ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 13, 2025
ವೃತ್ತಿಯಲ್ಲಿ ರೇಡಿಯೋ ಜಾಕಿ (RJ) ಆಗಿರುವ ನಯನಾ ಶೆಟ್ಟಿಯವರ ಚೊಚ್ಚಲ ಕೃತಿ ‘ಈ ಪಯಣ ನೂತನ’. ಈ ಕೃತಿಯ ಮೂಲಕ ನಯನಾ ಶೆಟ್ಟಿ ನಮ್ಮನ್ನೆಲ್ಲಾ ‘ನಗುವ ನಾಳೆಗಳ ಕಡೆಗೆ’ ಕರೆದೊಯ್ಯುವ ಸಾಹಸ ಮಾಡಿದ್ದಾರೆ. ಬಿಡಿ ಬಿಡಿ ಬರಹಗಳನ್ನು ಲಹರಿ ರೂಪದಲ್ಲಿ ಬರೆದು ಓದುಗರನ್ನು ಸೆಳೆಯುವ ಪ್ರಯತ್ನ ಶ್ಲಾಘನೀಯ. ಈ ಕೃತಿಗೆ ಮುನ್ನುಡಿಯನ್ನು ಬರೆದು ಶುಭ ಹಾರೈಸಿದ್ದಾರೆ ಪತ್ರಕರ್ತ, ಅಂಕಣಕಾರ ‘ಜೋಗಿ’. ಅವರು ತಮ್ಮ ಮುನ್ನುಡಿ ‘ಅಕ್ಷರಯಾನಕ್ಕೆ ಹ್ಯಾಪಿ ಜರ್ನಿ’ ಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ… “…
ವಿಧ: ರುಚಿ
August 12, 2025
ಅವಲಕ್ಕಿಯನ್ನು ಸಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಹಾಲು, ಬೆಲ್ಲದ ಪುಡಿ ಹಾಕಿ ನಂತರ ಅವಲಕ್ಕಿ ಪುಡಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಐದು ನಿಮಿಷಕ್ಕೆ ಗಟ್ಟಿಯಾಗುತ್ತದೆ ನಂತರ ತುಪ್ಪ, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ತುಂಡುಗಳನ್ನು ಹಾಕಿ ಮತ್ತೆ ಐದು ನಿಮಿಷ ಬೇಯಿಸಿ ಗಟ್ಟಿಯಾಗಿ ತಳ ಬಿಟ್ಟಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ. -ವೀಣಾ ಶಂಕರ್
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 11, 2025
ಲೇಖಕರಾದ ಗಿರೀಶ ಶ್ರೀಪಾದ ಮೇವುಂಡಿ ಇವರು ‘ಓಯಸಿಸ್’ ಎನ್ನುವ ಬದುಕು-ಭಾವನೆ-ಯಶಸ್ಸು ಬಿಂಬಿಸುವ ೨೩ ಸ್ಫೂರ್ತಿಯ ಚಿಲುಮೆಗಳನ್ನು ಒಳಗೊಂಡ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಅವರು “ಮಾನವನ ವಿಕಾಸದ ಹಾದಿಯಿಂದ ಹಿಡಿದು ಇತ್ತೀಚಿನ ಆಧುನಿಕತೆಯ ಪ್ರಗತಿಯ ಪಥವನ್ನು ಅವಲೋಕಿಸಿದಾಗ ಈ ಅಗಾಧವಾದ ಬೆಳವಣಿಗೆಯಿಂದ ಮೂಲತಃ ನಾವೆಲ್ಲರೂ ಬದುಕಲು ಅಗತ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಹೊಂದಿ ಈ ವಿಕಸಿತ ಬುದ್ಧಿಯ ಪ್ರಭಾವದಿಂದ ಈ ಮೂಲಭೂತ ಅಗತ್ಯತೆಗಳಾಚೆ ಚಿಂತಿಸಿ ಇದರ ಪರಿಣಾಮವು ನಮ್ಮ ಬದುಕನ್ನು…
ವಿಧ: ರುಚಿ
August 10, 2025
ಒಂದು ಬೇಸಿನ್‌ನಲ್ಲಿ ಅವಲಕ್ಕಿ ಪುರಿ, ಹುರಿಗಡಲೆ, ಕೊಬ್ಬರಿ ತುಂಡುಗಳನ್ನು ಮಿಶ್ರಣ ಮಾಡಿಕೊಳ್ಳಿ. ಪಾತ್ರೆಯಲ್ಲಿ ಬೆಲ್ಲ, ಅದು ಮುಳುಗುವಷ್ಟು ನೀರು ಸೇರಿಸಿ, ಕರಗಿಸಿ ಸೋಸಿಕೊಳ್ಳಿ. ಬಾಣಲೆಯಲ್ಲಿ ಸೋಸಿದ ಬೆಲ್ಲವನ್ನು ಸಣ್ಣ ಉರಿಯಲ್ಲಿಡಿ. ಅಂಟಿನ ನೊರೆ ಬರುವಾಗ ಪುರಿಯ ಮಿಶ್ರಣ ಹಾಕಿ ಒಂದೆರಡು ಬಾರಿ ತಿರುವಿ ಉರಿ ಆರಿಸಿ ಬೇರೊಂದು ಅಗಲವಾದ ಪಾತ್ರೆಗೆ ವರ್ಗಾಯಿಸಿ, ಕೂಡಲೇ ಉಂಡೆಗಳನ್ನು ಕಟ್ಟಿ. -ಕೆ. ವಿ. ರಾಜಲಕ್ಷ್ಮಿ, ಬೆಂಗಳೂರು
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 08, 2025
ಹಣ ಗಳಿಸುವುದಕ್ಕಿಂತ ಗಳಿಸಿದ ಹಣವನ್ನು ಉಳಿಸಿಕೊಳ್ಳುವುದು. ಸುಮ್ಮನೇ ಹಣ ಮನೆಯಲ್ಲಿ ಭದ್ರವಾಗಿರಿಸಿಕೊಂಡರೆ ಅದು ಉಪಯೋಗಕ್ಕೆ ಬರುವುದಿಲ್ಲ. ಅದನ್ನು ಸರಿಯಾದ ಕಡೆ ಬಳಸಿಕೊಳ್ಳುವುದು, ವಿನಿಯೋಗಿಸುವುದು ಬಹು ಮುಖ್ಯ. ಹಣವನ್ನು ಬಳಸಲು ಕಲಿತವ ಕೋಟ್ಯಾಧೀಶನಾಗುತ್ತಾನೆ. ಪ್ರತಿಯೊಬ್ಬರಿಗೂ ಅಗತ್ಯವಾದ ಹಣಕಾಸಿನ ದಾರಿಯನ್ನು ಹುಡುಕಲು ಸಹಾಯ ಮಾಡಿದ್ದಾರೆ ಲೇಖಕಿ ಕಾಂಚನಾ ಹೆಗಡೆ. ಇವರು ‘ಮೈ ಮನಿ ಮ್ಯಾಪ್’ ಎನ್ನುವ ೧೪೦ ಪುಟಗಳ ಸೊಗಸಾದ ಕೃತಿಯನ್ನು ಬರೆದು ಪ್ರಕಟಿಸಿದ್ದಾರೆ. ‘ಮೈ ಮನಿ ಮ್ಯಾಪ್’…
ವಿಧ: ರುಚಿ
August 07, 2025
ಬಾಣಲೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು. ಹಾಕಿ ಸಣ್ಣ ಉರಿಯಲ್ಲಿಡಿ. ಬೆಲ್ಲ ಕರಗಿ ಉಂಡೆ ಪಾಕದ ಹದಕ್ಕೆ ಬಂದ ಕೂಡಲೇ, ಎರಡು ಚಮಚ ತುಪ್ಪ ಸೇರಿಸಿ ಉರಿ ಆರಿಸಿ, ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಅಗಲವಾದ ತಟ್ಟೆಗೆ ವರ್ಗಾಯಿಸಿ. ನಂತರ ಅಂಗೈಯಲ್ಲಿ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ. -ಕೆ. ವಿ. ರಾಜಲಕ್ಷ್ಮಿ, ಬೆಂಗಳೂರು
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 06, 2025
“ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ಯಾವ ವಯಸ್ಸಿನಲ್ಲಾದರೂ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತ ಹೋಗಬಹುದು ಎಂಬುದಕ್ಕೊಂದು ಸ್ಫೂರ್ತಿಯುತ ಉದಾಹರಣೆ ಈ ಪುಸ್ತಕ. ಪ್ರತಿ ಪಯಣವೂ ವಿಶಿಷ್ಟವಾದದ್ದು ಎಂಬ ಸರಳವಾದ ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳಲು ಸೋತಿರುವ ಸತ್ಯವನ್ನು ಅರ್ಥ ಮಾಡಿಸುವ ಪ್ರಯತ್ನವಿದು. ಆರಂಭಿಕ ಸೋಲುಗಳಿಂದ…
ವಿಧ: ರುಚಿ
August 05, 2025
ಮಾವಿನ ಸಿಪ್ಪೆ ತೆಗೆದು ಉದ್ದನೆಯ ತುಂಡುಗಳಾಗಿಸಿ. ಪನೀರ್ ಅನ್ನು ಚೆನ್ನಾಗಿ ಕಡೆದು ಅದಕ್ಕೆ ಸಕ್ಕರೆ, ಏಲಕ್ಕಿ, ಬಾದಾಮಿ ಬೆರೆಸಿರಿ. ಮಾವಿನ ಪ್ರತಿ ತುಂಡಿನ ಉದ್ದಕ್ಕೂ ಈ ಪನೀರ್ ಮಿಶ್ರಣ ಹರಡಿ ನೀಟಾಗಿ ರೋಲ್ ಮಾಡಿ. ಇದರ ಮೇಲೆ ಪಿಸ್ತಾ, ಸ್ಟ್ರಾಬೆರಿ ಉದುರಿಸಿ, 1 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ. -ಶಿವಲೀಲಾ ಸೊಪ್ಪಿನಮಠ, ಕುಕನೂರು
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 04, 2025
“ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ ಕುರಿತಾದ ಅವರ ಬದ್ಧತೆ ಮತ್ತು ಬದುಕನ್ನು ರೂಪಕಗಳ ಮೂಲಕ ಹುಡುಕಹೊರಟಿರುವ ಕವಿಯ ಆದರ್ಶ ಬೇರೆಬೇರೆಯಾಗುವುದೇ ಇಲ್ಲ. ಇವೆರಡನ್ನೂ ಪಾಕಮಾಡುತ್ತ ಥಟ್ಟನೆ ಓದುಗರನ್ನು ಹೊಸ ದರ್ಶನಕ್ಕೆ ಒಡ್ಡುವ ಅವರ ನಾಟಕೀಯ ಸಮಯದ ಜಾಣ್ಮೆ ನನಗೆ ಅತಿ ಪ್ರಿಯವಾದದ್ದು. ಅವರ ಸಾಮಾಜಿಕ ಪ್ರಜ್ಜೆ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
August 03, 2025
ತಮ್ಮ ವೃತ್ತಿ ಜೀವನದ ಅನುಭವಗಳನ್ನು ದಾಖಲಿಸುವವರು ತೀರಾ ವಿರಳ. ಇದರಿಂದಾಗಿ, ಸಾವಿರಾರು ಸಮರ್ಥ ಅಧಿಕಾರಿಗಳ ಹಾಗೂ ಉನ್ನತ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದವರ ಜೀವನಾನುಭವದ ಪಾಠಗಳು ಮುಂದಿನ ತಲೆಮಾರಿನವರಿಗೆ ಸಿಗದಂತಾಗಿದೆ. ಇದಕ್ಕೆ ಅಪವಾದವೆಂಬಂತೆ, ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಪ್ರಿನ್ಸಿಪಾಲರಾಗಿ, ಹಲವಾರು ಸವಾಲುಗಳಿದ್ದರೂ ಅವನ್ನೆಲ್ಲ ಎದುರಿಸಿ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಡಾ.ಉದಯ ಕುಮಾರ್ ಇರ್ವತ್ತೂರು ತಮ್ಮ ಅಮೂಲ್ಯ ಅನುಭವಗಳನ್ನು ಈ ಪುಸ್ತಕದಲ್ಲಿ…