ಬೇಯಿಸಿ ಮಸೆದ ಆಲೂಗೆಡ್ಡೆ (ಬಟಾಟೆ), ಬಟಾಣಿ, ಜೀರಿಗೆ, ಮೆಣಸಿನ ಹುಡಿ, ಆಮ್ ಚೂರು ಹುಡಿ, ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಉಪ್ಪು ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ (ಸ್ಲೈಸ್) ಮೇಲೆ ಸ್ವಲ್ಪ ನೀರು ಚಿಮುಕಿಸಿ ಎರಡು ಅಂಗೈಗಳ ಮಧ್ಯೆ ಇರಿಸಿ ಅದುಮಿರಿ. ತಯಾರಿಸಿದ ಬಟಾಟೆ ಮಿಶ್ರಣವನ್ನು ಬ್ರೆಡ್ ಹಾಳೆಯ ಒಂದು ಬದಿಯಲ್ಲಿ ಉದ್ದಕ್ಕೆ ಇರಿಸಿ ಚಾಪೆ ಮಡಚುವಂತೆ ಮಡಚಿರಿ. ಬದಿಗಳನ್ನು ಅದುಮಿ ಚೆನ್ನಾಗಿ ಸೀಲ್ ಮಾಡಿ. ಹದವಾಗಿ ಕಾದ ಎಣ್ಣೆಯಲ್ಲಿ ಕೆಂಪಗೆ ಕಾಯಿಸಿ.…