ಬೇಸಿಗೆ ಬಂದಿದೆ :

ಬೇಸಿಗೆ ಬಂದಿದೆ :

೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ

ಆತ್ಮೀಯ ಸಂಪದದ ಸ್ನೇಹಿತರೇ,
ಬೇಸಿಗೆ ಬಂದಿದೆ. ಆಹಾರದಲ್ಲಿ ಎಚ್ಚರ ವಹಿಸಿ. ಹೊರಗಡೆ ಏನನ್ನೂ ತಿನ್ನಲು ಹೋಗಬೇಡಿ. ಅದರಲ್ಲೂ ಎಣ್ಣೆ ಹಾಕಿದ ತಿಂಡಿಗಳು, ಮಸಾಲೆ ದೋಸೆ ಇತ್ಯಾದಿ, ಪಾನೀ ಪೂರಿ ಇತ್ಯಾದಿ, ಐಸ್ ಕ್ರೀಂ ಇವನ್ನೆಲ್ಲಾ ತಿನ್ನಲು ಹೋಗಬೇಡಿ. ಧಾರಾಳವಾಗಿ ಸಿಹಿ ಹಣ್ಣಿನ ರಸ ಕುಡಿಯಿರಿ. ಶುದ್ಧವಾದ ನೀರು ಯಥೇಚ್ಚವಾಗಿ ಕುಡಿಯಿರಿ. ಇಲ್ಲದಿದ್ದರೆ ಚೆನ್ನಾಗಿ ಕಾಯಿಸಿ ಆರಿಸಿರುವ ನೀರನ್ನೂ ಬೇಕಾದರೂ ಕುಡಿಯಬಹುದು. ಹೊಟ್ಟು ಸಮೇತ ಇರುವ ಧಾನ್ಯಗಳನ್ನು, ಅಂದರೆ ಪಾಲೀಶ್ ಮಾಡದಿರುವ ಕೆಂಪಕ್ಕಿ, ಹೊಟ್ಟು ತೆಗೆಯದೆ ಇರುವ ಗೋಧಿ, ಹೆಸರು ಕಾಳು, ಕಡ್ಲೆ ಕಾಳು ಇತ್ಯಾದಿ, ಎಲ್ಲಾ ತರಹದ ಮೊಳಕೆ ಬರಿಸಿದ ಕಾಳುಗಳ ಸೇವನೆಯನ್ನು ಮಾಡಿರಿ. ಪಾಲೀಶ್ ಮಾಡದೇ ಇರುವ ಕೆಂಪಕ್ಕಿ ಯನ್ನು ಊಟ ಮಾಡಿದರೆ ಈ ಕಡು ಬಿಸಿಲ ಬೇಗೆಯನ್ನು ಖಂಡಿತವಾಗಿ ಎದುರಿಸಬಹುದು. ಸುಸ್ತಾಗುವುದಿಲ್ಲ ಮತ್ತು ಸಂಕಟವಾಗುವುದಿಲ್ಲ.
ನರಗಳಿಗೆ ಶಕ್ತಿಯನ್ನು ತುಂಬಬೇಕಾಗಿದ್ದರೆ ಯಾವುದೇ ತರಹದ ಮಾತ್ರೆಗಳನ್ನು ಸೇವನೆ ಮಾಡಬೇಡಿ. ಸ್ವಂತ ಅನುಭವದಿಂದ ಇದನ್ನು ಬರೆದಿದ್ದೇನೆ. ನಿಮ್ಮ ಆರೋಗ್ಯವನ್ನು ಈ ತರಹ ಕಾಪಾಡಿಕೊಳ್ಳಿ. ಇದನ್ನೆಲ್ಲಾ ನೀವುಗಳು ಪಾಲಿಸಿದರೆ ನಿಮಗೇ ಅನುಭವವಾಗುತ್ತದೆ.
ಸತ್ಯಪ್ರಕಾಶ್.ಹೆಚ್.ಕೆ.
೯೮೮೬೩ ೩೪೬೬೭
arogyasathya@yahoo.co.in
satyaprakash.hk@gmail.com
satya.prakash@rhm.co.in

Rating
No votes yet