ನಿಸರ್ಗ ನಿನಗೊಂದು ನಮನ
ಕವನ
ಏನನ್ನೂ ಬಯಸದೆ ಬೆಳೆದು ಬದುಕುವುದು
ಬದುಕಿ ಇತರರನ್ನು ಬದುಕಿಸಿ ಬೆಳೆಸುವುದು
ಭಾವನಾತ್ಮಕ ಸಂಬಂಧ ಪ್ರಕೃತಿ ಬೆಸೆಯುತ್ತಿದೆ
ತನ್ಮಯ ನಾನಾದೆನು ಮನವು ಮಿಡಿಯುತ್ತಿದೆ
ಮುಂಜಾನೆಯ ನೇಸರನ ಹೊಂಗಿರಣವಿರಲಿ
ಸಂಜೆಯ ಹೊಂಬಣ್ಣದ ರಂಗು ಚೆಲ್ಲುತಿರಲಿ
ನಳನಳಿಸುವ ಚೆಲುವಿಕೆ ಸರಿಸಾಟಿಯಾರು
ಹಸಿರು ಸೊಬಗಿನ ಸೆಳೆತಕೆ ಸೋಲದವರಾರು
ತಾಯಿ ನಿಸರ್ಗವೇ ನೀನೆಷ್ಟು ವಿಸ್ಮಯವೇ
ನನ್ನ ಹೃದಯವನ್ನು ಪ್ರಚೋದಿಸುತ್ತಿರುವೆ
ಅರಳುವ ಆತ್ಮವು ನೀ, ಪ್ರಶಾಂತವಾಗಿರುವೆ
ಪ್ರೇರಕ ಶಕ್ತಿ ನೀ ಅನಂತ ಪಲ್ಲವಿಯಾಗಿರುವೆ
ತಾನು ಕೆಸರಾದರು ತಣ್ಣನೆಯ ಆಸರೆಯಿವಳು
ಉಸಿರಾಗಿ ಆತ್ಮದೊಳು ಚೈತನ್ಯದ ಬೆಳಕಿವಳು
ಗಿರಿಶಿಖರ ಶರಧಿ ವನಸಿರಿಯ ಸಂಪನ್ನೆಯಿವಳು
ಸುಸಂಗತ ಹ್ಲಾದಿನಿ ನಿನಗಿದೋ ಕೃತಘ್ನತೆಗಳು
ಕಾ ವಿ ರಮೇಶ್ ಕುಮಾರ್
ಬೆಂಗಳೂರು
ಚಿತ್ರ್