ಆಟ...ಪರದಾಟ!

ಆಟ...ಪರದಾಟ!

ಬರಹ

ಹನಿ ನೀರಿಗಾಗಿ ಪರದಾಟ,ಮರಳುಗಾಡಲಿ ನಿಂತು ಸರೋವರ ನೊಡುವುದಿನ್ನೆಂತು? ಏನಿದ್ದರೂ ಹುಡುಕಾಟ ಆ ಓಯಾಸಿಸ್ ಗಾಗಿ, ಜೀವಹಿಡದಿಡಲು ಅಲ್ಲೆಲ್ಲೋ ನಿಂತ ನೀರಿಗಾಗಿ. ಕಾಲಿಟ್ಟರೆ ತಿರುವು ಮರುವು,ಆಳಕಿಳಿವ ಅನುಭವ. ಏಳಲು ಬೆಕು ಬಲ ಪ್ರಭಾವ.ಎನಿದೆ ಅದಕ್ಕೊಂದು ಅರ್ಥ? ಗಾಳಿ ಬೀಸಿದೆಡೆಗೆ ಪಯಣ,ಕೊನೆಗದೆಲ್ಲೊ ಮೂಡುವ ಒಂದು ರಾಶಿ . ತೊದಲು ನುಡಿವ ಮಗು ದಿನವೂ ಕಟ್ಟುವ ಸಮುದ್ರ ದಡದ ಮನೆಯಂತೆ!ಆದರೆ ಇಲ್ಲಿ ತೆರೆಗಳಿಲ್ಲ ಅಳಿದು ಹೋಗಲು.ಬಳವಣಿಗೆಯೆಂಬ ಹೆಜ್ಜೆಯೆಡಿ ಹೊಸಕಿ ಹೋಗಬಾರದಷ್ಟೇ..!

ರಾಜಕೀಯವೆಂಬ ಪಕ್ಷ ಪಕ್ಷ ಗಳ ಪಗಡೆಯಾಟ ಆಳಿಸಿಕೊಳ್ಳಲೆಂದೇ ಆರಿಸ ಕಳಿಸಿದವರ ಕೈಯ್ಯಲ್ಲಿ ಪಗಡೆಗಳೂ ನಾವೇ,ಸೋಲು ಗೆಲುವುಗಳ ಅಟ್ಟಹಾಸ ದಟ್ಟ ಮೌನಗಳಿಗೆ ಪಣಕ್ಕಿದ್ದವರೂ ನಾವೇ..!

ರೈತರೇ ಭವ್ಯ ಭಾರತದ ಬೆನ್ನೆಲುಬು ಅನ್ನುವುದಂತೂ ಸತ್ಯ.ಅದಕ್ಕಾಗೇ ಅಲ್ಲವೆ ಅಧಿಕಾರವನ್ನು ದೇಹವಾಗಿಸಿಕೊಂಡು ಬೆನ್ನಮೇಲೆ ಮಲಗುವುದು.ಆಸೆಯೆಂಬ ಬುನಾದಿಯಲ್ಲಿ ಭರವಸೆ ಗಳೆಂಬ ಪಕ್ಕೆಲುಬುಗಳ ಜೋಡಿಸಿ ನಿಂತಿರುವುದು.ನರ ನರಗಳು ರವಾನಿಸುವ ಸಂದೆಶಗಳಿಗೆ ಜೀವವೆನ್ನುವಂತೆ ಅಷ್ಟೋ ಇಷ್ಟು ಮನವೊಲಿಕೆಯೆ ರಕ್ತ ಸಂಚಲನ.

ಹಸಿದ ಹೊಟ್ಟೆಯನ್ನಿಟ್ಟು ಆ ಮೆದುಳು ತಾನೇ ಅದೆಷ್ಟು ಹೊತ್ತು ಕೆಲಸ ಮಾಡಬಹುದು? ಅದಿನ್ನೆಂತ ಯಂತ್ರದಂತಾ ಮಾನವನಾದರೂ ನಡೆಸಲು ವಿದ್ಯುತ್ ನಂತಹ ಶಕ್ತಿ ಬೇಕೇ ಬೇಕು.ಹೊಟ್ಟೆ ತುಂಬುದಮೇಲೆ ಪಟ್ಟಣ ನೋಡಬಹುದು. ಇಂದು ಈ ನೆಲದಲ್ಲಿ ತುತ್ತು ಅನ್ನ, ನೀರಿಗಾಗಿ ಪರಿದಾಡಿ ಸಾವಿನ ಮನೆಯ ಬಾಗಿಲು ಬಡಿದವರದೆಷ್ಟೋ...

ಸೋತು ಸತ್ತವರಿಗಾಗಿ ಶೋಕ ವ್ಯಕ್ತವಾಗುತ್ತದೆ.ತಕ್ಷಣದಲ್ಲೇ ಟಿಸಿಲುಗಳಿಗೆ ಜೀವದಾನದ ಚೆಕ್ ಗಳೂ ಬಿಡುಗಡೆ ಆಗುತ್ತವೆ. ಆದರೆ ಭ್ರಷ್ಟ ಹೊಟ್ಟೆಗಳಿಗೆ ತೊಟ್ಟು ಹನಿಯಾದರೂ ಬೇಡವೇ? ಆಳದಿಂದ ಜೋಲಿಯಾಡಿ ಪುಟಿದೆದ್ದು ಕೊನೆಗೆ ಅಂತ್ಯವಾಗಿಸುವುದು ಸತ್ತವರ ಹೆಣದಮೇಲೆ ಹಾಕಿದ ಹಿಡಿ ಮಣ್ಣಿನಷ್ಟು.ಏಳಲೂ ಆಗದು ಸತ್ತೂ ಹೋಗದು.

ಎಲ್ಲದಕ್ಕೂ ಮೂಲ ನಾವೆ,ಕೊನೆಗೆ ಅಂತ್ಯವಾಗಿ ಅಳುವವರೂ ನಾವೆ. ಒಂದಿಷ್ಟು ಜನ ಈ ಪ್ರವಾಹದಲಿ ಕೊಚ್ಹಿಕೊಂಡು ಹೋಗುವವರಾದರೆ ಇನ್ನೊಂದಿಷ್ಟು ಜನ ಬರಗಾಲದಲ್ಲಿ ಬೆಂದು ಹೋಗುವವರು. ಉಳಿವುದು ಪಾಪಿಗಳ ಪಾಪದ ಲೋಕ,ಅರ್ಥವಾದರೂ ಎಚ್ಹರಗಳ್ಳಲಿಚ್ಹಿಸದ ಅಮಾಯಕರ ನಾಕ. ಇವರ ನಡುವೆ ಕಣ್ಣೀರೆಂಬುದು ಕಾಣದ ಅಲೆ, ಅರ್ಥವಾಗದೆ ತೆತ್ತಬೇಕು ಸುಂಕದ ಬೆಲೆ.