ಬದನೆ-ಆಲೂ ಚಟ್ನಿ

ಬೇಕಿರುವ ಸಾಮಗ್ರಿ
೧ ಸಣ್ಣ ಬದನೆಕಾಯಿ, ೧ ಟೋಮೆಟೋ, ೧ ಆಲೂಗಡ್ಡೆ, ೧ ಈರುಳ್ಳಿ, ೮-೧೦ ಎಸಳು ಬೆಳ್ಳುಳ್ಳಿ, ೮-೧೦ ಕಡಲೆಬೀಜ, ೪-೫ ಹಸಿಮೆಣಸಿನಕಾಯಿ, ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಟೊಮೆಟೋ, ಬದನೆಕಾಯಿ, ಹಸಿಮೆಣಸಿನಕಾಯಿ, ಆಲೂಗಡ್ಡೆ ಸಣ್ಣಗೆ ಹೆಚ್ಚಿ ಬೇಯಿಸಿಕೋಳ್ಳಬೇಕು. ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಕಡಲೆಬೀಜ, ಉಪ್ಪು, ಹುಣಸೆಹಣ್ಣು, ಬೇಯಿಸಿದ ತರಕಾರಿಗಳನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ದಪ್ಪ ತಳದ ಬಾಣಲೆಗೆ ಎಣ್ಣೆ, ಸಾಸಿವೆ, ಸಣ್ಣ ಹೆಚ್ಚಿದ ಉಳಿದ ಅರ್ಧ ಈರುಳ್ಳಿಯನ್ನು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ರುಬ್ಬಿರುವ ಹಾಕಿ ಕುದಿಸಬೇಕು. ಸ್ವಲ್ಪ ವಿಭಿನ್ನವಾದ ಈ ಚಟ್ನಿಯನ್ನು ಚಪಾತಿ, ರೊಟ್ಟಿ, ಅನ್ನದೊಂದಿಗೆ ಸವಿಯಬಹುದು.
-ಅರುಂಧತಿ ಎಸ್, ಬೆಂಗಳೂರು