ಅವಲಕ್ಕಿ ಪುರಿ ಉಂಡೆ

ಅವಲಕ್ಕಿ ಪುರಿ ಉಂಡೆ

ಬೇಕಿರುವ ಸಾಮಗ್ರಿ

ಅವಲಕ್ಕಿ ಪುರಿ (ಚರುಮುರಿ) - 4 ಪಾವು, ಹುರಿಗಡಲೆ-1/4 ಪಾವು, ಸಣ್ಣಗೆ ಹೆಚ್ಚಿದ ಒಣಕೊಬ್ಬರಿ- 1/4 ಪಾವು, ಬೆಲ್ಲ-ಎರಡು ಉಂಡೆ (ಅಂದಾಜು 1/2 ಕೆ.ಜಿ)

ತಯಾರಿಸುವ ವಿಧಾನ

ಒಂದು ಬೇಸಿನ್‌ನಲ್ಲಿ ಅವಲಕ್ಕಿ ಪುರಿ, ಹುರಿಗಡಲೆ, ಕೊಬ್ಬರಿ ತುಂಡುಗಳನ್ನು ಮಿಶ್ರಣ ಮಾಡಿಕೊಳ್ಳಿ. ಪಾತ್ರೆಯಲ್ಲಿ ಬೆಲ್ಲ, ಅದು ಮುಳುಗುವಷ್ಟು ನೀರು ಸೇರಿಸಿ, ಕರಗಿಸಿ ಸೋಸಿಕೊಳ್ಳಿ. ಬಾಣಲೆಯಲ್ಲಿ ಸೋಸಿದ ಬೆಲ್ಲವನ್ನು ಸಣ್ಣ ಉರಿಯಲ್ಲಿಡಿ. ಅಂಟಿನ ನೊರೆ ಬರುವಾಗ ಪುರಿಯ ಮಿಶ್ರಣ ಹಾಕಿ ಒಂದೆರಡು ಬಾರಿ ತಿರುವಿ ಉರಿ ಆರಿಸಿ ಬೇರೊಂದು ಅಗಲವಾದ ಪಾತ್ರೆಗೆ ವರ್ಗಾಯಿಸಿ, ಕೂಡಲೇ ಉಂಡೆಗಳನ್ನು ಕಟ್ಟಿ.

-ಕೆ. ವಿ. ರಾಜಲಕ್ಷ್ಮಿ, ಬೆಂಗಳೂರು