ಅಜೇಯನ ರಂಗ ಪ್ರವೇಶ

ಅಜೇಯನ ರಂಗ ಪ್ರವೇಶ

Comments

ಬರಹ

ಸಂಪದಕ್ಕೆ ನನ್ನ ರಂಗ ಪ್ರವೇಶ ಇಂದೇ.. ಅದಕ್ಕೆ ಈ ಸ್ವ-ಪರಿಚಯ...

ನನ್ನ ಹೆಸರು: ಅಜೇಯ ಕುಮಾರ ... ಚಿಕ್ಕಮಗಳೂರು ಜಿಲ್ಲೆ.. ಬಾಲ್ಯ ಕಳೆದಿದ್ದೆಲ್ಲ ಬಾಳೆಹೊನ್ನೂರಿನ ಹತ್ತಿರದ ಜೇನುಗದ್ದೆಯ ಕಾಫಿ ತೋಟದ ಕಾಡಿನ ಮಡ್ಯದ ಒಂದು ಹಳ್ಳಿಯಲ್ಲಿ...ನಮ್ಮ ಹಳ್ಳಿಯಿಂದ ಬಸ್ ಗಾಗಿ ಸಹ ೭-೮ ಮೈಲಿ ಕಾಡಲ್ಲಿ ನಡೆದು ಬರಬೇಕು.. ಹಾಗಂತ ಕಾಡು ಮನುಷ್ಯ ಎಂದುಕೊಳ್ಬೇಡಿ...

ಓದಿದ್ದೆಲ್ಲ ಸರಕಾರಿ ಶಾಲೆಗಳಲ್ಲೆ... ಮೊದಲು ನಮ್ಮ ಹಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ...ಏಕೊಪಾಧ್ಯಾಯ ಶಾಲೆ...ವಾರದಲ್ಲಿ ಮೂರು ದಿನ ನದೆದರೆ ಹೆಚ್ಚು...ಮಳೆಗಾಲದಲ್ಲಿ ವಾರಗಟ್ಟಲೆ ರಜಾ..(ಹೊಟ್ಟೆಕಿಚ್ಚು ಪಡಬೇಡಿ)..ಒಟ್ಟು ನಾಲ್ಕೂ ತರಗತಿ ಸೇರಿ ೧೫ ಮಕ್ಕಳು ಇದ್ದರೆ ಹೆಚ್ಚು...

ಆಮೇಲೆ ಮುತ್ತಜ್ಜಿ ಮನೆಯಲ್ಲಿದ್ದುಕೊಂಡು ೫ನೆ ತರಗತಿ ..ಹರಿಹರಪುರ ಅಂತ ತುಂಗೆಯ ತಟದ ಚಿಕ್ಕ ಸುಂದರ ಊರು...ಶೃಂಗೇರಿ ಹತ್ತಿರ....  ಹೊಸ ಪರಿಸರಕ್ಕೆ ಹೊಂದಿಕೊಳ್ಳುವಷ್ಟರಲ್ಲಿ ಒಂದು ವರುಷ ಕಳೆದೇ ಹೊಯಿತು...

೬ನೆ ತರಗತಿಗೆ ಜವಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆ ಆದೆ...ಆರರಿಂದ ೧೨ರ ವರೆಗೆ ಅಲ್ಲೆ... ಉಚಿತ ವಸತಿ ಶಾಲೆ.. ಊಟ ಬಟ್ಟೆ ವಸತಿ ಎಲ್ಲ ಉಚಿತ.. ಅತ್ಯುತ್ತಮ CBSE ಶಿಕ್ಷಣ.. ನನ್ನ ಈಗಿನ ಜೀವನದ ಮೆಲೆ ಅಲ್ಲಿನ ಪ್ರಭಾವ ಹೆಚ್ಚಿನದು... ಅಲ್ಲಿದ್ದಗ "ಚಿಗುರು" ಎಂಬ ಏಕ ಪ್ರತಿ ಕನ್ನಡ ಪತ್ರಿಕೆಯ  ಸಂಪಾದಕ ,ಪ್ರಕಾಶಕ.. ಸಾಕಷ್ತೆ ಓದುಗರಿದ್ದ.. ಬರಹಗಾರರಿದ್ದ ಪಾಕ್ಸ್ಷಿಕ ಪತ್ರಿಕೆ.. ಶಿಕ್ಶಕರು.. ಎಲ್ಲ ವಿದ್ಯಾರ್ಠಿಗಳೂ ಅದರಲ್ಲಿ ಬರೆಯೊತ್ತಿದ್ದರು..ನನ್ನ ನವೋದಯ ಕಾಲ :-)

ಅಮೇಲೆ ಹಾಸನದಲ್ಲಿ ಮಲೆನಾದು ತಾಂತ್ರಿಕ ಕಾಲೇಜಿನಲ್ಲಿ ಎಂಜಿನಿಯರಿಂಗ್...ಈಗ ಆ ಕಾಲೇಜು ಬೆರೆ ವಿಷಯಗಳಿಗೆ "famous" ಆಗಿದ್ದರೂ..ಮೈಸೂರು ವಿಶ್ವವಿದ್ಯಾನಿಲಯದ ಕಾಲದಲ್ಲಿ.. ಸಾಕಷ್ಟೆ ಒಳ್ಳೆ  ಕಾಲೇಜು...campus interview ನಲ್ಲಿ ಬೆಂಗಳೂರಿನಲ್ಲಿ ಒಳ್ಳೆ ಕೆಲಸವನ್ನೂ ಗಿಟ್ಟಿಸಿ ಕೊಟ್ಟಿತು...

software ಲೋಕದಲ್ಲಿ ಪ್ರಚಲಿತದಲ್ಲಿರುವಂತೆ ನಾನೂ ಈಗ ಆ companyಯಲ್ಲಿ ಇಲ್ಲ.. ೫ನೆ ವರುಷ...ಎರದನೆ company..ಇದೂ ಬೆಂಗಳೂರಿನ ಕಂಪನಿಯೆ ... ಈಗ ನ್ಯೂಯಾರ್ಕ್ ಗೆ ಕೆಲಸದ ಮೇಲೆ ಬಂದಿರುವೆ...

ನನ್ನ ಬಗ್ಗೆನೆ ಕೊರೆತ ಜಾಸ್ತಿ ಆಯಿತೆಂದು ನನಗೇನೆ ಅನ್ನಿಸಿತ್ತಿರುವುದರಿಂದ...ಇಲ್ಲೆ ಮೊಟಕಿಸುವೆ...

ಅಜೇಯ---

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet