ಯೋಗಿ??
ಯೋಗಿ??
ಎನ್ನ ಜನ್ಮಕ್ಕೆ ಕಾರಣರೆನ್ದು ಗೌರವವಿಲ್ಲ
ಎನ್ನ ನೀರೆರೆದು ಸಾಕಿ ಸಲಹಿದರೆಮ್ಬ ನನ್ನಿಯಿಲ್ಲ
- Read more about ಯೋಗಿ??
- Log in or register to post comments
ಯೋಗಿ??
ಎನ್ನ ಜನ್ಮಕ್ಕೆ ಕಾರಣರೆನ್ದು ಗೌರವವಿಲ್ಲ
ಎನ್ನ ನೀರೆರೆದು ಸಾಕಿ ಸಲಹಿದರೆಮ್ಬ ನನ್ನಿಯಿಲ್ಲ
"Indian Folklore epics" ಎಂಬ ಪುಟದಲ್ಲಿ ಮಂಗಳೂರಿನವರಾದ ರಾಮಚಂದ್ರನ್, ಕನ್ನಡದ ಕೆಲವು ಜಾನಪದ ವೀರಕಾವ್ಯಗಳ ಬಗ್ಗೆ ಟಿಪ್ಪಣಿಗಳನ್ನು ಬರೆದಿದ್ದಾರೆ.
ಡಾ. ರಾಘವೇಂದ್ರ ರಾವ್ ಅವರು ನಡೆಸಿಕೊಂಡು ಬರುತ್ತಿರುವ ಅನನ್ಯ ಸಂಸ್ಥೆ ಎಷ್ಟು ಜನರಿಗೆ ಗೊತ್ತು? ಅವರದೊಂದು ವಿಶಿಷ್ಟ ರೀತಿಯ ಕಲಾಸೇವೆ.
ಕೆಲವರು ಎಲ್ಲಿ ಏನು ಬರೆದರು ಕೊನೆಗೆ ಒಂದೆರಡು lineಗಳು ಬರುತ್ತವಲ್ಲ... ಅದು ಹೇಗೆ set ಮಾಡೊದು? ಕೆಳಗಿರುವುದನ್ನು ನಾನು copy-paste ಮಾಡಿದ್ದಿನಿ, ಆದರೆ... ಈ ತರಹ: ---------------------------
ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ.
ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ. ಆದರೆ ಇತ್ತೀಚೆನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿಯ ವಾತಾವರಣ ಕಡಿಮೆ ಆಗುತ್ತಿದೆ. ಬೆಳಗಾವಿಯ ಮರಾಠಿ ಭಾಷಿಗರು ಕನ್ನಡಿಗರ ಜೊತೆಗೆ ಸೌಹಾರ್ದತೆಯಿಂದ ಬಾಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅದು ಅವರಿಗೆ ಅನಿವಾರ್ಯವೂ ಮತ್ತು ಅಗತ್ಯವೂ ಆಗಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಕೂಗು ಸತ್ತು ಹೋಗಿದೆ. ಇದರಿಂದಾಗಿಯೇ ಭಾಷೆಯ ಆಧಾರದ ಮೇಲೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಒಂದೇ ಅಜೆಂಡಾದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಎಂ.ಇ.ಎಸ್, ನೆಲ ಕಚ್ಚಿದೆ. ಇತ್ತೀಚೆನ ಕೆಲವು ವರ್ಷಗಳಲ್ಲಿ ಬೆಳಗಾವಿಯ ಮೇಯರ್ ಆಗಿ ಕನ್ನಡದ ಶ್ರೀ ಸಿದ್ದನಗೌಡ ಪಾಟೀಲರು ಕಾರ್ಯ ನಿರ್ವಹಿಸಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ನಗರ ಪಾಲಿಕೆ ಸಾಕಷ್ಟು ಬಾರಿ ನಿರ್ಣಯ ತೆಗೆದುಕೊಂಡಿದೆ. ಆನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಅವರ ನಿರ್ಣಯಕ್ಕೆ ತುಂಬಾ ಪ್ರಚಾರ ಸಿಕ್ಕಿದ್ದು ಈ ಸಲವೇ ಇರಬೇಕು. ಇರಲಿ, ಅವರ ನಿರ್ಣಯದ ವಿರುದ್ಧ ಧರಣಿ, ಸತ್ಯಾಗ್ರಹ, ಮೆರವಣಿಗೆ, ಪ್ರತಿಕೃತಿ ದಹನ, ಬಂದ್ ಎಲ್ಲವೂ ಸರಿ. ಆದರೆ, ಮೇಯರ್ ಗೆ ಕಪ್ಪು ಮಸಿ ಬಳಿದು, ಅದರ ಮೂಲಕ ಪ್ರತಿಭಟನೆ ವ್ಯಕ್ತ ಪಡಿಸಿದ್ದು ಕನ್ನಡದ ಹೋರಾಟಕ್ಕೇ ಮಸಿ ಬಳಿದಂತೆ. ಇದರಿಂದ ಆಗಿದ್ದೇನು? ಬೆಳಗಾವಿಯ ನಮ್ಮ ಗೆಳೆಯರು ಹೇಳಿದ್ದು, "ಸತ್ತು ಹೋದ ಎಂ.ಇ.ಎಸ್ ಗೆ ಜೀವ ತುಂಬಿದರು". ಈ ಕುರಿತು ಚಂಪಾ ಆದಿ ಎಲ್ಲಾ ಸಾಹಿತಿ ವರೇಣ್ಯರು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ
ಪಿಕ್ನಿಕ್ ಹೊರಟಿತ್ತು ನೂರು ಮಕ್ಕಳ ದಂಡು
ಅತ್ತಿಂದಿತ್ತ ಪುಟಿಯುತ್ತಿತ್ತು ಚೆಂಡು
ಟ್ರೈನಿನಲ್ಲೆಲ್ಲಾ ಇವರದೇ ದಾಂಧಲೆ
ಸಂಪದದಲ್ಲಿ ಸಕ್ರಿಯರಾಗಿರುವ, 'ಪ್ರಕಾಶಕ'ರೆಂದು ಚಿರಪರಿಚಿತರಾಗಿರುವ [:http://sampada.net/user/50|ಪ್ರಕಾಶ್ ಶೆಟ್ಟಿಯವರಿಗೆ] ಇತ್ತೀಚೆಗೆ ಮುಂಬೈನಲ್ಲಿ ಸನ್ಮಾನಿಸಿ ಗೌರವಿಸಲಾಯಿತಂತೆ... ಸುದ್ದಿ ಚುಟುಕು ನನ್ನ ಬಳಿಗೆ ಬಂತು. ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದೇನೆ. ಓದಿ:
"ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು. ಸಂಪದ ಬಳಗ ಇವರ ಸಂದರ್ಶನವನ್ನು ಪ್ರಸ್ತುತಪಡಿಸುತ್ತಿದೆ. ಚಂದ್ರಶೇಖರ ಕಂಬಾರರ ಸಂದರ್ಶನ ನಡೆಸಿಕೊಟ್ಟವರು: ಎನ್.ಎ.ಎಂ.ಇಸ್ಮಾಯಿಲ್.
ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (18 MB) ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ ಸಂಪದದಲ್ಲಿ ಕಾಮೆಂಟ್ ಮೂಲಕ ನೀವು ಸೇರಿಸಬಹುದು.