ಸ್ಟೇಟಸ್ ಕತೆಗಳು (ಭಾಗ ೧೨೦೯) - ಕಸ
ಕಸ ರಾಶಿಯಾಗಿ ಬಿದ್ದಿದ್ದಾಗ ಅಲ್ಲಿ ಕಸ ಚೆಲ್ಲುಬಾರದು ಅಂತ ಯಾರಿಗೂ ಅನ್ನಿಸೋದೇ ಇಲ್ಲ. ಆದರೆ ಸ್ವಚ್ಛವಾಗಿದ್ದು ಬಿಟ್ರೆ ಅಲ್ಲಿ ಕಸ ಚೆಲ್ಲುವುದಕ್ಕೆ ಮನಸ್ಸು ಬರೋದಿಲ್ಲ. ಆ ಒಂದು ಸ್ಥಳದಲ್ಲಿ ಬಂದವರೆಲ್ಲರೂ ಕಸವನ್ನ ಚೆಲ್ಲುತ್ತಾ ಹೋಗುತ್ತಿದ್ದಾರೆ. ತಮಗೆ ಬೇಡವಾಗಿರುವುದನ್ನ ಆ ಸ್ಥಳಕ್ಕೆ ಬಂದು ಸುರಿದು ಅಲ್ಲಿಂದ ನಡೆದು ಬಿಡುತ್ತಾರೆ. ಆ ಸ್ಥಳಕ್ಕೆ ಏನಾದರೂ ಅದರಿಂದ ಸಮಸ್ಯೆ ಆಗುತ್ತೆ ಏನಾದರೂ ತೊಂದರೆ ಆಗುತ್ತೆ ಅನ್ನುವ ಯೋಚನೆ ಕೂಡ ಅವರಲ್ಲಿಲ್ಲ. ಅಲ್ಲಿ ಯಾರಿಗೂ ಕಸ ಚೆಲ್ಲಬಾರದು ಅಂತ ಅನ್ನಿಸೋದು ಇಲ್ಲ. ಅದೇ ಒಂದು ಸ್ಥಳ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಹೂದೋಟವಾಗಿದೆ, ನೋಡುಗನ ಮನಸ್ಸನ್ನು ಸೆಳಿತಾ ಇದೆ ಅಂತ ಅಂದಾಗ ಅಲ್ಲಿ ಕಸ ಚೆಲ್ಲುವ ಮನಸ್ಸು ಯಾರಿಗೂ ಬರೋದಿಲ್ಲ. ಕಸ ಬಿದ್ದಿದ್ರು ಸಹ ಅದನ್ನ ಆರಿಸಿ ತೆಗೆಯುವ ಮನಸ್ಸು ಅವರದಾಗುತ್ತೆ. ಇಷ್ಟೇ ಅಲ್ವಾ ಬದುಕು, ನಾವು ನಮ್ಮ ದೇಹವನ್ನ ಮನಸ್ಸನ್ನು ಕಸದ ತೊಟ್ಟಿ ಮಾಡಿಕೊಂಡರೆ ಬಂದವರೆಲ್ಲರೂ ಕಸ ಸುರಿದೆ ಹೊರಟು ಹೋಗುತ್ತಾರೆ. ನಾವು ಶುಭ್ರವಾಗಿ ಕಲ್ಮಶವಿಲ್ಲದೆ ಬದುಕಿದಾಗ ಯಾರಿಗೂ ನಮ್ಮೊಳಗೆ ಕೆಟ್ಟ ಆಲೋಚನೆಗಳು ವಿಕೃತಿಗಳು ಅನಗತ್ಯವಾದ ಕಸಗಳನ್ನ ಸುರಿಬೇಕು ಅಂತ ಅನ್ನಿಸೋದೇ ಇಲ್ಲ .ನಾವು ಶುಚಿಯಾಗಿ ಇರುತ್ತೇವೋ ಅಥವಾ ಕಸದ ತೊಟ್ಟಿಯಾಗ್ತೇವೋ ನಿರ್ಧಾರ ನಮ್ಮ ಕೈಯಲ್ಲಿದೆ. ದಾರಿ ಬದಿಯಲ್ಲಿ ಬಿದ್ದಿದ್ದ ಕಸದ ತೊಟ್ಟಿಯ ಪಕ್ಕದ ರಾಶಿಯನ್ನು ಕಂಡು ಅವನಿಗೆ ಅನ್ನಿಸಿತಂತೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ