ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 22, 2020
ಭಗವದ್ಗಿತೆಯಲ್ಲಿ 'ಲೋಕಸಂಗ್ರಹ ' ದ  ಪ್ರಸ್ತಾಪ ಇದೆ.  ಈ ಶಬ್ದದ ಕುರಿತು ಅಂತರ್ಜಾಲದಲ್ಲಿ ಹುಡುಕಾಡಿದಾಗ ತಿಳಿದು ಬಂದ ಸಂಗತಿ ಈ ಕೆಳಗಿದೆ. ಸಾಮಾನ್ಯ ಜನರನ್ನು ತಪ್ಪುದಾರಿಗೆ ಹೋಗದಂತೆ ಧರ್ಮದ ಮರ್ಯಾದೆಯಲ್ಲಿರಲು ದಾರಿ ತೋರಿಸಲು ಮಾಡುವ ಕೆಲಸವನ್ನು ಆಚಾರ್ಯ ಶಂಕರರು 'ಲೋಕಸಂಗ್ರಹ' ಎಂದಿದ್ದಾರೆ. ಲೋಕಕ್ಕೆ ಮಾದರಿಯಾಗಿ, ನೋಡಿದೊಡನೆಯೇ ಕೆಟ್ಟದಾರಿ ಬೇಡ, ಒಳ್ಳೆಯ ದಾರಿಯಲ್ಲಿ ಸಾಗಬೇಕೆಂಬ ಪ್ರೇರಣೆ ನೀಡುವ ಸಾಧು-ಮಹಾತ್ಮರೇ ನಿಜವಾದ ಲೋಕಸಂಗ್ರಹ ಮಾಡುವವರು. ಕೇವಲ ಸಮಾಜಸೇವೆ ಲೋಕಸಂಗ್ರಹವಾಗದು.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 21, 2020
ಕಾವ್ಯ ಸಂಗಮವೆನ್ನುವುದು ಹೆಸರೇ ಹೇಳುವಂತೆ ಕವನಗಳ ಸಂಗ್ರಹ. ಕರಾವಳಿ ತೀರದ ಕವಿ/ಕವಯತ್ರಿಯವರ ೯೬ ಕವನಗಳು ಈ ಪುಸ್ತಕದಲ್ಲಿವೆ. ಇವನ್ನೆಲ್ಲ ಅತ್ಯಂತ ಆಸಕ್ತಿಯಿಂದ ಸಂಪಾದನೆ ಮಾಡಿದವರು ಸ್ವತಃ ಕವಿಯಾದ ಮೇಟಿ ಮುದಿಯಪ್ಪ ಇವರು. ಬೆನ್ನುಡಿಯಲ್ಲಿ ಕವಿ, ವಿಮರ್ಶಕ ವಿ.ಗ.ನಾಯಕ್ ಇವರು ಬರೆಯುತ್ತಾರೆ ‘ಕವಿ ಮೇಟಿಯವರು ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ರಂಗಕಲಾವಿದರಾಗಿ, ಸಂಘಟಕ, ಸಮಾಜ ಸೇವಕನಾಗಿ ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಈಗಾಗಲೇ ಹಲವಾರು ಕೃತಿಗಳನ್ನು ಸಮಾಜಕ್ಕೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 20, 2020
ಹಿಂದೆ ಯಾವಾಗಲೋ ನಮ್ಮ ಹರಿಪ್ರಸಾದ್  ನಾಡಿಗರು ಈ ಕಿರು ಕಾದಂಬರಿಯ ಬಗ್ಗೆ ಹೇಳಿದ್ದರು. ರಸ್ಕಿನ್ ಬಾಂಡ್ ತುಂಬಾ ಒಳ್ಳೆಯ ಬರಹಗಾರ.  ತುಂಬಾ  ಸರಳ ಭಾಷೆ ಬಳಸುತ್ತಾರೆ.  ಅವರು ಬರಹದ ಓದು ತುಂಬಾ ಸುಖಕರ. ಆರ್ ಕೆ ನಾರಾಯಣ್ ಅವರ ಬರಹಗಳ ತರಹ ಹೇಳಬಹುದು .  (ಅವರ  ' ರಸ್ಟಿಯ   ಸಾಹಸಗಳು' ಎಂಬ ಪುಸ್ತಕ ಕನ್ನಡದ ಅನುವಾದದಲ್ಲಿ ಓದಿದ್ದೆ.  Digital library of India ದಿಂದ ನಾನು ಇಳಿಸಿಕೊಂಡಿದ್ದ ಅದು ನನ್ನ ಬಳಿ pdf ರೂಪದಲ್ಲಿ ಇದೆ. ಬೇಕಾದವರು ನನ್ನನ್ನು  9920759710 ಸಂಖ್ಯೆಗೆ ಒಂದು…
ಲೇಖಕರು: Sharada N.
ವಿಧ: ರುಚಿ
July 20, 2020
ಅಕ್ಕಿಯನ್ನು ೨ ಗಂಟೆ ನೆನೆಸಿ ತೆಗೆದಿಡಿ. ಅದನ್ನು ಹಲಸಿನ ಹಣ್ಣಿನ ಸೊಳೆ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿ ದಪ್ಪನೆ ಬರುವಂತೆ ನೀರು ಹಾಕದೇ ರುಬ್ಬಿ. ಅದಕ್ಕೆ ಎಳ್ಳು ಸೇರಿಸಿ. ಒಂದು ಕಾವಲಿಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ಬಳಿಕ ರುಬ್ಬಿದ ಹಿಟ್ಟನ್ನು ಗೋಲಿಯಾಕಾರದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಸರಿಯಾಗಿ ಕರಿದ ಮೇಲೆ ಗಾರಿಗೆಯನ್ನು ಹೊರ ತೆಗೆದು ಬಿಸಿ ಬಿಸಿಯಾಗಿ ತಿನ್ನಿರಿ. ಇದಕ್ಕೆ ಹಲಸಿನ ಹಣ್ಣಿನ ಮುಳಕ ಎಂದೂ ಕರೆಯುತ್ತಾರೆ.
ಲೇಖಕರು: Sharada N.
ವಿಧ: ರುಚಿ
July 19, 2020
ಅಕ್ಕಿ ಮತ್ತು ತೊಗರಿಬೇಳೆಯನ್ನು ನೀರಿನಲ್ಲಿ ೨ ಗಂಟೆ ನೆನೆಸಿ. ನಂತರ ಅದಕ್ಕೆ ಕೆಂಪು ಮೆಣಸು, ಉಪ್ಪು, ಇಂಗು ಸೇರಿಸಿ ಕಡೆಯಿರಿ. ಹಿಟ್ಟು ಹೆಚ್ಚು ನಯವಾಗದಂತೆ ಕಡೆದು ಅದಕ್ಕೆ ಸಣ್ಣದಾಗಿ ಕತ್ತರಿಸಿದ ಕ್ಯಾಬೇಜ್ ಹಾಗೂ ಈರುಳ್ಳಿಯನ್ನು ಸೇರಿಸಿ. ಕಾವಲಿಯನ್ನು ಒಲೆಯ ಮೇಲೆ ಕಾಯಿಸಿ ಅದಕ್ಕೆ ಈ ಮಿಶ್ರಣವನ್ನು ರೊಟ್ಟಿ ತಟ್ಟುವಂತೆ ಕೈಯಿಂದ ತಟ್ಟಿ. ಸರಿಯಾಗಿ ಕಾದ ಬಳಿಕ ಕಾವಲಿಯಿಂದ ತೆಗೆಯಿರಿ. ಬಿಸಿ ಬಿಸಿಯಾಗಿ ಊಟಕ್ಕೆ ಹಿತಕರವಾಗಿರುತ್ತದೆ.( ಖಾರ ಜಾಸ್ತಿ ಬೇಕಾದಲ್ಲಿ ಮೆಣಸನ್ನು ಜಾಸ್ತಿ ಹಾಕಿ) 
ಲೇಖಕರು: Sharada N.
ವಿಧ: ರುಚಿ
July 18, 2020
ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಕಡಿಯುವ ಕಲ್ಲಿನಲ್ಲಿ ನೀರು ಹಾಕದೇ ರುಬ್ಬಬೇಕು. ರುಬ್ಬುವ ಹಿಟ್ಟು ನಯವಾದಾಗ ಒಂದು ಪಾತ್ರೆಯಲ್ಲಿ ತೆಗೆದು ಇಡಿ. ಬಾಳೆ ಎಲೆಯನ್ನು ಒಲೆಯಲ್ಲಿ ಬಾಡಿಸಿ ಅದರ ಮೇಲೆ ಮೊದಲು ರುಬ್ಬಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹರಡಿ, ಮಡಚಿ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ. ೪೦ ರಿಂದ ೪೫ ನಿಮಿಷ ಬೇಯಿಸಿ. ನಂತರ ಪಾತ್ರೆಯ ಮುಚ್ಚಳ ತೆಗೆದು ಬೆಂದಿದೆಯಾ ಎಂದು ಪರೀಕ್ಷಿಸಿ. ಸರಿಯಾಗಿ ಬೆಂದ ಬಳಿಕ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ತುಪ್ಪ ಹಾಗೂ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 16, 2020
ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  ಇದು ಚಲನಚಿತ್ರವೂ  ಆಗಿದೆ ಇದು ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ತಂದೆ ಮಗ, ಮೊಮ್ಮಗನ ಕಥೆಯನ್ನು ಹೇಳುತ್ತದೆ. ಚೆನ್ನಾಗಿದೆ. ಬಹಳ ದೊಡ್ಡದೂ ಏನಲ್ಲ,   ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಏಕೋ ಇದನ್ನು ಓದಲು ಆರಂಭಿಸಿದೆ. ಏನಿದು ಈ ತಾರೀಕು ? ಇದು ರಾಷ್ಟ್ರೀಯ ಧ್ವಜದಿನ . ಏನು ಹಾಗಂದರೆ ? ಇಂಟರ್ ನೆಟ್ಟಿನಲ್ಲಿ ನೋಡಿದೆ . ಅನೇಕ ಕುತೂಹಲಕರ ಸಂಗತಿಗಳು ದೊರಕಿದವು. ಭಾರತ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 13, 2020
ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಾಶ್ಮೀರದ ಕಲ್ಹಣನು ೧೨ ನೇ ಶತಮಾನದಲ್ಲಿ ರಚಿಸಿದ ‘ರಾಜತರಂಗಿಣಿ' ಸಂಸ್ಕೃತ ಕವಿಗಳು ಇತಿಹಾಸಕ್ಕೂ ಮಹತ್ವ ನೀಡಿದುದಕ್ಕೆ ಒಂದು ಉಜ್ವಲ ನಿದರ್ಶನ. ಎಂಟು ‘ತರಂಗ'ಗಳಲ್ಲಿ ಹತ್ತಿರ ಹತ್ತಿರ ಎಂಟು ಸಾವಿರ ಪದ್ಯಗಳಲ್ಲಿ ಹರಡಿಕೊಂಡಿರುವ ಈ ಕಾವ್ಯ ಪ್ರಾಚೀನ ಕಾಲದ ಘಟನೆಗಳನ್ನು ಇತಿಹಾಸ ಮರ್ಯಾದೆಯಿಂದ ದಾಖಲೆ ಮಾಡಿಕೊಂಡಿರುವ ಅಪೂರ್ವ ಗ್ರಂಥ ಇದು.  ಕಲ್ಹಣನ ‘ರಾಜ ತರಂಗಿಣಿ'ಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 12, 2020
301 ವರ್ಷಗಳ ಹಿಂದೆ 1719 ರಲ್ಲಿಡೇನಿಯಲ್ ಡೇಫೋ ಎಂಬಾತನು ಬರೆದ  ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ ಪ್ರಕಟವಾಯಿತು. ಅದರಲ್ಲಿ ಸಮುದ್ರಯಾನದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ರಾಬಿನ್ಸನ್ ಕ್ರುಸೋ ಎಂಬ ಮನುಷ್ಯ ಸಮುದ್ರಯಾನ ಮಾಡುವಾಗ ಅವನ ನೌಕೆ ಅಪಘಾತಕ್ಕೆ ಸಿಲುಕಿ ಒಂದು ನಿರ್ಜನ ದ್ವೀಪದಲ್ಲಿ ಎಷ್ಟೋ  ವರ್ಷಗಳ ಕಾಲ ಏಕಾಕಿಯಾಗಿ ಬದುಕುವ ಪರಿಸ್ಥಿತಿ ಒದಗುತ್ತದೆ. ಆ ಕಾಲದಲ್ಲಿ ಅವನು ತನ್ನ ಅಗತ್ಯಗಳನ್ನು ಹೇಗೆ ಪೂರೈಸಿಕೊಂಡು ಬದುಕಿದನು ಎಂಬ ಸಾಹಸದ ಕಥೆ ಇದೆ. ಅದು ತುಂಬಾ ಜಗತ್ಪ್ರಸಿದ್ಧವಾದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 10, 2020
ಸ್ವಾತಂತ್ರ್ಯವೆಂಬುವುದು ಕೇವಲ ರಾಜಕೀಯ ಸ್ಥಿತ್ಯಂತರವಲ್ಲ. ಅದು ಎಲ್ಲ ಜೀವನ ಕ್ಷೇತ್ರಗಳನ್ನೂ ಸ್ವಾಭಿಮಾನದಿಂದ ಉಜ್ಜೀವಿಸಬಲ್ಲ ಸ್ವಧರ್ಮ ನಿಷ್ಠೆ- ಎಂಬ ಮನವರಿಕೆಯನ್ನು ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಭಾರತೀಯರಲ್ಲಿ ಮೂಡಿಸಿ ಸ್ವಾತಂತ್ರ್ಯ ಸಂಘರ್ಷಕ್ಕೆ ಅನುಪಮ ಯೋಗದಾನ ಮಾಡಿದವರು ಸಿಸ್ಟರ್ ನಿವೇದಿತಾ ಇವರು. ಈ ಸಂಘರ್ಷಕ್ಕೆ ಒಂದು ಆಯಾಮ ನೀದಲು ‘ಆಕ್ರಮಕ ಹಿಂದೂಧರ್ಮ' ಎಂಬ ಕಲ್ಪನೆಯನ್ನು ಹುಟ್ಟುಹಾಕಿದವರು ಇವರೇ. ಸ್ವಾಮೀ ವಿವೇಕಾನಂದರ ಶಿಷ್ಯೆಯಾಗಿದ್ದು ತಮ್ಮ ಗುರುಗಳ ಆಶಯದಂತೆ…