞಾನಕ್ಕೆ ಹೆಚ್ಚು ಬೆಲೆ ಇಲ್ಲ. ತಾತ್ವಿಕ ಚರ್ಚೆಯೊ ಮುಖ್ಯವಲ್ಲ. ಎಲ್ಲಾ ಜ್ಞಾನವನ್ನೂ ಸಾಧಕನು ಮಾಡಿ/ಆಚರಣೆಯಲ್ಲಿತಂದು ಅದು ನಿಜ/ಸತ್ಯ ಎಂದು ಸಾಧನೆ ಮಾಡಿದಾಗ ಮಾತ್ರ ಯೋಗದ ಹಾದಿಯಲ್ಲಿ ಮುಂದುವರೆಯುತ್ತಾನೆ. ಈಗ ಯೋಗದ ಅಷ್ಟಾಂಗಗಳ ಬಗ್ಗೆ ನೋಡೋಣ.
ಕನ್ನಡಕ್ಕಾಗಿ ಲಿನಕ್ಸಿನಲ್ಲಿ 'ಭಾಷಾ ಪ್ಯಾಕ್' ಸಂಪೂರ್ಣವಾಗಿಲ್ಲ. ಇದನ್ನು ಸಂಪೂರ್ಣಗೊಳಿಸಲು 'ಸಂಪದ'ದಲ್ಲಿ ನಿಮ್ಮ ಬ್ರೌಸರಿನಲ್ಲಿಯೇ ಭಾಷಾಂತರ ಮಾಡಲು ಸಾಧ್ಯವಾಗುವಂತಹ ತಂತ್ರಾಂಶವೊಂದನ್ನು ಸ್ಥಾಪಿಸಿದ್ದೇವೆ.
ವಂಶದ ಕುಡಿ - ಭಾಗ ೧
ಪಾಂಡುರಂಗನನ್ನು ಮನೆಮಂದಿ ಮತ್ತು ಸ್ನೇಹಿತರೆಲ್ಲರೂ ಪ್ರೀತಿಯಾಗಿ ಪಾಂಡು ಅಂತ ಕರೆಯುತ್ತಿದ್ದರು. ತುಂಬಾ ಬುದ್ಧಿವಂತ, ಶಾಲಾಕಾಲೇಜುಗಳಲ್ಲಿ ಎಂದೂ ಮೊದಲನೇ ಸ್ಥಾನವನ್ನು ಇತರರಿಗೆ ಬಿಟ್ಟು ಕೊಟ್ಟವನಲ್ಲ. ಬಿ.ಕಾಂ. ಪದವಿಯನ್ನು ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.
ಝೆನ್ ವಿದ್ಯಾರ್ಥಿಗಳು ಕನಿಷ್ಠಪಕ್ಷ ಹತ್ತು ವರ್ಷ ಶಿಷ್ಯವೃತ್ತಿ ಮಾಡಿದ ಮೇಲಷ್ಟೆ ಇತರರಿಗೆ ಬೋಧಿಸುವ ಗುರುಗಳಾಗುತ್ತಾರೆ. ತೆನೋ ಎಂಬಾತ ತನ್ನ ಶಿಷ್ಯವೃತ್ತಿ ಮುಗಿಸಿ ಗುರುವಾಗಿ ಹಿರಿಯ ನಾನ್ ಇನ್ ಬಳಿಗೆ ಬಂದಿದ್ದ. ಅಂದು ಬಹಳ ಮಳೆ. ತೆನೋ ಹೊರ ಕೋಣೆಯಲ್ಲಿ ತನ್ನ ಮರದ ಚಪ್ಪಲಿಗಳನ್ನೂ ಕೊಡೆಯನ್ನೂ ಇಟ್ಟು ಒಳಬಂದು ನಾನ್ ಇನ್‌ಗೆ ನಮಸ್ಕರಿಸಿದ. “ನಿನ್ನ ಚಪ್ಪಲಿ ಮತ್ತು ಕೊಡೆ ಹೊರಗೆ ಬಿಟ್ಟು ಬಂದಿದ್ದೀಯೆ. ನಿನ್ನ ಕೊಡೆ ಚಪ್ಪಲಿಗಳ ಎಡಗಡೆಗೆ ಇದೆಯೋ, ಬಲಗಡೆಗೋ?” ಎಂದು ನಾನ್ ಇನ್ ಕೇಳಿದ.