ಹನಿಗಳು ಸರ್ ಹನಿಗಳು !
ಕವನ
ಸಹಿಸಿಕೊಳ್ಳಿರೆಂದೂ
ಕಷ್ಟ ನಿಷ್ಠೂರಗಳ
ಕೊನೆಗೆ ಸಿಗದೇನು
ಪ್ರತಿಫಲಕೆ ಸುಖ !
*
ದೀಪಗಳಿಂದು
ಆರಬಹುದು ಸಖಿ
ಪ್ರೀತಿ ಬತ್ತದು !
*
ಹೆಣ್ಣಿನ ನಗು
ಹುಣ್ಣಿಮೆಯ ಚಂದ್ರ
ಬಳಿಯಿದ್ದರೆ !
*
ಬಿತ್ತುತಿರು ನೀ
ಬಿಜವ ಭೂಮಿಯಲ್ಲಿ
ಫಲ ಕೊಡಲಿ!
*
ನುಡಿಹಾರ
ಸಂಕ್ರಾತಿ ದಿನದಂದು ಹೊಸಬೆಳಕು ಹುಟ್ಟುವುದು
ಸೋತವರ ಬದುಕಿನಲಿ ಹೊಸಹುರುಪು ಬಂದಂತೆ |
ಹೊಳಪೊಳಗೆ ಮಖವರಳಿ ಹೊಸಯೋಜನೆಯು ಸೇರೆ
ಹೊಂಗಿರಣ ಊರೊಳಗೆ -- ರಾಮ ರಾಮ ||
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್