ಎಲ್ಲ ಪುಟಗಳು

ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
March 03, 2024
ಉತ್ತರ ಕನ್ನಡದ ಪರಿಸರ ಲೇಖಕ ಶಿವಾನಂದ ಕಳವೆಯವರು 1994ರಿಂದೀಚೆಗೆ ಒಂದು ದಶಕದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಅಲೆದಾಡಿದಾಗಿನ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿನ 31 ಬರಹಗಳು “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿದ್ದವು. ಶಿವಾನಂದ ಕಳವೆ ಪುಸ್ತಕದ “ಮೊದಲ ಮಾತಿ”ನಲ್ಲಿ “ಚಿಟ್ಟೆ ಹಾರಾಡಿದ್ದರ” ಹಿನ್ನೆಲೆಯನ್ನು ಹೇಳುತ್ತಾರೆ: “ಮರದ ಉಂಗುರ ವಿಶ್ಲೇಷಣೆಯಲ್ಲಿ ನೆಲದ ಪರಿಸರ ಚರಿತ್ರೆ ಸಾಧ್ಯ. ಡೆಂಡ್ರಾಕ್ರೊನಾಲಜಿ ತಜ್ನರ ವರದಿಗಳು ಮರಗಳ…
ಲೇಖಕರು: Kavitha Mahesh
ವಿಧ: ರುಚಿ
March 03, 2024
ತೆಂಗಿನ ತುರಿ, ಹುಣಸೆ ಹಣ್ಣು, ಒಣ ಮೆಣಸಿನ ಕಾಯಿ, ಎಳ್ಳು ಹುಡಿ, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ರುಬ್ಬಿದ ಮಿಶ್ರಣ, ಕಲ್ಲಂಗಡಿ ಹಣ್ಣಿನ ತಿರುಳು, ಉಪ್ಪು, ಬೆಲ್ಲ ಸೇರಿಸಿ ಕುದಿಸಿದರೆ ರುಚಿಯಾದ ಕಲ್ಲಂಗಡಿ ಹಣ್ಣಿನ ಗೊಜ್ಜು ರೆಡಿ. ಚಪಾತಿಯೊಂದಿಗೆ ಇಲ್ಲವೇ ಅನ್ನದೊಂದಿಗೆ ಸವಿಯಲು ರುಚಿಕರ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 02, 2024
ಗೆಳೆಯ ರಾಯ ನಿವೃತ್ತನಾಗಿ ತನ್ನ ಊರು ಸೇರಿಕೊಂಡಿದ್ದ. ಅದಕ್ಕೂ ಮೊದಲು ನನಗೆ ಆಗೀಗ ಭೆಟ್ಟಿಯಾಗುತ್ತಿದ್ದನಷ್ಟೇ. ಆ ಕುರಿತು ಕೆಲ ಸಂಗತಿಗಳನ್ನು ಸುಮಾರು ಮೂರು ವರ್ಷಗಳ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈಗ ಬಹಳ ದಿನಗಳ ನಂತರ ನಮ್ಮ ಊರಿಗೆ ಬಂದಿದ್ದ . ನನಗೆ ಅವನ ಭೆಟ್ಟಿಯಾಯಿತು.   ಈಚಿನ ದಿನಗಳಲ್ಲಿ ಈತ ಏನು ಮಾಡಿಕೊಂಡಿದ್ದಾನೆ ಎಂಬ ನನ್ನ ಕುತೂಹಲವನ್ನು ತಣಿಸಿದ್ದು ಹೀಗೆ - ಇವನಿಗೆ Star Maker ಮತ್ತು Smule ಎಂಬ ಮೊಬೈಲ್ ಆ್ಯಪ್ ಗಳ ಪರಿಚಯ ಆಯಿತಂತೆ. ಅವುಗಳು ಹಾಡುಗಳ ಹುಚ್ಚು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 01, 2024
ಖ್ಯಾತ ಆಂಗ್ಲ ಬರಹಗಾರರಾದ ಚಾರ್ಲ್ಸ್ ಲುಡ್ಟಿಜ್ ಡಾಜ್ ಸನ್ (Charles Lutwidge Dodgson) ಲೂಯಿ ಕರೋಲ್ ಎಂಬ ಗುಪ್ತನಾಮದಲ್ಲಿ ಬರೆದ ಆಲೀಸ್ ಇನ್ ವಂಡರ್ ಲ್ಯಾಂಡ್ (Alice in Wonderland) ಎಂಬ ಮಕ್ಕಳ ಕಥಾ ಸಂಕಲನವನ್ನು ಹೊರತಂದಿದ್ದರು. ಕನ್ನಡದ ಖ್ಯಾತ ಸಾಹಿತಿ ನಾ ಕಸ್ತೂರಿ ಇವರು ಈ ಕಥಾ ಸಂಕಲನವನ್ನು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇಂಗ್ಲಿಷ್ ನ ಆಲೀಸ್ ಕನ್ನಡಕ್ಕೆ ಬರುವಾಗ ಪಾಪಚ್ಚಿ ಆಗಿದ್ದಾಳೆ.  ಕನ್ನಡ ಪುಸ್ತಕ ಪ್ರಾಧಿಕಾರವು ೧೯೩೫, ೧೯೭೩, ೧೯೯೮ ವರ್ಷಗಳಲ್ಲಿ ಈ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 28, 2024
ವೃತ್ತಿಯಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಈಗ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ರತ್ನಾ ಕೆ ಭಟ್ ತಲಂಜೇರಿ (ರತ್ನಕ್ಕ) ಇವರು ಬರೆದ ಗಝಲ್ ಗಳ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. “ಗಝಲ್ ಬರವಣಿಗೆಯಲ್ಲಿ ನುರಿತವಳು ನಾನಲ್ಲ" ಎಂದು ಪ್ರಾಮಾಣಿಕವಾಗಿಯೇ ಹೇಳುವ ರತ್ನಕ್ಕ ಇದುವರೆಗೆ ಬರೆದ ಗಝಲ್ ಗಳನ್ನೆಲ್ಲಾ ಸೇರಿಸಿ ಸಂಕಲನದ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಇವರ ಸಹೋದರ ಹಾಗೂ ಸಾಹಿತಿ ಹಾ ಮ ಸತೀಶ ಮತ್ತು ಕಥಾಬಿಂದು ಪ್ರಕಾಶನದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 26, 2024
ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್’ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿ ಮೊದಲು ಪ್ರಕಟವಾದದ್ದು ೧೯೭೯ರಲ್ಲಿ. ಆಗ ಅದನ್ನು ಪ್ರಕಾಶಿಸಿದ್ದು ಬೆಂಗಳೂರಿನ ಜಗತ್ ಸಾಹಿತ್ಯ ಮಾಲೆ ಇವರು. ಈಗ ಕನ್ನಡ ಅನುವಾದ ಸಾಹಿತ್ಯ ಅಕಾಡೆಮಿಯವರು ಮರು ಮುದ್ರಣ ಮಾಡಿದ್ದಾರೆ. ಈ ಬಗ್ಗೆ ಈ ಮಾಲಿಕೆಯ ಪ್ರಧಾನ…
ಲೇಖಕರು: Kavitha Mahesh
ವಿಧ: ರುಚಿ
February 25, 2024
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿಮೆಣಸಿನ ಕಾಯಿ, ಈರುಳ್ಳಿ, ಟೊಮ್ಯಾಟೋ, ದೊಣ್ಣೆ ಮೆಣಸಿನಕಾಯಿಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ ಶುಂಠಿ ತುರಿ, ಜೀರಿಗೆ ಹುಡಿ, ಹುಣಸೆ ರಸ, ನಿಂಬೆ ರಸ, ಸಕ್ಕರೆ, ಉಪ್ಪು, ಚಾಟ್ ಮಸಾಲೆ ಹಾಕಿ ಕಲಕಿ ಒಲೆಯಿಂದ ಇಳಿಸಿರಿ. ಈ ಮಿಶ್ರಣಕ್ಕೆ ಇಡ್ಲಿ ತುಂಡುಗಳು, ಖಾರಾ ಸೇವ್, ಬೂಂದಿ ಕಾಳು, ಹಾಕಿ ಚೆನ್ನಾಗಿ ಕಲಕಿ. ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪುಗಳಿಂದ ಅಲಂಕರಿಸಿ, ರುಚಿಯಾದ ಇಡ್ಲಿ ಚಾಟ್ ತಿನ್ನಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 23, 2024
'ಮುದ್ರಾ ಪ್ರವೇಶ' ಎಂಬ ಕೃತಿಯು ಯೋಗಮುದ್ರಾ ವಿಜ್ಞಾನವನ್ನು, ಮುದ್ರೆಗಳನ್ನು ಅಭ್ಯಸಿಸುವ ಕ್ರಮವನ್ನು ಬಣ್ಣಿಸಿರುವ ಕೃತಿ. ಸಾಮಾನ್ಯ ಓದುಗನಿಗೂ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ ಕೆ ರಂಗರಾಜ ಅಯ್ಯಂಗಾರ್ ಇವರು. ಈ ಕೃತಿಯಲ್ಲಿ ಅಧ್ಯಾತ್ಮಿಕ ಮುದ್ರೆಗಳು, ಶಾಸ್ತ್ರೀಯ ಹಾಗೂ ಪೂಜಾ ಮುದ್ರೆಗಳು, ಶ್ರೀ ಗಾಯತ್ರೀ ಮುದ್ರೆಗಳು, ಚೈತನ್ಯದಾಯೀ ಮುದ್ರೆಗಳು, ದೇವತಾ ಮುದ್ರೆಗಳು, ಚಿಕಿತ್ಸಾ ಮುದ್ರೆಗಳು, ಹಠಯೋಗ ಮುದ್ರೆಗಳು, ನರ್ತನ ಮುದ್ರೆಗಳು, ತಪ್ತ ಮುದ್ರೆಗಳು ಇತ್ಯಾದಿಗಳ ಬಗ್ಗೆ ಸವಿವರ ಹಾಗೂ…
ಲೇಖಕರು: kmurthys
ವಿಧ: ಬ್ಲಾಗ್ ಬರಹ
February 23, 2024
ನಗನಾಣ್ಯ ಇರಲೇನು ಝಣಝಣಣ ಎನ್ನುತಲಿ ನಗೆಯು ಇಲ್ಲದಿರೆ ಜೀವನವು ಭಣಭಣವು | ಬಗೆಬಗೆಯ ಚಿಂತೆಗಳ ಹಗುರದಲಿ ತೇಲಿಸುವ ನಗೆ ಎಂದಿಗೂ ಇರಲಿ ಪರಮಾತ್ಮನೆ ||  
ಲೇಖಕರು: kpbolumbu
ವಿಧ: ಬ್ಲಾಗ್ ಬರಹ
February 22, 2024
ಜಗದ ಕನ್ನಡಿಯೊಳಾ ತೋರಿಕೆಯನಿರಗೊಡುತ ತನ್ನೊಳಿರವಿನ ನಿಜವ ತೋರ್ದಡಿಯ ಪೊಡಮಡುತ | ನಿದಿರೆಯಿಂದೆಚ್ಚರಿತು ತನ್ನಿರವಿನಚ್ಚರಿಯ ತಾನು ತಾನರಿಯೆ ಬಗೆಯ ತೋರ್ದಡಿಯ ಪೊಡಮಡುತ || ೧ ||   ಮೊಳಕೆಯೊಳಗಣ ಆ ಮುಗುಳುಗಳು ಬಿರಿವಡೆದು ತನ್ನೊಳಚ್ಚರಿಯನಿರಗೊಟ್ಟಡಿಯ ಪೊಡಮಡುತ | ದೇಶಕಾಲಗಳದೀ ತೋರಿಕೆಯನಣಿಗೊಳಿಸಿ ನಿರ್ವಿಕಲ್ಪವ ಮಾರ್ಪಡಿಪಡಿಯ ಪೊಡಮಡುತ || ೨ ||   ಮಿಡಿತವದೊಂದರಿಂದೀಯಿದರನಳಗೊಳಿಸಿ ಈಯಿದದೆಂಬುದನರಿಯಗೊಟ್ಟಡಿಯ ಪೊಡಮಡುತ | ನಿಜದರಿವನಿರಗೊಡುತ ಇಳೆಯೊಳಾ ಪರಮವನು ಮರುವಾರಿ ಬಾರಗೊಡದಡಿಯ …