ಭ್ರಷ್ಟಾಚಾರ ತೊಲಗಲಿ...

ಭ್ರಷ್ಟಾಚಾರ ತೊಲಗಲಿ...

ಕವನ

ಮನ ಮನವ ತೊಳೆಯಬೇಕು

ಭ್ರಷ್ಟಾಚಾರವ ಓಡಿಸಬೇಕು

ಕಛೇರಿಯ ಒಳಗಿರುವ ಭ್ರಷ್ಟರ

ಹೊರಗೆ ಒದ್ದು ಹಾಕಬೇಕು

 

ಕೆಲಸಕಾಗಿ ಲಂಚವ ಪಡೆವ

ನೌಕರರ ಬಂಧಿಸಬೇಕು

ಸರಕಾರವೆ ಮುಂದೆ ನಿಂತು

ಕ್ರಮವ ಕೈಗೊಳ್ಳಬೇಕು

 

ನ್ಯಾಯಾಲಯದಲ್ಲಿ ಕಠಿಣ

ಶಿಕ್ಷೆ ಇಂಥವರಿಗೆ ಕೊಡಬೇಕು

ನಮ್ಮ ದೇಶ ಭಾರತವು

ಲಂಚ ಮುಕ್ತವಾಗಬೇಕು

 

ತಿಂಗಳ ಸಂಬಳದ ಮೇಲೆ

ಮತ್ತೂ ಗಿಂಬಳ ಮಾಡುವ

ಇಲಿ ಹೆಗ್ಗಣಗಳನ್ನು ಬೇರು

ಕಿತ್ತು ಸಾಯಿಸಿ ಎಸೆಯಬೇಕು

 

ಒಂದೊಂದು ರುಜು ಹಾಕಲು

ಬಾಯಿಬಿಟ್ಟು ಕೊಡಿ ಇಷ್ಟು

ಎನುವ ಭೃಷ್ಟರ ತೊಲಗಿಸಿ

ಹುಟ್ಟಡಗಿಸಿ ಮನೆಗೆ ಕಳುಹಿಸಬೇಕು

 

ಪತ್ರಿಕೆ ರೇಡಿಯೋ ದೂರದರ್ಶನ

ಸುದ್ಧಿ ಬಿತ್ತರದಿ ಲಂಚಾವತಾರ

ಮಾನವತ್ವ ಮರೆತ ಧನಪಿಶಾಚಿಗಳು

ಪ್ರಾಣವಾಯುವಿನಲೂ ಕಬಳಿಸಿದರಲ್ಲ

 

ಕೊಳಚೆ ನೀರಿನ ಉದ್ಭವ ಹುಳಗಳಂತೆ

ಬಿತ್ತಲ್ಲ ನೋಟಿನ ಕಂತೆ ಕಂತೆ

ಮಾನವೀಯತೆ ರಕುತದಲಿ ಲವಲೇಶವೂ ಇಲ್ಲದ

ಕಣ್ಣಲ್ಲಿ ರಕ್ತಹರಿಯದ ಪಿಶಾಚಿಗಳಿವರು

 

ಧನಪಿಶಾಚಿಗಳ ಶಾಶ್ವತವಾಗಿ ಹೊರನೂಕಿರಿ

ಕಷ್ಟವೆಂಬುದರ ಅರ್ಥ ಗೊತ್ತಾಗಲಿ

ಬೆವರಿಳಿಸಿ ದುಡಿದು ಉಣ್ಣಲಿ

ನಮ್ಮ ದೇಶಕ್ಕೆ ಭೂಮಿತಾಯಿಗೆ ಕಪ್ಪುಚುಕ್ಕೆ ಇವರು

 

ಪ್ರೇತನರ್ತನ ಮನೆಮನೆಗಳಲಿ

ಸ್ಮಶಾನದಲೂ ಕೈಯೊಡ್ಡಿದ ತಿಮಿಂಗಿಲಗಳು

ಹುಟ್ಟಡಗಿಸು ಭಗವಂತ! ಕಣ್ಣು ಬಿಡು

ಅಳಿಸು ಒರೆಸು ಹೊಸಕಿ ಹಾಕಿ ಬಿಡು

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್