ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಷ್ಟೋ - ಅಷ್ಟು

ಜಗತ್ತು ನಮ್ಮ ಸುತ್ತಮುತ್ತ ಅನಂತವಾಗಿ ಹರಡಿಕೊಂಡಿದೆ. ಬಹಳ ದೊಡ್ಡದು. ಮನುಷ್ಯನ ಬದುಕಿಗೆ ಏನು ಏನು ಬೇಕು? ಎಲ್ಲ ಇದೆ. ಅದನ್ನು ಅನುಭವಿಸಲು ಏನು ಬೇಕು? ಅದನ್ನು ನಿಸರ್ಗದಿಂದ ಪಡೆದುಕೊಂಡಿದ್ದೇವೆ. ಇದೊಂದು ದೇಹ, ಒಳಗೊಂದು ಮನಸ್ಸು. ಅದರ ಹಿಂದೆ ಅರಿವು, ಜ್ಞಾನ, ಚೇತನ ಇಂದ್ರಿಯಗಳು ಇವೆ. ಇವೆಲ್ಲ ನಿಸರ್ಗ ನೀಡಿದ ಕಾಣಿಕೆ. ಇವುಗಳ ಮೂಲಕ ಹೊರಗಿನ ಜಗತ್ತನ್ನು ಅನುಭವಿಸುತ್ತೇವೆ. ಇವು ಇಲ್ಲ, ಅನುಭವ ಇಲ್ಲ.

Image

ಆಹಾರ - ಆರೋಗ್ಯ - ಆಯಸ್ಸು - ಅನುಭವ - ಅಭಿಪ್ರಾಯ

ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವು ಆಹಾರದ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಈಗಾಗಲೇ ಇದರಲ್ಲಿ ‌ಸಾಕಷ್ಟು ಪ್ರಯೋಗಗಳು ಆಗಿವೆ. ಮಾಹಿತಿಯೂ ಲಭ್ಯವಿದೆ. ಆದರೂ ವೈಯಕ್ತಿಕವಾಗಿ ನನ್ನ ಕೆಲವು ಅನುಭವದ ಸಲಹೆಗಳು.

Image

ಬೆಣ್ಣೆ ಹಣ್ಣಿನ ತಂಬುಳಿ

Image

ಬೆಣ್ಣೆಹಣ್ಣಿನ ತಿರುಳು ತೆಗೆದು ಚೆನ್ನಾಗಿ ಕಿವುಚಿ. ಮೊಸರು, ಉಪ್ಪು ಸೇರಿಸಿ. ಜೀರಿಗೆ, ಬಾಳಕದ ಮೆಣಸಿನಕಾಯಿ ಒಗ್ಗರಣೆ ಹಾಕಿ. ಬೆಣ್ಣೆಹಣ್ಣು ಪೌಷ್ಟಿಕಾಂಶಗಳಿಂದ ಕೂಡಿದ್ದು ಗರ್ಭಿಣಿಯರಿಗೆ ತುಂಬ ಒಳ್ಳೆಯದು.

ಬೇಕಿರುವ ಸಾಮಗ್ರಿ

ಬೆಣ್ಣೆಹಣ್ಣು (ಅವಕಾಡೋ) ೧, ಮೊಸರು ೧ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ.

ಸಂಕಲ್ಪ

ಹೊಸ ವರ್ಷದ ಶುಭಾಶಯಗಳ ಸಂತಸದಲ್ಲಿ ಮಕ್ಕಳು ನಲಿಯುತ್ತಿದ್ದರು. ಹೀಗಿರುವಾಗ ಪುಸ್ತಕ ಹಿಡಿದು ಪಾಠ ಮಾಡಿದರೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಯೋಚನೆ ಮಾಡಿ. ಮಕ್ಕಳನ್ನೆಲ್ಲ ಕರೆದು "ಮಕ್ಕಳೇ ಇಂದು ನೀವೆಲ್ಲ ಸಂಭ್ರಮದಿಂದ ಇದ್ದೀರಿ, ಹಾಗಾದರೆ ನಾನು ನಿಮಗೊಂದು ಆಟ ಹೇಳಲೇ? ಎಂದಾಕ್ಷಣ ಓಡಿ ಬಂದು ನನ್ನ ಸುತ್ತುವರಿದರು.

Image

ಸ್ಟೇಟಸ್ ಕತೆಗಳು (ಭಾಗ ೧೨೦೬) - ವಾಸನೆ

ವಾಸನೆಗೆ ದೇಹ ಒಗ್ಗಿ ಹೋಗಿದೆ. ಈಗೀಗ ವಾಸನೆಯನ್ನ ದೇಹ ಸಹಿಸಿಕೊಂಡು ಬಿಟ್ಟಿದೆ. ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏನಾದರೂ ಕೆಲಸ ಮಾಡಲೇಬೇಕಿತ್ತು, ಮನೆಯ ಪರಿಸ್ಥಿತಿ ಮನೆಯಲ್ಲಿ ಕುಳಿತು ತಿನ್ನುವಂತಹ ವ್ಯವಸ್ಥೆ ಇಲ್ಲ. ಗಂಡ ಹೆಂಡತಿ ಇಬ್ಬರೂ ದುಡಿದರೆ ಮಾತ್ರ ಮಕ್ಕಳ ಕನಸಿಗೆ ನೀರೆರೆಯಬಹುದು.

Image

ಬ್ಯಾಂಕ್ ಹಣ ಲೂಟಿ : ಭದ್ರತಾ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಶಾಖೆಯಿಂದ ಹಣ ಒಯ್ದು ವಾಹನಕ್ಕೆ ತುಂಬುತ್ತಿದ್ದಾಗ ಗುಂಡಿನ ದಾಳಿ ನಡೆಸಿ, ಒಬ್ಬನನ್ನು ಹತ್ಯೆಗೈದು ಲಕ್ಷಾಂತರ ರೂ. ಹಣದ ಸಮೇತ ಇಬ್ಬರು ಪರಾರಿಯಾಗಿರುವ ಘಟನೆ ಬೀದರ್ ಮಾತ್ರವೇ ಅಲ್ಲ, ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

Image