ಎಲ್ಲ ಪುಟಗಳು

ಲೇಖಕರು: Kavitha Mahesh
ವಿಧ: ರುಚಿ
January 06, 2025
ಪೂರಿ ತಯಾರಿಕೆ: ಹಾಲು, ಸಕ್ಕರೆಗಳಿಗೆ ಮೈದಾ ಹಿಟ್ಟು, ಚಿರೋಟಿ ರವೆ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ ಅರ್ಧ ಗಂಟೆ ನೆನೆಸಿ. ನೆನೆದ ಹಿಟ್ಟಿನಿಂದ ಚಿಕ್ಕ ಚಿಕ್ಕ ಪೂರಿಗಳನ್ನು ಲಟ್ಟಿಸಿ ಕರಿದು ಮಧ್ಯಕ್ಕೆ ತೂತು ಮಾಡಿ ಚಟ್ನಿ ಹಾಕಿ ಸವಿಯಿರಿ. ಸಿಹಿ ಚಟ್ನಿ ತಯಾರಿಕೆ: ಖರ್ಜೂರದ ತುಂಡುಗಳನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿ ಅರೆದು ಮಿಕ್ಕೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಕಲಸಿದರೆ ಸಿಹಿ ಚಟ್ನಿ ರೆಡಿ. ಖಾರದ ಚಟ್ನಿ ತಯಾರಿಕೆ: ಖಾರದ ಚಟ್ನಿಗೆ ಬೇಕಾದ ಎಲ್ಲಾ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 03, 2025
ಸುಭಾಷ್ ರಾಜಮಾನೆಯವರ ಲೇಖನಗಳ ಸಂಗ್ರಹವು ‘ಕಂಡದ್ದು ಕಾಣದ್ದು’ ಎನ್ನುವ ಹೆಸರಿನಿಂದ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಡಾ. ಕೆ ವಿ ನಾರಾಯಣ. ಇವರು ತಮ್ಮ ಬೆನ್ನುಡಿಯಲ್ಲಿ “ಕಿರಿಯ ಗೆಳೆಯ ಸುಭಾಷ್ ರಾಜಮಾನೆ ಈ ದಿನಮಾನಗಳಲ್ಲಿ ಕಾಣೆಯಾಗುತ್ತಿರುವ ಪುಸ್ತಕಮೋಹಿಗಳ ಪರಂಪರೆಗೆ ಸೇರಿದವರು. ರಾಶಿ ರಾಶಿ ಹೊತ್ತಗೆಗಳನ್ನು ಕೂಡಿಡುವುದರ ಜೊತೆಗೆ ಓದುವ ಹೊಣೆಯನ್ನೂ ಹೊತ್ತಿರುವವರು. ತಾವು ಓದಿದ್ದನ್ನು ಇತರರ ಜೊತೆಗೆ ಹಂಚಿಕೊಳ್ಳಲು ಉತ್ಸುಕರಾಗಿರುವವರು. ಹಾಗೆ ಅವರು ಬರೆದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 01, 2025
ಎರಡನೆಯ ವಿಶ್ವಯುದ್ಧ ಕಾಲದ ನೋವು, ನಲಿವು ಮತ್ತು ಗೆಲುವಿನ ಸತ್ಯ ಕಥೆಯ ಎಳೆಯನ್ನು ಹಿಡಿದುಕೊಂಡು ಅದಕ್ಕೆ ತಮ್ಮದೇ ಆದ ಕಲ್ಪನೆಯನ್ನು ಬೆರೆಸಿ ಹದವಾಗಿ ರುಚಿಕರವಾದ ಪಾಕ ಮಾಡಿ ನಮಗೆ ಉಣ ಬಡಿಸಿದ್ದಾರೆ ‘ನಿಗೂಢ ನಾಣ್ಯ' ಖ್ಯಾತಿಯ ಕಾದಂಬರಿಕಾರ ವಿಠಲ್ ಶೆಣೈ. ಈ ಕಾದಂಬರಿಗೆ ಅವರು ಇಟ್ಟ ಹೆಸರು ‘ಹನುಕಿಯಾ - ಆರಿ ಹೋಗದ ದೀಪ' ಎಂದು. ಈ ಕಾದಂಬರಿಯಲ್ಲಿರುವ ಘಟನೆಗಳು ನಡೆಯುವುದು ೧೯೩೯ ರಿಂದ ೨೦೧೫ರ ಕಾಲಘಟ್ಟದಲ್ಲಿ. ‘ಹನುಕಿಯಾ’ ಎನ್ನುವುದು ಯಹೂದಿಗಳ ಪವಿತ್ರ ದೀಪ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ…
ವಿಧ: ರುಚಿ
January 01, 2025
ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಿ. ಉಪ್ಪುಸೊಳೆಯನ್ನು ಭರಣಿಯಿಂದ ತೆಗೆದು ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಇಡಿ. ಉಪ್ಪು ಬಿಡುವಷ್ಟು ಸಮಯ ನೀರು ಬದಲಿಸಿ(ಮರ‍್ನಾಲ್ಕು ಬಾರಿ). ಸೊಳೆಯಲ್ಲಿರುವ ನೀರನ್ನು ಹಿಂಡಿ ತೆಗೆಯಿರಿ. ನೆನೆ ಹಾಕಿದ ಅಕ್ಕಿಯನ್ನು ತೊಳೆದು ನೀರು ಬಸಿದು ತೆಂಗಿನ ತುರಿ, ಜೀರಿಗೆ, ಹಿಂಡಿದ ಸೊಳೆ ಸೇರಿಸಿ ಗಟ್ಟಿಗೆ ನುಣ್ಣಗೆ ರುಬ್ಬಿ. ಒಂದು ವೇಳೆ ಹಿಟ್ಟು ನೀರು ಆದರೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ. ಹಿಟ್ಟನ್ನು ಚೆನ್ನಾಗಿ ನಾದಿ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 30, 2024
ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ. ಈ ಪ್ರವಾಸ ಕಥನದಲ್ಲಿ ಬೋಳುವಾರು ಅವರು ನಮ್ಮನ್ನು ಮೆಕ್ಕಾ, ಅಬಿಸೀನಿಯಾ, ತೆಹರಾನ್, ಲಾರ್, ಅಲ್ ಮಸ್ತಾನ್, ಬಗ್ದಾದ್, ಕುವೈತ್, ದುಬೈ, ಮುತ್ತುಪ್ಪಾಡಿ, ಕಾನ್ಪುರ್, ದೆಹಲಿ, ನ್ಯೂಜರ್ಸಿ, ನ್ಯೂಯಾರ್ಕ್, ಸಿಯಾಟಲ್, ಸ್ಯಾನ್ ಫ್ರಾನ್ಸಿಸ್ಕೋ, ಸ್ಯಾನ್ ಹೊಸೆ, ಕುಪರ್ಟಿನೋ ಮೊದಲಾದ ಸ್ಥಳಗಳ ಪರಿಚಯ ಮಾಡಿಕೊಡುತ್ತಾರೆ. ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಎನ್ ಎ ಎಂ ಇಸ್ಮಾಯಿಲ್…
ವಿಧ: ರುಚಿ
December 29, 2024
ಬಾದಾಮಿ, ಗೋಡಂಬಿಯನ್ನು ೪ ಗಂಟೆ ಹಾಲಲ್ಲಿ ನೆನೆಸಿ ರುಬ್ಬಿ. ಪಾತ್ರೆ ಒಲೆಯ ಮೇಲಿಟ್ಟು ಹಾಲು ಹಾಕಿ. ಹಾಲು ಕುದಿಯಲು ಆರಂಭವಾದಾಗ ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ಕಲಕಿ. ಸಕ್ಕರೆ ಕರಗಿ ಮಿಶ್ರಣ ದಪ್ಪ ಆದಾಗ ಏಲಕ್ಕಿ ಪುಡಿ ಹಾಕಿ ಒಲೆಯಿಂದ ಇಳಿಸಿ. ಈಗ ಗೋಡಂಬಿ ಕೀರು ಸವಿಯಲು ರೆಡಿ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 27, 2024
ಲಂಕೇಶ್ ಪತ್ರಿಕೆಯಲ್ಲಿ ಪ್ರತೀ ವಾರ ಮೂಡಿ ಬರುತ್ತಿದ್ದ ‘ಕಟ್ಟೆ ಪುರಾಣ’ ಎಂಬ ವಿಡಂಬನಾತ್ಮಕ ಅಂಕಣ ಬಹು ಜನಪ್ರಿಯವಾಗಿತ್ತು. ಅದನ್ನು ಬರೆಯುತ್ತಿದ್ದವರು ಬಿ.ಚಂದ್ರೇಗೌಡರು. ಇತ್ತೀಚೆಗೆ ‘ಕಟ್ಟೆ ಪುರಾಣ’ ದಿಂದ ಉತ್ತಮವಾದ ಬರಹಗಳನ್ನು ಆಯ್ದು ‘ಬೆಸ್ಟ್ ಆಫ್ ಕಟ್ಟೆ ಪುರಾಣ’ ಎನ್ನುವ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರ ತಂದಿದ್ದಾರೆ. ಈ ಕೃತಿಗೆ ನಟರಾಜ್ ಹುಳಿಯಾರ್ ಬಹಳ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ. ಲೇಖಕರಾದ ಬಿ.ಚಂದ್ರೇಗೌಡರು ತಮ್ಮ ಪುಸ್ತಕ ಮತ್ತು ಬರಹದ ಬಗ್ಗೆ ಬರೆದ ಕೆಲವು…
ವಿಧ: ರುಚಿ
December 25, 2024
ಹಾಗಲಕಾಯಿಯನ್ನು ಸಣ್ಣದಾಗಿ ಹೆಚ್ಚಿ. ಹಸಿಮೆಣಸನ್ನು ಸೀಳಿ. ಹೆಚ್ಚಿದ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ ಹುಣಸೆಹಣ್ಣು, ಬೆಲ್ಲ, ಉಪ್ಪು, ಅಚ್ಚ ಖಾರದ ಪುಡಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಈ ಮಿಶ್ರಣವು ತಿಳಿಸಾರಿಗಿಂತ ಸ್ವಲ್ಪ ಹೆಚ್ಚು ದಪ್ಪವಿರಬೇಕು. ಇದಕ್ಕೆ ಸಾಸಿವೆ, ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಈಗ ಹಾಗಲಕಾಯಿ ಗೊಜ್ಜು ಸವಿಯಲು ಸಿದ್ಧ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 23, 2024
ಎಸ್ ಜಯಶ್ರೀನಿವಾಸ್ ರಾವ್ ಅವರು ಎಸ್ಪೋನಿಯಾ, ಲ್ಯಾಟ್ವಿಯಾ, ಲಿಥುವೇನಿಯಾ ದೇಶದ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಬಾಲ್ಟಿಕ್ ಕಡಲ ಗಾಳಿ’ ಎನ್ನುವ ಹೆಸರಿನ ಈ ಕೃತಿಗೆ ಖ್ಯಾತ ಬರಹಗಾರ ಕೇಶವ ಮಳಗಿ ಅವರು ಮುನ್ನುಡಿಯನ್ನು ಬರೆದು ಹುರಿದುಂಬಿಸಿದ್ದಾರೆ. ಅವರು ಬರೆದ ಮುನ್ನುಡಿಯಿಂದ ಆಯ್ದ ಸಾಲುಗಳು… “ಕಾವ್ಯಾನುವಾದದಲ್ಲಿ ಸಾಹಸಿ ಮನೋಭಾವದ ಎಸ್‌. ಜಯಶ್ರೀನಿವಾಸ ರಾವ್‌ ಆ ಗುಣದಿಂದಾಗಿಯೇ ಇಷ್ಟವಾಗುವ ಕವಿ ಮತ್ತು ಅನುವಾದಕ. ಕನ್ನಡ ಓದುಗರು ಇನ್ನೂ ಮುಖಾಮುಖಿಯಾಗಿರದ ಹೊಸ ಹೊಸ…
ವಿಧ: ರುಚಿ
December 22, 2024
ಉಪ್ಪು ನೀರಿನಲ್ಲಿ ಶೇಖರಿಸಿದ ಸೊಳೆಯನ್ನು ತೆಗೆದು ಹೆಚ್ಚಿನ ಉಪ್ಪಿನಂಶ ಹೋಗುವಷ್ಟು ತೊಳೆದು ಸಣ್ಣಗೆ ತುಂಡು ಮಾಡಿ ಕೆಂಪು ಮೆಣಸಿನ ಹುಡಿ, ಬೆಲ್ಲ ಮತ್ತು ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತೆಂಗಿನ ತುರಿ, ಜೀರಿಗೆ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಂದ ಸೊಳೆಗೆ ಸೇರಿಸಿ ಒಂದು ಕುದಿ ಕುದಿಸಿ. ಆಮೇಲೆ ಕರಿಬೇವು ಎಸಳಿನ ಜೊತೆ ಸಾಸಿವೆ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ. - ಸಹನಾ ಕಾಂತಬೈಲು, ಮಡಿಕೇರಿ