ಇತ್ತೀಚೆಗೆ ಸೇರಿಸಿದ ಪುಟಗಳು

*ಕುಟುಂಬದ ಮಹತ್ವ*

Submitted by Kavitha Mahesh on Tue, 10/20/2020 - 15:47

ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ,

ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ.

ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ,

ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ.

ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ,

Image

ಬಾಘ ಎಂಬ ಸ್ವಾಮಿ ವಿವೇಕಾನಂದರ ನಾಯಿ

Submitted by Ashwin Rao K P on Mon, 10/19/2020 - 16:02

ಸ್ವಾಮಿ ವಿವೇಕಾನಂದರ ಬಗ್ಗೆ ಯಾರಿಗೆ ಗೊತ್ತಿಲ್ಲ. ಭಾರತ ದೇಶದ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವಂತೆ ಮಾಡಿದ ಧೀಮಂತ ಹೆಮ್ಮೆಯ ಸಂತ ಇವರು. ಇವರಿಗೆ ಪ್ರಾಣಿ, ಪಕ್ಷಿಗಳಲ್ಲಿ ಅಪಾರವಾದ ಪ್ರೀತಿ ಇತ್ತು. ಸ್ವಾಮಿ ವಿವೇಕಾನಂದರು ಕೊಲ್ಕತ್ತಾದ ಬೇಲೂರು ಮಠದಲ್ಲಿ ವಾಸವಾಗಿರುವಾಗ ಅವರ ಬಳಿ ಆಡುಗಳು, ಜಿಂಕೆ, ನಾಯಿಗಳು, ಬಾತುಕೋಳಿಗಳು ಮತ್ತು ಹಲವಾರು ಪಕ್ಷಿಗಳು ಇದ್ದುವು. ಹಂಶಿ ಮತ್ತು ಮೋಟ್ರು ಎಂದು ಆಡುಗಳಿಗೆ ಅವರು ಪ್ರೀತಿಯಿಂದ ಹೆಸರನ್ನೂ ಇಟ್ಟಿದ್ದರು.

Image

ಬಾಟಲಿಯಲ್ಲಿ ಪೋಲಾರ್ ಕರಡಿಗೆ ಸಂದೇಶ

Submitted by addoor on Sat, 10/17/2020 - 20:07

ಪೋಲಾರ್ ಕರಡಿ ಹಿಮವಂತ ತನ್ನ ಮುಂಗೈಯನ್ನು ಹಿಮದ ಬಯಲಿನ ಒಂದು ತೂತಿನಲ್ಲಿ ತೂರಿಸಿ ಅಲ್ಲೇನಿದೆ ಎಂದು ಪರೀಕ್ಷಿಸಿತು. ಅಲ್ಲಿ ನೀರಿನಲ್ಲಿ ಏನೋ ಚಲಿಸಿದಂತೆ ಅದಕ್ಕೆ ಕಂಡಿತ್ತು.

ಆಗಲೇ ಒಂದು ಪೆಂಗ್ವಿನ್ ಆ ತೂತಿನಿಂದ ತಲೆ ಹೊರಗೆ ಹಾಕಿತು. ತನ್ನ ರೆಕ್ಕೆಗಳಲ್ಲಿ ಅದು ಒಂದು ಗಾಜಿನ ಬಾಟಲಿಯನ್ನು ಹಿಡಿದು ಕೊಂಡಿತ್ತು. “ಹಿಮಗಡ್ದೆಗಳ ಆ ಬದಿಯಲ್ಲಿ ನಾನು ಇದನ್ನು ಕಂಡೆ. ಇದು ಅಲ್ಲಿ ನೀರಿನ ಅಲೆಗಳಲ್ಲಿ ತೇಲುತ್ತಿತ್ತು” ಎಂದಿತು ಪೆಂಗ್ವಿನ್.

ಇಬ್ಬರು ಗೆಳೆಯರು ಹಿಮದಲ್ಲಿ ಕುಳಿತು ಆ ಬಾಟಲಿಯನ್ನು ಪರೀಕ್ಷಿಸಿದರು. “ಅದರೊಳಗೆ ಏನೋ ಇದೆ” ಎಂದಿತು ಪೆಂಗ್ವಿನ್. ಬಾಟಲಿಯ ಕಾರ್ಕ್ ತೆಗೆದು, ಪೆಂಗ್ವಿನ್ ತನ್ನ ಕೊಕ್ಕಿನಿಂದ ಅದರೊಳಗಿದ್ದುದನ್ನು ಹೊರ ತೆಗೆಯಿತು. ಅದೊಂದು ಚೀಟಿ. "ಅದರಲ್ಲೇನು ಬರೆದಿದೆ?” ಎಂದು ಕೇಳಿತು ಹಿಮವಂತ.

Image

ಮಹಿಳಾ ಸ್ವಾಭಿಮಾನದ ಪ್ರತೀಕ - ಸೀತವ್ವ ಜೊಡ್ಡತಿ

Submitted by Ashwin Rao K P on Sat, 10/17/2020 - 10:23

೨೦೧೮ರ ತನಕ ಸೀತವ್ವ ಜೊಡ್ಡತಿ ಎಂಬ ಮಹಿಳೆಯ ಹೆಸರು ಬಹುತೇಕ ಅಪರಿಚಿತವಾಗಿತ್ತು. ಆದರೆ ಆ ವರ್ಷ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿ ಕರ್ನಾಟಕದ ಈ ಮಹಿಳೆಯ ಹೆಸರು ಸಮಾಜ ಸೇವೆಯ ಅಡಿಯಲ್ಲಿ ಇತ್ತು. ಬಹುತೇಕ ಮಂದಿಗೆ ಈ ಆಯ್ಕೆ ಹುಬ್ಬೇರಿಸಿರಬಹುದು. ಯಾರಪ್ಪಾ ಈ ಮಹಿಳೆ? ಏನು ಸಾಧನೆ ಮಾಡಿದ್ದಾರಂತೆ? ಎಂಬೆಲ್ಲಾ ಪ್ರಶ್ನೆಗಳು ಮನದಲ್ಲಿ ಕಾಡುತ್ತಿರಬಹುದು. 

Image

ನಮ್ಮ ಹೆಮ್ಮೆಯ ಭಾರತ (19 - 20)

Submitted by addoor on Thu, 10/15/2020 - 19:05

೧೯.ಜಗತ್ತಿನ ಅಪ್ರತಿಮ ಕಲಾರಚನೆ ಆಗ್ರಾದ ತಾಜಮಹಲ್
ಆಗ್ರಾದ ತಾಜಮಹಲನ್ನು ಜಗತ್ತಿನ ಅತ್ಯಂತ ಸುಂದರ ಮತ್ತು ಭವ್ಯ ಸ್ಮಾರಕ ಎನ್ನಬಹುದು. ಇದು ಮೊಘಲ್ ರಾಜ ಷಾಜಹಾನ್, ತನ್ನ ಪ್ರೀತಿಯ ಪತ್ನಿ ಮಮ್ತಾಜಳ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ತನ್ನ ಮಗ ಔರಂಗಜೇಬನಿಂದಲೇ  
ಬಂಧಿಸಲ್ಪಟ್ಟ ರಾಜ ಷಾಜಹಾನ್ ತನ್ನ ಕೊನೆಗಾಲವನ್ನು ತಾಜಮಹಲನ್ನು ಖಿನ್ನತೆಯಿಂದ ನೋಡುತ್ತ ಕಳೆಯ ಬೇಕಾಯಿತು ಎಂಬುದು ದುರಂತ. ಅವನ ಮರಣಾ ನಂತರ ಅವನನ್ನೂ ಮಮ್ತಾಜಳ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.

Image

ಮಹಾಭಾರತದಲ್ಲಿ ಪಾಂಡವರನ್ನು ಬದುಕಿಸಿದ ದ್ರೌಪದಿಯ ‘ನಮಸ್ಕಾರ’

Submitted by Ashwin Rao K P on Thu, 10/15/2020 - 10:28

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪ್ರಾರಂಭವಾದ ಪೌರಾಣಿಕ ಧಾರವಾಹಿಗಳಾದ ರಾಮಾಯಣ, ಮಹಾಭಾರತ, ರಾಧಾ ಕೃಷ್ಣ, ಗಣಪತಿಯ ಮಹಿಮೆಗಳು ಇತ್ಯಾದಿ ಇನ್ನೂ ದೂರದರ್ಶನದಲ್ಲಿ ಪ್ರಸಾರವಾಗುತ್ತಲೇ ಇವೆ. ಕೆಲವು ಧಾರಾವಾಹಿಗಳು ಮುಗಿದು ಅವುಗಳ ಉಪಕಥೆಗಳು ಪ್ರಾರಂಭವಾಗಿವೆ. ಹಿಂದಿ ಭಾಷೆಯಿಂದ ಡಬ್ ಆಗಿ ಕನ್ನಡಕ್ಕೆ ಕೆಲವು ಧಾರವಾಹಿಗಳು ಬಂದಿವೆ. ಕಡೆಗಾದರೂ ವೀಕ್ಷಕರು ಪೌರಾಣಿಕ ಧಾರವಾಹಿ ನೋಡಲು ಮನಸ್ಸು ಮಾಡುತ್ತಿದ್ದಾರೆ. ಈ ಧಾರವಾಹಿಗಳನ್ನು ನೋಡಿದ ಬಳಿಕ ಜನರಿಗೆ ನಮ್ಮ ಪುರಾತನ ಪರಂಪರೆಗಳ ಬಗ್ಗೆ, ದೈವ ದೇವರ ಬಗ್ಗೆ ತಿಳಿಯುವ ಆಸಕ್ತಿ ಮೂಡಿದೆ. ನಾನು ‘ಸಂಪದ’ದಲ್ಲಿ ಮಹಾಭಾರತದಲ್ಲಿ ಕಡಿಮೆ ಕಾಣಿಸಿದ, ಅಧಿಕ ಮಹತ್ವ ಇರದ ಪಾತ್ರಗಳ ಬಗ್ಗೆ ೧೫ ಕಂತುಗಳನ್ನು ಬರೆದೆ.

Image

ಬನ್ನಿ ಮಕ್ಕಳೇ... ಪಾಠ ಬದಿಗಿಟ್ಟು ಸ್ವಲ್ಪ ಆಟವಾಡೋಣ!

Submitted by Ashwin Rao K P on Tue, 10/13/2020 - 14:26

ಹಿಂದೊಮ್ಮೆ ನಾನು ‘ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್’ ಎಂಬ ಲೇಖನ ಬರೆದಿದ್ದೆ. ಓದಿದ ಹಲವಾರು ಮಂದಿ ಈ ಲೇಖನವನ್ನು ಬಹಳಷ್ಟು ಮೆಚ್ಚಿಕೊಂಡಿದ್ದರು. ಆ ಲೇಖನದಲ್ಲಿ ಬಿಟ್ಟು ಹೋದ ಕೆಲವಷ್ಟು ಅಂಶಗಳನ್ನು ನಾನಿಲ್ಲಿ ಸೇರಿಸಬಯಸಿದ್ದೇನೆ. ೨೦೨೦ ರ ವರ್ಷ ಕೊರೋನಾ ಮಹಾಮಾರಿಯ ಕಾರಣದಿಂದ ಮಕ್ಕಳು ಎಲ್ಲರೂ ಮನೆಯಲ್ಲೇ ಉಳಿದು ಬಿಟ್ಟರು. ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಕಡೇ ಪಕ್ಷ ಅವರೆಲ್ಲಾ ಶಾಲೆಯಲ್ಲಿ ಆಟವಾಡುವ ಸಮಯದಲ್ಲಾದರೂ ಮೈದಾನಕ್ಕೆ ಇಳಿಯುತ್ತಿದ್ದರು. ಆದರೆ ಕೆಲವು ಶಾಲೆಗಳಲ್ಲಂತೂ ಆಟದ ಮೈದಾನವೇ ಇಲ್ಲ. ಇದ್ದ ಎಲ್ಲಾ ಜಾಗದಲ್ಲಿ ಶಾಲಾ ಕಟ್ಟಡವೇ ಕಟ್ಟಿಸಿದ್ದಾರೆ.

Image

ಝೆನ್ ಪ್ರಸಂಗ: ಮಠದಿಂದ ಮಠಕ್ಕೆ ಅಲೆತ

Submitted by addoor on Mon, 10/12/2020 - 19:26

ಜ್ನಾನದಾಹಿಯೊಬ್ಬ ಝೆನ್ ಮಠವೊಂದಕ್ಕೆ ಬಂದು ಗುರುವಿಗೆ ನಮಸ್ಕರಿಸಿದ.
ಗುರುವಿನ ಪ್ರಶ್ನೆ: ಎಲ್ಲಿಂದ ಬಂದೆ?
ಜ್ನಾನದಾಹಿಯ ಉತ್ತರ: ದೂರದ ಹಳ್ಳಿಯಿಂದ.
ಗುರುವಿನ ಪ್ರಶ್ನೆ: ಬೇಸಗೆಯಲ್ಲಿ ಯಾವ ಮಠದಲ್ಲಿದ್ದೆ?
ಜ್ನಾಹದಾಹಿಯ ಉತ್ತರ: ಪಕ್ಕದ ರಾಜ್ಯದ ಸರೋವರದ ಹತ್ತಿರದ ಮಠದಲ್ಲಿ.
ಗುರುವಿನ ಪ್ರಶ್ನೆ: ಅಲ್ಲಿಂದ ಯಾವಾಗ ಹೊರಟದ್ದು?
ಜ್ನಾನದಾಹಿಯ ಉತ್ತರ: ಅಲ್ಲಿಂದ ಹುಣ್ಣಿಮೆಯಂದು ಇಲ್ಲಿಗೆ ಹೊರಟೆ.
ಈಗ ಗುರುವಿನ ಪ್ರತಿಕ್ರಿಯೆ: ಒಂದು ಕೋಲು ತಗೊಂಡು ಮೂರು ಏಟು ಬಾರಿಸಬೇಕು ನಿನಗೆ. ಆದರೆ ಇವತ್ತು ನಿನಗೆ ಕ್ಷಮೆ ನೀಡಿದ್ದೇನೆ. ಗೊತ್ತಾಯಿತಾ?

Image

ಬಯಾಪ್ಸಿ ಬಗ್ಗೆ ಭಯ ಬೇಡ

Submitted by Ashwin Rao K P on Mon, 10/12/2020 - 16:15

ಸಮಯ ಕಳೆದಂತೆ ಮಾನವ ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾನೆ. ಕಳೆದ ಶತಮಾನಕ್ಕೂ ಈಗಿನ ಶತಮಾನಕ್ಕೂ ಬಹಳಷ್ಟು ಸುಧಾರಣೆಗಳು ಎಲ್ಲಾ ಕ್ಷೇತ್ರದಲ್ಲಿ ಆಗಿವೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಆಗಿರುವ, ಆಗುತ್ತಿರುವ ಸಂಶೋಧನೆಗಳು ಹಲವಾರು. ಈ ಕಾರಣದಿಂದಲೇ ನಾವಿಂದು ಏನೇ ಕಾಯಿಲೆಗಳು ಬಂದರೂ ಗುಣಮುಖರಾಗುತ್ತಿರುವುದು. ಸದ್ಯಕ್ಕೆ ಬಂದಿರುವ ಕೊರೋನಾ ಮಹಾಮಾರಿಯ ಬಗ್ಗೆ ನಮ್ಮ ವೈದ್ಯಕೀಯ ಲೋಕದಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಆ ಕೊರೋನಾ ವೈರಸ್ ಅನ್ನು ತಡೆಗಟ್ಟುವ ಲಸಿಕೆಯನ್ನು ಸದ್ಯದಲ್ಲೇ ಕಂಡು ಹಿಡಿಯುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. 

Image

ವಾಲಿದ ತಲೆಯ ಟೆಡ್ಡಿ ಕರಡಿ

Submitted by addoor on Sat, 10/10/2020 - 19:19

ಪುಟ್ಟಣ್ಣ ದಂಪತಿಯ ಗೊಂಬೆ ಮಳಿಗೆಯಲ್ಲಿ ಹತ್ತುಹಲವು ಬಗೆಯ ಬೊಂಬೆಗಳು. ಮಳಿಗೆಯ ಹಿಂಭಾಗದ ಕೋಣೆಯಲ್ಲಿ ಅವರು ಕೈಯಿಂದಲೇ ಗೊಂಬೆಗಳನ್ನು ಮಾಡುತ್ತಿದ್ದರು. ಅವರಿಗೆ ವಯಸ್ಸಾಗಿದ್ದು ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ.

ಪುಟ್ಟಣ್ಣನ ಪತ್ನಿ ಪದ್ಮಿನಿ ಹೇಳಿದಳು, “ನಾವಿನ್ನು ಯಾರಿಗಾದರೂ ಗೊಂಬೆ ಮಾಡುವುದನ್ನು ಕಲಿಸಬೇಕು." ಕೆಲವೇ ದಿನಗಳಲ್ಲಿ ಅವರು ತಂಗಣ್ಣ ಎಂಬ ಯುವಕನನ್ನು ಗೊಂಬೆ ಮಾಡುವುದರಲ್ಲಿ ತರಬೇತಿ ಪಡೆಯಲಿಕ್ಕಾಗಿ ನೇಮಿಸಿಕೊಂಡರು. ತಂಗಣ್ಣ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದ. ಮೊದಲನೆಯ ವಾರದಲ್ಲಿ ಅವನು ಟೆಡ್ಡಿ (ಗೊಂಬೆ) ಕರಡಿಗಳನ್ನು ಮಾಡಿದ.

Image