ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 02, 2024
ಇಮ್ಮಡಿ ಮಡಿಲು’ ಕೆ.ಎನ್. ಗಣೇಶಯ್ಯ ಅವರ ಕಥಾಸಂಕಲನ. ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 31, 2024
ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದ ರೂಸಿ ಎಂ ಲಾಲಾ ಅವರ ಕೃತಿಯೇ ‘ಜೀವಕೋಶಗಳ ಸಂಭ್ರಮಾಚರಣೆ' ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಪಿ.ಎಸ್.ಶಂಕರ್ ಇವರು. ಈ ಕೃತಿಯು ಕ್ಯಾನ್ಸರ್ ಮೇಲೆ ವಿಜಯ ಸಾಧಿಸಿದ ಲೇಖಕರ ಅನುಭವದ ಸಾರ. ಕೃತಿಕಾರ ರೂಸಿ ಎಮ್ ಲಾಲಾ ಅವರ ಬಗ್ಗೆ ಬರೆದು ಅವರ ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ ಟಾಟಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ಗಂತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಎಸ್ ಎಚ್ ಅದ್ವಾನಿಯವರು. ಅವರು ತಮ್ಮ ಶುಭಾಶಯದಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 29, 2024
ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಕವಿತೆಗಳ ಸಂಗ್ರಹ ‘ವಿಷಾದಗಾಥೆ'. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ, ಕಥೆಗಾರ ಎಸ್. ದಿವಾಕರ್. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿರುವ ಭಾವನೆಗಳ ಆಯ್ದ ಭಾಗ ಇಲ್ಲಿದೆ... “ಅರಿಸ್ಟಾಟಲನ ಪ್ರಕಾರರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ ವಸ್ತುವಾಗಿ ಅಥವಾ ಭಾವವಾಗಿ ನೋಡದೆ ಹೋದರೆ ನಿಜಕ್ಕೂ ಹೊಸದೇನನ್ನೂ ಕಾಣಿಸಲಾಗದು. ಗೆಳೆಯ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಈ ‘ವಿಷಾದ…
ಲೇಖಕರು: Kavitha Mahesh
ವಿಧ: ರುಚಿ
January 28, 2024
ಒಣ ಮೆಣಸಿನಕಾಯಿ, ಕಡಲೆಬೇಳೆ, ಚೆಕ್ಕೆ, ಎಳ್ಳು, ಕೊತ್ತಂಬರಿ ಬೀಜಗಳನ್ನು ಎಣ್ಣೆಯಲ್ಲಿ ಹುರಿದು ಹುಡಿ ಮಾಡಿ ಮಸಾಲೆ ತಯಾರಿಸಿ. ಕಾದ ಎಣ್ಣೆಗೆ ಸಾಸಿವೆ, ಇಂಗು ಒಗ್ಗರಣೆ ಕೊಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಈ ಮಿಶ್ರಣಕ್ಕೆ ತೊಂಡೆಕಾಯಿ ಹೋಳುಗಳು, ಮಸಾಲೆ ಹುಡಿ, ಸೇರಿಸಿ ಚೆನ್ನಾಗಿ ಕೈಯಾಡಿಸಿ. ಒಲೆಯಿಂದ ಕೆಳಗಿರಿಸಿ. ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 26, 2024
ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ೨೦೦೭ರಲ್ಲಿ ಹೊರತಂದಿರುವ ಇಟಾಲಿಯನ್ ಭಾಷೆಯ ಕಾದಂಬರಿ ಫೊಂತಮಾರ. ಈ ಕಾದಂಬರಿಯು ಮೊದಲು ಬಿಡುಗಡೆಯಾದದ್ದು ೧೯೫೦ರಲ್ಲಿ. ಅಂದು ಶ್ರೀ ಹೊನ್ನಯ್ಯ ಶೆಟ್ಟಿ ಇವರು ಈ ಪುಸ್ತಕದ ಪ್ರಕಾಶಕರಾಗಿದ್ದರು. ಸುಮಾರು ೪೦ ವರ್ಷಗಳ ಬಳಿಕ ೧೯೯೦ರಲ್ಲಿ ಎರಡನೇ ಮುದ್ರಣ ಕಂಡ ಕೃತಿಯು ನಂತರ ಕರ್ನಾಟಕದ ಸುವರ್ಣ ಮಹೋತ್ಸವದ ಸಮಯದಲ್ಲಿ ಈ ಪುಸ್ತಕವನ್ನು ಮರು ಮುದ್ರಣ ಮಾಡಲಾಗಿದೆ. ೧೯೫೦ರ ಸಮಯದಲ್ಲಿ ಈ ಇಟಾಲಿಯನ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಕು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 24, 2024
ಉದಯೋನ್ಮುಖ ಕತೆಗಾರ್ತಿ ಮೇಘನಾ ಕಾನೇಟ್ಕರ್ ಅವರ ನೂತನ ಕಥಾ ಸಂಕಲನ ‘ಲೈಫ್ ನಲ್ಲೊಂದು ಯೂ ಟರ್ನ್'. ಈ ಕಥಾ ಸಂಕಲನಕ್ಕೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಖ್ಯಾತ ಕಾದಂಬರಿಕಾರ, ಅಂಕಣಕಾರರಾದ ಸಂತೋಷಕುಮಾರ್ ಮೆಹೆಂದಳೆ ಇವರು. ಇವರು ತಮ್ಮ ಬೆನ್ನುಡಿಯಲ್ಲಿ “ ಕನ್ನಡ ಕಥೆಗಳ ಸುಗ್ಗಿ ಕಾಲದಲ್ಲಿ ಅನಿರೀಕ್ಷಿತಗಳ ಹೂರಣ, ವಾಸ್ತವವನ್ನು ಮುಖಕ್ಕೆ ರಾಚುವಂತೆ ತೆರೆದಿಡುತ್ತಾ, ಭಾವಾನುಭೂತಿಗಳ ಹಿಂದೆ ಅಡಗಿರಬಹುದಾದ ಕಹಿಸತ್ಯಗಳನ್ನು ನಮಗೆ ಅನುಸಂಧಾನ ಮಾಡಿಸುತ್ತಾ ಸಾಗುವ ಕತೆಗಳ ಲೇಖಕಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 23, 2024
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಮಾರ್ಗವಿಲ್ಲದ ಮಾರ್ಗ' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ ಸಂಪಾದಕರು ಡಾ ಎ ವಿ ನರಸಿಂಹಮೂರ್ತಿ. ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ತಮ್ಮ ಬೆನ್ನುಡಿಯ ಬರಹದಲ್ಲಿ ಈ ಕೃತಿಗಳನ್ನು ಹೊರತಂದ ಆಶಯದ ಬಗ್ಗೆ ಮಾಹಿತಿ ನೀಡಿದ್ದಾರೆ. “ಭುವನ್ಸ್ ಬುಕ್ ಯೂನಿವರ್ಸಿಟಿ" ಮಾಲೆಯಲ್ಲಿ ಶ್ರೀಸಾಮಾನ್ಯರಿಗೆ…
ಲೇಖಕರು: Kavitha Mahesh
ವಿಧ: ರುಚಿ
January 22, 2024
ಮೊದಲಿಗೆ ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಕಿವುಚಿಕೊಂಡು ನುಣ್ಣಗೆ ಪೇಸ್ಟ್ ಮಾಡಿ. ಬಾಳೆ ಹಣ್ಣಿನ ಪೇಸ್ಟ್ ಗೆ ಸ್ವಲ್ಪ ಗೋಧಿ ಹಿಟ್ಟು ಹಾಗೂ ನೀರನ್ನು ಹಾಕುತ್ತಾ ಕಲಸಿ. ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕಲಸಿದ ನಂತರ ಈ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಕಾವಲಿಗೆ ತುಪ್ಪ ಸವರಿ ದೋಸೆ ಆಕಾರದಲ್ಲಿ ಈ ಮಿಶ್ರಣವನ್ನು ಹಾಕಿದರೆ ರುಚಿಯಾದ ಬಾಳೆಹಣ್ಣಿನ ದೋಸೆ ಸವಿಯಲು ಸಿದ್ಧ.  
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 20, 2024
ಇದು ಯೂಟ್ಯೂಬ್ ನಲ್ಲಿ ಸಿಕ್ಕಿತು. ಈ ಚಿತ್ರದಲ್ಲಿ ರಾಮನ್ನು ವನವಾಸ, ರಾವಣ ಸಂಹಾರ ಮುಗಿಸಿ ಲಕ್ಷ್ಮಣ ಸೀತೆ ಮತ್ತು ಹನುಮಂತನೊಡನೆ ಅಯೋಧ್ಯೆ ಪ್ರವೇಶ ಮಾಡಿದ ನಂತರದ ಕತೆ ಇದೆ. ರಾಜರು ಪಟ್ಟಕ್ಕೆ ಏರಿದ ಮೇಲೆ ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣಾ ಮಾಡುವುದನ್ನು ನೋಡಿದ್ದೇವೆ.ಆದರೆ ಇಲ್ಲಿ ಶ್ರೀರಾಮನು ಮೊದಲು ರಾವಣ ಸಂಹಾರ ಎಂಬ ದುಷ್ಟ ಶಿಕ್ಷಣವನ್ನು ಮಾಡಿ ನಂತರವೇ ರಾಜನಾಗುತ್ತಿದ್ದಾನೆ ಎಂದು ಎಲ್ಲರೂ ಅನ್ನುತ್ತಾರೆ. ಪಂಚಭೂತಗಳು ಎಲ್ಲರಿಗೂ ಸಮಾನವೇ. ಈ ಸಮಾನತ್ವವನ್ನೇ ಪ್ರಮಾಣವಾಗಿಸಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 19, 2024
ವಿಜಯಲಕ್ಷ್ಮೀ ನಾಗೇಶ್ ಅವರ ‘ಒಂಟಿ ನಾನಲ್ಲ' ಎನ್ನುವ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ವೆಂಕಟೇಶ್ ಮಾನು ಇವರು. ಅವರ ಪ್ರಕಾರ ಈ ಕವನಗಳು ಸಂಯಮದೊಡಲಲ್ಲಿ ಬದುಕಿನ ನೋವುಗಳನ್ನು ಮೌನವಾಗಿ ಅನುಭವಿಸಿದ ಪಳೆಯುಳಿಕೆಗಳಂತಿವೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ವಿಜಯಲಕ್ಷ್ಮೀ ನುಗ್ಗೇಹಳ್ಳಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ಹೀಗಿದೆ... “ಖಾಸಗಿ ವೃತ್ತಿಯಲ್ಲಿ ಶುಶ್ರೂಶಕಿಯಾಗಿದ್ದು ಜನರ ಸ್ವಾಸ್ಥ್ಯ…