ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 26, 2025
ಕನ್ನಡ ಸಿನಿಪ್ರಿಯರ ಪಾಲಿಗೆ ‘ಅಣ್ಣಾವ್ರು’ ಎನಿಸಿಕೊಂಡ ವರನಟ ಡಾ. ರಾಜಕುಮಾರ್ ಅವರ ಚಿತ್ರ ಜೀವನದ ಬಗ್ಗೆ ನೂರಾರು ಪುಸ್ತಕಗಳು ಈಗಾಗಲೇ ಬಂದಿವೆ. ಆದರೂ ಡಾ. ರಾಜ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇದೆ. ‘ಡಾ. ರಾಜ್ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳು’ ಎನ್ನುವ ವಿಷಯದ ಮೇಲೆ ಅದ್ಭುತವಾದ ಕೃತಿಯೊಂದನ್ನು ರಚಿಸಿ ಕನ್ನಡ ಸಾಹಿತ್ಯಾಸಕ್ತರ ಮಡಿಲಿಗೆ ಹಾಕಿದ್ದಾರೆ ಶಿಕ್ಷಕ, ವಿಜ್ಞಾನ ವಿಷಯಗಳ ಬರಹಗಾರ ಡಾ. ಕೆ. ನಟರಾಜ್. ಈ ಬೃಹತ್ ಗಾತ್ರದ (೬೫೨ ಪುಟಗಳು) ಕೃತಿಯಲ್ಲಿ ಡಾ. ರಾಜ್…
ಲೇಖಕರು: areyurusuresh
ವಿಧ: ಬ್ಲಾಗ್ ಬರಹ
May 24, 2025
“ಅವ್ವಾ, ನಾ ನಿನ್ನ ಮಗಳು ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ ನಾ ಬರಿ ಭ್ರೂಣವಲ್ಲ. ನನ್ನ ಹಡೆದವ್ವ  ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ ಚೆಲ್ಲಬೇಕೆ ಉಡಿಯ ಮುತ್ತು ನಾ ಬರಿ ಭ್ರೂಣವಲ್ಲ ಕೇಳವ್ವ ಕಂಡಿಲ್ಲ ನಾನಿನ್ನೂ ಬದುಕಿನಾಗಸದ ನೀಲ ಪಚ್ಚೆಯಂಥ ನೆಲ, ಗಾಳಿಯ ಮೃದು ಸ್ಪರ್ಶ ನಾ ಬರಿ ಭ್ರೂಣವಲ್ಲ. ” ಇದು ಹೆಣ್ಣು ಭ್ರೂಣವೊಂದು ತನ್ನ ಒಡಲಲ್ಲಿ ಹೊತ್ತ ತಾಯಿಯೊಂದಿಗೆ ನಡೆಸುವ ಸಂವಾದ. ಖ್ಯಾತ ಕವಯತ್ರಿ ಮಾಲತಿ ಪಟ್ಟಣ ಶೆಟ್ಟಿಯವರ “ಅವ್ವಾ ನಾ ಬರಿ ಭ್ರೂಣವಲ್ಲ. ”ಕವನದ…
ಲೇಖಕರು: areyurusuresh
ವಿಧ: ಬ್ಲಾಗ್ ಬರಹ
May 24, 2025
ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ ಸುರಿಸುತ್ತಿದ್ದ ಮಳೆಯಿಂದ ಮಾವಿನ ತೋಪಿನ ಕಾಲುವೆಗಳು ತುಂಬಿ ದಾಸನ ಕಟ್ಟೆಯೆತ್ತ ಹರಿಯುತ್ತಿತ್ತು. ಅವತ್ತಿನ ಮಧ್ಯಾಹ್ನ ಯಮಕರೆದ ಕೂಗಿನಂತಹ ಕೂಗೊಂದು ತಲೆಯೊಳಗೆ ಸಿಡಿದು ಈ ಲೋಕವೇ ಬೇಡವಾಗಿ ಮನೆಯಲ್ಲಿದ್ದ ದನದ ಹಗ್ಗವೊಂದನ್ನು ಹೆಗಲಿಗೆಸೆದುಕೊಂಡು ಮುದ್ರಾಮಕ್ಕರ…
ಲೇಖಕರು: areyurusuresh
ವಿಧ: ಬ್ಲಾಗ್ ಬರಹ
May 23, 2025
ಆತ್ಮವಿಶ್ವಾಸವು ಪ್ರತಿಯೊಬ್ಬರಲ್ಲೂ ಇರಬೇಕಾದ ಅತಿ ಪ್ರಮುಖ ಗುಣ. ನಮ್ಮ ಮೇಲೆಯೇ ನಮಗೆ ನಂಬಿಕೆ ಹಾಗೂ ವಿಶ್ವಾಸವಿರದ ಮೇಲೆ, ನಾವು ಬೇರೆಯವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಥವಾ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಮಾಡುವ ಕೆಲಸ ಕಾರ್ಯ ಹಾಗೂ ನಮ್ಮ ನಡವಳಿಕೆಯ ಬಗ್ಗೆ ನಾವು ಎಂದಿಗೂ ಗಟ್ಟಿ ನಿಲುವು ಹೊಂದಿರಬೇಕು. ನಮ್ಮ ನಿರ್ಧಾರಗಳು ಯಾವತ್ತೂ ನೂರು ಪ್ರತಿಶತ ಬಿಗಿಯಾಗಿರಬೇಕು. ಹೀಗಿದ್ದರೆ ಮಾತ್ರ ಎಲ್ಲವನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯ. ಆತ್ಮವಿಶ್ವಾಸವನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 23, 2025
‘ಗತಜನ್ಮ - ಮತ್ತೆರಡು ಕತೆಗಳು’ ಕಥಾ ಸಂಕಲನದಲ್ಲಿರುವ ‘ಗತಜನ್ಮ’ ಕಥೆಯನ್ನು ಎಸ್ ಎಲ್ ಭೈರಪ್ಪನವರು ತಮ್ಮ ಹೈಸ್ಕೂಲ್ ದಿನಗಳಲ್ಲಿ ಬರೆದದ್ದು ಎನ್ನುವುದೇ ಕುತೂಹಲಕಾರಿ ಸಂಗತಿ. ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಭೈರಪ್ಪನವರು ಇಂದಿನ ದಿನ ಏನು ಸಾಧಿಸಿದ್ದಾರೋ ಅದರ ಪ್ರಾರಂಭ ಆದದ್ದು ಅವರ ಹೈಸ್ಕೂಲ್ ದಿನಗಳಲ್ಲೇ ಎನ್ನಬಹುದು. ಭೈರಪ್ಪನವರ ಇಂದಿನ ಕಾದಂಬರಿಯ ಕಥಾವಸ್ತುಗಳಿಗೆ ಸರಿಸಾಟಿ ಇಲ್ಲ. ಅವರು ಪ್ರತೀ ಕಾದಂಬರಿಗೆ ಮುನ್ನ ಅದಕ್ಕೆ ಬೇಕಾದ ಸೂಕ್ತ ವ್ಯವಸ್ಥೆ ಹಾಗೂ ಆಳವಾದ ಅಧ್ಯಯನವನ್ನು…
ಲೇಖಕರು: Kavitha Mahesh
ವಿಧ: ರುಚಿ
May 23, 2025
ಕಡಲೆ ಕಾಯಿ ಬೀಜವನ್ನು ತರಿತರಿಯಾಗಿ ಹುಡಿ ಮಾಡಿ. ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಹಸಿ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ತುರಿ, ಎಳ್ಳು, ಉಪ್ಪು, ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಸಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿದ ಹಿಟ್ಟಿನಿಂದ ಅಡಿಕೆ ಗಾತ್ರದ ಉಂಡೆ ತೆಗೆದು ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಮದ್ದೂರು ವಡೆ ತಯಾರು. ಕಾಯಿ ಚಟ್ನಿ ಇಲ್ಲವೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 19, 2025
`ಕಪ್ಪು ಹಲ್ಲಿನ ಕಥೆ’ ಉಮೇಶ್ ತೆಂಕನಹಳ್ಳಿ ಅವರ ಕಾದಂಬರಿಯಾಗಿದೆ. ಕೃತಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗಳು ಕಣ್ಣ ಮುಂದೆ ನಿಲ್ಲುತ್ತವೆ. ಕೆರೆ ಕಟ್ಟೆಗಳ ಪರಿಕಲ್ಪನೆ, ಎಲ್ಲರೂ ಎಲ್ಲರಿಗೋಸ್ಕರ ಎಂಬ ಸಂತೆಯ ಪರಿಕಲ್ಪನೆ. ದೇಶವಾರು, ಪ್ರಾಂತ್ಯವಾರು ಆಹಾರ ಪದ್ಧತಿ ಇರಬಹುದು. ಹವಾಮಾನಕ್ಕೆ ಅನುಗುಣವಾಗಿ ನಮ್ಮ ಉಡುಗೆ ತೊಡಿಗೆಗಳು, ಕಾಲಕ್ಕೆ ತಕ್ಕಂತೆ ಸಂಪ್ರದಾಯಗಳ ಆಚರಣೆಗಳು,…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
May 18, 2025
ಮಂಡ್ಯದ ಡಾ. ಬೆಸಗರಹಳ್ಳಿ ರಾಮಣ್ಣ ಕನ್ನಡದ ಹೆಸರುವಾಸಿ ಕತೆಗಾರರು. ಇದು ಅವರ ಎರಡನೆಯ ಕಥಾಸಂಕಲನ. ಅವರು 1985ರ ನಂತರ ಬರೆದ ಕತೆಗಳು ಈ ಸಂಕಲನದಲ್ಲಿವೆ (“ಕನ್ನಂಬಾಡಿ” ಎಂಬ ಮೊದಲನೆಯ ಸಂಕಲನದಲ್ಲಿ      ಅವರಿ 1962ರಿಂದ 1985ರ ಅವಧಿಯಲ್ಲಿ ಬರೆದ ಸಣ್ಣ ಕತೆಗಳು ಪ್ರಕಟವಾಗಿದ್ದವು.) ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪ್ರಕಟವಾದ ಸಂಕಲನ ಇದು. ಕಥಾಸಂಕಲನದ ಬೆನ್ನುಡಿಯಲ್ಲಿ ಯು. ಆರ್. ಅನಂತಮೂರ್ತಿಯವರು ಬರೆದ ಮಾತುಗಳು ಹೀಗಿವೆ: ಬೆಸಗರಹಳ್ಳಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 16, 2025
ಡಾ. ಅಜಿತ್ ಹರೀಶಿ ಅವರ ನೂತನ ಕವನ ಸಂಕಲನ ‘ತೇಲಿಬಿಟ್ಟ ಆತ್ಮ ಬುಟ್ಟಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಗೀತಾ ವಸಂತ. ತಮ್ಮ ಬೆನ್ನುಡಿಯಲ್ಲಿ  “ಅವರು ಹೇಗೆ ಹುಟ್ಟೀತು ಪದ್ಯ ಅಲೆಗಳೇಳದ ಕೊಳದ ಮಧ್ಯ ಎಂದು ಕವಿತೆಯಲ್ಲಿ ಕನವರಿಸುವ ಅಜಿತ್ ಹರೀಶಿಯವರು ಕಾವ್ಯವನ್ನು ಕಾದು ಧೇನಿಸಿ ಕಟ್ಟುವ ಕಸುಬುಗಾರರು. ಹಾಗೆ ಕಟ್ಟಲು ಬೇಕಾದ ದ್ರವ್ಯವಿರುವುದು ನಮ್ಮೊಳಗೇ ಎಂಬ ದಟ್ಟ ಅರಿವು ಅವರ ಬರಹದಲ್ಲಿದೆ. ಒಡಲ ನೂಲಿನಿಂದಲೇ ಜೇಡ ಜಾಲ ನೇಯುವಂತೆ ಒಡಲಲ್ಲಿ…
ಲೇಖಕರು: Suresh Ammasandra
ವಿಧ: ಬ್ಲಾಗ್ ಬರಹ
May 16, 2025
ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯೆರು ಮೂಗು ಮುರಿಯುತ್ತಿದ್ದ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ಹನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಕರ್ತವ್ಯಕ್ಕೆ ಸೇರಿದ ವೈದ್ಯರೊಬ್ಬರು ಮೂವತ್ತು ವರ್ಷಗಳ ಕಾಲ ಅದೇ ಹಳ್ಳಿಯಲ್ಲಿ ಸತತವಾಗಿ ಸೇವೆ ಸಲ್ಲಿಸಿ ಜನರ ಅಪಾರ ಪ್ರೀತಿಯನ್ನು ಗಳಿಸಿ ಸೇವೆಗೆ ಸೇರಿದ ಆಸ್ಪತ್ರೆಯಲ್ಲಿಯೇ ಸೇವಾ ನಿವೃತ್ತಿ ಪಡೆದು ಅದೇ ಹಳ್ಳಿಯಲ್ಲಿ ತನ್ನ ಪ್ರೀತಿಯ ಜನರಿಗಾಗಿ ಸಕಲ ವ್ಯವಸ್ಥೆಯುಳ್ಳ…