ವಿಧ: ಬ್ಲಾಗ್ ಬರಹ
August 07, 2005
ರವಿವಾರ, ಬೆಳಗಾಗುತ್ತಿದ್ದಂತೆ ಸ್ನೇಹಿತರೊಬ್ಬರ ಫೋನು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯವರು ನಡೆಸುತ್ತಿರುವ ಪುಟ್ಟ 'ಬುಕ್ ಶೋ'ಗೆ ಹೋಗುವುದೆಂದು ಹಿಂದಿನ ದಿನ ಮಾತನಾಡಿಕೊಂಡಿದ್ದೆವು. ಹಾಗೆಯೇ ನನ್ನ ಸ್ನೇಹಿತರಿಗೆ 'ಉಬುಂಟು' ಲಿನಕ್ಸ್ ನಲ್ಲಿರುವ ಕನ್ನಡ ಸಪೋರ್ಟ್ ತೋರಿಸುವುದಾಗಿ ಸ್ಕೆಚ್ ಹಾಕಿದ್ದೆ. ನಿಶಾಚರನ ನಿದ್ದೆಗೆ ಕತ್ತರಿ ಬಿದ್ದಿತು. :)
ಸರಿ, ಅಷ್ಟೇನೂ ಟ್ರಾಫಿಕ್ ಇರಲಿಕ್ಕಿಲ್ಲವೆಂದೆಣೆಸಿ ಬೈಕೇರಿ ಚಾಮರಾಜಪೇಟೆಯ ಕಡೆಗೆ ಪ್ರಯಾಣ ಬೆಳೆಸಿದೆ. ಆದರೆ…
ವಿಧ: Basic page
August 07, 2005
ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇದನ್ನು ಬರೆದವನು ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ಕೊಸೆನ್ ಎಂಬ ಕಲಾವಿದ.
ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ಕಾಪಿ ಮಾಡಿಕೊಂಡು ಕೆತ್ತುತ್ತಿದ್ದರು.
ಕೊಸೆನ್‌ಗೆ ಒಬ್ಬ…

ಆನೆ ಕುದುರೆ ಭಂಡಾರವಿರ್ದಡೇನೋ
ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು
ಮಲಗುವುದರ್ಧ ಮಂಚ
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ
ಒಡಲು ಭೂಮಿಯ ಸಂಗ
ಒಡವೆ ತಾನೇನಪ್ಪುದೋ
ಕೈವಿಡಿದ ಮಡದಿ ಪರರ ಸಂಗ
ಪ್ರಾಣ ವಾಯುವಿನ ಸಂಗ
ಸಾವಿಂಗೆ ಸಂಗಡವಾರೂ ಇಲ್ಲ
ಕಾಣಾ ನಿಃಕಳಂಕ ಮಲ್ಲಿಕಾರ್ಜುನಾ
[ಪಡಿ-ಒಂದು ಅಳತೆ; ಆವು-ಹಸು]
ಆನೆ ಕುದುರೆ ಸಂಪತ್ತು ಬೇಕಾದ್ದಕ್ಕಿಂತ ಸಾವಿರಪಟ್ಟು ಹೆಚ್ಚು ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ. ಉಣ್ಣುವುದು ಒಂದಳತೆ ಅನ್ನ, ಕುಡಿಯುವುದು ಒಂದು ಹಸು ಕರೆದ ಒಂದಿಷ್ಟು…
ವಿಧ: Basic page
August 07, 2005
ಆ ಜೋಡಿ ಕಿಟಕಿಯ ಪಕ್ಕದ ಸೀಟಿನಲಿ ಬಿದ್ದು ಬಿದ್ದು ನಗುತಿಹರು
ಒಬ್ಬರ ಕೈಯನ್ನೊಬ್ಬರು ಬಿಡಲಾರದಂತೆ ಹಿಡಿದಿಹರು
ಮುದುಕ ತರುಣ ಕೂಸು ಎಲ್ಲರ ಕಣ್ಣೂ ಅವರ ಮೇಲೇ
ನಾನೂ ಕುತೂಹಲದಿ ನೋಡಿದೆ ಏನಿವರ ಲೀಲೆ
ಬೆನ್ನ ಮೇಲೆ ಹರಡಿಹ ನೀಳ ಗಾಢ ಕಪ್ಪು ಕೇಶ
ನೋಡುಗರೆಲ್ಲರನೂ ಹಿಡಿದಿಡುವಂತಹ ಪಾಶ
ಮಲ್ಲಿಗೆಯ ಚಿಗುರೆಲೆಯಂತಹ ಮೋಹಕ ಮುಂಗುರುಳು
ಅಗಲವಾದ ಹಣೆಯ ಮೇಲೆ ಮುತ್ತಿಕ್ಕುತಿರಲು
ನಾಸಿಕವಂತೂ ಕೆಂಪನೆಯ ಗೇರು ಹಣ್ಣು
ನೋಡಿದರೆ ಮತ್ತೆ ನೋಡಬಯಸುವ ಅವಳನ್ನು
ಒಪ್ಪವಾಗಿ ಉಟ್ಟಿಹಳು ನೀಳ ನೆರಿಗೆಯ ಸೀರೆ…
ವಿಧ: Basic page
August 06, 2005
ಅಲೆದಾಟ ಹುಡುಕಾಟ
ಮುಗಿಯದ ಪರಿಪಾಟ
ಆಸ್ವಾದಿಸುವ ಮನಸಿಲ್ಲದಿರೆ
ಏನಿದೆ ಬದುಕಿನಲಿ...
ಮನಸಿನಾಳದಲಿ
ಕನಸ ಲೋಕದಲಿ
ಮೈಮರೆಯದಿರೆ
ಏನಿದೆ ಬದುಕಿನಲಿ...
ಜೊತೆ ನಡೆವವರಾ
ಹಿತವನು ಕಂಡು
ಖುಶಿಪಡದಿದ್ದರೆ
ಏನಿದೆ ಬದುಕಿನಲಿ...
ಭಯದ ಕತ್ತಲಲಿ
ಜೀವವ ತುಂಬುವ
ಬೆಳಕಿಲ್ಲದಿರೆ
ಏನಿದೆ ಬದುಕಿನಲಿ...
ಕಣ್ಗಳರಳುವ
ಪ್ರೇಮದ ಮಿಂಚನು
ಅಳೆಯಲಾಗದಿರೆ
ಏನಿದೆ ಬದುಕಿನಲಿ...
ಇಟ್ಟ ಹೆಜ್ಜೆಯನು
ದಿಟ್ಟಿಸಿ ನೋಡಿ
ಸಾರ್ಥಕವೆನಿಸದಿರೆ
ಏನಿದೆ ಬದುಕಿನಲಿ.....
ವಿಧ: ಬ್ಲಾಗ್ ಬರಹ
August 06, 2005
ನನ್ನ ಸ್ನೇಹಿತರೊಬ್ಬರಿಗೆ ನಾನು ಇ-ಅಂಚೆ ಕಳುಹಿಸಿದ್ದೆ. ಅದರಲ್ಲಿ ಮಾಮೂಲಾಗಿ ಇಂತಿ ನಮಸ್ಕಾರಗಳು ಅಂತ ಕೊನೆಯಲ್ಲಿ ಬರೆದಿದ್ದೆ. ಅದಕ್ಕೆ ಅವರು ಇದೇನು ಹೀಗೆ ಬರೆದಿದ್ದೀರಿ. ಹೀಗೆ ಬರೆಯುವ ವಾಡಿಕೆ ಇದೆಯಾ ಅಂತ ಕೇಳಿದರು. ಆಗ ನನಗನ್ನಿಸಿದ್ದು, ಇ-ಮೈಲ್ ಉಪಯೋಗಿಸುವ ಮೂಲಕ ಮೊದಲಿನ ಹಾಗೆ ಪತ್ರ ಬರೆಯುವುದನ್ನು ಸಾರಾಸಗಟಾಗಿ ಈಗೀಗ ಮರೆಯುತ್ತಿದ್ದೇವೆ. ಅದರ ಬಗ್ಗೆ ಸ್ವಲ್ಪ ನೆನಪು ಮಾಡಿಕೊಳ್ಲೋಣ ಅಂದುಕೊಂಡೆ. ಹಾಗೇ ಇದನ್ನೇ ಇಂದಿನ ನನ್ನ ಡೈರಿಯಲ್ಲಿ ಬರೆಯೋಣ ಅಂತಲೂ ನಿರ್ಧರಿಸಿದೆ. ನೀವೂ…
ವಿಧ: Basic page
August 06, 2005
ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ. ”ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಕೇಳಿದ. ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು…

ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ
ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು
ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ
ಇದಕ್ಕಾ ದೇವರ ಹಂಗೇಕೆ
ಭಾಪು ಲದ್ದೆಯ ಸೋಮಾ
ನಮ್ಮ ಪಾಲಿಗೆ ಬಂದ ಕಾಯಕ ಯಾವುದಾದರೂ ಸರಿ. ನಾವೇ ಮಾಡಬೇಕಾದ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಮ್ಮ ಕಾಯಕದಿಂದ ಬಂದ ಫಲವನ್ನು ನಮಗಿಂತ ಹಿರಿಯರಾದವರಿಗೆ (ಗುರು), ಲೋಕಕ್ಕೆ (ಲಿಂಗ), ಪ್ರಜ್ಞಾವಂತರಾದವರಿಗೆ (ಜಂಗಮ) ಅರ್ಪಿಸಬೇಕು. ಉಳಿದದ್ದನ್ನು ನಮ್ಮದೆಂದು…