ವಿಧ: ರುಚಿ
April 04, 2025
ನುಗ್ಗೆ ಸೊಪ್ಪು, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಒಣಮೆಣಸು, ನೆಲಕಡಲೆ, ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಹುರಿದು ಅರಸಿನ, ಕರಿಬೇವು, ರುಬ್ಬಿದ ಮಿಶ್ರಣ ಹಾಕಿ ಫ್ರೈ ಮಾಡಿ. ನಂತರ ಅನ್ನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಿಂಬೆರಸ ಹಾಕಿ ಮಗುಚಿ ಕೆಳಗಿಳಿಸಿ. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಈ ಚಿತ್ರಾನ್ನ ಆರೋಗ್ಯಕ್ಕೆ ತುಂಬ ಒಳ್ಳೆಯದು.
-ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
April 02, 2025
ಒಂಬತ್ತು ದಶಕಗಳ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ. ಬಹುಶಃ ಬೇರೆ ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗದಷ್ಟು ಅತೀ ಹೆಚ್ಚು ಪೌರಾಣಿಕ ಚಿತ್ರಗಳು, ಐತಿಹಾಸಿಕ ಸಿನಿಮಾಗಳು, ಸಾಹಿತ್ಯಾಧಾರಿತ, ಕಲಾತ್ಮಕ, ಮಕ್ಕಳ, ಉಪಭಾಷೆಯ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಹಲವರ ಕಥೆ, ಕಾದಂಬರಿಗಳು ಚಿತ್ರಗಳಾಗಿವೆ. ಕಾವ್ಯಗಳು ಹಾಡುಗಳಾಗಿವೆ. ಎಂಟು ಜ್ಞಾನಪೀಠ…
ವಿಧ: ರುಚಿ
April 02, 2025
ಮಾವಿನಕಾಯಿಯನ್ನು ನೀರಿನಲ್ಲಿ ಬೇಯಿಸಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ನೀರು, ಉಪ್ಪು, ಹಸಿಮೆಣಸು, ಬೆಲ್ಲ ಹಾಕಿ ಸೌಟಿನಲ್ಲಿ ತಿರುವಿ. ಬೆಳ್ಳುಳ್ಳಿ, ಕರಿಬೇವು ಎಸಳಿನ ಒಗ್ಗರಣೆ ಕೊಡಿ. ಅನ್ನಕ್ಕೆ ಕಲಸಿಕೊಂಡು ತಿನ್ನಿ.
-ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
March 31, 2025
“ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ. ಹಾಗೇ ಸುಮ್ಮನೆ ಈ ಜೀವನದಲ್ಲಿ ಎಲ್ಲರೂ ಎದುರಿಸುವ, ಈ ಲೈಫ್ ಅಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ ಘಟನೆಗಳನ್ನೇ ಸಹಜವಾಗಿ ತಿಳಿಸಿದ್ದೇನೆ. ಸೋತವರ ಕತೆ,…
ವಿಧ: ಪುಸ್ತಕ ವಿಮರ್ಶೆ
March 28, 2025
ಉದಯೋನ್ಮುಖ ಕತೆಗಾರ ಅರ್ಜುನ್ ದೇವಾಲದಕೆರೆ ಅವರ ‘ಮಿಕ್ಸ್ & ಮ್ಯಾಚ್’ ಎನ್ನುವ ಸಣ್ಣ ಕತೆಗಳ ಸಂಕಲನವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆ ಹೊರತಂದಿದೆ. ಪ್ರಕಾಶಕರಾದ ವೀರ ಲೋಕ ಬುಕ್ಸ್ ನ ಮಾಲಕ ವೀರಕಪುತ್ರ ಶ್ರೀನಿವಾಸ್ ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ…
“ಸಣ್ಣ ಕತೆಗಳು ಪ್ರಪಂಚದಾದ್ಯಂತದ ಸಂಸ್ಕೃತಿಗಳಲ್ಲಿ ಬಹಳ ಹಿಂದಿನಿಂದಲೂ ಅಮೂಲ್ಯವಾದ ಸ್ಥಾನವನ್ನು ಹೊಂದಿವೆ. ಈಸೋಪನ ಕಥೆಗಳು, ಚಂದಮಾಮದ ಕತೆಗಳು, ರಾಮಾಯಣ, ಮಹಾಭಾರತದೊಳಗಿನ ಕತೆಗಳು ಇಂದಿಗೂ…
ವಿಧ: ರುಚಿ
March 28, 2025
ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಮಸೆದಿಟ್ಟುಕೊಂಡಿರಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಕ್ರಮವಾಗಿ ಅರಸಿನ, ಜೀರಿಗೆ, ಮೆಣಸಿನ ಹುಡಿ, ಈರುಳ್ಳಿ, ಬಟಾಣಿ ಕಾಳುಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಬೇಯಿಸಿದ ಆಲೂಗೆಡ್ಡೆ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಉಪ್ಪು ಸೇರಿಸಿ ಕಲಕಿ ಒಲೆಯಿಂದ ಕೆಳಗಿಳಿಸಿ.
ತಣಿದ ಮೇಲೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಸೇರಿಸಿ ನೀರು ಹಾಕಿ ವಡೆಯ ಹದಕ್ಕೆ ಕಲಸಿ. ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದು ಚಿಕ್ಕ ಚಿಕ್ಕ…
ವಿಧ: ಪುಸ್ತಕ ವಿಮರ್ಶೆ
March 26, 2025
ಆರ್. ವೆಂಕಟರೆಡ್ಡಿ ಅವರ ‘ನೂರಕ್ಕೆ ನೂರು’ ಕಲಿಕೆ ಮತ್ತು ಅಂಕಗಳಿಕೆ ಕೃತಿಯು ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಸಲಹೆಗಳನ್ನು ನೀಡುವ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಎಂ. ಬಸವಣ್ಣ ಅವರು ಹೀಗೆ ಹೇಳಿದ್ದಾರೆ; ಬಹಳ ಕಾಲದಿಂದಲೂ ಮನೋವಿಜ್ಞಾನವನ್ನು ಅಧ್ಯಯನ ಮಾಡುವವರಲ್ಲಿ ಎರಡು ಪ್ರಮುಖ ಗುಂಪುಗಳಿರುವುದು ಕಂಡುಬರುತ್ತದೆ. ಒಂದು ಗುಂಪಿನವರ ಅಧ್ಯಯನ ಮತ್ತು ಆಸಕ್ತಿ ಇರುವುದೆಲ್ಲ 'ಮನೋವಿಜ್ಞಾನವೆಂದರೆ ಏನು?” ಎನ್ನುವುದರ ಮೇಲೆ. ಇನ್ನೊಂದು ಗುಂಪಿನವರ ಆಸಕ್ತಿ ಇರುವುದು "…
ವಿಧ: ಪುಸ್ತಕ ವಿಮರ್ಶೆ
March 25, 2025
ಈ ವರ್ಷ ಓದಿದ ಮೊದಲ ಕಥಾಸಂಕಲನ ಅಶ್ವಿನಿ ಸುನಿಲ್ ಅವರ 'ಅತೀತಭವ'. ಕಳೆದವರ್ಷ ನಿತ್ಯೋತ್ಸವ ಅಭಿಯಾನದಲ್ಲಿ ವೀಣಾಮೇಡಂ ಅವರಿಂದ ಬಹುಮಾನವಾಗಿ ದೊರೆತ ಕೃತಿಯಿದು. ಸಣ್ಣಕತೆಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ! ಹದಿನೈದು ಸಣ್ಣಕತೆಗಳು ಈ ಸಂಕಲನದಲ್ಲಿವೆ. ಇಲ್ಲಿನ ಬಹುತೇಕ ಕತೆಗಳು ಐದಾರು ಪುಟಗಳಲ್ಲಿ ಮುಗಿದುಬಿಡುತ್ತವೆ. ಹೀಗಾಗಿ ಓದುಗನಿಗೆ ಒಂದೇ ಗುಕ್ಕಿನಲ್ಲಿ ನಾಲ್ಕಾರು ಕತೆಗಳನ್ನು ಒಮ್ಮೆಲೆ ಓದಲು ಸಾಧ್ಯವಾಗುತ್ತದೆ. ಹೆಚ್ಚಿನ ಕಥಾವಸ್ತುಗಳು ದೈನಂದಿನ ಜೀವನಕ್ಕೆ ಸಂಬಂಧಿಸಿದವೇ ಆದ್ದರಿಂದ,…
ವಿಧ: ಪುಸ್ತಕ ವಿಮರ್ಶೆ
March 24, 2025
ಹಿರಿಯ ಪತ್ರಕರ್ತರು ಮತ್ತು ಕತೆಗಾರರು ಆಗಿರುವ ಎಫ್.ಎಂ. ನಂದಗಾವ ಅವರ `ಘಟ ಉರುಳಿತು’ ಇದು ಇವರ ಎಂಟನೇ ಕಥಾ ಸಂಕಲನ. ವಿವಿಧ ವಾರ, ಮಾಸ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕತೆಗಳನ್ನು ಸಂಚಲನ ಪ್ರಕಾಶನ ಓದುಗರ ಮುಂದಿಟ್ಟಿದೆ. ಪತ್ರಕರ್ತನಾಗಿ ಅಪಾರ ಜೀವನಾನುಭವ ಇರುವ ನಂದಗಾವ ಅವರು ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳನ್ನು ಕತೆಯನ್ನಾಗಿಸಿದ್ದಾರೆ. ಸಾಮಾನ್ಯ ಘಟನೆಗಳನ್ನು ಕತೆಯಾಗಿ ನಿರೂಪಿಸುವಾಗ ಅವುಗಳಿಗೆ ಸಾಕ್ಷಿ ಚಿತ್ರದ ಸ್ವರೂಪ ಬಂದುಬಿಡುತ್ತದೆ. ಕತೆಗಳಿಗಿರುವ ಕುತೂಹಲದಿಂದ…
ವಿಧ: ಪುಸ್ತಕ ವಿಮರ್ಶೆ
March 21, 2025
“ವಿವೇಕದಿಂದ ಆನಂದ” ದಲ್ಲಿ ಲೇಖಕರಾದ ಡಾ. ಎಸ್ ಎಸ್ ಓಂಕಾರ್ ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ಮಾದರಿಯಾಗಿ ಇಟ್ಟುಕೊಂಡು ಪತಂಜಲಿ ಮಹರ್ಷಿಗಳ ಘನವಾದ 'ಯಮ' ಮತ್ತು 'ನಿಯಮ' ತತ್ತ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯೋಗದ ಶಾರೀರಿಕ ಅಂಶಗಳಿಗೆ ಆಧುನಿಕ ದೃಷ್ಟಿಕೋನ ಹೆಚ್ಚು ಮಹತ್ವ ಕೊಟ್ಟಿದ್ದರೂ, ಈ ಮೂಲಭೂತ ತತ್ತ್ವಗಳು ಅತಿ ಮುಖ್ಯ ಹಾಗೂ ವಿವೇಕಪೂರ್ಣವಾದ, ಅರ್ಥಪೂರ್ಣವಾದ, ಸಮರಸದ ಜೀವನಕ್ಕೆ ಉತ್ತಮ ಮಾರ್ಗದರ್ಶಿ. ಈ ಪುಸ್ತಕದ ಒಂದೊಂದು ಅಧ್ಯಾಯವೂ ಈ ತತ್ತ್ವಗಳ ಆಳಕ್ಕೆ ಇಳಿದು ಅವುಗಳ…