ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

‘ಝಿರೋ ಫಿಗರ್’ ಎಂಬ ಹುಚ್ಚು ಕುದುರೆಯ ಹಿಂದೆ…

ಈಗಿನ ಯುವ ಜನಾಂಗಕ್ಕೆ ಹೆಚ್ಚಾಗಿ ಹದಿಹರೆಯದ ಹುಡುಗಿಯರಿಗೆ ತಮ್ಮ ಫಿಗರ್ ಬಗ್ಗೆ ವಿಪರೀತ ಕಾಳಜಿ. ಅದಕ್ಕಾಗಿ ಸರಿಯಾದ ಸಮಯಕ್ಕೆ ಪೌಷ್ಟಿಕವಾದ ಆಹಾರವನ್ನೂ ಸೇವಿಸದೇ, ತಮಗೆ ಬೊಜ್ಜು ಬಾರದೇ ಇರಲಿ ಎಂದು ವಿಪರೀತ ಎನಿಸುವಷ್ಟು ಡಯಟ್ ಮತ್ತು ವ್ಯಾಯಾಮ ಮಾಡುತ್ತಾರೆ. ಇದರಿಂದ ನಿಮ್ಮ ದೇಹವು ಚೆನ್ನಾದ ಆಕಾರ ಪಡೆದು ಹೊರಗಿನಿಂದ ಸುಂದರವಾಗಿ ಕಂಡರೂ, ಒಳಗೆ ಕುಸಿಯುತ್ತಾ ಹೋಗುತ್ತದೆ.

Image

ಅನ್ ಬಾಕ್ಸಿಂಗ್ ಬೆಂಗಳೂರು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಮಾಲಿನಿ ಗೋಯಲ್ ಮತ್ತು ಪ್ರಶಾಂತ್ ಪ್ರಕಾಶ್, ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೬೯೫.೦೦, ಮುದ್ರಣ: ೨೦೨೪

ಬಹುವೇಗದಲ್ಲಿ ಬೆಳೆಯುತ್ತಿರುವ ನಗರ ಎಂದೇ ಹೆಸರಾದ ಬೆಂಗಳೂರು ಬಗ್ಗೆ ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರು ಆಂಗ್ಲಭಾಷೆಯಲ್ಲಿ ಬರೆದ ‘ಅನ್ ಬಾಕ್ಸಿಂಗ್ ಬೆಂಗಳೂರು’ ಎನ್ನುವ ಕೃತಿಯು ಅದೇ ಹೆಸರಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಲೇಖಕಿ ಪ್ರತಿಭಾ ನಂದಕುಮಾರ್. ಬೆಂಗಳೂರು ನಗರವನ್ನು ಹೊಸ ಆರಂಭಗಳ ನಗರ ಎಂದು ಹೆಸರಿಸಿದ್ದಾರೆ.

ಅಭಿವೃದ್ಧಿಯ ರೂಪ ಮತ್ತು ಪರಿಣಾಮ

ಜನವರಿ 26 ರ ಗಣರಾಜ್ಯೋತ್ಸವದ ಸನಿಹದಲ್ಲಿ… ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ? ಇದು ಅನಿವಾರ್ಯವೇ ? ಅನಿರೀಕ್ಷಿತವೇ ? ಸ್ವೀಕಾರಾರ್ಹವೇ ?

Image

ಸ್ಟೇಟಸ್ ಕತೆಗಳು (ಭಾಗ ೧೨೧೧) - ಅರ್ಥ

ನಿನಗ ಅರ್ಥವಾಗುವುದು ಯಾವಾಗ? ತಯಾರಾಗದ ನೆಲದ ಮೇಲೆ ಎಂತಹದೇ ಅದ್ಭುತ ಬೀಜ ಬಿದ್ದರೂ ಅದರಿಂದ ಫಲ ಸಿಗೋದಿಲ್ಲ. ಮೊದಲು ನೆಲವನ್ನ ತಯಾರು ಮಾಡುವ ಕೆಲಸಕ್ಕೆ ಕೈ ಹಾಕು, ಆ ನಂತರ ಬೀಜಗಳನ್ನ ಆಯ್ದುಕೊಂಡು ಯಾವ ನೆಲಕ್ಕೆ ಯಾವ ಬೀಜ ಸೂಕ್ತ ಅನ್ನೋದನ್ನ ತಿಳಿದುಕೊಂಡು ಮುಂದುವರೆದರೆ ಅದ್ಭುತವಾದ ಫಸಲು ನಿನ್ನದಾಗುತ್ತೆ.

Image

ಬದನೆ-ಆಲೂ ಚಟ್ನಿ

Image

ಟೊಮೆಟೋ, ಬದನೆಕಾಯಿ, ಹಸಿಮೆಣಸಿನಕಾಯಿ, ಆಲೂಗಡ್ಡೆ ಸಣ್ಣಗೆ ಹೆಚ್ಚಿ ಬೇಯಿಸಿಕೋಳ್ಳಬೇಕು. ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಕಡಲೆಬೀಜ, ಉಪ್ಪು, ಹುಣಸೆಹಣ್ಣು, ಬೇಯಿಸಿದ ತರಕಾರಿಗಳನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.

ಬೇಕಿರುವ ಸಾಮಗ್ರಿ

೧ ಸಣ್ಣ ಬದನೆಕಾಯಿ, ೧ ಟೋಮೆಟೋ, ೧ ಆಲೂಗಡ್ಡೆ, ೧ ಈರುಳ್ಳಿ, ೮-೧೦ ಎಸಳು ಬೆಳ್ಳುಳ್ಳಿ, ೮-೧೦ ಕಡಲೆಬೀಜ, ೪-೫ ಹಸಿಮೆಣಸಿನಕಾಯಿ, ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು.

ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾದ ಕಿತ್ತೂರು

ಕಿತ್ತೂರಿನ ಕೊನೆಯ ಕಾಳಗ ಘಟಿಸಿ (1824) 200 ವರ್ಷಗಳು ಗತಿಸಿದರೂ ಕಿತ್ತೂರಿನ ಗತೈತಿಹಾಸ ಸ್ಮೃತಿಪಟಲದಲ್ಲಿದೆ. ಬೆಳಗಾವಿ ಜಿಲ್ಲೆಯ ಹಲವೆಡೆ ಕಿತ್ತೂರ ವೀರರ ಸಮಾಧಿಗಳು, ಸ್ಮಾರಕಗಳು ಇದ್ದು, ಅವು ಕಿತ್ತೂರ ರಾಜ - ರಾಣಿಯರ, ಬಂಟರ ಕ್ಷಾತ್ರತೇಜಸ್ಸನ್ನು ಕನ್ನಡಿಗರ ಮನದಂಗಳದಲ್ಲಿ ಹಚ್ಚಹಸಿರಾಗಿಸಿವೆ. ಕಿತ್ತೂರ ನಾಡವರ ಸ್ವಾತಂತ್ರ್ಯದ ಕಿಚ್ಚನ್ನು ಸ್ವದೇಶಾಭಿಮಾನವನ್ನು ಬೀರುತ್ತಿದೆ.

Image

ಪುಸ್ತಕನಿಧಿ:ನಾಟಕ ಪಂಚರಾತ್ರ

ಭಾಸನ ನಾಟಕವಾದ 'ಪಂಚರಾತ್ರ'ವು  ಗದ್ಯ ಪದ್ಯಗಳಿಂದ ಕೂಡಿದ್ದುದರಿಂದ ತಿಳಿದುಕೊಳ್ಳಲು ಸುಲಭವಾಗಲಿ ಎಂದು ಒಬ್ಬರು ಪೂರ್ತಿ ಗದ್ಯದಲ್ಲಿ ನಾಟಕವನ್ನು ಬರೆದಿದ್ದಾರೆ. ಇದು ನನಗೆ archive.org ತಾಣದಲ್ಲಿ ಸಿಕ್ಕಿತು.

ಸುಮಾರು 90 ಪುಟಗಳ ಈ ನಾಟಕದಲ್ಲಿ ಮಹಾಭಾರತದ ಸಂಗತಿ ಇದೆ. ಪಾಂಡವರು ವಿರಾಟ ರಾಜನ ಆಸ್ಥಾನದಲ್ಲಿ ಮಾರು ವೇಷದಿಂದ ತಮ್ಮ ವನವಾಸದ ಅಜ್ಞಾತವಾಸದ ಸಮಯವನ್ನು ಕಳೆಯುತ್ತಿರುವರು. 

ಅತ್ತ ದ್ರೋಣನು  ದುರ್ಯೋಧನನಲ್ಲಿ ಪಾಂಡವರ ರಾಜ್ಯವನ್ನು ಅವರಿಗೆ ಮರಳಿಸಲು ಹೇಳುವುದು. ಆಗ ದುರ್ಯೋಧನನು ಒಂದು ಶರತ್ತನ್ನು ಹಾಕುವನು. ಅದು ಏನೆಂದರೆ ಐದು ದಿನಗಳ ಸಮಯದಲ್ಲಿ ಪಾಂಡವರ ಪತ್ತೆ ಆಗಬೇಕು.

ನಿಸರ್ಗ ನಿನಗೊಂದು ನಮನ 

ಏನನ್ನೂ ಬಯಸದೆ ಬೆಳೆದು ಬದುಕುವುದು   
ಬದುಕಿ ಇತರರನ್ನು ಬದುಕಿಸಿ ಬೆಳೆಸುವುದು 
ಭಾವನಾತ್ಮಕ ಸಂಬಂಧ ಪ್ರಕೃತಿ ಬೆಸೆಯುತ್ತಿದೆ
ತನ್ಮಯ ನಾನಾದೆನು ಮನವು ಮಿಡಿಯುತ್ತಿದೆ

ಮುಂಜಾನೆಯ ನೇಸರನ ಹೊಂಗಿರಣವಿರಲಿ 
ಸಂಜೆಯ ಹೊಂಬಣ್ಣದ ರಂಗು ಚೆಲ್ಲುತಿರಲಿ 
ನಳನಳಿಸುವ ಚೆಲುವಿಕೆ ಸರಿಸಾಟಿಯಾರು   
ಹಸಿರು ಸೊಬಗಿನ ಸೆಳೆತಕೆ ಸೋಲದವರಾರು   

ತಾಯಿ ನಿಸರ್ಗವೇ ನೀನೆಷ್ಟು ವಿಸ್ಮಯವೇ 
ನನ್ನ ಹೃದಯವನ್ನು ಪ್ರಚೋದಿಸುತ್ತಿರುವೆ
ಅರಳುವ ಆತ್ಮವು ನೀ, ಪ್ರಶಾಂತವಾಗಿರುವೆ
ಪ್ರೇರಕ ಶಕ್ತಿ ನೀ ಅನಂತ ಪಲ್ಲವಿಯಾಗಿರುವೆ 

ತಾನು ಕೆಸರಾದರು ತಣ್ಣನೆಯ ಆಸರೆಯಿವಳು 

ಉಸಿರಾಗಿ ಆತ್ಮದೊಳು ಚೈತನ್ಯದ ಬೆಳಕಿವಳು 

ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೨)

ಅದಾದ ತರುವಾಯ ಎಪ್ರೀಲ್ ತಿಂಗಳಿಗೆ ಜೇನಿನ ದೊಡ್ದ ಕೊಯಿಲು. ವಾರಕ್ಕೊಮ್ಮೆ ೧೫ ದಿನಕ್ಕೊಮ್ಮೆ ಹತ್ತನಾಜೆ ತನಕವೂ ಜೇನು ತೆಗೆಯುತ್ತಿದ್ದೆವು. ಸುಮಾರು ೧೦ ಲೀಟರಿಗೂ ಹೆಚ್ಚು ಹಿಡಿಯುವ ಪಾತ್ರೆ. ಅದರ  ತುಂಬಾ ಜೇನು. ಜೇನು ಪೆಟ್ಟಿಗೆಯ ಸಮೀಪ ಹೋಗುವಾಗಲೇ ಆ ಪಟ್ಟಿಗೆಯಲ್ಲಿ ಜೇನು ಆಗಿದೆ ಎಂಬುದನ್ನು ಅಲ್ಲಿ ಬರುವ ಪರಿಮಳ ತಿಳಿಸುತ್ತಿತ್ತು. ಅದು ಕುಂಟು ನೇರಳೆ ಹೂವಿನ ಜೇನು.

Image

ಬೆದರಿಕೆ ರಾಜತಾಂತ್ರಿಕತೆ ಬೇಡ

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ೨ನೇ ಇನ್ನಿಂಗ್ಸ್ ಜಗತ್ತಿನ ರಾಷ್ಟ್ರಗಳನ್ನು ಬಿಸಿ ಚರ್ಚೆಗಳ ಕಾವಲಿ ಮೇಲೆ ಕೂರಿಸಿದೆ. ಅಮೇರಿಕವೇ ಮೊದಲು, ಅಮೆರಿಕನ್ನರನ್ನು ಶ್ರೀಮಂತವಾಗಿಸುವ ಅವರ ಶಪಥಗಳೆಲ್ಲವೂ ಇತರೆ ರಾಷ್ಟ್ರಗಳನ್ನು ತನ್ನ ಬೆದರಿಕೆಯ ರಾಜತಾಂತ್ರಿಕ ಜಾಲದೊಳಕ್ಕೆ ಸಿಲುಕಿಸುವ ಅಪಾಯವನ್ನು ಒಳಗೊಂಡಿರುವಂತೆ ತೋರುತ್ತಿರುವುದು ಸ್ಪಷ್ಟ. ಆ ಪೈಕಿ ಬ್ರಿಕ್ಸ್ ರಾಷ್ಟ್ರಗಳಿಗೆ ಶೇ.

Image