ಒಂದಿಷ್ಟು ಹನಿಗಳು…
ಪ್ರಗತಿ ಪರ ಚಿಂತನೆ
- Read more about ಒಂದಿಷ್ಟು ಹನಿಗಳು…
- Log in or register to post comments
ಪ್ರಗತಿ ಪರ ಚಿಂತನೆ
ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ ಯಾರು ಬರೆದ ಕವನ ಎಂದು ಗೊಂದಲಗಳಿವೆ. ಇಲ್ಲಿ ಪ್ರಕಟಿಸಲಾದ ಕವನ ೧೯೩೦ರಲ್ಲಿ ಮುದ್ರಿತವಾದ ‘ರಾಷ್ಟ್ರೀಯ ಪದ್ಯಗಳು’ ಸಂಕಲನದಲ್ಲಿದೆ.
ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ಸಾಲುಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ನುಡಿಗಳಿಗಿವೆ.
ಇದೇ ತಿಂಗಳು ಕರ್ನಾಟಕದಲ್ಲಿ ಅತ್ಯಂತ ಉಪಯುಕ್ತ - ಸಾಮಾಜಿಕ ಜಾಗೃತಿಯ ಎರಡು ಮಹತ್ವದ ಪಾದಯಾತ್ರೆಗಳು ನಡೆಯುತ್ತಿವೆ.
ಸಹಜ ಕೃಷಿಗೆ ಮೀಸಲಾದ ದ್ವೈಮಾಸಿಕ ‘ಸಹಜ ಸಾಗುವಳಿ’
ಕಸ ರಾಶಿಯಾಗಿ ಬಿದ್ದಿದ್ದಾಗ ಅಲ್ಲಿ ಕಸ ಚೆಲ್ಲುಬಾರದು ಅಂತ ಯಾರಿಗೂ ಅನ್ನಿಸೋದೇ ಇಲ್ಲ. ಆದರೆ ಸ್ವಚ್ಛವಾಗಿದ್ದು ಬಿಟ್ರೆ ಅಲ್ಲಿ ಕಸ ಚೆಲ್ಲುವುದಕ್ಕೆ ಮನಸ್ಸು ಬರೋದಿಲ್ಲ. ಆ ಒಂದು ಸ್ಥಳದಲ್ಲಿ ಬಂದವರೆಲ್ಲರೂ ಕಸವನ್ನ ಚೆಲ್ಲುತ್ತಾ ಹೋಗುತ್ತಿದ್ದಾರೆ. ತಮಗೆ ಬೇಡವಾಗಿರುವುದನ್ನ ಆ ಸ್ಥಳಕ್ಕೆ ಬಂದು ಸುರಿದು ಅಲ್ಲಿಂದ ನಡೆದು ಬಿಡುತ್ತಾರೆ.
ಉಚಿತ….. ಉಚಿತ… ಉಚಿತ! ಈ ಪದ ಕರ್ಣ ತಮಟೆಗೆ ಬಡಿದೊಡನೆಯೇ ಅಗಸನಿಂದ ಅರಸನ ತನಕ ಎಲ್ಲರೂ ಬಾಯಿ ಬಾಯಿ ಬಿಡುವರು. “ಉಚಿತ” ದ ಆಕರ್ಷಣಾ ಬಲ ಭೂಮಿಯ ಆಕರ್ಷಣಾ ಬಲಕ್ಕೂ ಮಿಗಿಲು. “ಫ್ರೀ” ಎಂಬ ಅಯಸ್ಕಾಂತೀಯ ಮಾರುಕಟ್ಟೆ ತಂತ್ರದ ಹಿಂದೆ ಶೀಘ್ರವಾಗಿ ಹಣ ಮಾಡುವ ಮತ್ತು ತಮಗಾಗಬಹುದಾದ ನಷ್ಟವನ್ನು ಗ್ರಾಹಕರ ತಲೆಗೆ ಕಟ್ಟುವ ಭ್ರಷ್ಟ ಜಾಲದ ಭುಗಿಲು ಮುಗಿಲೆತ್ತರ.
ಕೂಲಿಗಳ್ಳತನವನ್ನು
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಚ್ಚಿದ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮತ್ತೊಂದು ಘನಘೋರ ಘಟನೆ ನಡೆದಿದೆ. ದುಷ್ಕರ್ಮಿಗಳು ಗರ್ಭಿಣಿ ಹಸುವೊಂದರ ತಲೆ ಮತು ಕಾಲು ಕಡಿದುಹಾಕಿದ್ದು ಮಾತ್ರವಲ್ಲದೆ, ಅದರ ಹೊಟ್ಟೆಯನ್ನೂ ಸೀಳಿ ಗರ್ಭಸ್ಥ ಕರುವನ್ನು ಹತ್ಯೆ ಮಾಡಿದ್ದಾರೆ. ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರ ಹಸು ಇದು.
2019 ರ ಜನವರಿ 21 ರಂದು ನಮ್ಮನ್ನಗಲಿದ ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ… ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ. ನಡೆದಾಡುವ ದೇವರಲ್ಲ, ನಲಿದಾಡುವ - ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯ ಶಿವಕುಮಾರ ಸ್ವಾಮಿ ಎಂಬ ಶಿವಣ್ಣ.