ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ
ಗಾಳಿ ಬಿರುಬೀಸುತಿರಲಾತ್ಮಗಿರಿಯಚಲ
ಹೋಳು ಹೋಳಾಗಿ ಜನ ಹಾಳಾಗುತಿರೆ ನೀನು
ಬಾಳು ತಾಳುಮೆ ಕಲಿತು – ಮರುಳ ಮುನಿಯ
ನಾವು ಹೇಗೆ ಬದುಕಬೇಕು? ಎಂಬದನ್ನು ತೋರಿಸಿ ಕೊಡಲು ಮಾನ್ಯ ಡಿ.ವಿ.ಜಿ.ಯವರು ಈ…
ಒಮ್ಮೆ ಕೆಲಸದ ಮೇರೆಗೆ ಹೊರದೇಶಕ್ಕೆ ಹೋಗಬೇಕಾಯಿತು. ಆದುದರಿಂದ ಎಲ್ಲಾ ತರಹದ ಸಿದ್ಧತೆಗಳನ್ನು ಮಾಡಿ ಇನ್ನೆರಡು ದಿನ ಹೋಗಬೇಕೆನ್ನುವಷ್ಟರಲ್ಲಿ ನಮ್ಮ ಮ್ಯಾನೇಜರ್ ಒಂದು ಮಾತು ಹೇಳಿದರು "ನೋಡು ನೀನು ಹೇಗಾದರೂ ಮಾಡಿ ಆಲ್ಬರ್ಟ್ ರವರನ್ನು…
ಹಿರಿಯರೊಬ್ಬರು ನಿಧನರಾಗುವ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'.…
೧) ಎಲ್ಲಾರೂ ನಮ್ಮವರೇ.
೨) ನಮ್ಮ ಬೆನ್ನು ನಮಗೆ ಕಾಣುವದಿಲ್ಲ.
೩) ಮನಸ್ಸು ಸ್ವಚ್ಚವಾಗಿರಬೇಕು.
೪) ಯಾರ ಜತೆಗೂ ಧ್ವೇಷ ಕಟ್ಟಿಕೋಬಾರದು.
೫) ಸಿಟ್ಟಿನ ಕೈಯಲ್ಲಿ ಬುದ್ದಿಯನ್ನು ಕೊಡಬಾರದು.
೬) ಯಾರ ಭಾಗ್ಯ ಹೇಗೋ ಯಾರು ಬಲ್ಲರು ? ತಿಪ್ಪೆ…
ಸಂಕ್ರಮಣ ಹಬ್ಬಕ್ಕೆ ಉತ್ತರ ಕನಾ೯ಟಕ ಮತ್ತು ಮಹಾರಾಷ್ಟ್ರದಲ್ಲಿ ಕುಸುರೆಳ್ಳು ವಿನಿಮಯದ ಪದ್ಧತಿ ಇದ್ದು, ಆ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಕುಸುರೆಳ್ಳು ಮಾಡುವ ವಿಧಾನ ಬಹಳಷ್ಟು ತಾಳ್ಮೆ ಬೇಡುವಂಥದು. ಸಕ್ಕರೆ ಪಾಕ ಮಾಡಿಟ್ಟುಕೊಂಡು , ಇದ್ದಲ…
“ಹಾ.ಮಾ.ನಾ.” ಎಂದೇ ಹೆಸರಾದ ಡಾ. ಹಾರೋಗದ್ದೆ ಮಾನಪ್ಪ ನಾಯಕರು ಕನ್ನಡದಲ್ಲಿ ಅಂಕಣ ಬರಹವನ್ನು ಜನಪ್ರಿಯಗೊಳಿಸಿದವರಲ್ಲಿ ಮೊದಲಿಗರು. ಅವರ ಪುಸ್ತಕಗಳಲ್ಲಿ ತೀರಾ ಆಪ್ತವೆನಿಸುವ ಪುಸ್ತಕ “ನಮ್ಮ ಮನೆಯ ದೀಪ”.
ಇದರಲ್ಲಿವೆ, ಅವರ ಏಳು ಬರಹಗಳು.…
ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ? ಅದೇ ರೀತಿ…
ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು
ತೇಲುತ್ತ ಭಯವ ಕಾಣದೆ ಸಾಗುತಿರಲು
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ
ಮೇಲ ಕೀಳಾಗಿಪುದು - ಮಂಕುತಿಮ್ಮ
ಕಾಲವೆಂಬ ನದಿಯಲ್ಲಿ ಸಾಗುವ ಬಾಳೆಂಬ ದೋಣಿ – ಇದು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.…
ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂಬಂಧಿಗಳು. ಆ…
ಮುಕ್ತಿಪಥ
ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ…
“ಸಾವಯವ ಉತ್ಪನ್ನ” ಎಂಬ ಆಹಾರ ಪೊಟ್ಟಣಗಳನ್ನು ಗಮನಿಸಿದ್ದೀರಾ? ಸಾಮಾನ್ಯವಾಗಿ ಅವುಗಳ ಬೆಲೆ, ಈ ಲೇಬಲ್ ಇಲ್ಲದ ಅಂತಹದೇ ಉತ್ಪನ್ನದ ಪ್ಯಾಕೆಟಿನ ಒಂದೂವರೆ ಪಟ್ಟು ಅಥವಾ ಎರಡು ಪಟ್ಟು ಜಾಸ್ತಿ.
ಆದರೆ, ಆ ಉತ್ಪನ್ನ (ತರಕಾರಿ, ಹಣ್ಣು, ಧಾನ್ಯ…
ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||
ಒಂದು ಕಾಲವಿತ್ತು. ಯಾರಾದರೂ ಅತಿಥಿಗೆ, ಹಸಿದವರಿಗೆ, ಪ್ರಯಾಣಿಕರಿಗೆ ಊಟ ಹಾಕದೆ ಮನೆಯ ಯಜಮಾನ ಊಟ…
"ಹೆಣ್ಣು ಬರಿ ಕಾಮದ,ಭೋಗದ ವಸ್ತುವೇ?ಪುಟ್ಟ ಹೆಣ್ಣು ಹಸುಳೆಯಿಂದ ಹಿಡಿದು ಮುದುಕಿಯವರೆಗೂ ಬೇಕಾಗಿರುವುದು ಅವಳ ದೈಹಿಕ ಸುಖ ಮಾತ್ರವೇ?" ಇಂತದ್ದೊಂದು ಪ್ರಶ್ನೆ ಪ್ರತಿ ದಿನವೂ ಮೂಡಿ ಮರೆಯಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಪುಷ್ಠಿ ಒದಗಿಸುವಂತೆ…
"ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ."
"ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು.
"ಹೇಳಿ ಸಾರ್, ಏನು ಬರೋಣವಾಯಿತು?"
"ಒಂದು ಜಾತಿ ಸರ್ಟಿಫಿಕೇಟ್…