ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 10, 2025
‘ಪಿಟ್ಕಾಯಣ’ ಈ ಕೃತಿಯು ಬಹು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಾಗೆಂದು ಅದು ಓದುಗರನ್ನು ಪರೀಕ್ಷಿಸುತ್ತದೆ ಎಂದೇನೂ ಅಲ್ಲ. ಬದಲಾಗಿ ಆಯಾ ವಯಸ್ಕರಿಗೆ ತಕ್ಕಂತೆ ಆಸಕ್ತಿಯಿಂದ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಲೇಖನಗಳ ತಲೆಬರಹ ಓದುಗರನ್ನು ಕುತೂಹಲಿಗರನ್ನಾಗಿಸುವುದಲ್ಲದೆ, ಅವರಲ್ಲಿ ಬೆರಗನ್ನೂ ಉಂಟುಮಾಡುತ್ತವೆ. ಅಂತಹ ಕೆಲವನ್ನು ಇಲ್ಲಿ ಹೆಸರಿಸುವುದು ಸೂಕ್ತ-ಬಿಸಿಲುಗುದುರೆ ಆಗಿಬಿಟ್ಟಿರುವ ‘ಹಠಾತ್ ಸಾವು’ ಅಧ್ಯಯನ ಫಲಿತಾಂಶ; ವಿದ್ಯುತ್ ಖಾಸಗೀಕರಣಕ್ಕೆ ಗಂಟಲಲ್ಲಿ ಸಿಕ್ಕ…
ವಿಧ: ರುಚಿ
February 09, 2025
ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು, ಬೆಲ್ಲ, ಉಪ್ಪು, ಖಾರದ ಪುಡಿ, ಹುಣಸೆ ಹಣ್ಣು ಸೇರಿಸಿ ಬೇಯಿಸಿ. ತೆಂಗಿನ ತುರಿ, ಜೀರಿಗೆ, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಬೇಯಿಸಿದ ಬಾಳೆಕಾಯಿಗೆ ಹಾಕಿ ಬೆರೆಸಿ ಕುದಿಸಿ. ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಇದು ಸಾಂಬಾರಿಗಿಂತ ಸ್ವಲ್ಪ ದಪ್ಪವಾಗಿರಬೇಕು. ಅನ್ನ, ದೋಸೆ, ರೊಟ್ಟಿ ಜೊತೆ ಸವಿಯಿರಿ. -ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 07, 2025
ಅಂಕಣಕಾರ, ಸಂಸ್ಕೃತ ವಿದ್ವಾನ್ ಡಾ. ವಿಶ್ವಾಸ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಅಣ್ವಣೂಪಾಧ್ಯಾಯ’ ಎನ್ನುವ ವಿಚಿತ್ರ ಹೆಸರಿನ ಪುಸ್ತಕ. ಈ ಪುಸ್ತಕದಲ್ಲಿ ೧೦ ಕಥೆಗಳಿವೆ. ಈ ಕಥೆಗಳ ಬಗ್ಗೆ ಖ್ಯಾತ ವಿಮರ್ಶಕರಾದ ಡಾ. ಬಿ. ಜನಾರ್ದನ್ ಭಟ್ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿರುವುದು ಹೀಗೆ… “ಡಾ. ವಿಶ್ವಾಸ ಅವರ ಈ ಕಥಾ ಸಂಕಲನಕ್ಕೆ ಒಂದು ವಿಶಿಷ್ಟ ಗೌರವವಿದೆ. ಅದೇನೆಂದರೆ ಸಂಸ್ಕೃತದಲ್ಲಿ ಈ ಆಧುನಿಕ ಕತೆಗಳನ್ನು ಬರೆದು, ಅವನ್ನು ತಾವೇ ಕನ್ನಡಕ್ಕೆ ಅನುವಾದಿಸಿರುವ ಒಂದು ಅಪೂರ್ವ ಸನ್ನಿವೇಶ ಇದು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 05, 2025
ಲೇಖಕರಾದ ರಾಜು ಅಡಕಳ್ಳಿಯವರ ನೂತನ ಕೃತಿ ಹರಟೆ ಕಷಾಯ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದು ಲೇಖಕರ ಬೆನ್ನು ತಟ್ಟಿದ್ದಾರೆ ಬಿಎಂಶ್ರೀ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ. ಈ ಕೃತಿಯ ಬಗ್ಗೆ ಲೇಖಕರಾದ ರಾಜು ಅಡಕಳ್ಳಿ ಇವರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ… “ಈ 'ಹರಟೆ ಕಷಾಯ'ವನ್ನು ಬರೆಯಲೇಬೇಕೆಂದು ಹಠಕ್ಕೆ ಬಿದ್ದು ಬರೆದಿದ್ದಲ್ಲ ಅಥವಾ ಒತ್ತಾಯಕ್ಕೆ ಬಸಿರಾಗಿ ಹೆತ್ತಿದ್ದೂ ಅಲ್ಲ. ಇದನ್ನು ತೀರಾ ಗಂಭೀರ ಕೃತಿ ಎಂದು ಭಾವಿಸುವುದಕ್ಕಿಂತಲೂ ಬದುಕಿನ…
ವಿಧ: ರುಚಿ
February 04, 2025
ಹಲಸಿನಕಾಯಿ ಸೊಳೆ, ತೆಂಗಿನತುರಿ, ನೀರು, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಆಮೇಲೆ ಅಕ್ಕಿ ಹಿಟ್ಟು, ಉಪ್ಪು, ಸಣ್ಣಗೆ ಹೆಚ್ಚಿದ ನೀರುಳ್ಳಿ-ಕರಿಬೇವು-ಶುಂಠಿ ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಬಾಳೆಎಲೆಯಲ್ಲಿ ರೊಟ್ಟಿ ತಟ್ಟಿ ಕಾದ ಕಾವಲಿಯಲ್ಲಿ ಹಾಕಿ, ಎರಡೂ ಬದಿ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿ ತೆಗೆಯಿರಿ. ಬೆಣ್ಣೆ, ಶುಂಠಿ ಚಟ್ನಿ ಜೊತೆ ತಿನ್ನಲು ಬಹಳ ರುಚಿ.   - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 03, 2025
‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಮರಾಠಿ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ ಆರಂಭದಲ್ಲೇ 'ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಇದು ಅಂಥ ದೇವರ ಕಥೆಯಾಗಿದೆ' ಎನ್ನುತ್ತಾನೆ. ಸತ್ಯವೆಂದರೆ ದೇವರ ರೂಪವಾಗಿರುವ ಮನೆಯಲ್ಲಿಯ ಮುನ್ನೂರು ವರ್ಷಗಳ ನರಸಿಂಹನು, ಈ ಕಥೆಯ ಕೇವಲ ನಿಮಿತ್ತವಾಗಿದ್ದಾನೆ. ಆದರೆ ಈ ನರಸಿಂಹನ ಸಾಕಾರ…
ವಿಧ: ರುಚಿ
February 02, 2025
ನೆಲಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ತಣಿದ ಮೇಲೆ ಇದಕ್ಕೆ ನೀರುಳ್ಳಿ, ಹಸಿಮೆಣಸನ್ನು ಹೆಚ್ಚಿ ಹಾಕಿ ಉಪ್ಪು, ಮೊಸರು ಬೆರೆಸಿ. ಉದ್ದಿನಬೇಳೆ, ಸಾಸಿವೆಯ ಒಗ್ಗರಣೆ ಕೊಡಿ. ಅನ್ನ ಅಥವಾ ಪಲಾವ್ ಜೊತೆ ಸವಿಯಿರಿ. ನೆಲಬಸಳೆ ಸೊಪ್ಪಿನಲ್ಲಿ ಖನಿಜಾಂಶ ಹೇರಳವಾಗಿದೆ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 31, 2025
ಮಕ್ಕಳಿಗಾಗಿ ಕಥೆ ಬರೆಯುವವರೇ ಕಡಿಮೆಯಾಗಿರುವಾಗ ಅಶ್ವಿನಿ ಶಾನಭಾಗ ಮಕ್ಕಳಿಗಾಗಿ ಸಾಹಸಮಯ ಕಥೆಯುಳ್ಲ ‘ಪುಟಾಣಿ ಪಂಟರ್ಸ್’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಆಪರೇಷನ್ ಬೆಕ್ಕಿನ ಮರಿ ಎಂಬ ಕಥಾ ಹಂದರ ಹೊಂದಿರುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಯಶಸ್ವಿನಿ ಎಸ್ ಎನ್. ಅವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ಹೀಗಿವೆ…”ನನಗೆ ಈ ಕತೆಯಲ್ಲಿ ಇಷ್ಟ ಆದ ಎರಡು ಮುಖ್ಯವಾದ ವಿಷಯಗಳು ಎಂದರೆ ಮಕ್ಕಳು ತೋರುವ ಕುತೂಹಲ ಮತ್ತು ಸಹಾನುಭೂತಿ. ಈ ಕತೆಯಲ್ಲಿ ಬರುವ ಮೂವರು ಮುಖ್ಯ…
ವಿಧ: ರುಚಿ
January 31, 2025
ಅಕ್ಕಿಯನ್ನು ೧-೨ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿ ಜತೆ ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು, ಕಾಯಿತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟು ನೀರುದೋಸೆಗಿಂತ ಸ್ವಲ್ಪ ದಪ್ಪಕ್ಕಿರಲಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ತೆಳುವಾಗಿ ದೋಸೆ ಹುಯ್ಯಿರಿ. ಮುಚ್ಚಳ ಮುಚ್ಚಿ ೨ ನಿಮಿಷ ಬೇಯಿಸಿ. ಆಮೇಲೆ ಒಂದು ಚಮಚ ತುಪ್ಪ ಹಾಕಿ ತೆಗೆಯಿರಿ. ಇದನ್ನು ಯಾವುದೇ ಚಟ್ನಿಯೊಂದಿಗೆ ಸವಿಯಬಹುದು. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 29, 2025
ಕಥಾ ಸಂಕಲನಗಳಿಗೆ ಹೆಸರಿಡುವಾಗ ಬರೆದ ಕತೆಗಳಲ್ಲಿ ಇಷ್ಟದ ಅಥವಾ ಓದುಗರಿಗೆ ಇಷ್ಟವಾಗುವ ಒಂದು ಕತೆಯ ಹೆಸರನ್ನು ಪುಸ್ತಕದ ಹೆಸರಾಗಿ ಇಡುವುದು ವಾಡಿಕೆ. ಆದರೆ, ಈ ಕತಾಸಂಕಲನದಲ್ಲಿ ಇರುವ ಐದೂ ಕತೆಗಳಲ್ಲಿ ಯಾವುದಕ್ಕೂ "ಅವಳ ಹೆಜ್ಜೆ ಗುರುತು" ಎಂಬ ಹೆಸರಿಲ್ಲ ಮತ್ತೆ ಯಾಕೆ ಈ ಹೆಸರು ಎಂದು ಕೇಳಿದರೆ ಈ ಪುಸ್ತಕದ ಐದೂ ಕತೆಗಳಲ್ಲಿ ಬರುವ ಹಲವಾರು ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಹಾಗೂ ನಿಮ್ಮ ಜೀವನದಲ್ಲಿ ಗುರುತಾಗಿ ಉಳಿವವರು. ಪುಸ್ತಕ ಓದುವಾಗ ಇಲ್ಲಿನ ಕೆಲವು ಪಾತ್ರಗಳು ಅಮ್ಮನನ್ನು…