"ಮಕ್ಕಳಿಗೆ ಫಾರೆಕ್ಸ್, ಸೆರೆಲಾಕ್ ಇಂತಹ ಕೃತಕ ಆಹಾರ ಯಾಕೆ ಕೊಡ್ತೀರಿ? ಈ ಭೂಮಿ ಅದಕ್ಕಿಂತ ಆರೋಗ್ಯದಾಯಕವಾದ ಆಹಾರಗಳನ್ನು ನಮಗೆ ಕೊಟ್ಟಿದೆ. ಉದಾಹರಣೆಗೆ ಗರಿಕೆ ಹುಲ್ಲು ಮಕ್ಕಳಿಗೆ ಒಳ್ಳೆಯ ಪೌಷ್ಟಿಕ ಆಹಾರ. ಆ ಕೃತಕ ಆಹಾರ ಒಂದು ಕಪ್ ಕೊಡುವ…
ಕೆಲವು ದಿನಗಳ ಹಿಂದೆ ನಾನು ಕರ್ನಾಟಕದ ಒಂದು ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಹೋಗಿದ್ದೆ. ಅಲ್ಲಿ ನೂರಾರು ಜನರು ದೇವರ ದರ್ಶನಕ್ಕಾಗಿ ನೆರೆದಿದ್ದರು. ಆದರೆ ಯಾರೂ ಮಾಸ್ಕ್ ಧರಿಸಿರಲಿಲ್ಲ. ಅದನ್ನು ಧರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಮತ್ತು…
ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು ಎಂಬ ಪುಸ್ತಕವನ್ನು ಕಮಲಾ ಹಂಪನಾ ಇವರು ಬರೆದಿದ್ದಾರೆ. ಅವರು ತಮ್ಮ ‘ಮೊದಲ ಮಾತು’ ಎಂಬ ಮುನ್ನುಡಿಯಲ್ಲಿ ಉಲ್ಲೇಖಿಸಿರುವಂತೆ “ಸ್ವಾತಂತ್ರ್ಯ ಪೂರ್ವದಲ್ಲಿ ತುಳುನಾಡು ಮದರಾಸು…
ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ - ಮಹಾತ್ಮಾ ಗಾಂಧಿ.
ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ. ಹೊಸ ಹೊಸ ತಾಣಗಳು…
‘ನಮ್ಮಲ್ಲಿ ಸಾಮರ್ಥ್ಯವಿದೆ’ ಎಂದು ಸುಮ್ಮನೆ ಕುಳಿತರೆ ಏನೂ ಸಿಗದು. ಇರುವ ಸಾಮರ್ಥ್ಯವನ್ನು ಸರಿಯಾದ ವಯಸ್ಸಿನಲ್ಲಿ, ಸರಿಯಾದ ದಾರಿಯಲ್ಲಿ, ಸಮರ್ಪಕವಾಗಿ ಯೋಚಿಸಿ, ಯೋಜನೆಗಳನ್ನು ರೂಪಿಸಿ ಬಳಸಿಕೊಂಡರೆ ಯಶಸ್ವೀ ಬದುಕು ನಮ್ಮದಾಗುವುದು.…
ಮನ ಮನವ ತೊಳೆಯಬೇಕು
ಭ್ರಷ್ಟಾಚಾರವ ಓಡಿಸಬೇಕು
ಕಛೇರಿಯ ಒಳಗಿರುವ ಭ್ರಷ್ಟರ
ಹೊರಗೆ ಒದ್ದು ಹಾಕಬೇಕು
ಕೆಲಸಕಾಗಿ ಲಂಚವ ಪಡೆವ
ನೌಕರರ ಬಂಧಿಸಬೇಕು
ಸರಕಾರವೆ ಮುಂದೆ ನಿಂತು
ಕ್ರಮವ ಕೈಗೊಳ್ಳಬೇಕು
ನ್ಯಾಯಾಲಯದಲ್ಲಿ ಕಠಿಣ
ಕನ್ನಡ ಭಾಷೆಯ ಉಳಿವಿಗೆ ಪತ್ರದ ಅಭಿಯಾನ, ಅನ್ಯಭಾಷೆಗಳ ಹೇರಿಕೆ ಬಗ್ಗೆ ರಸ್ತೆ ಮಧ್ಯ ಪ್ರತಿಭಟನೆ ಹೀಗೆ ಹೋರಾಟಗಳನ್ನು ಆಯೋಜಿಸುತ್ತಾ ಒಂದಷ್ಟು ಸನ್ಮಾನ ಬಿರುದು ಹಾರತುರಾಯಿಗಳನ್ನ ಅರ್ಪಿಸಿಕೊಂಡವರು ದಿನೇಶರು. ಆ ದಿನ ಕೆಲಸದಲ್ಲಿ ಕನ್ನಡ ಬಳಕೆಯ…
ಮೂವತ್ತು ವರುಷಗಳ ಮುಂಚೆ ಒಮ್ಮೆ ಮಹಾನಗರ ಮುಂಬೈಗೆ ಹೋಗಿದ್ದೆ - ಬ್ಯಾಂಕಿನ ಬ್ರಾಂಚುಗಳಲ್ಲೇ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ. ದಿನದಿನವೂ ಮುಂಬೈಯಲ್ಲಿ ಪ್ರಯಾಣಿಸುವಾಗ ಅಲ್ಲಿನ ಬದುಕನ್ನು ಗಮನಿಸುತ್ತಿದ್ದೆ. ಆಗ ನಾನು ಕಂಡ ಮುಂಬೈಯ ಬದುಕಿನ…
ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೆ ಅದರದ್ದೇ ಆದ ಐತಿಹಾಸಿಕ ಮಹತ್ವ, ಚರಿತ್ರೆ, ಪರಂಪರೆ ಮತ್ತು ವಿಶೇಷತೆ ಇದ್ದೇ ಇದೆ. ನಾವಿಲ್ಲಿ ಹೇಳಲಿರುವ ವೇದ ನಾರಾಯಣಸ್ವಾಮಿ ದೇವಾಲಯಕ್ಕೂ ಅದರದ್ದೇ ಆದ ವಿಶೇಷತೆ ಇದೆ.…
ಸಕ್ರೀಯವಾಗಿರುವ ವೃತ್ತಿನಿರತರು, ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು...
ರಾಜಕಾರಣಿಗಳು 1%
ಅಧಿಕಾರಿಗಳು 3%
ನ್ಯಾಯಾಧೀಶರು
ಮತ್ತು ವಕೀಲರು 0.5%
ಪತ್ರಕರ್ತರು 0.5%
ಧರ್ಮಾಧಿಕಾರಿಗಳು 0.25%
ವೈದ್ಯರು 0.15%
ಪೋಲೀಸರು 0.5%
ಶಿಕ್ಷಕರು 0.75%
ಏನಿದೇನಿದು ಪ್ರಕೃತಿಯ ರುದ್ರ ನರ್ತನ
ಅಟ್ಟಹಾಸವೇನು ಪ್ರಳಯಾಂತಕನ
ಬೀಸಿ ಬರುವ ಶರವೇಗದ ಗಾಳಿ
ಕೇಕೆ ಹಾಕಿ ಗಹಗಹಿಸಿ ನಕ್ಕಿತು ಎದ್ದೇಳಿ
ಜೀವ ಜಗತ್ತಿನ ಕೊನೆಯ ಮುನ್ಸೂಚನೆಯೇ
ಮನುಜನ ಸ್ವಾರ್ಥದ ಪರಿಣಾಮವೇ
ಬಿಡದೆ…
ಪತ್ತೆದಾರಿಕೆ ಕೆಲಸ ತುಂಬಾ ಜೋರಾಗಿ ನಡೆದಿದೆ. ಸಣ್ಣ ವಿಷಯವಾದರೆ ಮರೆತು ಬಿಡಬಹುದಿತ್ತು. ತಿಂಗಳುಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ವಿಚಾರವಿದು .
ಆತನ ಮುಖ ಪರಿಚಯ ಯಾರಿಗೂ ಇಲ್ಲ. ಗೊತ್ತಿರುವ ವಿಚಾರವೆಂದರೆ ,ಅಂದಾಜು ಆರು ಅಡಿ…
ಮತ್ತೆ ವೈರಸ್ ಭೀತಿಯಲ್ಲಿ, ಮತ್ತೆ ಲಾಕ್ ಡೌನ್ ಭಯದಲ್ಲಿ, ಮತ್ತೆ ಸಾವಿನ ಹೆದರಿಕೆಯಲ್ಲಿ, ಮತ್ತೆ ಬದುಕಿನ ಆತಂಕದಲ್ಲಿ, ಮತ್ತೆ ನಿರಾಸೆಯ ಸನಿಹದಲ್ಲಿ, ಆದರೂ...ಭ್ರಷ್ಟಾಚಾರ ಕಡಿಮೆಯಾಗಿಲ್ಲ, ಜಾತಿಯ ಅಸಮಾನತೆ ಹೋಗಿಲ್ಲ, ಪರಿಸರ ನಾಶ ಆಗುತ್ತಲೇ…
ಗಣೇಶ್ ಅಣ್ಣನ ಕಣ್ಣು ಅರಳಿದ್ದವು. ಅಗಲ ಹಣೆಯಲ್ಲಿ ಬೆವರಿನ ಸಾಲುಗಳು ಚುಕ್ಕಿ ರಂಗೋಲಿ ಬಿಡಿಸಿದ್ದವು. ಕಥೆಯ ಸರಣಿ ಆರಂಭವಾಗಿತ್ತು ಅದು ಕಟ್ಟುಕಥೆಯಲ್ಲ. ಅನುಭವಿಸಿದ ನಿಜದ ಅರಿವು ಮಾತಿನಲ್ಲಿ ಕಾಣುತ್ತಿತ್ತು .
"ಆ ದಿನ ಅಕ್ಕ ಬಸ್ಸಿನಿಂದ ಬಿದ್ದು…
ಎನೀ ಡೌಟ್
ನಾನು ಕುಂದಾಪುರದ ಹತ್ತಿರದ ಬಸ್ರೂರಿನ ಕಾಲೇಜಿಗೆ ಉಪನ್ಯಾಸಕನಾಗಿ ಹೋದಾಗ ಮೊದಲ ಕ್ಲಾಸ್ ನಲ್ಲಿ ಪಾಠದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ನಿಮಗೆ ಪಾಠಕ್ಕೆ ಸಂಬಂಧಿಸಿದಂತೆ doubts ಇದ್ರೆ ಅರ್ಥವಾಗದಿದ್ರೆ ಕೇಳಿ. ಹತ್ತು ಸಾರಿ ಬೇಕಾದರೂ…
‘ಮೋಡದೊಡನೆ ಮಾತುಕತೆ' ಈ ಪುಸ್ತಕವು ಹೊಸಗಾಲದ ಆಖ್ಯಾನ-ವ್ಯಾಖ್ಯಾನ ಸಮೇತ ಕಾಳಿದಾಸನ ‘ಮೇಘದೂತ'ದ ಕನ್ನಡ ಭಾವಾನುವಾದವಾಗಿದೆ. ಖ್ಯಾತ ಬರಹಗಾರರಾದ ಅಕ್ಷರ ಕೆ.ವಿ. ಇವರು ಬರೆದ ಪುಸ್ತಕಕ್ಕೆ ಡಾ. ಶ್ರೀರಾಮ ಭಟ್ ಇವರು ಹಿನ್ನುಡಿ ಬರೆದಿದ್ದಾರೆ.…
ಲೋಕಾಯುಕ್ತ - ಎ ಸಿ ಬಿ - ಜಾರಿ ನಿರ್ದೇಶನಾಲಯ ( ಇಡಿ ), ತೆರಿಗೆ ಇಲಾಖೆ ಮುಂತಾದ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ವಿಚಾರಣೆ, ದಾಳಿ ಮಾಡಿದ ನಂತರ ಅಥವಾ ಸಮನ್ಸ್ ನೀಡಿದ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಹೇಗೆ ನಡೆಯುತ್ತದೆ ಎಂಬ ಕುತೂಹಲ ಇದರ…
ಮೂರು ಸಾವಿರ ವರುಷಗಳ ಹಿಂದೆ, ಎರಡನೇ ರಾಮೆಸೆಸ್ ಈಜಿಪ್ಟಿನ ಫಾರೋ (ರಾಜ) ಆಗಿದ್ದ. ಅವನ ಆಡಳಿತದಲ್ಲಿ ಈಜಿಪ್ಟ್ ಸಂಪತ್ತು ತುಂಬಿದ ದೇಶವಾಯಿತು. ಫಾರೋ ಹೇರಳ ಸಂಪತ್ತು ಶೇಖರಿಸಿದ; ಅವನ ಖಜಾನೆ ತುಂಬಿ ತುಳುಕಿತು.
ಚಿನ್ನ, ಮುತ್ತುರತ್ನಗಳ ಆ…
ಎಲ್ಲಿ ಇತರ ಯಾವುದನ್ನೂ ಕಾಣಲಾಗುವುದಿಲ್ಲವೋ, ಕೇಳಲಾಗುವುದಿಲ್ಲವೋ, ತಿಳಿಯಲಾಗುವುದಿಲ್ಲವೋ ಅದು ಅನಂತವಾದುದು ಎಂದು ಉಪನಿಷತ್ತು ತಿಳಿಸುತ್ತದೆ. ಹೌದಲ್ವಾ? ನಮಗೆ ಆಕಾಶ, ಸಮುದ್ರ ಇದನ್ನೆಲ್ಲಾ ಅಳೆಯಲು ಸಾಧ್ಯವಿಲ್ಲ. ತಾರೆಗಳನ್ನು ಎಣಿಸಲು ಆಗದು.…